ಸೂಪರ್ ಸ್ಟಾರ್ ರಜನೀಕಾಂತ್.. ಯಂಗ್‌ಸ್ಟರ್ಸ್‌ನ ನಾಚಿಸುವಂತಹ ಎನರ್ಜಿ, ಛಾರ್ಮ್ ಹಾಗೂ ಸಿನಿಮೋತ್ಸಾಹ. 74ರ ಇಳಿವಯಸ್ಸಲ್ಲೂ ಇವರ ಸ್ಟೈಲು, ಮ್ಯಾನರಿಸಂ ಸಖತ್ ಕ್ರೇಜಿ. ಇವ್ರನ್ನ ಮ್ಯಾಚ್ ಮಾಡೋ ಸ್ಟಾರ್ ಮತ್ತೊಬ್ಬ ಹುಟ್ಟಿಲ್ಲ. ಸದ್ಯ ಕೂಲಿ ಚಿತ್ರದ ಮತ್ತೊಂದು ಮೇಕಿಂಗ್ ಝಲಕ್ ರಿವೀಲ್ ಆಗಿದ್ದು, ಪವರ್ ಹೌಸ್ ಝಲಕ್ ಹುಬ್ಬೇರಿಸಿದೆ.
- ತಲೈವಾ ಪವರ್ ಹೌಸ್.. ಕೂಲಿ ಖದರ್‌ಗೆ ಫ್ಯಾನ್ಸ್ ಸ್ಟನ್
- ಆ-14ಕ್ಕೆ ಪ್ರೇಕ್ಷಕರ ಮುಂದೆ ಮೆಗಾ ಮಲ್ಟಿಸ್ಟಾರರ್ ಕೂಲಿ
- 74ರ ಇಳಿವಯಸ್ಸಲ್ಲೂ ತಲೈವಾ ಫಾಸ್ಟ್ & ಫ್ಯೂರಿಯಸ್
- ಉಪ್ಪಿ, ನಾಗಾರ್ಜುನ್ ಜೊತೆ ರಜನೀಕಾಂತ್ ಖದರ್..!
ಇದು ಇದೇ ಆಗಸ್ಟ್ 14ಕ್ಕೆ ಪ್ರೇಕ್ಷಕರ ಮುಂದೆ ಬರ್ತಿರೋ ಈ ವರ್ಷದ ಬಹು ನಿರೀಕ್ಷಿತ ಕೂಲಿ ಚಿತ್ರದ ಎಕ್ಸ್‌ಕ್ಲೂಸಿವ್ ಮೇಕಿಂಗ್ ಝಲಕ್. ಅಬ್ಬಬ್ಬಾ.. ತಲೈವಾ ರಜನೀಕಾಂತ್‌ರ ಎನರ್ಜಿ, ಛಾರ್ಮ್ ನೋಡ್ತಿದ್ರೆ ಇಂದಿನ ಯಂಗ್‌ಸ್ಟರ್ಸ್ ಕೂಡ ನಾಚುವಂತಿದೆ. ಅವ್ರ ಏಜ್ ಈಗ 74 ಅಂದ್ರೆ ಯಾರೂ ನಂಬಲ್ಲ. 24ರ ಪೋರನ ರೀತಿ ಸ್ಕ್ರೀನ್ ಮೇಲೆ ಸಖತ್ ಲವಲವಿಕೆಯಿಂದ ಕಾಣ್ತಾರೆ ಸೂಪರ್ ಸ್ಟಾರ್.
ಹೌದು.. ಸ್ಟೈಲ್ ಕಿಂಗ್ ರಜನೀಕಾಂತ್ ನಟನೆಯ 171ನೇ ಸಿನಿಮಾ ಈ ಕೂಲಿ. ಟೈಟಲ್‌ಗೆ ಪೂರಕವಾಗಿ ಈ ಸಿನಿಮಾದ ಕಥೆ, ಪಾತ್ರಗಳು ಹಾಗೂ ಮೇಕಿಂಗ್ ಇರಲಿದೆ. ಅದಕ್ಕೆ ಕಾರಣ ಕೂಲಿ ಸಾರಥಿ ಲೋಕೇಶ್ ಕನಕರಾಜ್. ಈತನ ಮೇಕಿಂಗ್‌ನ ಎಂಥವ್ರೂ ಮಾತನಾಡುವಂತಿರುತ್ತೆ. ಅದರಲ್ಲೂ ಮೆಗಾ ಮಲ್ಟಿಸ್ಟಾರರ್ ಮಾಡಿದ್ದಾರೆ. ರಜನಿ ಜೊತೆ ನಮ್ಮ ಕನ್ನಡದ ಉಪೇಂದ್ರ ಹಾಗೂ ತೆಲುಗಿನ ನಾಗಾರ್ಜುನ್ ಸೇರಿದಂತೆ ಮಲಯಾಳಂ ಪ್ರತಿಭಾನ್ವಿತ ಕಲಾವಿದರು ಕೂಡ ಕೂಲಿಯ ಭಾಗವಾಗಿದ್ದಾರೆ.
