ಶೇರ್ ಮಾರ್ಕೆಟ್ ಶೇಕಿಂಗ್ ಖದರ್ ಮುಗಿಸಿ, ಈಗ ಬೆಟ್ಟಿಂಗ್ ದಂಧೆಯ ಸಾಮ್ರಾಜ್ಯಕ್ಕೇ ಬಾಸ್ ಆಗೋಕೆ ಬಂದಿದ್ದಾರೆ ದುಲ್ಕರ್ ಸಲ್ಮಾನ್. ಬೋರ್ಡ್ ಮೇಲೆ ನಡೀತಿರೋ ಆಟ ಒಂದಾದ್ರೆ, ಸ್ಕ್ರೀನ್ ಮೇಲೆ ನಡೆಯೋ ಆಟವೇ ಬೇರೆ. ಐ ಆಮ್ ಗೇಮ್ ಅಂತ ಅಖಾಡಕ್ಕೆ ಇಳಿದಿರೋ ಈ ಯಂಗ್ ಸೂಪರ್ ಸ್ಟಾರ್, ಬಾಕ್ಸಾಫೀಸ್‌ನಲ್ಲಿ ಎಬ್ಬಿಸಿರೋ ಹೊಸ ಚಂಡಮಾರುತ ಎಂಥದ್ದು..? ವಿವಾದಗಳ ಬೆಂಕಿಯ ನಡುವೆಯೂ ಈ ಸಿನಿಮಾ ಸೃಷ್ಟಿಸ್ತಿರೋ ಹಾವಳಿ ಹೇಗಿದೆ? ನೋಡಿ..
- ಲಕ್ಕಿ ಭಾಸ್ಕರ್ ನಂತರ ಮತ್ತೆ ರಿಸ್ಕಿ ಸಬ್ಜೆಕ್ಟ್ನಲ್ಲಿ ದುಲ್ಕರ್
- ಐ ಆಮ್ ಗೇಮ್ ಮಾಸ್ ಅವತಾರದಲ್ಲಿ DQ..!
- ಯುವಕರ ಮೇಲೆ ಪರಿಣಾಮ ಬೀರುತ್ತಾ ಐ ಆಮ್ ಗೇಮ್..?
- ದುಲ್ಕರ್ ಗೇಮ್ ಬಾಕ್ಸಾಫೀಸ್‌ನಲ್ಲಿ ವರ್ಕೌಟ್ ಆಗುತ್ತಾ..?
ಲಕ್ಕಿ ಭಾಸ್ಕರ್ ಸಿನಿಮಾದಲ್ಲಿ 111 ಕೋಟಿಯ ಧೂಳೆಬ್ಬಿಸಿ ಬಾಕ್ಸಾಫೀಸ್ ಅನ್ನೇ ನಡಗಿಸಿದ್ದ ದುಲ್ಕರ್ ಸಲ್ಮಾನ್, ಈಗ ಐ ಆಮ್ ಗೇಮ್ ಅಂತ ಮತ್ತೆ ಮಾಸ್ ಅವತಾರದಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಬಿಡುಗಡೆಯಾಗಿರೋ ಟ್ರೈಲರ್ ಅಕ್ಷರಶಃ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದ್ದು, ಹೈ-ವೋಲ್ಟೇಜ್ ಆಕ್ಷನ್ ಮತ್ತು ಸ್ಪೋರ್ಟ್ಸ್ ಬೆಟ್ಟಿಂಗ್ ಅಡ್ಡಾದ ಕತ್ತಲ ಜಗತ್ತನ್ನು ಓಪನ್ ಮಾಡಿದೆ. ನಹಾಸ್ ಹಿದಾಯತ್ ಮೇಕಿಂಗ್‌ನಲ್ಲಿ ಡ್ಯಾನ್ ಜಾನ್ ಅನ್ನೋ ಖತರ್ನಾಕ್ ಪಾತ್ರದಲ್ಲಿ ಕಾಣಿಸಿಕೊಂಡಿರೋ ದುಲ್ಕರ್, ಶೇರ್ ಮಾರ್ಕೆಟ್ ಗ್ಯಾಂಬ್ಲಿಂಗ್ ಮುಗಿಸಿ ಈಗ ಬೆಟ್ಟಿಂಗ್ ಸಾಮ್ರಾಜ್ಯದ ಅಧಿಪತಿಯಾಗಿದ್ದಾರೆ. ಒಂದೊಂದು ಸೆಕೆಂಡ್ ಕೂಡ ಪ್ರಾಣಕ್ಕೆ ಕಂಟಕವಾಗೋ ಹೈ-ರಿಸ್ಕ್ ಗೇಮ್‌ನಲ್ಲಿ, ಹೀರೋ ಹೆಣಗಾಡೋ ಆಕ್ಷನ್ ಕಟ್ಸ್ ಪ್ರೇಕ್ಷಕರ ಎದೆಬಡಿತ ಹೆಚ್ಚಿಸಿದೆ.
