ಬಾಲಿವುಡ್‌ನಲ್ಲಿ ತಯಾರಾಗ್ತಿರೋ ಮಹಾದೃಶ್ಯಕಾವ್ಯ ರಾಮಾಯಣ ಸದ್ಯ ಹಾಲಿವುಡ್ ಮಂದಿಗೂ ನೆದ್ದೆ ಕೆಡಿಸಿದೆ. ಅಷ್ಟೊಂದು ರಿಚ್ ಆಗಿ ಮೂಡಿ ಬರ್ತಿದೆ. ರಣ್‌ಬೀರ್ ಕಪೂರ್-ರಾಕಿಭಾಯ್ ಕಾಂಬೋನ ಈ ಸಿನಿಮಾಗಾಗಿ ಒಂದು ಸರ್ವೆ ನಡೆದಿದ್ದು, ಅದ್ರಂತೆ ರಾಮ ರಣ್‌ಬೀರ್‌ಗಿಂತ ರಾವಣ ಯಶ್‌ಗೆ ಜನ ಕಾತರರಾಗಿದ್ದಾರೆ. ಈ ಕುರಿತ ಕಂಪ್ಲೀಟ್ ಕಹಾನಿ ಇಲ್ಲಿದೆ.
- ರಣ್‌ಬೀರ್ ‘ರಾಮಾಯಣ’ದಲ್ಲಿ ನಮ್ಮ ರಾಕಿಭಾಯ್ ನಂ.1
- ರಾಮ ರಣ್‌ಬೀರ್‌ಗಿಂತ ರಾವಣ ಯಶ್‌ಗೆ ಜನ ಜಾಸ್ತಿ ಕಾತರ
- KGF ರಾಕಿಗೆ ಅನಿಮಲ್ ಸ್ಟಾರ್‌ನ ಮೀರಿಸೋ ಸ್ಟಾರ್‌ಡಮ್
- ಗಾಡ್‌ಫಾದರ್ ಇಲ್ಲದ ಸೆಲ್ಫ್ ಮೇಡ್ ಶಹಜಾದ್ ಯಶ್..!
ಅಣ್ತಮ್ಮ ಇಲ್ಲಿ ಯಾರಿಗೆ ಯಾರೂ ಹೀರೋ ಮಾಡಲ್ಲ. ನಮಗೆ ನಾವೇ ಹೀರೋ ಆಗ್ಬೇಕು ಅನ್ನೋ ಡೈಲಾಗ್ ಹೊಡೆದಿದ್ರು ರಾಕಿಂಗ್ ಸ್ಟಾರ್ ಯಶ್. ಅದ್ರಂತೆ ಗಾಡ್‌ಫಾದರ್ ಇಲ್ಲದೇನೇ ಸ್ವಂತ ಪರಿಶ್ರಮದಿಂದ ಸೆಲ್ಫ್ ಮೇಡ್ ಶಹಜಾದ ಆದ್ರು ರಾಕಿಭಾಯ್. ಸೀರಿಯಲ್‌ನಿಂದ ಹಿಡಿದು ಸಿನಿಮಾವರೆಗೆ. ನಂತ್ರ ಸಕ್ಸಸ್‌ಫುಲ್ ಸಿನಿಮಾಗಳು, ನ್ಯಾಷನಲ್ ಸ್ಟಾರ್ ಪಟ್ಟ ಇವೆಲ್ಲವೂ ಸುಲಭವಾಗಿ ದಕ್ಕಿಲ್ಲ. ಬೆವರಿನ ಜೊತೆ ರಕ್ತ ಸುರಿಸಿದ್ದಾರೆ ಯಶ್. ಅವಮಾನ, ಅಪಮಾನಗಳ ನಡುವೆ ಒಬ್ಬ ಸಾಮಾನ್ಯ ಬಸ್ ಡ್ರೈವರ್ ಮಗ ಇಂದು ಬಾಲಿವುಡ್ ಸೂಪರ್ ಸ್ಟಾರ್‌ಗಳನ್ನ ಅಲುಗಾಡಿಸೋ ರೇಂಜ್‌ಗೆ ಬೆಳೆದು ನಿಂತಿದ್ದಾರೆ.
ಕನ್ನಡ ಚಿತ್ರರಂಗ ಕೂಡ ಸಾವಿರ ಕೋಟಿ ಕಲೆಕ್ಷನ್ ಮಾಡುವ ಸಿನಿಮಾ ನೀಡಬಲ್ಲದು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಸದ್ಯ ಯಶ್ ಬರೀ ಸ್ಟಾರ್ ಅಲ್ಲ. ನಮ್ಮ ಕನ್ನಡ ಚಿತ್ರರಂಗದ ರಾಯಭಾರಿ. ಕನ್ನಡ ಸಿನಿಮಾಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ತಂದುಕೊಟ್ಟ ಹಿರಿಮೆ ಅವರದ್ದು. ಅದೆಷ್ಟೋ ಮಂದಿಗೆ ಅವ್ರ ಜರ್ನಿ ಇನ್ಸ್‌ಪಿರೇಷನ್. ಅವರ ನಡೆ, ಆಚಾರ, ವಿಚಾರ, ಹಾರ್ಡ್ ವರ್ಕ್, ಡೆಡೆಕೇಷನ್ ಎಲ್ಲವೂ ಮಾದರಿ.
