ಯಾವಾಗ್ಲೂ ತಮ್ಮ ಕೆಲಸದ ಬಗ್ಗೆ ಎಲ್ಲರೂ ಮಾತಾಡ್ಬೇಕೇ ಹೊರತು. ಮಾಡಿರೋ ಕೆಲಸದ ಬಗ್ಗೆ ತಾವೇ ಬೊಬ್ಬೆ ಹೊಡ್ಕೋಬಾರ್ದು. ರಾಕಿಂಗ್ ಸ್ಟಾರ್ ಯಶ್ ಮಾತು ಕಮ್ಮಿ, ಕೆಲಸ ಜಾಸ್ತಿ. ಆದ್ರೆ ಅವರಮ್ಮ ಪುಷ್ಪಮ್ಮ ಫುಲ್ ಉಲ್ಟಾ. ಕೆಲಸ ಕಮ್ಮಿ ಮಾತು ಜಾಸ್ತಿ. ಮಾತು ಮನೆ ಕೆಡಿಸ್ತಾ ಅಥ್ವಾ ಸಿನಿಮಾನ ಕೆಡಿಸ್ತಾ.
ಕೆಲಸ ಮಾತಾಡ್ಬೇಕು..ಮಾತಿಂದ ಬೊಬ್ಬೆ ಹೊಡ್ಕೋಬಾರ್ದು..! ರಾಕಿಂಗ್ ಸ್ಟಾರ್ ತಾಯಿಯ ಒಂದೊಂದು ಮಾತು ಟ್ರೋಲ್
ಆಗಸ್ಟ್ 1ಕ್ಕೆ ತೆರೆಕಂಡ ಕೊತ್ತಲವಾಡಿ ಸಿನಿಮಾನ ಕನ್ನಡ ಚಿತ್ರಪ್ರೇಮಿಗಳು ಥಿಯೇಟರ್‌ನಲ್ಲಿ ವೀಕ್ಷಿಸಿದ್ದಕ್ಕಿಂತ ಅದರ ನಿರ್ಮಾಪಕಿ ಪುಷ್ಪ ಅರುಣ್‌ಕುಮಾರ್ ಆಡಿದ ಒಂದೊಂದು ಮಾತು ಕೂಡ ಟ್ರೋಲ್ ಆಗಿದ್ದು, ಆ ಟ್ರೋಲ್‌ಗಳನ್ನ ನೋಡಿದವರ ಸಂಖ್ಯೆಯೇ ಜಾಸ್ತಿ. ಈ ಮಾತು ಅರಗಿಸಿಕೊಳ್ಳೋಕೆ ಕೊಂಚ ಕಷ್ಟವಾದ್ರೂ ಇದೇ ಅಸಲಿ ಸತ್ಯ.
ಪೃಥ್ವಿ ಅಂಬರ್ ಹಾಗೂ ಕಾವ್ಯ ಶೈವ ಜೋಡಿಯ ಕೊತ್ತಲವಾಡಿ ಸಿನಿಮಾ ಇತ್ತೀಚೆಗೆ ರಿಲೀಸ್ ಆಯ್ತು. ಈ ಚಿತ್ರದ ಮೂಲಕ ನಮ್ಮ ಕನ್ನಡ ಚಿತ್ರರಂಗವನ್ನು ನ್ಯಾಷನಲ್, ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಪ್ರತಿನಿಧಿಸ್ತಿರೋ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಪಕಿ ಕೂಡ ಆದ್ರು. ಅನ್ನದಾತೆಯಾಗಿ ಆಕೆಯ ನಿರ್ಧಾರ ನಿಜಕ್ಕೂ ಸ್ವಾಗತಾರ್ಹ, ಇಡೀ ಚಿತ್ರರಂಗ ಮೆಚ್ಚುವಂತದ್ದು.
