ಡಿಪ್ರೆಷನ್‌ಗೆ ಹೋದ್ರಾ ರಕ್ಷಿತ್..? ಪಂಚಕಥೆ ಅಸಲಿಯತ್ತೇನು..?

ಮಾಜಿ ಪ್ರೇಯಸಿ ರಶ್ಮಿಕಾ ಮದ್ವೆ.. ರಿಚರ್ಡ್ ಆಂಟನಿ ಶೂಟಿಂಗ್

BeFunky collage 2026 02 17T181317.595

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಡಿಪ್ರೆಷನ್‌ಗೆ ಹೋಗಿಬಿಟ್ರಾ..? ಯಾರ ಕಣ್ಣಿಗೂ ಬೀಳದೆ ನಾಪತ್ತೆಯಾಗಿರೋ ರಕ್ಷಿತ್, ಅಜ್ಞಾತವಾಸಕ್ಕೆ ಜಾರಿದ್ದೇಕೆ..? ಸದ್ಯ ಹರಿದಾಡ್ತಿರೋ ಪಂಚಕಥೆಗಳ ಅಸಲಿಯತ್ತೇನು..? ನಿಜಕ್ಕೂ ರಿಚರ್ಡ್ ಆಂಟನಿ ಮಾರ್ಚ್‌ನಿಂದ ಶೂಟಿಂಗ್ ಶುರು ಮಾಡ್ತಿದೆಯಾ ಅನ್ನೋ ನಿಮ್ಮ ಹತ್ತು ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ನನ್ನ ಬದುಕು ಹೀಗಾಗುತ್ತೆ ಅಂತ ನಾನು ಯೋಚನೆ ಕೂಡ ಮಾಡಿರಲಿಲ್ಲ. ಎಲ್ಲವೂ ಚೆನ್ನಾಗಿಯೇ ಇತ್ತು. ಒಳ್ಳೆಯ ಗೆಳೆಯರ ಬಳಗ. ಮುದ್ದಾಡೋಕೆ ಗೊಂಬೆಯಂತಹ ಗೆಳತಿ ರಶ್ಮಿಕಾ. ಅಭಿಮಾನಿಗಳು. ಅವಕಾಶಗಳು. ಎಲ್ಲವೂ ಇತ್ತು. ಆದ್ರೆ ಅದ್ಯಾವ ಕೆಟ್ಟ ಗಳಿಗೆಯೋ ಏನೋ.. ಲೈಫೇ ಉಲ್ಟಾ ಪಲ್ಟಾ ಆಗೋಯ್ತು. ಹೀಗಂತ ಥಿಯೇಟರ್ ನಲ್ಲಿ ಸಿನಿಮಾಗೂ ಮುನ್ನ ಬರೋ ತಂಬಾಕು ಆ್ಯಡ್‌‌ನಂತೆ ತನ್ನನ್ನ ತಾವೇ ಪ್ರಶ್ನಿಸಿಕೊಳ್ಳುವಂತಾಗಿದೆ ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬದುಕು.

ಡಿಪ್ರೆಷನ್‌ಗೆ ಹೋದ್ರಾ ರಕ್ಷಿತ್..? ಪಂಚಕಥೆ ಅಸಲಿಯತ್ತೇನು..?

ಮಾಜಿ ಪ್ರೇಯಸಿ ರಶ್ಮಿಕಾ ಮದ್ವೆ.. ರಿಚರ್ಡ್ ಆಂಟನಿ ಶೂಟಿಂಗ್

ಕಿರಿಕ್ ಪಾರ್ಟಿ ಬಳಿಕ ಅಕ್ಷರಶಃ ರಕ್ಷಿತ್ ನಸೀಬು ಬದಲಾಯ್ತು. ಆದ್ರೆ ಅದೇ ಕಿರಿಕ್ ಪಾರ್ಟಿಯ ನಾಯಕನಟಿ ರಶ್ಮಿಕಾ ಮಂದಣ್ಣನನ್ನ ತಮ್ಮ ಲೈಫ್‌ಗೆ ಪಾರ್ಟ್ನರ್ ಮಾಡ್ಕೋಬೇಕು ಅನ್ನೋ ಮಹದಾಸೆ ಅವ್ರ ಪಥನಕ್ಕೆ ಕಾರಣವಾಯ್ತಾ ಅನ್ನೋ ಅನುಮಾನಗಳು ಕಾಡದೇ ಇರದು. 2017ರಲ್ಲಿ ಸಿನಿಮಾ ರಿಲೀಸ್ ಬೆನ್ನಲ್ಲೇ ರಿಂಗ್ ಬದಲಿಸಿಕೊಂಡು ಮದ್ವೆ ಎಂಗೇಜ್ಮೆಂಟ್ ಮಾಡಿಕೊಳ್ತಾರೆ. ಮದ್ವೆ ಆಗುವ ಕನಸು ಕೂಡ ಕಾಣ್ತಾರೆ. ಆದ್ರೆ ರಕ್ಷಿತ್ ಬಾಳಿಗೆ ವಿಲನ್ ಆಗಿದ್ದು ಮಾತ್ರ ವಿಜಯ್ ದೇವರಕೊಂಡ. ಕೈಗೆ ಬಂದ ತುತ್ತನ್ನ ಬಾಯಿಗೆ ಬಾರದಂಗೆ ಮಾಡಿದ್ರು.

