ಪ್ಯಾನ್ ಇಂಡಿಯಾ ಸಿನಿಮಾಗಳ ಡಾರ್ಲಿಂಗ್ ಪ್ರಭಾಸ್, ಬರೀ ಹೊಡಿ ಬಡಿ ಕಡಿ ಚಿತ್ರಗಳಿಗೆ ಮಾತ್ರ ಜೋತು ಬಿದ್ದಿಲ್ಲ. ಭಿನ್ನ ವಿಭಿನ್ನ ಕಥೆ, ಪಾತ್ರಗಳ ಮೂಲಕ ಸದಾ ಹೊಸತನಕ್ಕೆ ಹಾತೊರೆಯುವ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಕೂಡ ಹೌದು. ಸದ್ಯ ರಾಕ್ಷಸನಾಗಿರೋ ಪ್ರಭಾಸ್, ರಾಜಾಸಾಬ್ ದರ್ಬಾರ್‌ಗೆ ಸಜ್ಜಾಗಿದ್ದಾರೆ.ಇದರ ಸಂಪೂರ್ಣ ವಿವರ ನಿಮ್ಮ ಮುಂದಿದೆ ನೊಡಿ..
ಇದು ದಿ ರಾಜಾಸಾಬ್, ರೀಸೆಂಟ್ ಆಗಿ ರಿಲೀಸ್ ಆದ ಈ ಚಿತ್ರ, ಹಾರರ್ ಕಾಮಿಡಿ ಜಾನರ್‌ನದ್ದಾಗಿದ್ದು, ರೆಬೆಲ್ ಸ್ಟಾರ್ ಪ್ರಭಾಸ್ ಇದೇ ಮೊದಲ ಬಾರಿಗೆ ಡೆವಿಲ್ ರೋಲ್‌ನಲ್ಲಿ ಕಿಕ್ ಕೊಡ್ತಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದು, ಫನ್ ವಿತ್ ಫಿಯರ್ ಸಿನಿಮಾದಲ್ಲಿ, ಹೃದಯಸ್ಪರ್ಶಿ ಭಾವನೆಗಳನ್ನ ಸಹ ಅದ್ಭುತವಾಗಿ ಬ್ಲೆಂಡ್ ಮಾಡಲಾಗಿದೆಯಂತೆ.
ರಾಕ್ಷಸ ಪ್ರಭಾಸ್.. ರಾಜಾಸಾಬ್ ಹಾರರ್ ದರ್ಬಾರ್ ಜೋರು
ಪ್ಯಾನ್ ಇಂಡಿಯಾ ಪ್ರಾಜೆಕ್ಟ್ಸ್ ಆಲ್ ಟೈಂ ಡಾರ್ಲಿಂಗ್ ಪ್ರಭಾಸ್
ಭಾರತೀಯ ಚಿತ್ರರಂಗದ ಅತಿದೊಡ್ಡ ಹಾರರ್ ಫ್ಯಾಂಟಸಿ ಡ್ರಾಮಾ ಎಂದು ಬಿಂಬಿಸಲಾಗಿರೋ ದಿ ರಾಜಾಸಾಬ್ ಚಿತ್ರದ ಮೇಕಿಂಗ್, ದೊಡ್ಡ ಕ್ಯಾನ್ವಾಸ್ ಮೂಲಕವೇ ಎಲ್ಲರನ್ನು ನಿಬ್ಬೆರಗಾಗಿಸಿದೆ. ಈ ಚಿತ್ರ ಭಾರತ ಸಿನಿದುನಿಯಾ ಇಲ್ಲಿವರೆಗೆ ಕಾಣದ ಅತಿದೊಡ್ಡ ಹಾರರ್ ಸೆಟ್ ಹೊಂದಿದೆ. ನೋಡುಗರನ್ನು ಭಯಕ್ಕೆ ಕೆಡವುದರ ಜೊತೆಗೆ ಆ ದೃಶ್ಯ ವೈಭವವನ್ನು ಮೀರಿ, ಪ್ರೀತಿ, ಕುಟುಂಬ ಮತ್ತು ಪೂರ್ವಜರ ಪರಂಪರೆಯ ವಿಷಯಗಳನ್ನ ಹೇಳಿದ್ದಾರೆ ಡೈರೆಕ್ಟರ್.
