ರಾಕಿಂಗ್ ಸ್ಟಾರ್ ಯಶ್ ತಮ್ಮ ಇತ್ತೀಚಿನ ‘ರಾಮಾಯಣ’ ಚಿತ್ರದ ರಾವಣನ ಅವತಾರ ಹಾಗೂ ಲುಕ್‌ನಲ್ಲಿಯೇ ತಮ್ಮ ಮಕ್ಕಳ ಜೊತೆ ಫೋಟೋಗಳಿಗೆ ಪೋಸ್ ನೀಡಿ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದಲ್ಲಿ ಲಂಕೇಶ್ವರ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಯಶ್, ಅದೇ ಖಡಕ್ ರಾವಣನ ಲುಕ್ ಹಾಗೂ ಎಕ್ಸ್‌ಪ್ರೆಶನ್‌ಗಳ ಮೂಲಕವೇ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ತಂದೆಯ ರಾವಣನ ಲುಕ್‌ಗೆ ತಕ್ಕಂತೆ ಪುತ್ರ ಯಥರ್ವ್ ಹಾಗೂ ಪುತ್ರಿ ಐರಾ ಕೂಡ ಅಪ್ಪನ ತರಹವೇ ಆಕರ್ಷಕವಾಗಿ ರಾವಣನ ರಗಡ್ ಎಕ್ಸ್‌ಪ್ರೆಶನ್‌ಗಳನ್ನು ನೀಡಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಯಶ್ ಅವರ ಪತ್ನಿ ರಾಧಿಕಾ ಪಂಡಿತ್, ಐರಾ ಹಾಗೂ ಯಥರ್ವ್ ಜೊತೆಗಿರುವ ಈ ವಿಶೇಷ ಫ್ಯಾಮಿಲಿ ಫೋಟೋಗಳನ್ನು ಯಶ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನೊಂದಿಗೆ “ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ನೀವು ತೋರುತ್ತಿರುವ ಪ್ರೀತಿಗೆ ಧನ್ಯವಾದಗಳು” ಎಂದು ರಾಕಿಭಾಯ್ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ತೆರೆಯ ಮೇಲೆ ರಾವಣನಾಗಿ ಅಬ್ಬರಿಸುತ್ತಿರುವ ಯಶ್, ನಿಜ ಜೀವನದಲ್ಲಿ ಮಕ್ಕಳ ಜೊತೆ ಈ ರೀತಿ ಸಮಯ ಕಳೆಯುತ್ತಿರುವುದನ್ನು ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
– ಶ್ರೀಶೈಲ್ ಪಾಟೀಲ್
