ರಚಿತಾ ರಾಮ್..ಸ್ಯಾಂಡಲ್‌ವುಡ್‌ನ ಲೇಡಿ ಸೂಪರ್ ಸ್ಟಾರ್ ಆಗಿ ರಾರಾಜಿಸ್ತಿರೋ ಅಪ್ಪಟ ಕನ್ನಡತಿ. ಇತ್ತೀಚೆಗೆ ಗ್ಯಾರಂಟಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ದರ್ಶನ್ ವ್ಯಕ್ತಿಪೂಜೆ ಬಗ್ಗೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ ರಚ್ಚು. ಅಷ್ಟೇ ಅಲ್ಲ, ಬಾದ್‌ಷಾ ಕಿಚ್ಚ ಸುದೀಪ್ ಅವರನ್ನ ಮಾತಾಡಿಸಕ್ಕಿಲ್ವಾ ಬುಲ್ ಬುಲ್ ಅನ್ನೋ ಮಾತಿಗೂ ತಕ್ಕ ಉತ್ತರ ಕೊಟ್ಟಿದ್ದಾರೆ. ಕಿಚ್ಚ-ದಚ್ಚು & ರಚ್ಚು ಕುರಿತ ಒಂದು ಧಮಾಕೇದಾರ್ ಖಬರ್ ನಿಮಗಾಗಿ.
ಸದ್ಯದ ಸಿನಿ ದುನಿಯಾದಲ್ಲಿ ಒಬ್ಬ ನಟಿಮಣಿ ಬರೋಬ್ಬರಿ 13 ವರ್ಷಗಳ ಕಾಲ ಬಣ್ಣ ಹಚ್ಚಿ, ಉಳಿದುಕೊಳ್ಳೋದೇ ಕಷ್ಟಕರ. ಅಂಥದ್ರಲ್ಲಿ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿ, ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿಸಿಕೊಂಡು, ಅಕ್ಕ-ಪಕ್ಕದ ಚಿತ್ರರಂಗಗಳ ಮಂದಿ ಕೂಡ ರತ್ನಗಂಬಳಿ ಹಾಸಿ ವೆಲ್ಕಮ್ ಮಾಡುವ ರೇಂಜ್‌ಗೆ ಬೆಳೆದಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್. ಸಿನಿಮಾ ಹಾಗೂ ರಿಯಾಲಿಟಿ ಶೋಗಳಲ್ಲಿ ಬ್ಯುಸಿ ಇರೋ ರಚ್ಚು, ಬಹಳ ದಿನಗಳ ನಂತ್ರ ಗ್ಯಾರಂಟಿ ನ್ಯೂಸ್‌ಗೆ ವಿಶೇಷ ಸಂದರ್ಶನ ನೀಡಿದ್ರು. ಅದರಲ್ಲಿ ಸಾಕಷ್ಟು ವಿಷಯಗಳನ್ನ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ರು.
