ಸ್ಯಾಂಡಲ್‌ವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ಹೌದು. ಆದ್ರೆ ಯಾವ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ತಿಲ್ಲ. ಸಿನಿಮಾ ಬಗ್ಗೆಯೂ ಅಪ್ಡೇಟ್ ಕೊಡ್ತಿಲ್ಲ. ಇತ್ತೀಚೆಗಷ್ಟೇ ಹುಟ್ಟು ಹಬ್ಬಕ್ಕೆ ರಿಚರ್ಡ್ ಆಂಟೋನಿ ಅಪ್ಡೇಟ್ ಕೂಡ ಕೊಟ್ಟಿಲ್ಲ. ಹಾಗಾದ್ರೆ ಶೆಟ್ರು ಏನ್ ಮಾಡ್ತಿದ್ದಾರೆ..? ಸದ್ದಿಲ್ಲದೇ ಮದ್ವೆ ತಯಾರಿ ನಡೆಸ್ತಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ. ದೋಸ್ತ ರಕ್ಷಿತ್ ಮದ್ವೆ ಬಗ್ಗೆ ರಾಜ್ ಬಿ ಶೆಟ್ಟಿ ಏನು ಹೇಳಿದ್ರು ಅನ್ನೋ Exclusive ಟಾಕ್ ನಮ್ಮಲ್ಲಿದೆ.
- ಗೃಹಪ್ರವೇಶ ನಂತ್ರ ಬ್ಯಾಚುಲರ್ ಲೈಫ್ ಗೆ ರಕ್ಷಿತ್ ಬೈ..?
- ರಕ್ಷಿತ್ ಮದುವೆ ಕ್ಲ್ಯೂ ಕೊಟ್ರಾ ಗೆಳೆಯ ರಾಜ್ ಬಿ ಶೆಟ್ಟಿ..?
- ಸ್ಟಾರ್ಸ್ ಮದ್ವೆಗೆ ಹೋಗಲ್ಲ.. ರಕ್ಷಿತ್ ಮದ್ವೆಗೆ ಹೋಗ್ತೀನಿ
ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯ ರಿಚರ್ಡ್ ಆಂಟೋನಿ ಸಿನಿಮಾಗಾಗಿ ಕೆಲಸ ಮಾಡ್ತಿದ್ದಾರೆ. ಆದ್ರೆ ಈ ಸಿನಿಮಾದ ಗ್ಲಿoಪ್ಸ್ ಬಿಟ್ರೆ ಬೇರೆ ಯಾವುದೇ ಅಪ್ಡೇಟ್ ಹೊರಬಿದಿಲ್ಲ. ಈ ನಡುವೆ ರಕ್ಷಿತ್ ಶೆಟ್ಟಿ ಮದುವೆ ವಿಚಾರ ಸದ್ದಿಲ್ಲದೇ ಸುದ್ದಿಯಾಗ್ತಿದೆ. ಹೌದು, ಶ್ರೀನಿಧಿ ಶೆಟ್ಟಿ ಜೊತೆ ರಕ್ಷಿತ್ ರಿಲೇಶನ್ ಶಿಪ್ ಇರಬಹುದು ಎಂಬ ಉಹಾ ಪೋಹ ಆಗಾಗ ಕೇಳಿ ಬರ್ತಿದೆ.. ಇಬ್ರು ಒಂದೇ ಇಂಡಸ್ಟ್ರಿ ಅವರು ಅಲ್ಲದೆ ಶೆಟ್ಟಿಸ್ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಪೋಸ್ಟ್ ಆಗಾಗ ವೈರಲ್ ಆಗ್ತಿರುತ್ತೆ.
