ತಲೈವಾ ರಜನೀಕಾಂತ್ ಸಿನಿಯಾನಕ್ಕೆ ಬರೋಬ್ಬರಿ 50 ವರ್ಷ. ಅವ್ರ ಕರಿಯರ್‌ನಲ್ಲಿ ಇಲ್ಲಿಯವರೆಗೆ ಸಾಲು ಸಾಲು ರೆಕಾರ್ಡ್‌ಗಳನ್ನ ಮಾಡಿದ್ದಾರೆ. 74ರ ಈ ಇಳಿವಯಸ್ಸಿನಲ್ಲಿ ಕೂಡ ಅವರನ್ನ ಮೀರಿಸೋ ರೆಕಾರ್ಡ್ ಮೇಕರ್ ಅಥ್ವಾ ಬ್ರೇಕರ್ ಮತ್ತೊಬ್ಬರಿಲ್ಲ. ಹೌದು.. ಕೂಲಿ ನಾಲ್ಕೇ ದಿನದಲ್ಲಿ 404 ಕೋಟಿ ಪೈಸಾ ವಸೂಲ್ ಮಾಡಿ, ಕಾಲಿವುಡ್‌ನ ಈ ಹಿಂದಿನ ಎಲ್ಲಾ ದಾಖಲೆಗಳನ್ನ ಧೂಳಿಪಟ ಮಾಡಿದೆ.
- ಕೂಲಿ @404Cr.. ರಜನಿ ರೆಕಾರ್ಡ್ ಮೇಕರ್ & ಬ್ರೇಕರ್
- 50 ವರ್ಷಗಳ ಜರ್ನಿಯಲ್ಲಿ ತಲೈವಾ ರೆಕಾರ್ಡ್ ಕಾ ಬಾಪ್!
- 4 ದಿನಕ್ಕೆ ಕೂಲಿ 400 ಕೋಟಿ ಕ್ಲಬ್.. ಎಲ್ಲೆಡೆ ಹೌಸ್‌ಫುಲ್
- ರಚ್ಚು- ಉಪ್ಪಿ ಕಿಲ್ಲರ್ ಪರ್ಫಾಮೆನ್ಸ್‌ಗೆ ತಮಿಳಿಗರು ಬೋಲ್ಡ್
ರಜನೀಕಾಂತ್.. ಇದು ಬರೀ ಹೆಸರಲ್ಲ. ಇಟ್ಸ್ ಎ ಬ್ರ್ಯಾಂಡ್. ಸತತ 50 ವರ್ಷಗಳಿಂದ ಭಾರತೀಯ ಚಿತ್ರರಂಗದಲ್ಲಿ ರಾರಾಜಿಸ್ತಿರೋ ಒನ್ ಅಂಡ್ ಓನ್ಲಿ ಸೂಪರ್ ಸ್ಟಾರ್. 74ರ ಹರೆಯದಲ್ಲೂ ಯಂಗ್‌ಸ್ಟರ್‌ಗಳನ್ನ ನಾಚಿಸುವಂತಹ ಸಿನಿಮೋತ್ಸಾಹ. ಸಿನಿಮಾಗಳ ಹಿಂದೆ ಓಡದೆ, ಸಿನಿಮಾಗಳೇ ತಮ್ಮ ಹಿಂದೆ ಓಡುವಂತೆ ಮಾಡಿರೋ ಮೋಸ್ಟ್ ಫೇವರಿಟ್ ಲಿವಿಂಗ್ ಲೆಜೆಂಡ್. ಕೂಲಿ ಸಿನಿಮಾ ಮೂಲಕ ಯಶಸ್ವೀ 50 ವರ್ಷ ಸುದೀರ್ಘ ಸಿನಿಯಾನ ಕಂಪ್ಲೀಟ್ ಮಾಡಿರೋ ರಜನಿ, ಬಾಕ್ಸ್ ಆಫೀಸ್ ಕಿಂಗ್ ಆಗಿ ಕಮಾಲ್ ಮಾಡ್ತಿದ್ದಾರೆ.
