ರಚನಾ ರೈ ದರ್ಶನ್ ಅವರನ್ನು ನಿಜವಾಗಿಯೂ ನಾನು ಕಂಡ ಅತ್ಯಂತ ದಯೆಯ ವ್ಯಕ್ತಿಗಳಲ್ಲಿ ಒಬ್ಬರು” ಎಂದು ಹೇಳಿದ್ದಾರೆ. ಸೆಟ್‌ನಲ್ಲಿ ದರ್ಶನ್ ಅವರ ಗಮನ, ತಾಳ್ಮೆ ಮತ್ತು ಅಚಲ ಸಮರ್ಪಣೆ ಎಲ್ಲರಿಗೂ ಪಾಠವಾಗುವಂತಹದ್ದು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಚಿತ್ರೀಕರಣದ ಸವಾಲುಗಳನ್ನು ಎದುರಿಸಲು ದರ್ಶನ್ ಅವರು ತೋರಿದ ದೃಢ ಸಂಕಲ್ಪವನ್ನು ರಚನಾ ರೈ ಹೈಲೈಟ್ ಮಾಡಿದ್ದಾರೆ. ದರ್ಶನ್‌ಗೆ ಬೆನ್ನು ನೋವಿನ ಸಮಸ್ಯೆ ಇದ್ದಾಗ್ಯೂ, ಅವರು ‘ದಿ ಡೆವಿಲ್’ ಚಿತ್ರದ ಚಿತ್ರೀಕರಣವನ್ನುಪೂರ್ನಗೊಳಿಸಿದ್ದು ಖುಷಿಕೊಟ್ಟಿದೆ. ಚಿತ್ರಕಥೆಗಾರ ಕಾಂತರಾಜ್ ಅವರು ಒಂದು ಸಂದರ್ಶನದಲ್ಲಿ ವಿವರಿಸಿದಂತೆ, ಒಂದು ದೃಶ್ಯದ ಚಿತ್ರೀಕರಣದಲ್ಲಿ ಬೆನ್ನು ನೋವು ತೀವ್ರವಾಗಿವಾಗಿತ್ತು. ದರ್ಶನ್‌ಗೆ ಕುಳಿತುಕೊಳ್ಳುವುದಕ್ಕೂ ಸಾಧ್ಯವಾಗದೆ ನೆಲದ ಮೇಲೆ ಮಲಗಿಬಿಟ್ಟಿದ್ದ ಸಂಭವ ನಡೆದಿತ್ತು . ಇಂತಹ ಕಷ್ಟದ ಸಮಯದಲ್ಲೂ ಚಿತ್ರತಂಡಕ್ಕೆ ತೊಂದರೆ ಆಗಬಾರದೆಂಬ ಆಲೋಚನೆಯಿಂದ ತಮ್ಮ ಶೂಟಿಂಗ್ ಬಾಧ್ಯತೆಗಳನ್ನು ಪೂರ್ಣಗೊಳಿಸಿದ್ದರು ಎಂದು ಚಿತ್ರೀಕರಣದಲ್ಲಿ ದರ್ಶನ್ ಹಾಗೂ ತಮ್ಮ ನಡುವಿನ ಬಾಂಧವ್ಯ ಹಾಗೂ ಡೆವಿಲ್ ಟೀಮ್‌ನ ಅನುಭವಗಳನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರಚನಾ ರೈ ನಾಯಕಿಯಾಗಿ ನಟಿಸಿರುವ ‘ದಿ ಡೆವಿಲ್’ ಚಿತ್ರವು ಬಹುನಿರೀಕ್ಷಿತ ಚಿತ್ರವಾಗಿದೆ. ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ದರ್ಶನ್ ಮತ್ತು ರಚನಾ ರೈ ಜೊತೆಗೆ ಶರ್ಮಿಳಾ ಮಾಂಡ್ರೆ, ಅಚ್ಯುತ್ ಕುಮಾರ್ ಮುಂತಾದ ಕಲಾವಿದರು ನಟಿಸಿದ್ದಾರೆ . ಈ ಚಿತ್ರವು ಡಿಸೆಂಬರ್ 12ರಂದು ಬಿಡುಗಡೆಯಾಗಲಿದೆ . ದರ್ಶನ್ ಅವರು ಜೈಲಿಗೆ ಮರಳುವ ಮುನ್ನ ಚಿತ್ರದ ಶೂಟಿಂಗ್ ಮತ್ತು ಡಬ್ಬಿಂಗ್ ಕಾರ್ಯಗಳನ್ನು ಪೂರ್ಣಗೊಳಿಸಿದ್ದರು .