ಅಲ್ಲದೆ ರಕ್ಷಿತ್ ಶೆಟ್ಟಿ ಅವರಿಗೆ 42 ವರ್ಷ ಆಯಿತು. ಮದುವೆಯಾಗಿಲ್ಲ ಎಂದು ಫ್ಯಾನ್ಸ್ ಬೇಜಾರಾಗಿದ್ದಾರೆ. ಸಿನಿಮಾನೂ ರಿಲೀಸ್ ಮಾಡ್ತಿಲ್ಲ ಮದ್ವೆನೂ ಆಗಲ್ವಾ ಏನು ಕಥೆ ಶೆಟ್ರೆ ಎಂದು ಫ್ಯಾನ್ಸ್ ಪ್ರಶ್ನೆ ಮಾಡ್ತಿದ್ದಾರೆ. ಈ ಹೊತ್ತಲ್ಲಿ ರಕ್ಷಿತ್ ದೋಸ್ತ್ ರಾಜ್ ಬಿ ಶೆಟ್ಟಿ ಗೆಳೆಯನ ಮದುವೆ ಬಗ್ಗೆ ಸಣ್ಣ ಕ್ಲೂ ಕೊಟ್ಟಿದ್ದಾರೆ. ನನ್ನ ಫ್ರೆಂಡ್ಸ್ ಮದುವೆಗೆ ಹೋಗ್ತೀನಿ ಆದ್ರೆ ಬೇರೆ ಸ್ಟಾರ್ಸ್ ಮದುವೆಗೆ ನಾನು ಹೋಗಲ್ಲ. ಅದ್ರಲ್ಲೂ ರಕ್ಷಿತ್ ಮದುವೆ ಬಗ್ಗೆ ಪ್ರಶ್ನೆ ಕೇಳಿದಾಗ ಖಂಡಿತ ಹೋಗ್ತೀನಿ .ಫ್ರೆಂಡ್ಸ್ ಎಲ್ಲ ಡಾನ್ಸ್ ಮಾಡಿ ಎಂಜಾಯ್ ಮಾಡ್ತೀವಿ ನಮ್ಮದೇ ಪ್ರೈವಸಿ ಇರುತ್ತೆ ಎಂದಿದ್ದಾರೆ ಇದರ ಜೊತೆಗೆ ರಾಜ್ ಬಿ ಶೆಟ್ಟಿ ಮದುವೆ ಹೇಗೆ ಆಗ್ತೀರಾ ಅಂದಾಗ ನಾನು ಓಡಿ ಹೋಗಿ ಮದುವೆ ಆಗ್ತೀನಿ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.
ಅಂದಹಾಗೆ ರಕ್ಷಿತ್ ಶೆಟ್ಟಿ ಸ್ವಂತ ಮನೆ ಕಟ್ಟಿಸುತ್ತಿದ್ದಾರೆ ಅರ್ಧ ಎಕರೆ ಜಾಗದಲ್ಲಿ ಸುಮಾರು 25 ಕೋಟಿ ವೆಚ್ಚದಲ್ಲಿ ಬೃಹತ್ ಮನೆ ಕಟ್ಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ರಕ್ಷಿತ್ ಪ್ಲಾನಿಂಗ್ ಪ್ರಕಾರ ಮನೆಯಲ್ಲೇ ಡಬ್ಬಿಂಗ್ ಸ್ಟುಡಿಯೋ, ಥಿಯೇಟರ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಗೆ ಬೇಕಾದ ಎಲ್ಲಾ ವ್ಯವಸ್ಥೆ ಮನೆಯಲ್ಲೇ ಇರಬೇಕು ಹೊರಗೆ ಟ್ರಾವೆಲ್ ಮಾಡೋ ಅನಿವಾರ್ಯತೆ ನನಗೆ ಬರ್ಬಾರ್ದು ಅನ್ನೋ ಆಲೋಚನೆಯಲ್ಲಿ ರಕ್ಷಿತ್ ಫುಲ್ ಪ್ಲಾನಿಂಗ್ ನಲ್ಲಿ ಮನೆ ಕಟ್ಟಿಸುತ್ತಿದ್ದಾರೆ. ಬಹುಶ ಮನೆ ಗೃಹಪ್ರವೇಶ ನಂತರ ರಕ್ಷಿತ್ ಗೆ ಕಂಕಣಭಾಗ್ಯ ಕೂಡಿ ಬರುತ್ತೇನೋ..?
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್