ಇದೇ ಫೆಬ್ರವರಿ 26ಕ್ಕೆ ರಶ್ಮಿಕಾನ ವಿಜಯ್ ದೇವರಕೊಂಡ ಮದ್ವೆ ಆಗ್ತಿದ್ದಾರೆ. ಇತ್ತ ರಕ್ಷಿತ್ ಶೆಟ್ಟಿ ಅದೇ ಯೋಚನೆಯಲ್ಲಿ ಡಿಪ್ರೆಷನ್‌ಗೆ ಹೋದ್ರಾ ಅನ್ನೋ ಅನುಮಾನ ಕೂಡ ಕಾಡ್ತಿದೆ. ಯಾಕಂದ್ರೆ ರಶ್ಮಿಕಾ ಮೂವಾನ್ ಆಗಿ ಸಕ್ಸಸ್‌ನ ಉತ್ತುಂಗಕ್ಕೇರಿದ್ರು. ರಕ್ಷಿತ್ ಕೂಡ ಸಾಲು ಸಾಲು ಪ್ರಯೋಗಗಳನ್ನ ಮಾಡಿದ್ರು. ಆದ್ರೆ ಅವರ ಆರ್ಥಿಕ ಸ್ಥಿತಿ ಮಾತ್ರ ಸುಧಾರಿಸಲೇ ಇಲ್ಲ. ಹಾಗಾಗಿ ಸಾಲಗಾರರಿಂದ ನುಣುಚಿಕೊಳ್ಳುವ ಪ್ರಯತ್ನವೋ ಅಥ್ವಾ ಮತ್ತೇನಾದ್ರೂ ಇದೆಯೋ ಗೊತ್ತಿಲ್ಲ. ಸಪ್ತಸಾಗರದಾಚೆ ಎಲ್ಲೋ ಸೈಡ್-ಬಿ ಸಿನಿಮಾದ ಬಳಿಕ 2023ರಿಂದ ಎಲ್ಲೂ, ಯಾರಿಗೂ ಕಾಣಿಸ್ತಿಲ್ಲ. ನಾಪತ್ತೆ ಆಗಿದ್ದಾರೆ.

ಹೊಂಬಾಳೆಗಿಲ್ಲ ಶೂಟಿಂಗ್ ಮಾಹಿತಿ.. 5 ಕಥೆಗಾಗಿ 3 ವರ್ಷ..?

ಸಪ್ತಸಾಗರ ಸೈಡ್-ಬಿ ಬಳಿಕ ಅಜ್ಞಾತವಾಸಕ್ಕೆ ಜಾರಿರೋ ರಕ್ಷಿತ್

ಇದೀಗ ರಕ್ಷಿತ್ ಅಜ್ಞಾತವಾಸದ ಹಿಂದೆ ಒಂದು ಸುದ್ದಿ ಹರಿದಾಡ್ತಿದೆ. ಅದೇನಪ್ಪಾಂದ್ರೆ ಕಳೆದ ಮೂರು ವರ್ಷಗಳಲ್ಲಿ ರಕ್ಷಿತ್ ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಸಿನಿಮಾಗಳಿಗೆ ಸ್ಕ್ರಿಪ್ಟ್ ಬರೆದಿದ್ದಾರಂತೆ. ಆ ಪೈಕಿ ಹೊಂಬಾಳೆ ಫಿಲಂಸ್ ಜೊತೆಗಿನ ರಿಚರ್ಡ್ ಆಂಟನಿ ಸಿನಿಮಾ ಇದೇ ಮಾರ್ಚ್‌ನಿಂದ ಶೂಟಿಂಗ್ ಕಿಕ್‌ಸ್ಟಾರ್ಟ್ ಎನ್ನಲಾಗ್ತಿದೆ. ಆದ್ರೆ ಹೊಂಬಾಳೆ ಫಿಲಂಸ್ ಅವರೇ ರಕ್ಷಿತ್‌ ಹುಡುಕಾಟದಲ್ಲಿದ್ದಾರಂತೆ. ಇನ್‌‌ಫ್ಯಾಕ್ಟ್ ಫೈನಾನ್ಸ್ ಕೊಟ್ಟಿರೋ ಕೆವಿಎನ್ ಪ್ರೊಡಕ್ಷನ್ಸ್ ಕೂಡ ರಕ್ಷಿತ್‌ಗಾಗಿ ತಲಾಷ್‌‌ನಲ್ಲಿದೆ ಎನ್ನಲಾಗ್ತಿದೆ.

ಸಮಸ್ಯೆಗಳು ಏನೇ ಇರಲಿ. ಸವಾಲುಗಳು ಎಂಥದ್ದೇ ಇರಲಿ. ಟ್ಯಾಲೆಂಟ್ ಇರೋ ರಕ್ಷಿತ್ ಶೆಟ್ಟಿ ಅಂಥವ್ರೇ ಹೀಗೆ ಭೌತಿಕ ಪ್ರಪಂಚದಿಂದ ನಾಪತ್ತೆ ಆಗ್ಬಿಟ್ರೆ ಚಿತ್ರರಂಗದ ಕಥೆ ಏನಾಗಬೇಡ. ರಕ್ಷಿತ್ ಆದಷ್ಟು ಬೇಗ ಡೈರೆಕ್ಷನ್ ಅಥ್ವಾ ನಟನೆಗೆ ಮರಳಲಿ. ಬೆಳ್ಳಿತೆರೆ ಮೇಲೆ ರಾರಾಜಿಸಲಿ. ಬಿಟ್ಟು ಹೋದವರ ಮುಂದೆ ಗಟ್ಟಿಯಾಗಿ ನಿಂತು ತಮ್ಮ ಖದರ್ ತೋರಲಿ ಅನ್ನೋದು ನಮ್ಮ ಆಶಯ.

 

 

Exit mobile version