ಪುಷ್ಪ ಅವರು ಮಾಡಿದ ಸಿನಿಮಾ ಕೊತ್ತಲವಾಡಿ ಬಗ್ಗೆ ಜನ ಮಾತಾಡ್ಬೇಕು. ಆದ್ರೆ ತಮ್ಮ ಸಿನಿಮಾ ಬಗ್ಗೆ ತಾವೇ ಮಾತಾಡಿದ್ದು ಹೆಚ್ಚು ನಿರ್ಮಾಪಕಿ ಪುಷ್ಪ. ಸಿನಿಮಾ ರಿಲೀಸ್‌ಗೂ ಮುನ್ನ ಟ್ರೈಲರ್ ಲಾಂಚ್ ಇವೆಂಟ್ ಮಾಡಿದ್ರು. ಅದಕ್ಕೂ ಮುನ್ನ ಅಣ್ಣಾವ್ರ ಸ್ಮಾರಕದಲ್ಲಿ ಪೂಜೆ ಸಲ್ಲಿಸಿ, ಮಾಧ್ಯಮಗಳ ಜೊತೆ ಮಾತನಾಡಿದ್ರು ಪುಷ್ಪ. ಅಂದು ಅನಿಸಿದ್ದು ಒಂದೇ..ಪುಷ್ಪ ಬರೀ ಯಶ್ ಅವರ ತಾಯಿ ಅಥ್ವಾ ನಿರ್ಮಾಪಕಿ ಮಾತ್ರವಲ್ಲ. ಪುಷ್ಪ ಅಂದ್ರೆ ಫೈಯರ್.
ಯಶ್ ಅವರ ತಾಯಿ ಹೀಗೆ ನಿರ್ಮಾಪಕಿಯಾಗಿ ಮೊದಲ ಹೆಜ್ಜೆ ಇಟ್ಟು ಚಿತ್ರರಂಗಕ್ಕೆ ಬಂದಾಗ, ಆಕೆಯ ಮಾತುಗಳನ್ನ ಕೇಳಿದ ಬಳಿಕ ನಮಗಷ್ಟೇ ಅಲ್ಲ, ಕರ್ನಾಟಕದ ಜನತೆಗೆ ಅನಿಸಿದ್ದು ಒಂದೇ. ಪುಷ್ಪ ಚಿತ್ರದ ಹೀರೋ ಹೇಗೆ ಫೈಯರ್ ಇದ್ದರೋ, ಈಕೆ ಅದಕ್ಕಿಂತ ವೈಲ್ಡ್ ಫೈಯರ್ ಅನಿಸಿದ್ರು. ಅದರಲ್ಲೂ ನಾವು ಗೌಡರು ಮಾತಾಡೋದೇ ಹೀಗೆ. ಯಶ್ ಅವರಿಗೆ ಎರಡು ಸಾವಿರ, ಮೂರು ಸಾವಿರ ಕೋಟಿ ಹಣ ಕೊಡಿ ಸಿನಿಮಾ ಮಾಡೋಣ ಅಂತೆಲ್ಲಾ ದೊಡ್ಡ ದೊಡ್ಡ ಮಾತುಗಳನ್ನಾಡಿದ್ರು. ಅವೆಲ್ಲವೂ ಸಿಕ್ಕಾಪಟ್ಟೆ ಟ್ರೋಲ್ ಆದವು.
ಕೊತ್ತಲವಾಡಿ ಚಿತ್ರದ ನಿರ್ದೇಶಕರಿಗಿಂತ ಇವರೇ ಜಾಸ್ತಿ ಎಲ್ಲೆಡೆ ಓಡಾಡಿ, ಚಿತ್ರದ ಪ್ರಮೋಷನ್ಸ್ ಮಾಡಿದ್ರು. ಕೊನೆಗೆ ಟ್ರೋಲ್ ಕ್ವೀನ್ ಆದ್ರು. ಆದ್ರೆ ಯಶ್ ಮಾತ್ರ ತಾಯಿಯ ಮೊದಲ ಚಿತ್ರ ಹಾಗೂ ಮೊದಲ ಪ್ರಯತ್ನಕ್ಕೆ ಟ್ವೀಟ್ ಮಾಡಲಿಲ್ಲ, ವಿಡಿಯೋ ಮೂಲಕ ವಿಶ್ ಮಾಡಲಿಲ್ಲ, ಕನಿಷ್ಟ ಒಂದು ಸ್ವೀಟ್ ಕೂಡ ತಿನಿಸಲಿಲ್ಲ. ಆದ್ರೂ ನೋ ಪ್ರಾಬ್ಲಂ. ಅವರೀಗ ಹಾಲಿವುಡ್ ಶೈಲಿಯ ಟಾಕ್ಸಿಕ್, ರಾಮಾಯಣದಲ್ಲಿ ಬ್ಯುಸಿ ಇದ್ದಾರೆ. ವಿ ಕ್ಯಾನ್ ಅಂಡರ್‌ಸ್ಟ್ಯಾಂಡ್.