ಇನ್ನೊಂದೆಡೆ, ಈ ನ್ಯೂ ಗೇಮ್ ಆಟ ಶುರುವಾಗ್ತಿದ್ದಂತೆ ಫಿಲ್ಮ್ ನಗರಿಯಲ್ಲಿ ಮತ್ತೆ ವಿವಾದದ ಕಿಡಿ ಭುಗಿಲೆದ್ದಿದೆ. ಬ್ಯಾಂಕಿಂಗ್ ಅಡ್ಡದಾರಿ ತೋರಿಸಿದ್ದ ಲಕ್ಕಿ ಭಾಸ್ಕರ್ ಬಂದಾಗ ಸಮಾಜಕ್ಕೆ ಏನು ಮೆಸೇಜ್ ಕೊಡ್ತಿದ್ದೀರಾ ಅಂತ ದೊಡ್ಡ ಗಲಾಟೆಯೇ ನಡೆದಿತ್ತು. ಈಗ ಐ ಆಮ್ ಗೇಮ್ ಸಿನಿಮಾದಲ್ಲಿ ಮೈಮುರಿದು ದುಡಿಯೋರ ಮಧ್ಯೆ, ಈಜಿಯಾಗಿ ದುಡ್ಡು ಮಾಡೋ ಬೆಟ್ಟಿಂಗ್ ಲೋಕಕ್ಕೆ ಬಿದ್ದು ಲೂಸರ್ ಅನಿಸಿಕೊಂಡವನು ಹೆಂಗೆ ಚಕ್ರವರ್ತಿಯಾಗ್ತಾನೆ ಅನ್ನೋದನ್ನ ತೋರಿಸಲಾಗಿದೆ. ಯುವಕರನ್ನ ತಕ್ಷಣವೇ ಅಟ್ರಾಕ್ಟ್ ಮಾಡೋ ಈ ಸ್ಟೋರಿ ಲೈನ್, ಈಗ ಮತ್ತೆ ಪರ-ವಿರೋಧದ ದೊಡ್ಡ ಕಾಂಟ್ರವರ್ಸಿಗೆ ಬೆಂಕಿ ಚೆಲ್ಲಿದೆ.
ವೇಫೇರರ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ದುಲ್ಕರ್ ಸಲ್ಮಾನ್ ಮತ್ತು ಜೋಮ್ ವರ್ಗೀಸ್ ಭಾರಿ ಬಜೆಟ್ ಹಾಕಿ ಸಿನಿಮಾ ನಿರ್ಮಿಸಿದ್ದು, ಕಾಯಾದು ಲೋಹರ್, ಮಿಸ್ಕಿನ್, ಆಂಟೋನಿ ವರ್ಗೀಸ್, ವಿನಯ್ ಫೋರ್ಟ್ ನಂತಹ ಘಟಾನುಘಟಿ ನಟರೇ ಇಲ್ಲಿದ್ದಾರೆ. ಸಸ್ಪೆನ್ಸ್, ರಫ್ ಆಂಡ್ ಟಫ್ ಆಕ್ಷನ್ ಹಾಗೂ ಮೈ ನವಿರೇಳಿಸೋ ಕಂಟೆಂಟ್ ಹೊಂದಿರೋ ಈ ಮಾಸ್ ಆಕ್ಷನ್ ಥ್ರಿಲ್ಲರ್ ಆಗಸ್ಟ್ 20 ರಂದು ರಿಲೀಸ್ ಆಗ್ತಿದೆ. ವಿವಾದಗಳು ಎಷ್ಟೇ ಸುತ್ತುವರೆದರೂ, ದುಲ್ಕರ್ ಸಲ್ಮಾನ್ ಅವರ ಈ ಮಾಸ್ ಆಟ ಬಾಕ್ಸಾಫೀಸ್‌ನಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತೆ ಅನ್ನೋದನ್ನ ಕಾದುನೋಡಬೇಕು
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