ಯೆಸ್.. ಕೂಲಿ ಸಿನಿಮಾ ತೆರೆಕಂಡ ನಾಲ್ಕೇ ದಿನಕ್ಕೆ ಗಲ್ಲಾ ಪೆಟ್ಟಿಗೆಯಲ್ಲಿ ಬರೋಬ್ಬರಿ 404 ಕೋಟಿ ರೂಪಾಯಿ ಬೃಹತ್ ಮೊತ್ತ ಕಲೆಹಾಕಿ, ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ತಲೈವಾ ರಜನಿ ಜೊತೆ ಆಮೀರ್ ಖಾನ್, ನಾಗಾರ್ಜುನ್, ಉಪೇಂದ್ರ, ರಚಿತಾ ರಾಮ್, ಶ್ರುತಿ ಹಾಸನ್, ಸೌಬಿನ್, ಸತ್ಯರಾಜ್ ಹೀಗೆ ಸಾಕಷ್ಟು ಮಂದಿ ಕಲಾವಿದರಿದ್ದಾರೆ. ಅವರೆಲ್ಲರ ನಡುವೆ ರಜನಿ ಸೆಂಟರ್ ಆಫ್ ಅಟ್ರ್ಯಾಕ್ಷನ್.
ಲೋಕೇಶ್ ಕನಕರಾಜ್ ನಿರ್ದೇಶನದ ಹಾಗೂ ಸನ್ ಪಿಕ್ಚರ್ಸ್ ನಿರ್ಮಾಣದ ಕೂಲಿ ಸಿನಿಮಾ ವರ್ಲ್ಡ್ ಬಾಕ್ಸ್ ಆಫೀಸ್‌ನಲ್ಲಿ ಒಂದಷ್ಟು ದಾಖಲೆಗಳಿಂದ ಎಲ್ಲರ ಹುಬ್ಬೇರಿಸಿದೆ. ಫಾಸ್ಟೆಸ್ಟ್ 400 ಕ್ರೋರ್ ಕ್ಲಬ್ ಸಿನಿಮಾ ಅನ್ನೋ ಹೆಗ್ಗಳಿಕೆಯ ಜೊತೆ ಜೊತೆಗೆ ರಿಲೀಸ್ ವೀಕೆಂಡ್‌ನಲ್ಲಿ 400 ಕೋಟಿ ಗಳಿಸಿದ ಮೊಟ್ಟ ಮೊದಲ ಚಿತ್ರ ಅನ್ನೋ ಗರಿಮೆಗೆ ಪಾತ್ರವಾಗಿದೆ. ಹೌದು.. ದಳಪತಿ ವಿಜಯ್‌ರ ಗೋಟ್ ಹಾಗೂ ಲಿಯೋ ಸಿನಿಮಾಗಳ ಜೊತೆಗೆ ತಮ್ಮದೇ ಜೈಲರ್ ಹಾಗೂ 2.ಓ ಸಿನಿಮಾಗಳ ರೆಕಾರ್ಡ್‌ಗಳನ್ನ ತಾವೇ ಬ್ರೇಕ್ ಮಾಡಿದ್ದಾರೆ ರಜನೀಕಾಂತ್. ಹಾಗಾದ್ರೆ ಯಾವ್ಯಾವ ಸಿನಿಮಾ ಎಷ್ಟೆಷ್ಟು ಗಳಿಸಿತ್ತು ಅನ್ನೋದ್ರ ಗ್ರಾಫಿಕಲ್ ಪ್ರೆಸೆಂಟೇಷನ್‌ನ ನೀವೊಮ್ಮೆ ನೋಡಿ.