ಅಂದುಕೊಂಡಂತೆ ಆಗಿಲ್ಲ..ಬಾಕ್ಸ್ ಆಫೀಸ್ ಫ್ಲಾಪ್ ಕೊತ್ತಲವಾಡಿ..! ಸೋಲಿಗೆ KRG ಕಾರ್ತಿಕ್ ಗೌಡ ಮೇಲೆ ಗೂಬೆ ಕೂರಿಸಿದ್ರಾ ಪುಷ್ಪ ?
ಪುಷ್ಪ ನಿರ್ಮಾಣದ ಕೊತ್ತಲವಾಡಿ ರಿಲೀಸ್‌ಗೂ ಎರಡು ವಾರಗಳ ಮುನ್ನ ಕೆಆರ್‌ಜಿ ಕಾರ್ತಿಕ್ ಗೌಡ, ಪಿಆರ್‌ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಜಯಣ್ಣ ನಿರ್ಮಾಣದ ಎಕ್ಕ ಕೂಡ ರಿಲೀಸ್ ಆಯ್ತು. ಯುವರಾಜ್‌ಕುಮಾರ್ ನಟನೆಯ ಎಕ್ಕ ಜುಲೈ 18ರಂದು ತೆರೆಕಂಡಿತ್ತು. ಆ ಚಿತ್ರಕ್ಕಾಗಿ ಆವರಿಸಿಕೊಂಡಿದ್ದ ಥಿಯೇಟರ್‌ಗಳು ಕೊತ್ತಲವಾಡಿಗಾಗಿ ತೆರವುಗೊಳ್ಳಲಿಲ್ಲ. ಹಾಗಾಗಿ ಥಿಯೇಟರ್ ಸೆಟಪ್ ವಿಚಾರ ಕಾರ್ತಿಕ್ ಗೌಡ ನನಗೆ ತೊಂದರೆ ಕೊಟ್ಟರು. ಅದೇ ಕಾರಣದಿಂದ ಸಿನಿಮಾ ಸೋತಿದೆ ಅಂತ ನೇರವಾಗಿ ಆರೋಪ ಮಾಡಿದ್ರು ನಿರ್ಮಾಪಕಿ ಪುಷ್ಪ.
ಅಲ್ಲದೆ, ನಾನು ಇದನ್ನ ಇಲ್ಲಿಗೆ ಬಿಡಲ್ಲ. ನನಗೂ ಸಮಯ ಬರುತ್ತೆ. ಮುಂದಿನ ದಿನಗಳಲ್ಲಿ ನನ್ನ ಟೈಮ್ ಬಂದಾಗ ಅದನ್ನ ತಿರುಗಿಸಿ ಕೊಡ್ತೀನಿ ಅಂತ ಖಾಸಗಿ ಸಂದರ್ಶನವೊಂದರಲ್ಲಿ ಕೆಂಡ ಕಾರಿದ್ರು.
ಇನ್ನೂ ಫಸ್ಟ್ ಫಿಲ್ಮ್ ಮಾಡುವಾಗ್ಲೇ ಹೀಗೆ ಚಿತ್ರರಂಗದಲ್ಲಿ ಎಲ್ಲರನ್ನ ಆಪೋಸಿಟ್ ಮಾಡ್ಕೋತಾ ಹೋದ್ರೆ ಹೇಗೆ ಪುಷ್ಪಮ್ಮ..? ಹೇಳಿ. ಮಾತು ಮನೆ ಮಾತ್ರ ಕೆಡಿಸಲ್ಲ. ಸಿನಿಮಾನೂ ಕೆಡಿಸುತ್ತೆ ಅನ್ನೋದು ಇದ್ರಿಂದ ಪ್ರೂವ್ ಆಗ್ತಿದೆ.
ಮಗಳನ್ನೇ ಹೀಯಾಳಿಸಿ, ಕಡಿಮೆ ಮಾಡಿ ಮಾತಾಡಿದ್ಯಾಕೆ..? ಎಲುಬಿಲ್ಲದ ನಾಲಗೆ ಹರಿಬಿಟ್ಟಿದ್ದಕ್ಕೆ ಶುರುವಾಯ್ತಾ ವಾರ್..?
