ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.
ಸೂಪರ್ ಸ್ಟಾರ್ ರಜನೀಕಾಂತ್ ಕರಿಯರ್ನ ಎವರ್‌ಗ್ರೀನ್ ಸಿನಿಮಾಗಳಲ್ಲಿ ಪಡೆಯಪ್ಪ ಕೂಡ ಒಂದು. ರಜನೀಕಾಂತ್ಗೆ ವಯಸ್ಸಾಗಿರಬಹುದು. ಆದ್ರೆ ಈ ಸಿನಿಮಾಗಿರೋ ಕ್ರೇಜ್ ಮಾತ್ರ ಕಿಂಚಿತ್ತೂ ಕಮ್ಮಿ ಆಗಿಲ್ಲ. ಸದ್ಯ ಬದಲಾದ ತಂತ್ರಜ್ಞಾನದಲ್ಲಿ ಸಿನಿಮಾ ಮತ್ತೆ ರೀ–ರಿಲೀಸ್ ಆಗ್ತಿದ್ದು, ಅದೇ ವಿಚಾರವಾಗಿ ಮಾತಾಡ್ತಾ ಅದರ ಸೀಕ್ವೆಲ್ ಕಹಾನಿ ಕೂಡ ಬಿಚ್ಚಿಟ್ಟಿದ್ದಾರೆ ತಲೈವಾ. ಏನದು ಅಂತೀರಾ..? ಈ ಸ್ಟೋರಿ ನೋಡಿ.
ರಜನಿಕಾಂತ್ ಅವರ ಹುಟ್ಟುಹಬ್ಬದ ವಿಶೇಷ ದಿನದಂದು ಅವರ ವೃತ್ತಿ ಬದುಕಿನ ಎವರ್‌ಗ್ರೀನ್ ಸಿನಿಮಾ ಪಡೆಯಪ್ಪ ಮರು ಬಿಡುಗಡೆಯಾಗುತ್ತಿದೆ. 1999 ರ ಸೂಪರ್‌ಹಿಟ್ ಸಿನಿಮಾ ಪಡಿಯಪ್ಪ ಮರು ಬಿಡುಗಡೆಯಾಗುತ್ತಿದ್ದು ತಲೈವ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಕೆ.ಎಸ್. ರವಿಕುಮಾರ್ ನಿರ್ದೇಶನದ ಈ ಚಿತ್ರ ರಜನಿಕಾಂತ್ ಜನ್ಮದಿನದ ಪ್ರಯುಕ್ತ ಇದೇ ಡಿಸೆಂಬರ್ 12 ರಂದು 4ಕೆ ಹಾಗೂ ಅತ್ಯಾಧುನಿಕ ಸೌಂಡ್ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆಯಾಗುತ್ತಿದೆ.
75ನೇ ವಸಂತಕ್ಕೆ ಕಾಲಿಡಲಿರುವ ಸೂಪರ್ ಸ್ಟಾರ್ ರಜನಿ..!
25 ವರ್ಷಗಳ ಬಳಿಕ ತೆರೆ ಮೇಲೆ ಪಡೆಯಪ್ಪ ಅಬ್ಬರ..!
ಇನ್ನು ಪಡಿಯಪ್ಪ ಸಿನಿಮಾ ಬಿಡುಗಡೆಯಾಗಿ 25 ವರ್ಷ ಗತಿಸಿದರೂ ಅದರ ಖ್ಯಾತಿ ಮಾಸಿಲ್ಲ. ತಮಿಳುನಾಡು ಸೇರಿದಂತೆ ದೇಶದ ಅನೇಕ ಕಡೆ 150ಕ್ಕೂ ಹೆಚ್ಚು ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ರಜನಿ ಹುಟ್ಟುಹಬ್ಬದ ಜೊತೆಗೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 50 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ತಮಿಳು ಚಿತ್ರರಂಗ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಜನಿಕಾಂತ್ ಸುಮಾರು 36 ನಿಮಿಷಗಳ ಪ್ರಮೋಷನಲ್ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಪಡೆಯಪ್ಪ ಸಿನಿಮಾದ ಬಗೆಗಿನ ಹಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಪಡೆಯಪ್ಪ ಭಾರತೀಯ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಬರೆದ ಸಿನಿಮಾ. ಈ ಸಿನಿಮಾವನ್ನು ಸ್ವತ: ರಜನಿಕಾಂತ್ ಅವರೇ ನಿರ್ಮಾಣ ಮಾಡಿದ್ದರು. ವಿಶೇಷ ಅಂದರೆ, ಈ ಸಿನಿಮಾದ ಹಕ್ಕುಗಳನ್ನು ಯಾರಿಗೂ ಕೊಟ್ಟಿಲ್ಲ. ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕುಗಳು ಇನ್ನೂ ಯಾರಿಗೂ ಕೊಟ್ಟಿಲ್ಲ. ಸನ್ ಟಿವಿಗೆ ಕೇವಲ ಎರಡು ಬಾರಿ ಮಾತ್ರ ಪ್ರಸಾರಕ್ಕೆ ಅವಕಾಶ ಕೊಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಈಗ 25 ವರ್ಷಗಳ ಬಳಿಕ ಈ ಸಿನಿಮಾವನ್ನು ಮರುಬಿಡುಗಡೆ ಮಾಡುತ್ತಿದ್ದಾರೆ. ಇದೇ ವೇಳೆ ಪಡೆಯಪ್ಪ 2 ಸಿನಿಮಾ ಬಗ್ಗೆನೂ ಅಭಿಮಾನಿಗಳಿಗೆ ಸುಳಿವನ್ನು ನೀಡಿದ್ದಾರೆ.
