ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಮೋಸ್ಟ್ ಎಕ್ಸ್ಪೆಕಟೆಡ್ ಸಿನಿಮಾ ಕೂಲಿ ಚಿತ್ರದ ರಿಲೀಸ್ಗೆ ತಲೈವಾನ ಫ್ಯಾನ್ಸ್ ಕಾತುರಾಗಿದ್ದಾರೆ. ಕೂಲಿ ಸಿನಿಮಾದ ಕಥೆ ಏನು ಅನ್ನೋದು ಚಿತ್ರತಂಡ ಎಲ್ಲೂ ಬಿಟ್ಟುಕೊಟ್ಟಿಲ್ಲ.. ಆದ್ರೆ ರಿಲೀಸ್ಗೆ ಇನ್ನೂ ಒಂದು ತಿಂಗಳು ಬಾಕಿಯಿರುವಾಗೇ ಕೂಲಿ ಚಿತ್ರದ ಸ್ಟೋರಿ ಆನ್ಲೈನ್ ನಲ್ಲಿ ಸೋರಿಕೆ ಆಗಿದೆ. ಅಷ್ಟಕ್ಕೂ ಕೂಲಿ ಸ್ಟೋರಿ ಲೀಕ್ ಆಗಿದ್ದು ಹೇಗೆ.. ಲೀಕ್ ಮಾಡಿದ್ಯಾರು ಅನ್ನೋದ್ರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
- ರಜನಿಕಾಂತ್ ‘ಕೂಲಿ’ ಚಿತ್ರದ ಕಥೆ ಆನ್‌ಲೈನ್‌ನಲ್ಲಿ ಲೀಕ್..!
- ದೇವಾ ಪಾತ್ರದಲ್ಲಿ ರಜನಿ.. ಉಪೇಂದ್ರ ಯಾವ ರೋಲ್..?
- ಕೂಲಿ ಕಥೆ ಬಗ್ಗೆ ಎಲ್ಲೂ ಸುಳಿವು ಬಿಟ್ಟುಕೊಡದ ಚಿತ್ರತಂಡ
ಕಾಲಿವುಡ್ ತಲೈವಾ ರಜನಿಕಾಂತ್ ನಟಿಸಿರುವ ಹಾಗೂ ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳಿರುವ ಕೂಲಿ ಚಿತ್ರ ಇದೇ ಆಗಷ್ಟ್ 14ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಕೂಲಿ ಚಿತ್ರದ ಮೇಲಿನ ನಿರೀಕ್ಷೆ ಈಗಾಗಲೇ ದುಪ್ಪಟ್ಟಾಗಿದೆ. ಚಿತ್ರದ ಹೈಫ್ ಎಷ್ಟರಮಟ್ಟಿಗೆ ಇದೆ ಎಂದರೆ, ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಚಿಕುತು, ಮೋನಿಕಾ ಹಾಡುಗಳು ಸೂಪರ್ ಹಿಟ್ ಆಗಿದ್ದು ಎಲ್ಲಡೆ ಟ್ರೆಂಡ್ ಕ್ರಿಯೇಟ್ ಮಾಡಿದೆ. ನಿರ್ದೇಶಕ ಲೋಕೇಶ್ ಕನಕರಾಜ್ ಈ ಚಿತ್ರದ ಕಥೆಯ ಬಗ್ಗೆ ಇಲ್ಲಿಯವರೆಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಹೀಗಿದ್ರೂ ಕೂಲಿ ಕಥೆ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ.
ಹೌದು ಈಗಾಗಲೇ ರಿಲೀಸ್ ಆಗಿರುವ ಟೀಸರ್ ಹಾಡುಗಳು ಹಿಟ್ ಲಿಸ್ಟ್ ಸೇರಿವೆ. ಆದ್ರೆ ಈ ಮಧ್ಯೆ ಚಿತ್ರದ ಕಥೆ ಏನು ರಜನಿ ಪಾತ್ರದ ಬಗ್ಗೆ ಒಂದಿಷ್ಟು ಮಾಹಿತಿ ಸೋರಿಕೆಯಾಗಿದೆ. ಸಿನಿಮಾ ಬಿಡುಗಡೆಗೆ ಒಂದು ತಿಂಗಳು ಬಾಕಿ ಇರುವಾಗಲೇ ಒನ್‌ಲೈನ್ ಸ್ಟೋರಿ ರಿವೀಲ್ ಆಗಿದೆ. ವಿದೇಶಗಳಲ್ಲಿ ಈಗಾಗಲೇ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಆ ಟಿಕೆಟ್ ಬುಕ್ಕಿಂಗ್ ವೆಬ್‌ಸೈಟ್‌ನಲ್ಲಿ ‘ಕೂಲಿ’ ಚಿತ್ರದ ಒಂದೆಳೆ ಕಥೆಯನ್ನು ಅಪ್‌ಡೇಟ್ ಮಾಡಿದ್ದಾರೆ.
