ಸಿಲಿಕಾನ್ ಸಿಟಿಯಲ್ಲಿ ಜಡೆಗಳ ರಾಜ ನ್ಯಾಚುರಲ್ ಸ್ಟಾರ್ ನಾನಿ

ಪ್ಯಾರಡೈಸ್ ಪ್ರಮೋಷನ್.. ಹೇರ್‌ಸ್ಟೈಲ್ ಸೀಕ್ರೆಟ್ ರಿವೀಲ್..!

Your paragraph text 2026 09 18T190957.501

ಪ್ಯಾರಡೈಸ್.. ನಾನಿ ಕರಿಯರ್‌ನ ಬಿಗ್ಗೆಸ್ಟ್ ಪ್ಯಾನ್ ಇಂಡಿಯಾ ಮೂವಿ. ಇದೇ ಸೆಪ್ಟೆಂಬರ್ 24ಕ್ಕೆ ಸಿನಿಮಾ ವರ್ಲ್ಡ್‌ವೈಡ್ ರಿಲೀಸ್ ಆಗ್ತಿದ್ದು, ಪ್ರಮೋಷನ್ಸ್‌ಗಾಗಿ ನಮ್ಮ ಸಿಲಿಕಾನ್ ಸಿಟಿಗೆ ಲಗ್ಗೆ ಇಟ್ಟಿದ್ದಾರೆ ನ್ಯಾಚುರಲ್ ಸ್ಟಾರ್ ನಾನಿ. ಟ್ರೈಲರ್ ಇಲ್ಲದೆ ಬರ್ತಿರೋದ್ರ ಹಿಂದಿನ ಅಸಲಿಯತ್ತೇನು..? ಜಡೆಗಳ ಹಿಂದಿನ ಇತಿಹಾಸ ಏನು ಅನ್ನೋದ್ರ ಜೊತೆ ಸಿನಿಮಾದ ಕೋರ್ ಎಮೋಷನ್‌ನ ಎಕ್ಸ್‌‌ಕ್ಲೂಸಿವ್ ಆಗಿ ಬಿಟ್ಟುಕೊಟ್ಟಿದ್ದಾರೆ.

ಪ್ಯಾರಡೈಸ್.. ಟಾಲಿವುಡ್ ಸೂಪರ್ ಸ್ಟಾರ್ ನಾನಿ ನಟನೆಯ ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ. ಶ್ರೀಕಾಂತ್ ಒಡೆಲಾ ನಿರ್ದೇಶನದ ಈ ಸಿನಿಮಾ ಟೀಸರ್ ಹಾಗೂ ಸಾಂಗ್ಸ್‌ನಿಂದ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಇದೇ ಸೆಪ್ಟೆಂಬರ್ 24ಕ್ಕೆ ವರ್ಲ್ಡ್‌‌ವೈಡ್ ಐದೈದು ಭಾಷೆಗಳಲ್ಲಿ ಪ್ಯಾರಡೈಸ್ ತೆರೆಗಪ್ಪಳಿಸುತ್ತಿದ್ದು, ಹೊಸ ಮೈಲಿಗಲ್ಲು ಸೃಷ್ಟಿಸೋ ಮುನ್ಸೂಚನೆ ನೀಡಿದೆ.

ಸಿನಿಮಾದ ಟ್ರೈಲರ್ ರಿಲೀಸ್ ಮಾಡದೇನೇ ಡೈರೆಕ್ಟರ್ ಆಗಿ ಬಿಗ್‌ ಸ್ಕ್ರೀನ್‌‌ನಲ್ಲಿ ಚಿತ್ರವನ್ನ ತೋರಿಸೋಕೆ ಮುಂದಾಗಿದೆ ಟೀಂ. ಅಂದಹಾಗೆ ನಟ ನಾನಿ ಕಾಲಿಗೆ ಚಕ್ರ ಕಟ್ಟಿಕೊಂಡು ಎಲ್ಲೆಡೆ ಓಡಾಡುತ್ತಾ ಈ ಸಿನಿಮಾದ ಪ್ರಮೋಷನ್ಸ್ ಮಾಡ್ತಿರೋದು ವಿಶೇಷ. ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿಗೂ ಎಂಟ್ರಿ ಕೊಟ್ಟಿರೋ ನ್ಯಾಚುರಲ್ ಸ್ಟಾರ್ ನಾನಿ, ನಗರದ ಪಂಚತಾರಾ ಹೋಟೆಲ್‌‌ನಲ್ಲಿ ಸುದ್ದಿಗೋಷ್ಠಿ ನಡೆಸಿದ್ರು. ಆಗ ಸಾಕಷ್ಟು ವಿಷಯಗಳ ಕುರಿತು ಮಾತನಾಡಿದ್ರು.

