ಜೈಲಲ್ಲಿದ್ರೂ ಸರಿ ಡಿಬಾಸ್ ದರ್ಶನ್ ಮಾತ್ರ ತಮ್ಮ ಹೀರೋ ಯಶ್ ಜಪ ಮಾಡ್ತಿದ್ದಾರಂತೆ. ಟಾಕ್ಸಿಕ್ ರಿಲೀಸ್ ಆಯ್ತಾ..? ಹಿಟ್ ಆಯ್ತಾ ಅಂತೆಲ್ಲಾ ವಿಚಾರಿಸ್ತಿದ್ದಾರಂತೆ. ಮಂಡ್ಯ ಎಲೆಕ್ಷನ್ ವೇಳೆ ಸುಮಲತಾ ಬಂಡಿಗೆ ಜೋಡೆತ್ತು ಸಾರಥ್ಯ ವಹಿಸಿದ್ದು ಗೊತ್ತೇಯಿದೆ. ಆದ್ರೀಗ ಆ ಹೀರೋ ಬಗ್ಗೆ ದರ್ಶನ್‌ಗಿರೋ ಅಕ್ಕರೆ, ಅಭಿಮಾನ, ಗೌರವ ಪದಗಳಲ್ಲಿ ಬಣ್ಣಿಸೋಕೆ ಆಗ್ತಿಲ್ಲ.
- ಧನ್ವೀರ್ ಬೆನ್ನಲ್ಲೇ ವಿಜಿ.. ‘ಹೀರೋ’ ಟಾಕ್ಸಿಕ್ ಬಗ್ಗೆ ದಚ್ಚು ಕೇಳಿದ್ದೇನು?
- ಡಿಬಾಸ್ ಜೈಲಲ್ಲಿದ್ರೂ ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ದೇ ಜಪ
- ಧನ್ವೀರ್-ವಿಜಯಲಕ್ಷ್ಮೀ ನಡುವೆ ಹಣಕಾಸಿನ ವ್ಯತ್ಯಯ ಮುನಿಸು..?
- ಚಾಲೆಂಜಿಂಗ್ ಸ್ಟಾರ್-ರಾಕಿಂಗ್ ಸ್ಟಾರ್ ಸ್ನೇಹ ಸಂಬಂಧ ಎಂಥದ್ದು?
ಕನ್ನಡಿಗರ ನೆಚ್ಚಿನ ಜೋಡೆತ್ತುಗಳ ಸ್ನೇಹ ಎಂಥದ್ದು ಅನ್ನೋದು ಇಡೀ ರಾಜ್ಯಕ್ಕೇ ಗೊತ್ತು. ಮಂಡ್ಯ ಎಲೆಕ್ಷನ್‌ನಲ್ಲಿ ಸುಮಲತಾ ಬಂಡಿಗೆ ಜೊತೆಯಾಗಿ ನಿಂತು ಸಾರಥ್ಯ ವಹಿಸಿದ್ದ ದರ್ಶನ್ ಮತ್ತು ಯಶ್ ಬಾಂಧವ್ಯ ಈಗಲೂ ಅಷ್ಟೇ ಗಟ್ಟಿಯಾಗಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರೋ ದರ್ಶನ್, ನಾಲ್ಕು ಗೋಡೆಗಳ ಮಧ್ಯೆ ಇದ್ದರೂ ತಮ್ಮ ಗೆಳೆಯ ಯಶ್ ಅಭಿನಯಿಸಿರುವ ಟಾಕ್ಸಿಕ್ ಸಿನಿಮಾದ ಮೇಲೆಯೇ ಕಣ್ಣಿಟ್ಟಿದ್ದಾರೆ. ಧನ್ವೀರ್ ಹಾಗೂ ಮಡದಿ ವಿಜಯಲಕ್ಷ್ಮಿ ಜೈಲಿಗೆ ಭೇಟಿ ನೀಡಿದಾಗ ದಚ್ಚು ಮೊದಲು ಕೇಳ್ತಿರೋದೇ ಯಶ್ ಅವರ ಟಾಕ್ಸಿಕ್ ಅಪ್‌ಡೇಟ್ಸ್. ಸಿನಿಮಾ ರಿಲೀಸ್ ಆಯ್ತಾ? ಥಿಯೇಟರ್ ಬ್ಯುಸಿನೆಸ್ ಹೇಗಿದೆ? ಹಿಟ್ ಆಯ್ತಾ? ಅಂತ ರಾಕಿ ಭಾಯ್ ಸಿನಿಮಾದ ಬಗ್ಗೆ ದರ್ಶನ್ ತೋರಿಸ್ತಿರೋ ಈ ಅಕ್ಕರೆ ಮತ್ತು ಕಾಳಜಿ ಸ್ಯಾಂಡಲ್‌ವುಡ್‌ನಲ್ಲಿ ಎಲ್ಲರ ಗಮನ ಸೆಳೆದಿದೆ.
