ಸ್ಯಾಂಡಲ್‌ವುಡ್‌ನ ಕ್ರೇಜಿಕ್ವೀನ್ ರಕ್ಷಿತಾ ಪ್ರೇಮ್ ಕಿರುತೆರೆಗೆ ಗುಡ್‌ಬೈ ಹೇಳಿದ್ದಾರೆ. ಬದಲಾವಣೆ ಬಯಸಿ, ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಿದ್ದಾರಂತೆ. ಈ ಮೂಲಕ 9 ವರ್ಷಗಳ ಝೀ ಕನ್ನಡ ಜೊತೆಗಿನ ಪಯಣಕ್ಕೆ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಇಷ್ಟಕ್ಕೂ ರಕ್ಷಿತಾ ಫ್ಯೂಚರ್ ಪ್ಲ್ಯಾನ್ಸ್ ಏನು..? ಅವ್ರ ಭಾವನಾತ್ಮಕ ಪೋಸ್ಟ್‌ನಲ್ಲಿ ಏನಿದೆ ಅನ್ನೋದ್ರ ಎಕ್ಸ್‌ಕ್ಲೂಸಿವ್ ಖಬರ್ ಇಲ್ಲಿದೆ.
- ಕಿರುತೆರೆಗೆ ರಕ್ಷಿತಾ ಗುಡ್‌ಬೈ.. ಡೈರೆಕ್ಷನ್‌ನತ್ತ ಕ್ರೇಜಿಕ್ವೀನ್..?!
- 9 ವರ್ಷಗಳ ಝೀ ಪಯಣಕ್ಕೆ ಫುಲ್‌ಸ್ಟಾಪ್.. ಆಗಿದ್ದೇನು..?
- ಡಬ್ಬಿಂಗ್ ಮಾಡ್ತಾರೆ.. ಆ್ಯಕ್ಟಿಂಗ್ ಕೂಡ ಮಾಡ್ತಾರೆ ರಕ್ಷಿತಾ..!
- ಪತಿ ಪ್ರೇಮ್ ಜೊತೆ ಡೈರೆಕ್ಷನ್ ಹಾಗೂ ಪ್ರೊಡಕ್ಷನ್‌ನತ್ತ ಚಿತ್ತ
ಅಪ್ಪು ಸಿನಿಮಾದ ಮೂಲಕ ದೊಡ್ಮನೆಯಿಂದ ಬಣ್ಣದ ಲೋಕಕ್ಕೆ ಇಂಟ್ರಡ್ಯೂಸ್ ಆದ ಅಪ್ಪಟ ಕನ್ನಡತಿ ರಕ್ಷಿತಾ, ಮುಂದೆ ಸ್ಯಾಂಡಲ್‌ವುಡ್‌ನ ಕ್ರೇಜಿಕ್ವೀನ್ ಆಗಿ ಮಿಂಚಿದರು. ಕನ್ನಡದ ಜೊತೆ ಜೊತೆಗೆ ಇಡಿಯಟ್ ಚಿತ್ರದ ಮೂಲಕ ಟಾಲಿವುಡ್‌ನಲ್ಲೂ ಛಾಪು ಮೂಡಿಸಿದ ರಕ್ಷಿತಾ, 2002 ರಿಂದ 2007ರ ವರೆಗೆ ಐದು ವರ್ಷಗಳ ಕಾಲ ಬಹುಬೇಡಿಕೆಯ ನಟಿಮಣಿಯಾಗಿ ಕಮಾಲ್ ಮಾಡಿದ್ರು.
ಕನ್ನಡ, ತೆಲುಗಿನ ಜೊತೆ ತಮಿಳಲ್ಲೂ ಸದ್ದು ಮಾಡಿದ ರಕ್ಷಿತಾ, ಪೀಕ್‌ನಲ್ಲಿ ಇರುವಾಗಲೇ ಸ್ಟಾರ್ ಡೈರೆಕ್ಟರ್ ಜೋಗಿ ಪ್ರೇಮ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಿರ್ಮಾಪಕಿ, ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಗುರ್ತಿಸಿಕೊಂಡಿರೋ ರಕ್ಷಿತಾ, 2007ರ ತಾಯಿಯ ಮಡಿಲು ಚಿತ್ರದ ಬಳಿಕ ನಟನೆಗೆ ಗುಡ್ ಬೈ ಹೇಳಿದ್ರು. ಆಗ ಅವ್ರಿಗೆ ರತ್ನಗಂಬಳಿ ಹಾಸಿದ್ದು ಮಾತ್ರ ಕಿರುತೆರೆ. ಅದ್ರಲ್ಲೂ ಝೀ ಕನ್ನಡದಲ್ಲಿ ಸುಮಾರು 9 ವರ್ಷಗಳ ಕಾಲ ಹತ್ತಾರು ಶೋಗಳಿಗೆ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದ್ರು.