ಟ್ರೈಲರ್ ಇಲ್ಲದೇನೇ ಸಿನಿಮಾನ ರಿಲೀಸ್ ಮಾಡಬಹುದು ಅಂತ ನ್ಯೂ ಟ್ರೆಂಡ್ ಬಗ್ಗೆ ವಿಶ್ಲೇಷಿಸಿದ್ರು.

ಇನ್ನೂ ಜಡೆಗಳ ರಾಜನಾಗಿ ಎಲ್ಲೆಡೆ ಮಿಂಚು ಹರಿಸುತ್ತಿರೋ ನಟ ನಾನಿ, ಹೇರ್ ಸ್ಟೈಲ್ ಬಗ್ಗೆ ಮಾತನಾಡಿದ್ರು. ಈಗ ಈ ಹೇರ್ ಸ್ಟೈಲ್ ಹುಡುಗಿಯರು ಕೂಡ ಫಾಲೋ ಮಾಡ್ತಿಲ್ಲ.. ಆದ್ರೆ ಹುಡುಗರು ಮಾಡ್ತಿದ್ದಾರೆ. ಈ ಸಿನಿಮಾ ಮೂಲಕ ಜಡೆಗಳಿಗೆ ಬೇಡಿಕೆ ಹೆಚ್ಚಾಗಲಿದೆ ಎಂದರು. ಆ ಹಳೆಯ ಟ್ರೆಂಡ್ ಮರುಕಳಿಸಲಿದೆ ಎಂತ ಭರವಸೆ ನೀಡಿದ್ರು.

ಅಂದಹಾಗೆ ಇದು ಔಟ್ ಅಂಡ್ ಔಟ್ ಮಾಸ್ ಸಿನಿಮಾ ಆದ್ರೂ.. ಮಾನ್‌ಸ್ಟರ್ ಕಥೆ ಅಲ್ಲ.. ತಾಯಿ ಮಗನ ಬಾಂಧವ್ಯದ ಕಥೆ ಅಂತ ಸಿನಿಮಾದ ಕೋರ್ ಎಮೋಷನ್‌‌ನ ಬಿಚ್ಚಿಟ್ಟರು.

ಪೈರಸಿ ಬಗ್ಗೆಯೂ ತಮ್ಮ ಅಭಿಪ್ರಾಯ ಹೊರಹಾಕಿದ ನಾನಿ, ಪೈರಸಿ ಅನ್ನೋದು ಜಿರಳೆ ಇದ್ದಹಾಗೆ.. ಎಷ್ಟು ಸಾಯಿಸಿದ್ರೂ ಮತ್ತೆ ಹುಟ್ಟಿಬರುತ್ತಲೇ ಇರುತ್ತೆ ಎಂದರು. ಅಲ್ಲದೆ ತನ್ನ ಎಲ್ಲಾ ಸಿನಿಮಾಗಳ ಪಾತ್ರಕ್ಕಿಂತ ಈ ಪಾತ್ರ ವಿಭಿನ್ನವಾಗಿರಲಿದೆ ಅಂತ ಹಿಂಟ್ ಬಿಟ್ಟುಕೊಟ್ಟರು.

ಪ್ಯಾನ್ ಇಂಡಿಯಾ ಅನ್ನೋ ಟ್ಯಾಗ್ ಲೈನ್ ನನ್ನ ಸಿನಿಮಾಗೆ ಬೇಡ.  ಪ್ಯಾರಡೈಸ್ ತೆಲುಗು ಸಿನಿಮಾ. ಪ್ರೇಕ್ಷಕರು ತೆಲುಗು ಸಿನಿಮಾ ಅಂತಲೇ ಹೇಳ್ಬೇಕು. ಈ ಸಿನಿಮಾಗಾಗಿ ನಾನು ಜಾಸ್ತಿ ಸಿಕ್ಸ್ ಪ್ಯಾಕ್ ಮೇಲೆ ಗಮನ ಕೊಟ್ಟಿಲ್ಲ ಅಂತ ತಮ್ಮ ವರ್ಕೌಟ್ ಬಗ್ಗೆಯೂ ಮಾತನಾಡಿದ್ರು.

ಒಟ್ಟಾರೆ ನಾನಿಗೆ ಬೆಂಗಳೂರು ಒಂಥರಾ ಸೆಕೆಂಡ್ ಹೋಮ್ ಇದ್ದಂತೆ. ತಮ್ಮ ಯಾವುದೇ ಸಿನಿಮಾ ಬಂದರೂ ಸಹ ಕನ್ನಡಿಗರ ಮುಂದೆ ಬಂದು ಪ್ರಚಾರ ಕಾರ್ಯವನ್ನ ತುಂಬಾ ಪ್ರಾಮಾಣಿಕವಾಗಿ ಮಾಡ್ತಾರೆ. ಪ್ಯಾರಡೈಸ್ ಎಷ್ಟರ ಮಟ್ಟಿಗೆ ಕನ್ನಡಿಗರಿಗೆ ರುಚಿಸುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version