ನಾ ದರ್ಶನ್ ವ್ಯಕ್ತಿಪೂಜೆ ಮಾಡ್ತೀನಿ ಏನಿವಾಗ ಎಂದ ರಚ್ಚು
ಗ್ಯಾರಂಟಿ ನ್ಯೂಸ್‌ನಲ್ಲಿ ಡಿಂಪಲ್ ಕ್ವೀನ್ ರಚಿತಾ ಬೆಂಕಿ ಟಾಕ್
ಇದೇ ಜನವರಿ 23ಕ್ಕೆ ರಚಿತಾ ನಟನೆಯ ಎರಡೆರಡು ಸಿನಿಮಾಗಳು ಒಟ್ಟೊಟ್ಟಿಗೆ ತೆರೆಗೆ ಬರ್ತಿವೆ. ದುನಿಯಾ ವಿಜಯ್ ಜೊತೆಗಿನ ಲ್ಯಾಂಡ್‌ಲಾರ್ಡ್ ಹಾಗೂ ಝೈದ್ ಖಾನ್ ಜೊತೆ ಕಲ್ಟ್ ಸಿನಿಮಾ ಮಾಡಿದ್ದು, ಎರಡೂ ಒಂದೇ ದಿನ ತೆರೆಗಪ್ಪಳಿಸುತ್ತಿವೆ. ಎರಡೂ ಚಾಲೆಂಜಿಂಗ್ ರೋಲ್‌ಗಳೇ ಆಗಿದ್ದು, ನಟ ದರ್ಶನ್ ಕುರಿತ ವ್ಯಕ್ತಿಪೂಜೆ ಜಾಸ್ತಿ ಆಯ್ತು ಅನ್ನೋ ಪ್ರಶ್ನೆಗೆ ಯಾಕೆ ಮಾಡಬಾರದು ಅಂತ ಮಾತನಾಡಿದ್ದಾರೆ. ನನ್ನನ್ನ ಚಿತ್ರರಂಗಕ್ಕೆ ಪರಿಚಯಿಸಿದ್ದು ದರ್ಶನ್ ಅವರು. ಅವರ ಬಗ್ಗೆ ಮಾತನಾಡುವ ಎಲ್ಲಾ ರೈಟ್ಸ್ ನನಗಿದೆ. ಉಸಿರಿರೋವರೆಗೂ ಆ ವ್ಯಕ್ತಿ ಬಗ್ಗೆ ಮಾತಾಡ್ತೀನಿ ಎಂದಿದ್ದಾರೆ.
ಬುಲ್‌ಬುಲ್‌ನಿಂದ ರಚ್ಚುನ ಇಂಟ್ರಡ್ಯೂಸ್ ಮಾಡಿದ್ದೇ ದಚ್ಚು
ಒಂದಲ್ಲ, ಎರಡಲ್ಲ ನಾಲ್ಕು ಚಿತ್ರಗಳಲ್ಲಿ ದಚ್ಚು-ರಚ್ಚು ಮೋಡಿ..!!
ಕಿಚ್ಚ-ರಚ್ಚು ನಡುವೆ ಏನಾಗಿದೆ..? ಬುಲ್‌ಬುಲ್ ಮಾತಾಡ್ತಿಲ್ವಾ?
ಹಲ್ಕಾಡಾನ್ ಮುಹೂರ್ತದಲ್ಲಿ ಅಕ್ಕ-ಪಕ್ಕದಲ್ಲಿ ರನ್ನ ಜೋಡಿ..!
ದರ್ಶನ್ ಅಭಿಮಾನಿಗಳು ಎಷ್ಟು ಪ್ರೀತಿ, ಅಭಿಮಾನ ತೋರಿಸ್ತಾರೋ, ಇತ್ತ ಕಿಚ್ಚ ಸುದೀಪ್ ಫ್ಯಾನ್ಸ್ ಕೂಡ ರಚಿತಾಗೆ ಅಷ್ಟೇ ಪ್ರೀತಿ ಕೊಡ್ತಾರೆ. ಯಾಕಂದ್ರೆ ಬಾದ್‌ಷಾ ಸುದೀಪ್ ಜೊತೆಗೂ ಒಂದಲ್ಲ ಎರಡಲ್ಲ ಮೂರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ ರಚ್ಚು. ರನ್ನ ಚಿತ್ರದಿಂದ ಶುರುವಾಗಿ, ಮುಕುಂದ ಮುರಾರಿ, ದಿ ವಿಲನ್‌ವರೆಗೂ ಆ ಬಾಂಡ್ ಮುಂದುವರೆದಿತ್ತು. ಆದ್ರೆ ಇತ್ತೀಚೆಗೆ ಅದ್ಯಾಕೋ ಇವರಿಬ್ಬರ ನಡುವೆ ಅಷ್ಟಕ್ಕಷ್ಟೇ ಎನ್ನಲಾಗಿತ್ತು. ಕಿಚ್ಚ-ದಚ್ಚು ಮುನಿಸಿನಿಂದ ರಚಿತಾ ಕೂಡ ಕಿಚ್ಚನಿಗೆ ದೂರವಾಗಿಬಿಟ್ರಾ ಅಂದುಕೊಂಡಿದ್ರು.