ದಿ ರಾಜಾಸಾಬ್ ಚಿತ್ರದ ಹೈಲೈಟ್ ಗ್ರಾಫಿಕ್ಸ್ ಹಾಗೂ ವಿಎಫ್‌ಎಕ್ಸ್. ಹೌದು.. ಪ್ರಭಾಸ್‌ರ ಈ ಹಿಂದಿನ ಆದಿಪುರುಷ್ ಚಿತ್ರಕ್ಕೆ ಮಾಡಿದ್ದ ಕಳಪೆ ಗ್ರಾಫಿಕ್ಸ್‌ನಂತೆ ಮಾಡದೆ, ನುರಿತ ತಂತ್ರಜ್ಞರ ಕೈಚಳಕದಲ್ಲಿ ಈ ಹಾರರ್ ಕಾಮಿಡಿ ಚಿತ್ರ ಮೂಡಿಬಂದಿದೆ. ನೋಡುಗರಿಗೆ ಹಾಲಿವುಡ್ ಶೈಲಿಯ ಫೀಲ್ ತರಿಸಲಿದೆ. ಅಷ್ಟರ ಮಟ್ಟಿಗೆ ಏಲಿಯನ್ಸ್ ಗ್ರಾಫಿಕ್ಸ್ ನೋಡುಗರಿಗೆ ಥ್ರಿಲ್ ನೀಡಲಿವೆ.
ಸಿಕ್ಕಾಪಟ್ಟೆ ಫನ್.. ಒಂದಷ್ಟು ಭಯ.. ಏಲಿಯನ್ಸ್ ಜೊತೆ ಆಟ..!
ಆದಿಪುರುಷ್‌ನಂತಿಲ್ಲ ಗ್ರಾಫಿಕ್ಸ್.. ಹಾಲಿವುಡ್ ಶೈಲಿಯ VFX..!
ಬ್ಲಾಕ್ ಬಸ್ಟರ್ ಹಿಟ್ ಕಲ್ಕಿ ಚಿತ್ರದ ಬಳಿಕ ಮತ್ತೊಮ್ಮೆ ಥಿಯೇಟರ್‌ನಲ್ಲಿ ನೋಡುಗರನ್ನ ರಂಜಿಸೋಕೆ ಬರ್ತಿರೋ ಪ್ರಭಾಸ್, ಸದ್ಯ ರಾಜಾಸಾಬ್ ಆಗಿ ಕಮಾಲ್ ಮಾಡ್ತಿದ್ದಾರೆ. ಅವರ ಸ್ಟೈಲು, ಮ್ಯಾನರಿಸಂ ಜೊತೆಗೆ ಆ್ಯಕ್ಷನ್ ಝಲಕ್‌ಗಳು ವಿಂಟೇಜ್ ಪ್ರಭಾಸ್‌ನ ಪರಿಚಯಿಸುವಂತಿದೆ. ಡೈರೆಕ್ಟರ್ ಮಾರುತಿ ಈ ಸಿನಿಮಾನ ಬಹಳ ಅಚ್ಚುಕಟ್ಟಾಗಿ ಡಿಸೈನ್ ಮಾಡಿದ್ದು, ನೋಡುಗರಿಗೆ ಫ್ರೆಶ್ ಫೀಲ್ ತಂದುಕೊಡ್ತಿದೆ.
ಡಾರ್ಲಿಂಗ್ ಪ್ರಭಾಸ್ ಜೊತೆ ಬಾಲಿವುಡ್‌ನ ಬಡೇ ಭಾಯಿಜಾನ್ ಸಂಜಯ್ ದತ್, ಬೊಮ್ಮನ್ ಇರಾನಿ, ಜರೀನಾ ವಹಾಬ್, ಮಾಳವಿಕಾ ಮೋಹನ್, ನಿಧಿ ಅಗರ್ವಾಲ್ ಮತ್ತು ರಿಧಿ ಕುಮಾರ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಟಿ ಜಿ ವಿಶ್ವ ಪ್ರಸಾದ್ ಮತ್ತು ಕೃತಿ ಪ್ರಸಾದ್ ಅವರು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ನಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ತಮನ್ ಸಂಗೀತ ರಾಜಾಸಾಬ್ ಚಿತ್ರಕ್ಕಿದ್ದು, ಹೊಸ ವರ್ಷದಲ್ಲಿ ಅಂದ್ರೆ 2026ರ ಸಂಕ್ರಾಂತಿ ಹಬ್ಬದ ಹಿನ್ನೆಲೆ ಜನವರಿ 9ಕ್ಕೆ ವರ್ಲ್ಡ್‌ವೈಡ್ ತೆರೆಗಪ್ಪಳಿಸುತ್ತಿದೆ.
 
			
 
					




 
                             
                             
                             
                            