ಇದೀಗ ಟಾಕ್ಸಿಕ್ ಹಾಗೂ ರಾಮಾಯಣ ಚಿತ್ರಗಳ ಮೂಲಕ ಕೆಜಿಎಫ್ ಸಿನಿಮಾಗೂ ಮೀರಿದ ಮಾಸ್ಟರ್‌ಕ್ಲಾಸ್ ಚಿತ್ರಗಳನ್ನ ತೆರೆಗೆ ತರುವ ಧಾವಂತದಲ್ಲಿದ್ದಾರೆ ನಮ್ಮ ಹೆಮ್ಮೆಯ ಕನ್ನಡಿಗ ಯಶ್. ಅದ್ರಲ್ಲೂ ರಾಮಾಯಣ ಚಿತ್ರದ ಟೀಸರ್ ಝಲಕ್ ಹಾಗೂ ಅದು ತಯಾರಾಗ್ತಿರೋ ಸ್ಕೇಲ್ ನೋಡ್ತಿದ್ರೆ ಹಾಲಿವುಡ್ ಮಂದಿಗೂ ಎದೆ ಝಲ್ ಎನ್ನಲಿದೆ. ಹೌದು.. ಎರಡೆರಡು ಭಾಗಗಳಲ್ಲಿ ಎಪಿಕ್ ರಾಮಾಯಣ ಸಿದ್ಧವಾಗ್ತಿದೆ. ಅದಕ್ಕಾಗಿ 8 ಬಾರಿ ಆಸ್ಕರ್ ಅವಾರ್ಡ್ ಪಡೆದ ವಿಎಫ್‌ಎಕ್ಸ್ ಸಂಸ್ಥೆ, ಹಾಲಿವುಡ್ ಟೆಕ್ನಿಷಿಯನ್ಸ್ ಕೂಡ ಕೆಲಸ ಮಾಡ್ತಿರೋದು ಗೊತ್ತೇಯಿದೆ.
ರಾಮನಾಗಿ ರಣ್‌ಬೀರ್ ಕಪೂರ್ ಹಾಗೂ ರಾವಣನಾಗಿ ರಾಕಿಭಾಯ್ ಯಶ್ ಈ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಲಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ಬಣ್ಣ ಹಚ್ಚಿದ್ದು, ಸಾಕಷ್ಟು ಬಹುಭಾಷಾ ಕಲಾವಿದರ ದಂಡು ಇಲ್ಲಿದೆ. ಈ ಸಿನಿಮಾಗಾಗಿ ಇತ್ತೀಚೆಗೆ ಒಂದು ಸರ್ವೇ ನಡೆದಿದೆ. ಅದ್ರ ಪ್ರಕಾರ ರಣ್‌ಬೀರ್ ಕಪೂರ್ ರಾಮನ ಪಾತ್ರಕ್ಕಿಂತ ಜಾಸ್ತಿ ಮಂದಿ ಲಂಕಾಧಿಪತಿ ಯಶ್‌ನ ನೋಡೋಕೆ ಬಹಳ ಕಾತರರಾಗಿದ್ದಾರೆ, ಉತ್ಸುಕರಾಗಿದ್ದಾರೆ. ಇದು ನಿಜಕ್ಕೂ ವೆರಿ ವೆರಿ ಇಂಟರೆಸ್ಟಿಂಗ್ ಅನಿಸಿದೆ.
ಅನಿಮಲ್ ಸಿನಿಮಾದಿಂದ ಮಾಸ್ ಆಡಿಯೆನ್ಸ್ ದಿಲ್ ದೋಚಿದ್ದ ರಣ್‌ಬೀರ್ ಕಪೂರ್ ಸ್ಟಾರ್‌ಡಮ್‌ನೇ ಮೀರಿಸೋ ಹಂತಕ್ಕೆ ನಮ್ಮ ಯಶ್ ಬೆಳೆದು ನಿಂತಿರೋದು ಕನ್ನಡಿಗರಾದ ನಾವುಗಳು ಹೆಮ್ಮೆ ಪಡುವ ವಿಷಯ. ದಂಗಲ್ ಡೈರೆಕ್ಟರ್ ನಿತೇಶ್ ತಿವಾರಿ ನಿರ್ದೇಶನದಲ್ಲಿ ನಿಮಿತ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣದಲ್ಲಿ ರಾಮಾಯಣ ಮೂಡಿಬರ್ತಿದ್ದು, 2026ರ ದೀಪಾವಳಿಗೆ ಮೊದಲ ಭಾಗ ದರ್ಶನ ನೀಡಲಿದೆ. ಯಶ್ ವಿಷನ್, ಪ್ಯಾಷನ್ ನಿಜಕ್ಕೂ ಗ್ರೇಟ್ ಅನಿಸಿದ್ದು, ರಾಮಾಯಣ ಒನ್ ಆಫ್ ದಿ ಬೆಸ್ಟ್ ಮಾಸ್ಟರ್‌ಪೀಸ್ ಆಗಿ ಹೊರಹೊಮ್ಮಲಿದೆಯಂತೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
 
			
 
					




 
                             
                             
                             
                            