ಜು.18ಕ್ಕೆ ರಾಮಾಯಣ ಡೆಲ್ಲಿ ‌ಮೀಟ್..ಜು. 24ಕ್ಕೆ ಟ್ರೈಲರ್

ನವೆಂಬರ್-5ರ ದೀಪಾವಳಿಗೆ ರಣ್‌‌ಬೀರ್-ಯಶ್ ದರ್ಶನ

ಇರ್ತೀರಾ (17)

ಮಹಾನ್ ದೃಶ್ಯಕಾವ್ಯ ರಾಮಾಯಣ ಸಿನಿಮಾದ ಟ್ರೈಲರ್ ಲಾಂಚ್‌ಗೆ ಕೌಂಟ್‌‌ಡೌನ್ ಶುರುವಾಗಿದೆ. ಫ್ರಮ್ ಭಾರತ್ ಟು ದಿ ವರ್ಲ್ಡ್ ಅನ್ನೋ ಹೆಸರಲ್ಲಿ ಅಮೆರಿಕಾದಲ್ಲಿ ರಾಮಾಯಣ ಮೊದಲ ಭಾಗದ ಟ್ರೈಲರ್ ಲಾಂಚ್ ಆಗಲಿದ್ದು, ಅದಕ್ಕೂ ಮುನ್ನ ಡೆಲ್ಲಿ ಭಾರತ್ ಮಂಟಪದಲ್ಲಿ ಅನಾವರಣಗೊಳ್ಳಲಿದೆ. ರಣ್‌‌ಬೀರ್-ರಾಕಿಂಗ್‌ಸ್ಟಾರ್ ಯಶ್ ಕಾಂಬೋನ ಈ ಮೆಗಾ ಮೂವಿಯ ಲೇಟೆಸ್ಟ್ ಅಪ್ಡೇಟ್ ಇಲ್ಲಿದೆ.

ರಾಮಾಯಣ.. ಎರಡು ಭಾಗಗಳಲ್ಲಿ ಬೆಳ್ಳಿತೆರೆ ಬೆಳಗೋಕೆ ತಯಾರಾಗ್ತಿರೋ ಭಾರತೀಯ ಚಿತ್ರರಂಗದ ಮಹಾ ದೃಶ್ಯಕಾವ್ಯ. ರಣ್‌ಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್, ಸಾಯಿ ಪಲ್ಲವಿ, ಅಮಿತಾಬ್ ಬಚ್ಚನ್, ಸನ್ನಿ ಡಿಯೋಲ್ ಅಂತಹ ಮೆಗಾ ಮಲ್ಟಿಸ್ಟಾರ್‌ ಸಿನಿಮಾಗೆ ದಂಗಲ್ ಡೈರೆಕ್ಟರ್ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ನಮಿತ್ ಮಲ್ಹೋತ್ರಾ ಜೊತೆ ನಮ್ಮ ಯಶ್ ಕೂಡ ಸಹ ನಿರ್ಮಾಣ ಮಾಡಿರೋ ಈ ಚಿತ್ರದ ಎರಡೂ ಭಾಗಗಳ ಬಜೆಟ್ 3500ರಿಂದ 4000 ಕೋಟಿ ಅನ್ನೋದು ಅಚ್ಚರಿ.

ಇದೇ ದೀಪಾವಳಿಗೆ ಅಂದ್ರೆ ನವೆಂಬರ್ 5ಕ್ಕೆ ರಾಮಾಯಣ ಮೊದಲ ಭಾಗ ಬಿಡುಗಡೆ ಆಗ್ತಿದ್ದು, ಜುಲೈ 24ರಂದು ಅಮೆರಿಕಾದ ಸ್ಯಾನ್ ಡಿಯಾಗೋನಲ್ಲಿ ಟ್ರೈಲರ್ ಲಾಂಚ್ ಆಗಲಿದೆ. ಆದ್ರೆ ಅದಕ್ಕೂ ಮುನ್ನ ಡೆಲ್ಲಿಯಲ್ಲಿ ಇದೇ ಜುಲೈ 18ರಂದು ಪ್ಯಾನ್ ಇಂಡಿಯಾ ಪ್ರೆಸ್‌‌ಮೀಟ್ ಮಾಡಿ, ದೇಶೀಯ ಭಾಷೆಗಳಲ್ಲಿ ಟ್ರೈಲರ್‌‌ನ ಬಿಡುಗಡೆ ಮಾಡಲಿದೆ ಚಿತ್ರತಂಡ. ನಿರ್ದೇಶಕ, ನಿರ್ಮಾಪಕರು ಸೇರಿದಂತೆ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರೆಲ್ಲಾ ಭಾಗಿಯಾಗಿ, ರಾಮಾಯಣ ಮೇಕಿಂಗ್‌‌ನ ಆ ಅಭೂತಪೂರ್ವ ಜರ್ನಿಯನ್ನ ಮುಕ್ತವಾಗಿ ಹಂಚಿಕೊಳ್ಳಲಿದ್ದಾರೆ.

ಎರಡೆರಡು ಟ್ರೈಲರ್‌‌ಗಳು ರಿಲೀಸ್ ಆಗಲಿವೆ ಅನ್ನೋ ಸುದ್ದಿ ಸುಳ್ಳು. ಆದ್ರೆ ಮೊದಲು ದೆಹಲಿಯ ಭಾರತ್ ಮಂಟಪದಲ್ಲಿ ಇಂಡಿಯನ್ ಲ್ಯಾಂಗ್ವೇಜಸ್‌‌ನಲ್ಲಿ ರಿಲೀಸ್ ಆಗಲಿದ್ದು, ನಂತ್ರ ಫಾರಿನ್ ಭಾಷೆಗಳಲ್ಲಿ ಅಮೆರಿಕಾದಲ್ಲಿ ರಾಮಾಯಣ ಟ್ರೈಲರ್ ಅನಾವರಣಗೊಳ್ಳಲಿದೆ ಅನ್ನೋದು ಪಕ್ಕಾ ಆಗಿದೆ. ಯಶ್ ಒಂದ್ಕಡೆ ಟಾಕ್ಸಿಕ್ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿ ಆಗಿದ್ದಾರೆ. ಆದ್ರೆ ರಾಮಾಯಣ ಟ್ರೈಲರ್ ಲಾಂಚ್ ಇವೆಂಟ್ಸ್‌‌ನಲ್ಲಿ ಇರ್ತಾರಾ ಇರಲ್ವಾ ಅನ್ನೋದು ಸಸ್ಪೆನ್ಸ್ ಆಗಿದೆ. ಅಂದಹಾಗೆ ಟ್ರೈಲರ್ ಡ್ಯುರೇಷನ್ 3 ನಿಮಿಷ 29 ಸೆಕೆಂಡ್ ಇರಲಿದೆ ಎನ್ನಲಾಗ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

Exit mobile version