ಝೀ ವಾಹಿನಿಗೆ ರಕ್ಷಿತಾ ಬರೀ ಗೆಸ್ಟ್ ಆಗಿರಲಿಲ್ಲ, ಅಕ್ಷರಶಃ ಕುಟುಂಬದವರಾಗಿದ್ರು. ಆದ್ರೀಗ ಸಡನ್ ಆಗಿ ಅದೇನು ಮನಸ್ತಾಪ ಬಂತೋ ಗೊತ್ತಿಲ್ಲ. ಝೀ ವಾಹಿನಿಯಲ್ಲಿನ ಎಲ್ಲಾ ಕಾರ್ಯಕ್ರಮಗಳಿಗೆ ಫುಲ್‌ಸ್ಟಾಪ್ ಇಟ್ಟು, ಝೀ ಕುಟುಂಬದಿಂದಲೇ ಹೊರಬಂದಿದ್ದಾರೆ ರಕ್ಷಿತಾ. ಅಷ್ಟೇ ಅಲ್ಲ, ಒಂದು ಭಾವನಾತ್ಮಕ ಪೋಸ್ಟ್ ಹಾಕಿ, ಅದ್ರಲ್ಲಿ ಆ ವಾಹಿನಿಯ ಹೆಸರು ಕೂಡ ಬಳಸದೇ ಇರೋದು ಇದೀಗ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ನಿಜಕ್ಕೂ ಝೀ ಜೊತೆ ರಕ್ಷಿತಾ ಅವ್ರ ಸಂಬಂಧ ಹಾಳಾಗಿದೆ ಅನ್ನೋದು ಇದ್ರಿಂದ ಎದ್ದು ಕಾಣ್ತಿದೆ.
ಕಿರುತೆರೆಗೆ ಬೈ ಬೈ.. ಝೀ ಜೊತೆ ಬ್ರೇಕಪ್..?
ನಾನು ಕಳೆದ 9 ವರ್ಷಗಳಿಂದ ಕೆಲಸ ಮಾಡ್ತಿದ್ದ ಒಂದು ನಿರ್ಧಿಷ್ಟ ಚಾನೆಲ್‌ನ ನಿರ್ಧಿಷ್ಟ ಶೋಗೆ ಟ್ಯಾಗ್ ಮಾಡ್ತಿರೋ ಎಲ್ಲರಿಗೂ ನಾನು ಸ್ಪಷ್ಟನೆ ಕೊಡೋಕೆ ಇಷ್ಟ ಪಡ್ತೇನೆ. ನನ್ನ ಜೀವನದಲ್ಲಿ ಬದಲಾವಣೆ ಬಯಸಿದ್ದು ಹಾಗೂ ಹೊಸದನ್ನೇನಾದ್ರೂ ಪ್ರಯತ್ನಿಸಲು ನಾನು ಇನ್ಮುಂದೆ ಆ ಚಾನೆಲ್‌ನ ಭಾಗವಾಗಿ ಇರುವುದಿಲ್ಲ.
ಇಷ್ಟು ವರ್ಷ ಆ ಶೋಗಳಲ್ಲಿ ಸಂತೋಷದಿಂದ ನನ್ನನ್ನು ನೋಡಿ, ಬೆಂಬಲಿಸಿದ್ದೀರಿ. ಈ 9 ವರ್ಷದ ಜರ್ನಿಯಲ್ಲಿ ಅನೇಕ ಸುಂದರ ದಿನಗಳನ್ನು ನೀಡಿದ ನಿಮಗೂ ಮತ್ತು ಆ ದೇವರಿಗೂ ಹೃದಯಪೂರ್ವಕ ಧನ್ಯವಾದಗಳು.
ನಾನು ಯಾವುದೇ ಕೆಲಸ ಅಥ್ವಾ ಸಿನಿಮಾದಲ್ಲಿ ನಿಮ್ಮ ಮುಂದೆ ಬಂದರೂ ಇದೇ ರೀತಿಯ ಪ್ರೀತಿ ಹಾಗೂ ಪ್ರೋತ್ಸಾಹ ನನ್ನ ಮೇಲಿರುತ್ತದೆ ಎಂದು ಭಾವಿಸುತ್ತೇನೆ.
ಲವ್ ಯೂ..
- ರಕ್ಷಿತಾ ಪ್ರೇಮ್, ನಟಿ
ತನ್ನ ಪತಿ ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾದಲ್ಲಿನ ಆ್ಯಮಿ ಜಾಕ್ಸನ್ ರೋಲ್‌ಗೆ ರಕ್ಷಿತಾ ಅವರೇ ವಾಯ್ಸ್ ಡಬ್ ಮಾಡಿದ್ರು. ಒಡಹುಟ್ಟಿದ ತಮ್ಮ ರಾಣಾ ನಟನೆಯ ಏಕ್ ಲವ್ ಯಾ ಚಿತ್ರದಲ್ಲಿ ಒಂದು ಸಣ್ಣ ಸ್ಪೆಷಲ್ ಅಪಿಯರೆನ್ಸ್ ಕೂಡ ನೀಡಿದ್ರು ರಕ್ಷಿತಾ. ಇದೀಗ ಸಿನಿಮಾ ಅಥ್ವಾ ಏನೇ ಕೆಲಸ ಮಾಡಿದ್ರೂ ಇದೇ ರೀತಿ ಪ್ರೀತಿ ಇರಲಿ ಅಂದಿರೋದು ನೋಡ್ತಿದ್ರೆ ಡೈರೆಕ್ಷನ್ ಅಥ್ವಾ ಪ್ರೊಡಕ್ಷನ್ ಮೂಲಕ ದೊಡ್ಡದಾಗಿ ಸೌಂಡ್ ಮಾಡುವ ಸೂಚನೆ ನೀಡಿದ್ದಾರೆ. ಅದೇನೇ ಇರಲಿ, ಕ್ರೇಜಿಕ್ವೀನ್ ನಿರ್ಧಾರವನ್ನು ಆಕೆಯ ಫ್ಯಾನ್ಸ್ ಹಂಡ್ರೆಡ್ ಪರ್ಸೆಂಟ್ ಗೌರವಿಸ್ತಾರೆ. ಇನ್ನು ಝೀ ಮಾತ್ರ ಇವ್ರನ್ನ ಕಂಡಿತ ಮಿಸ್ ಮಾಡ್ಕೊಳ್ಳಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
 
			
 
					




 
                             
                             
                             
                            