ಚಿತ್ರರಂಗ, ಮಗ, ಸೊಸೆ ಬಗ್ಗೆ ಮಾತಾಡಿದ್ರು ಓಕೆ. ಆದ್ರೆ ಈಗಾಗ್ಲೇ ಜಗಳ ಮಾಡ್ಕೊಂಡು ದೂರ ಆಗಿರೋ ಪುಷ್ಪ ಅವರ ಸ್ವಂತ ತಂಗಿ ಹಾಗೂ ಅವರ ಮಗಳು ದೀಪಿಕಾ ದಾಸ್ ಬಗ್ಗೆ ಇವರಿಗ್ಯಾಕೆ ನೀವೇ ಹೇಳಿ. ಸಂದರ್ಶನಗಳಲ್ಲಿ ನಟಿ ಕಮ್ ಬಿಗ್‌ಬಾಸ್ ಮಾಜಿ ಸ್ಪರ್ಧಿ ದೀಪಿಕಾ ದಾಸ್ ಬಗ್ಗೆ ಬಾಯಿಗೆ ಬಂದಂತೆ ಮಾತಾಡಿದ್ದಾರೆ ಪುಷ್ಪಮ್ಮ. ದೊಡ್ಡಮ್ಮನನ್ನ ಕಂಡ್ರೆ ಅವಳಿಗೆ ಭಯ ಅಂತ ದರ್ಶನವೊಂದರಲ್ಲಿ ಹೀಯಾಳಿಸಿ ಮಾತನಾಡಿದ್ದಾರೆ.
ತಂಗಿ ಮಗಳು ದೀಪಿಕಾ ದಾಸ್ ವಿರುದ್ಧ ಪುಷ್ಪಮ್ಮ ಹೇಳಿಕೆ..! ದೊಡ್ಡಮ್ಮ ಕಂಡ್ರೆ ಅವಳಿಗೆ ಭಯ.. ಯಾವ ಹೀರೋಯಿನ್?
ಅಷ್ಟೇ ಅಲ್ಲ, ಮಗದೊಂದು ಸಂದರ್ಶನದಲ್ಲಿ ದೀಪಿಕಾ ದಾಸ್‌ಗೂ ನಮಗೂ ಆಗಲ್ಲ. ಅವಳು ಯಾವ ದೊಡ್ಡ ಹೀರೋಯಿನ್ ಅಂತ ನಮ್ಮ ಸಿನಿಮಾಗೆ ಹಾಕ್ಕೋಬೇಕು..? ಯಾವ ಸಾಧನೆ ಮಾಡಿದ್ದಾಳೆ ಅಂತ ಅವಕಾಶ ಕೊಡ್ಬೇಕು..? ಸಂಬಂಧಿಕರಾದ್ರೂ ಕೂಡ ಅವರನ್ನ ದೂರದಲ್ಲೇ ಇಟ್ಟಿದ್ದೀವಿ. ಅವರ ಬಗ್ಗೆ ಯಾಕೆ ಕೇಳ್ತೀರಾ..? ನನ್ನ ಮಗ ಬೈಯಲ್ವಾ..? ಇನ್ನೂ ಸಾಕಷ್ಟು ಮಂದಿ ನಟಿಮಣಿಯರು ಇದ್ದಾರೆ. ಅವರ ಬಗ್ಗೆ ಕೇಳಿ ಎಂದಿದ್ದಾರೆ.
ಯಾವಾಗ ದೀಪಿಕಾ ದಾಸ್ ಬಗ್ಗೆ ಅಮ್ಮನ ಸಮಾನ ದೊಡ್ಡಮ್ಮನೇ ಇಷ್ಟು ಹಗುರವಾಗಹಿ ಮಾತಾಡಿದ್ರೋ, ನಟಿ ದೀಪಿಕಾ ಇದನ್ನೆಲ್ಲಾ ಕೇಳಿ ಕೆಂಡಾಮಂಡಲವಾಗಿದ್ದಾರೆ. ದೊಡ್ಡಮ್ಮ ಪುಷ್ಪ ವಿರುದ್ಧ ಸಮರ ಸಾರಿದ್ದಾರೆ. ಅದೂ ಸೋಶಿಯಲ್ ಮೀಡಿಯಾದಲ್ಲೇ ಅನ್ನೋದು ಇಂಟರೆಸ್ಟಿಂಗ್. ಇಷ್ಟಕ್ಕೂ ದೀಪಿಕಾ ಹಾಕಿದ ಪೋಸ್ಟ್‌ನ ಒಮ್ಮೆ ನೋಡಿ.
ದೊಡ್ಡಮ್ಮ ಪುಷ್ಪ ಯೋಗ್ಯತೆ ಪ್ರಶ್ನಿಸಿದ ದೀಪಿಕಾ..!
