ಮಾಸ್ ಡೈರೆಕ್ಟರ್ ಪುರಿ ಜಗನ್ನಾಥ ವಿಜಯ್ ಸೇತುಪತಿ ಜೊತೆ ಒಂದು ಥ್ರಿಲ್ಲರ್ ಸಿನಿಮಾಗಾಗಿ ಕೈಜೋಡಿಸ್ತಾ ಇದ್ದಾರೆ ಅನ್ನೋ ಸುದ್ದಿ ಈಗಾಗ್ಲೆ ಸೌತ್ ಸಿನಿಮಾದಲ್ಲಿ ಹೈಪ್ ಆಗಿದೆ. ಈ ಸಿನಿಮಾಕ್ಕೆ ‘ಬೆಗ್ಗರ್’ ಅಂಥ ಟೈಟಲ್ ಇಡಲಾಗಿದೆ ಅನ್ನೋದು ಲೇಟೆಸ್ಟ್ ಅಪ್ಡೇಟ್. ಅಭಿಮಾನಿಗಳು ಈಗಾಗಲೇ ಪುರಿ ಜಗನ್ನಾಥ್ ಹಾಗೂ ವಿಜಯ್ ಸೇತುಪತಿ ಸಿನಿಮಾ ಬಗ್ಗೆ ನಿರೀಕ್ಷೆಗಳನ್ನು ಡಬಲ್ ಮಾಡಿಕೊಂಡಿದ್ದು, ಟೈಟಲ್ ಇನ್ನಷ್ಟು ಕುತೂಹಲ ಮೂಡಿಸಲಿದೆ. ಆದ್ರೆ ಅಧಿಕೃತ ಘೋಷಣೆ ಬಾಕಿ ಇದೆ.
ಡಬಲ್ ಇಸ್ಮಾರ್ಟ್ ಶಂಕರ್ ಹಾಗೂ ಲೈಗರ್ ಚಿತ್ರದ ವೈಫಲ್ಯದ ನಂತರ, ಪುರಿ ಮತ್ತೆ ಪುಟಿದೇಳಲು ಸರಿಯಾದ ಸ್ಕ್ರಿಪ್ಟ್ ಅನ್ನು ಹುಡುಕುತ್ತಿದ್ದಾರೆ. ವಿಜಯ್ ಸೇತುಪತಿ ಅವರ ಬಹುಮುಖ ಪ್ರತಿಭೆ ಮತ್ತು ಪುರಿ ಅವರ ಸಿಗ್ನೇಚರ್ ಮಾಸ್ ಕಥೆ ಹೇಳುವಿಕೆಯೊಂದಿಗೆ, ಈ ಯೋಜನೆಯು ನಿರೀಕ್ಷೆಗಳನ್ನು ಹೆಚ್ಚಿಸುತ್ತಿದೆ. ‘ಬೆಗ್ಗರ್’ ಟೈಟಲ್ ವಿಶಿಷ್ಟವಾಗಿದೆ ಮತ್ತು ಔಟ್-ಆಫ್-ದಿ-ಬಾಕ್ಸ್ ಪರಿಕಲ್ಪನೆಯ ಸುಳಿವು ನೀಡ್ತಾ ಇದೆ.

ಕಳೆದ ವರ್ಷ ವಿಜಯ್ ಸೇತು ಪತಿ ಅಭಿನಯದ ಮಹಾರಾಜ ಸಿನಿಮಾ ದಾಖಲೆಯ ಕೆಲೆಕ್ಷನ್ ಮಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಗಾ ಹಿಟ್ ಆಯ್ತು. ವಿಜಯ್ ಸೇತುಪತಿ ತಮ್ಮ ಸಿನಿಮಾ ಕೆರಿಯರ್‌ನಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಪುರಿ ಜಗನ್ನಾಥ್ ಅಂತದ್ದೇ ಒಂದು ಮೆಗಾ ಗೆಲುವಿನ ನಿರೀಕ್ಷೆಯಲ್ಲಿದ್ದು, ಪುರಿ ಜಗನ್ನಾಥ್ ಜೊತೆ ಮಾಡೋ ಮೂಲಕ ಅವ್ರಿಗೂ ಒಂದು ಬ್ರೇಕ್ ನೀಡೋ ಮನಸ್ಸು ಮಾಡಿದ್ದಾರೆ ಸೆಲ್ವನ್.

ವಿಜಯ್ ಸೇತುಪತಿಗೆ ಫ್ಯಾಮಿಲಿ ಇಮೇಜ್ ಮತ್ತು ಆಕ್ಷನ್ ಹೀರೋ ಇಮೇಜ್ ಎರಡೂ ಇದ್ದು, ಪುರಿ ಅವರ ಜೊತೆ ನಟಿಸುವುದು ಸುಲಭ. ಹಾಗಾಗಿ ಜನರ ನಿರೀಕ್ಷೆಯಂತೆ ಈ ಇಬ್ಬರು ದಿಗ್ಗಜರು ಒಂದು ಸಿನಿಮಾಕ್ಕಾಗಿ ಒಂದಾಗ್ತಾ ಇರೋದ್ರಿಂದ ಒಂದು ಸಖತ್ತಾದ ಆಕ್ಷನ್ ಥ್ರಿಲ್ಲರ್ ಸಿನಿಮಾನೋ ಅಥವ ಒಂದು ಪರ್ಪೆಕ್ಟ್ ಫ್ಯಾಮಿಲಿ ಡ್ರಾಮಾನೋ ನಿರೀಕ್ಷೆ ಮಾಡಬಹುದಾಗಿದೆ.