ಕಾಲಿವುಡ್‌ನಲ್ಲಿ ಕೂಲಿ ಕಲೆಕ್ಷನ್ ಆಲ್‌ಟೈಂ ರೆಕಾರ್ಡ್
ಚಿತ್ರ | ನಟ | ಗಳಿಕೆ (ಕೋಟಿಗಳಲ್ಲಿ) |
---|---|---|
ದಿ ಗೋಟ್ | ದಳಪತಿ ವಿಜಯ್ | 281 ಕೋಟಿ |
ಜೈಲರ್ | ರಜನೀಕಾಂತ್ | 308 ಕೋಟಿ |
ಲಿಯೋ | ದಳಪತಿ ವಿಜಯ್ | 356.4 ಕೋಟಿ |
2.O | ರಜನೀಕಾಂತ್ | 379 ಕೋಟಿ |
ಕೂಲಿ | ರಜನೀಕಾಂತ್ | 404 ಕೋಟಿ |
ಯೆಸ್.. ಇದು ರಿಲೀಸ್ ಆದ ವೀಕೆಂಡ್‌ನಲ್ಲಿ ಕೇವಲ ನಾಲ್ಕು ದಿನಗಳಲ್ಲಿ ಆದಂತಹ ಬಾಕ್ಸ್ ಆಫೀಸ್ ರಿಪೋರ್ಟ್. ವಿಶ್ವದ ಮೂಲೆ ಮೂಲೆಗಳಲ್ಲಿ ತಲೈವಾ ರಜನೀಕಾಂತ್ ಫ್ಯಾನ್ಸ್ ಇದ್ದು, ನಾರ್ಥ್ ಅಮೆರಿಕ, ಮಲೇಷಿಯಾ, ಕೆನಡಾ, ಸಿಂಗಾಪುರ್ ದೇಶಗಳಲ್ಲಿ ರಿಪೀಟೆಡ್ ಆಡಿಯೆನ್ಸ್ ಥಿಯೇಟರ್‌ಗೆ ಬರ್ತಿರೋದು ಇಂಟರೆಸ್ಟಿಂಗ್.
ಕೂಲಿ ಸಿನಿಮಾದಲ್ಲಿ ರಜನಿ ಹೀರೋ ಇರಬಹುದು. ನಾಗಾರ್ಜುನ್ ವಿಲನ್ ಆಗಬಹುದು. ಆದ್ರೆ ಚಿತ್ರದಲ್ಲಿ ಹೆಚ್ಚಿನ ಮಾರ್ಕ್ಸ್ ಸ್ಕೋರ್ ಮಾಡಿರೋದೇ ಖಡಕ್ ಖಳನಟ, ಮಲಯಾಳಂನ ವರ್ಸಟೈಲ್ ಆ್ಯಕ್ಟರ್ ಸೌಬಿನ್ ಹಾಗೂ ನಮ್ಮ ಡಿಂಪಲ್ ಕ್ವೀನ್ ರಚಿತಾ ರಾಮ್. ಹೌದು.. ಇವರೇ ಸಿನಿಮಾದ ಅಸಲಿ ಹೀರೋಗಳು. ಉಳಿದವರೆಲ್ಲಾ ಸ್ಪೆಷಲ್ ಅಪಿಯರೆನ್ಸ್ ಅಂತ ನೋಡಿದ ಪ್ರೇಕ್ಷಕರು ಹಾನೆಸ್ಟ್ ರಿವ್ಯೂ ಕೊಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರೂ ಸಖತ್ ಟ್ರೆಂಡಿಂಗ್‌ನಲ್ಲಿದ್ದಾರೆ. ಹಾಗಂತ ನಮ್ಮ ರಿಯಲ್ ಸ್ಟಾರ್ ಉಪ್ಪಿ ಏನೂ ಡಮ್ಮಿ ಇಲ್ಲ. ಸ್ಕ್ರೀನ್ ಮೇಲೆ ಇರುವಷ್ಟೊತ್ತು ಥ್ರಿಲ್ ಕೊಡುವಂತೆ ನಟನಾ ಗತ್ತು ತೋರಿದ್ದಾರೆ ಉಪ್ಪಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್