ಇನ್ನೊಂದೆಡೆ, ನಿನ್ನೆ ಅಷ್ಟೇ ದರ್ಶನ್ ನ ಭೇಟಿ ಮಾಡಿದ ವಿಜಯಲಕ್ಷ್ಮಿ ಗಂಡನ ಆರೋಗ್ಯ ವಿಚಾರಿಸಿದ್ದಾರೆ. ಸಂಜೆ 4 ಗಂಟೆಗೆ ಒಳಹೋದ ವಿಜಯಲಕ್ಷ್ಮಿ, 5:30ರವರೆಗೆ ಅಂದರೆ ಸುಮಾರು 1 ಗಂಟೆಗೂ ಹೆಚ್ಚು ಕಾಲ ದರ್ಶನ್ ಜೊತೆ ಸುದೀರ್ಘವಾಗಿ ಮಾತುಕತೆ ನಡೆಸಿ ವಾಪಸ್ಸಾಗಿದ್ದಾರೆ. ಈ ವೇಳೆಯೇ ಯಶ್ ಟಾಕ್ಸಿಕ್ ಬಗ್ಗೆನೂ ವಿಚಾರಿಸಿದ್ದಾರಂತೆ.
ಇದೇ ವೇಳೆ, ದರ್ಶನ್ ಆಪ್ತ ಧನ್ವೀರ್ ಹಾಗೂ ವಿಜಯಲಕ್ಷ್ಮೀ ನಡುವೆ ಹಣಕಾಸಿನ ವ್ಯತ್ಯಾಸ ಉಂಟಾಗಿ ಮುನಿಸು ಮೂಡಿದೆ ಅನ್ನೋ ಗಾಸಿಪ್‌ಗಳು ಗಾಂಧಿನಗರದಲ್ಲಿ ಭುಗಿಲೆದ್ದಿವೆಯಾದರೂ, ಜೈಲಿನಲ್ಲಿದ್ದರೂ ದರ್ಶನ್ ಅವರ ಪ್ರತಿಯೊಂದು ನಡೆ, ಗೆಳೆಯ ಯಶ್ ಮೇಲಿನ ಅಕ್ಕರೆ ನಿಜವಾದ ಸ್ನೇಹ ಮತ್ತು ಸೌಹಾರ್ದತೆಗೆ ಹಿಡಿದ ಕೈಗನ್ನಡಿಯಾಗಿದೆ. ಅಂದಹಾಗೆ ಟಾಕ್ಸಿಕ್ ಟ್ರೈಲರ್ ಇದೆ ತಿಂಗಳು 8ರಂದು ಬಿಡುಗಡೆ ಆಗ್ತಿದೆ. ಈ ಹಿಂದೆ ರಿಲೀಸ್ ಆಗಿರೋ ಕ್ಯಾರೆಕ್ಟರ್ ಟೀಸರ್ ಅಂಡ್ ಸಾಂಗ್ಸ್ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು. ಇದೀಗ ಫೈನಲ್ ಟ್ರೈಲರ್ ಹೇಗಿರಲಿದೆ ಎಂಬ ಕುತೂಹಲ ಮನೆ ಮಾಡಿದೆ
ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