ತಲೈವಾ ಫ್ಯಾನ್ಸ್‌ಗೆ ಗುಡ್ ನ್ಯೂಸ್..ಕಾದಿದೆ ಬಿಗ್ ಸರ್ಪ್ರೈಸ್
‘ಪಡೆಯಪ್ಪ’ ರೀ ರಿಲೀಸ್ ಜೊತೆಗೆ ಪಾರ್ಟ್-2 ಕೂಡ ಸಿದ್ಧ..!
ರಜನಿಕಾಂತ್ ಹಂಚಿಕೊಂಡಿರುವ ವಿಡಿಯೋದಲ್ಲಿ ಪಡೆಯಪ್ಪ ಬಗ್ಗೆ ಹಲವು ವಿಷಯಗಳನ್ನು ರಿವೀಲ್ ಮಾಡಿದ್ದಾರೆ.ಈ ಸಿನಿಮಾದ ನೀಲಾಂಬರಿ ಪಾತ್ರಕ್ಕಾಗಿ ಮೊದಲ ಐಶ್ವರ್ಯಾ ರೈ ಅವರನ್ನು ಅಪ್ರೋಚ್ ಮಾಡಲಾಗಿತ್ತು. ಅವರ ಕಾಲ್‌ಶೀಟ್‌ಗಾಗಿ ಮೂರು ತಿಂಗಳು ಕಾದಿದ್ದರಂತೆ. ಆದರೆ, ಐಶ್ವರ್ಯಾ ರೈ ಆ ಪಾತ್ರದಲ್ಲಿ ನಟಿಸುವುದಕ್ಕೆ ಆಸಕ್ತಿ ತೋರಿರಲಿಲ್ಲ. ಹಾಗಾಗಿ ಆ ಪಾತ್ರದಲ್ಲಿ ರಮ್ಯಕೃಷ್ಣ ನಟಿಸಿ ಸೈ ಎನಿಸಿಕೊಂಡಿದ್ದರು.
ಪಡೆಯಪ್ಪ ರಿ-ರಿಲೀಸ್ ಖುಷಿಯನ್ನು ಹಂಚಿಕೊಳ್ಳುವ ಜೊತೆಗೆ, ಸರ್ಪ್ರೈಸ್ ಕೂಡ ಕೊಟ್ಟಿದ್ದಾರೆ. ಪಡೆಯಪ್ಪ 2 ಕಥೆಯನ್ನು ಸಿದ್ಧಪಡಿಸುತ್ತಿರುವುದಾಗಿ ರಜನಿಕಾಂತ್ ರಿವೀಲ್ ಮಾಡಿದ್ದಾರೆ. ಎಷ್ಟು ಜನ್ಮ ಎತ್ತಿದರೂ ನಿನ್ನ ವಿರುದ್ಧ ಸೇಡು ತೀರಿಸಿಕೊಳ್ಳದೆ ಬಿಡುವುದಿಲ್ಲ ಎಂದು ಹೇಳಿ ನೀಲಾಂಬರಿ ಸಾವನ್ನಪ್ಪುತ್ತಾಳೆ. ಅಲ್ಲಿಂದ ಪಡೆಯಪ್ಪ 2 ಕಥೆ ಆರಂಭ ಆಗುತ್ತೆ. ಕಥೆ ಸರಿಯಾಗಿ ಮೂಡಿ ಬಂದರೆ, ಪಡೆಯಪ್ಪ 2ಖಂಡಿತಾ ಬರುತ್ತೆ ಎಂದು ರಜನಿ ತಮ್ಮ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