‘ಹೊಸ ಕಲಾವಿದರನ್ನು ಬೆಳೆಸೋ ಜನರು, ಕಲಾವಿದರಿಗೆ ಬೆಲೆ ಕೊಡೋದನ್ನ ಕಲಿತಿರಬೇಕು. ಇಲ್ಲಿಯವರೆಗೂ ಯಾರ ಹೆಸರನ್ನೂ ಹೇಳಿಕೊಂಡು ಬಂದಿಲ್ಲ. ಮುಂದೆಯೂ ಬರಲ್ಲ. ಕೆಲವರಿಗೆ ಬೆಲೆ ಕೊಟ್ಟ ಮಾತ್ರಕ್ಕೆ, ಯಾರನ್ನೋ ಕಂಡು ಭಯವಿಲ್ಲ. ಅದು ಅಮ್ಮ ಆದ್ರೂ ಸರಿ, ದೊಡ್ಡಮ್ಮ ಆದ್ರೂ ಸರಿ. ಅಥವಾ ಪುಷ್ಪಮ್ಮ ಆದ್ರೂ ಸರಿ. ವಿತ್ ಡ್ಯೂ ರೆಸ್ಪೆಕ್ಟ್ ಟು ಸ್ಟಾರ್ ಆಫ್ ಅವರ್ ಇಂಡಸ್ಟ್ರಿ, ನಾನು ಯಾವ ದೊಡ್ಡ ನಟಿ ಅಲ್ಲದಿದ್ರೂ, ಏನೂ ಸಾಧನೆ ಮಾಡದಿದ್ರೂ, ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ.
ದೀಪಿಕಾ ಸುಮಾರು ಒಂದೂವರೆ ದಶಕದಿಂದ ಸಿನಿಮಾ, ಸೀರಿಯಲ್ ಲೋಕದಲ್ಲಿದ್ದಾರೆ. ಅವರಾಯ್ತು, ಅವರ ಕಷ್ಟ ಆಯ್ತು ಅಂತಿದ್ದಾರೆ. ಹೀಗಿರುವಾಗ ಎಂದೂ ಕೂಡ ಅವಕಾಶಕ್ಕಾಗಿ ಆಕೆ ಯಶ್ ಹೆಸರು ಬಳಿಸಿದ್ದಿಲ್ಲ. ದೊಡ್ಡಮ್ಮನ ಬಳಿ ಸಹಾಯಹಸ್ತ ಚಾಚಿದ್ದಿಲ್ಲ. ಮದ್ವೆ ಆಗಿ ಹೊಸ ಲೈಫ್ ಕೂಡ ಶುರು ಮಾಡಿದ್ದಾರೆ. ಇಂತಹ ಮಾತುಗಳಿಂದ ದೂರವಾಗಿರೋ ಮನೆ ಮಂದಿಯ ಮನಸ್ಸುಗಳನ್ನ ಮತ್ತಷ್ಟು ಭಾರಗೊಳಿಸೋದು ಯಾಕೆ ಬೇಕಿತ್ತು ಈ ಪುಷ್ಪಮ್ಮನಿಗೆ ಅಲ್ವಾ ಫ್ರೆಂಡ್..?
ಅಂದಹಾಗೆ ಈ ದೊಡ್ಡಮ್ಮ ಹಾಗೂ ಮಗಳ ಸೋಶಿಯಲ್ ಮೀಡಿಯಾ ಟಾಕ್ ವಾರ್ ಇಲ್ಲಿಗೇ ನಿಲ್ಲುತ್ತಾ..? ಊರಿಂದ ಬಂದ್ಮೇಲೆ ಸ್ವತಃ ಯಶ್ ಅವರ ತಾಯಿ ನಮ್ಮ ಗ್ಯಾರಂಟಿ ನ್ಯೂಸ್‌ಗೆ ಹೇಳಿದಂತೆ ಮಾತನಾಡೋ ಮೂಲಕ ಸಮಸ್ಯೆ ಬಗೆಹರಿಸಿಕೊಳ್ತಾರಾ ಅಥ್ವಾ ಯಶ್ ಮುಂದಾಳತ್ವ ವಹಿಸೋ ರೇಂಜ್‌ಗೆ ಇದನ್ನ ತೆಗೆದುಕೊಂಡು ಹೋಗ್ತಾರಾ ಅನ್ನೋದನ್ನ ನಿರೀಕ್ಷಿಸಬೇಕಿದೆ.