ಹೌದು, ಕೂಲಿ ಚಿತ್ರದಲ್ಲಿ ರಜನಿಕಾಂತ್ ದೇವಾ ಪಾತ್ರದಲ್ಲಿ ನಟಿಸಲಿದ್ದಾರೆ. ಚಿನ್ನದ ಕಳ್ಳಸಾಗಣೆ ಮಾಫಿಯಾ ಗ್ಯಾಂಗ್‌ನ ನಾಯಕ ದೇವಾ ಎಲ್ಲವನ್ನೂ ಬಿಟ್ಟು ತನ್ನ ಕುಟುಂಬಕ್ಕಾಗಿ ಸಾಮಾನ್ಯ ಜೀವನವನ್ನು ನಡೆಸುತ್ತಿರುತ್ತಾನೆ. ಆದಾಗ್ಯೂ, ಅವನ ಕಿರಿಯ ಸಹೋದರ ಶೋಬಿನ್ ಶಾಹಿರ್‌ನನ್ನು ಅಕ್ಕಿನೇನಿ ನಾಗಾರ್ಜುನ ಕೊಲ್ಲುತ್ತಾನೆ. ಅವನ ಮೇಲೆ ಸೇಡು ತೀರಿಸಿಕೊಳ್ಳಲು ದೇವಾ ತನ್ನ ಮಾಫಿಯಾ ಗ್ಯಾಂಗ್ ಅನ್ನು ಮತ್ತೆ ಪುನಃ ಪ್ರಾರಂಭಿಸುತ್ತಾನೆ. ಅಕ್ಕಿನೇನಿ ನಾಗಾರ್ಜುನ ಶೋಬಿನ್‌ನನ್ನು ಕೊಂದ ನಿಜವಾದ ಕಾರಣವೇನು? ತನ್ನ ಹಳೆಯ ಮಾಫಿಯಾ ಸಾಮ್ರಾಜ್ಯವನ್ನು ಪುನರ್ನಿರ್ಮಿಸಲು ದೇವಾ ಮಾಡಿದ ಪ್ರಯತ್ನ ಏನು? ಎಂಬುದೇ ದೊಡ್ಡ ಸಸ್ಪೆನ್ಸ್ ಆಗಿದೆಯಂತೆ.
- ಗೋಲ್ಡ್ ಮಾಫಿಯಾ ಗ್ಯಾಂಗ್ ಲೀಡರ್ ರಜನಿಕಾಂತ್..!
- ಆಗಸ್ಟ್ 14ಕ್ಕೆ ಕೂಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್
ರಜನಿಕಾಂತ್ ಗೋಲ್ಡ್ ಮಾಫಿಯಾ ಗ್ಯಾಂಗ್ ನಾಯನ ದೇವಾ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಕಲೀಶಾ ಆಗಿ ಉಪೇಂದ್ರ ಕಾಣಿಸಿಕೊಳ್ಳಲಿದ್ದು, ನಾಗಾರ್ಜುನ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದಾರೆ ಎಂದು ನಿರ್ದೇಶಕ ಲೋಕೇಶ್ ಕನಕರಾಜ್ ಇದಾಗಲೇ ಹೇಳಿದ್ದಾರೆ. ಇನ್ನು ಚಿತ್ರದಲ್ಲಿ ಶ್ರುತಿ ಹಾಸನ್, ಸತ್ಯರಾಜ್ ಮತ್ತು ಶೌಬಿನ್ ಶಾಹಿರ್ ಕೂಡ ಇದ್ದಾರೆ. ಅಲ್ಲದೇ ಕೂಲಿಗೆ ಸಂಗೀತ ನಿರ್ದೇಶಕರಾಗಿ ಅನಿರುದ್ಧ್ ಕೆಲಸ ಮಾಡಿದ್ದು ಎಂದಿನಂತೆ ಹಾಡುಗಳು ಕ್ಲಿಕ್ ಆಗಿದೆ. ಅಲ್ಲದೇ ಬಾಲಿವುಡ್‌ನ ಅಮೀರ್ ಖಾನ್ ಸಹ ಕೂಲಿ ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಒಟ್ನಲ್ಲಿ ರಿಲೀಸ್ಗೂ ಮುನ್ನವೇ ಕೂಲಿ ಕಥೆ ಲೀಕ್ ಆಗಿದ್ರು ತಲೈವಾ ಫ್ಯಾನ್ಸ್ ಮಾತ್ರ ಇರರ್ಲಿ ನಾವು ಸಿನಿಮಾ ನೋಡೇ ನೋಡುತ್ತೇವೆ ಅಂತ ಹೇಳುತ್ತಿದ್ದಾರೆ.. ಕೂಲಿ ಒಟಿಟಿ ರೈಟ್ಸ್ ಕೂಡ ದಾಖಲೆ ಮೊತ್ತಕ್ಕೆ ಸೇಲ್ ಆಗಿದ್ದು ಭಾರೀ ಹೈಪ್ ಕ್ರಿಯೆಟ್ ಮಾಡಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್