ಇಲ್ಲಿಯವರೆಡಗೂ ಕೂಲಿ ಚಿತ್ರದ ಕ್ಯಾರೆಕ್ಟರ್ಸ್ ಹಾಗೂ ಸಿನಿಮಾ ಕುಂಬಳಕಾಯಿ ಒಡೆದ ವಿಡಿಯೋಗಳನ್ನ ರಿವೀಲ್ ಮಾಡಿದ್ದ ಚಿತ್ರತಂಡ, ಇದೀಗ ಹೊಸದಾಗಿ ಪವರ್ ಹೌಸ್ ಮೇಕಿಂಗ್ ವಿಡಿಯೋ ಬಹಿರಂಗಪಡಿಸಿದೆ. ಅದರಲ್ಲಿ ರಜನೀಕಾಂತ್ ಖದರ್ ನೋಡಿದ್ರೆ ಎಂಥವ್ರೂ ಸುಸ್ತಾಗ್ತಾರೆ. ಅದೇ ಸಿನಿಮೋತ್ಸಾಹ, ಅದೇ ಸಿಂಹ ನಡಿಗೆ, ಅದೇ ಫಾಸ್ಟ್ ಅಂಡ್ ಫ್ಯೂರಿಯಸ್. ಅದ್ರಲ್ಲೂ ಶೂಟಿಂಗ್ ಸೆಟ್‌ಗೆ ಬಂದ ರಜನಿಯನ್ನ ನೋಡಲು ಸಹಸ್ರಾರು ಮಂದಿ ಕಾಯ್ತಿರ್ತಾರೆ. ಅವ್ರತ್ತ ರಜನಿ ಸ್ಟೈಲ್ ಆಗಿ ಕೈ ಬೀಸಿ ಲವ್ ಯೂ ಅನ್ನೋದು ನೋಡೋಕೆ ಮಜಬೂತಾಗಿದೆ.
ಜೈಲರ್ ಹಾಗೂ ವೆಟ್ಟೈಯಾನ್ ಸಿನಿಮಾಗಳ ಬಳಿಕ ತಲೈವಾ ರಜನೀಕಾಂತ್ ನಟನೆಯ ಮತ್ತೊಂದು ಮೆಗಾ ಮೂವಿ ಕೂಲಿ ಆಗಿದ್ದು, ಸ್ವಾತಂತ್ರ್ಯೋತ್ಸವ ವಿಶೇಷ ಆಗಸ್ಟ್ 14ಕ್ಕೆ ಪ್ರೇಕ್ಷಕರಿಗೆ ಮನರಂಜನೆಯ ರಸಪಾಕ ಉಣಬಡಿಸಲಿದೆ. ಮಾಸ್ ಹೀರೋಗಳ ಸಮಾಗಮದ ಚಿತ್ರವಾಗಿದ್ದು, ಲೋಕೇಶ್ ಕನಕರಾಜ್ ಡೈರೆಕ್ಷನ್ ಆಗಿರೋದ್ರಿಂದ ಇಲ್ಲಿ ಮಾಸ್‌ಪ್ರಿಯರಿಗೆ ಹಬ್ಬದೂಟ ಕನ್ಫರ್ಮ್.
ಇದರ ಬೆನ್ನಲ್ಲೇ ಜೈಲರ್-2 ಕೂಡ ಬರ್ತಿದ್ದು, ಡಿಸೆಂಬರ್ ಒಳಗೆ ಜೈಲರ್ ಸೀಕ್ವೆಲ್ ಸಿನಿಮಾ ಕಂಪ್ಲೀಟ್ ಮಾಡೋದಾಗಿ ಸ್ವತಃ ರಜನೀಕಾಂತ್ ಹೇಳಿಕೊಂಡಿದ್ದಾರೆ. ಅದ್ಯಾ ಕೋ ರಜನೀಕಾಂತ್ ಇತ್ತೀಚೆಗೆ ಮಲ್ಟಿಸ್ಟಾರ್ ಸಿನಿಮಾಗಳಲ್ಲೇ ನಟಿಸುತ್ತಿದ್ದು, ಎಲ್ಲಾ ಭಾಷೆಯ ಕಲಾವಿದರ ಸಮಾಗಮದಿಂದ ಅದು ಬಾಕ್ಸ್ ಆಫೀಸ್ ಕಲೆಕ್ಷನ್‌ಗೂ ಸಾಥ್ ಕೊಡಲಿದೆ. ಒಟ್ಟಾರೆ ಕೂಲಿ ಚಿತ್ರದ ನ್ಯೂ ಮೇಕಿಂಗ್ ನೋಡಿ ತಲೈವಾ ಫ್ಯಾನ್ಸ್ ದಿಲ್‌ಖುಷ್ ಆಗಿದ್ದಾರೆ.