ಡಾರ್ಲಿಂಗ್ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಕೊನೆಗೂ ಒಂದಾಗೋ ಮುನ್ಸೂಚನೆ ನೀಡಿದ್ದಾರೆ. ಯೆಸ್.. ಇವ್ರ ಕಾಂಬೋ ರೀಲ್ ಹಾಗೂ ರಿಯಲ್ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಬಹಳ ದಿನಗಳಿಂದ ಡೈ ಹಾರ್ಡ್ ಫ್ಯಾನ್ಸ್ ಎದುರು ನೋಡ್ತಿದ್ದಂತೆ ಒಂದೊಳ್ಳೆ ಬ್ರೇಕಿಂಗ್ ನ್ಯೂಸ್ ನೀಡ್ತಿದ್ದಾರೆ. ಅದೇನು ಅನ್ನೋ ಕೌತುಕತೆಗೆ ಉತ್ತರ ಈ ಸ್ಟೋರಿ.
- ಒಂದಾಗ್ತಿದ್ದಾರೆ ಪ್ರಭಾಸ್- ಅನುಷ್ಕಾ.. ಬಂತು ಬಿಗ್ ಬ್ರೇಕಿಂಗ್
- ರಿಯಲ್ ಲೈಫ್‌ನಲ್ಲಿ ಸತಿ-ಪತಿಯಾಗೋ ಕನಸು ಕಂಡಿದ್ದರು..!
- 5ನೇ ಬಾರಿ ಮೋಡಿ ಮಾಡೋಕೆ ಬಾಹುಬಲಿ ಜೋಡಿ ಸಜ್ಜು
- ಬಾಹುಬಲಿ ನಿರ್ಮಾಪಕರಿಂದ ಬಿಗ್ ಬಜೆಟ್ ಆ್ಯಕ್ಷನ್ ಚಿತ್ರ
ಕಿಂಗ್ ನಾಗಾರ್ಜುನ್‌ರ ಸೂಪರ್ ಸಿನಿಮಾದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕರಾವಳಿ ಮೂಲದ ಕನ್ನಡತಿ ಅನುಷ್ಕಾ ಶೆಟ್ಟಿ, ಅದಾದ ನಂತ್ರ ಹಿಂದೆ ತಿರುಗಿ ನೋಡಿದ ನಿದರ್ಶನೇ ಇಲ್ಲ. ಅದ್ರಲ್ಲೂ ಡಾರ್ಲಿಂಗ್ ಪ್ರಭಾಸ್ ಜೊತೆ ನಟಿಸಿದ ಎಲ್ಲಾ ಮೂವಿಗಳು ಬ್ಲಾಕ್ ಬಸ್ಟರ್ ಹಿಟ್. ಬಿಲ್ಲಾ, ಮಿರ್ಚಿ, ಬಾಹುಬಲಿ-1 ಹಾಗೂ ಬಾಹುಬಲಿ-2 ನಾಲ್ಕೂ ಚಿತ್ರಗಳಿಂದ ಅನುಷ್ಕಾ ಮತ್ತಷ್ಟು ಉತ್ತುಂಗಕ್ಕೇರಿದರು.
ಪ್ರಭಾಸ್ ಜೊತೆಗಿನ ಸಿನಿಮಾಗಳು ಹಿಟ್ ಆಗೋಕೆ ಪ್ರಮುಖ ಕಾರಣ ಅವರಿಬ್ಬರ ನಡುವಿನ ಕೆಮಿಸ್ಟ್ರಿ. ಹೌದು.. ಒಳ್ಳೆಯ ಹೈಟು, ವೆಯ್ಟು, ಮನೋಜ್ಞ ಅಭಿನಯ ಹೀಗೆ ಎಲ್ಲವೂ ಈ ನಾಲ್ಕು ಚಿತ್ರಗಳ ಹಿಟ್‌ಗೆ ಸಾಥ್ ನೀಡಿದವು. ಅಲ್ಲದೆ ರೀಲ್ ಅಂಡ್ ರಿಯಲ್ ಲೈಫ್‌ನಲ್ಲಿ ಇವ್ರ ನಡುವೆ ಸಂಥಿಂಗ್ ಸಂಥಿಂಗ್ ಅನ್ನೋ ಮಾತುಗಳು ಕೂಡ ಕೇಳಿಬಂದವು. ತೆರೆ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲೂ ಇವ್ರು ಒಂದಾಗ್ಬೇಕು ಅಂತ ಅಭಿಮಾನಿಗಳು ಬಯಸಿದ್ರು.
ಅದ್ಯಾಕೋ ಪ್ರಭಾಸ್- ಅನುಷ್ಕಾ ಒಂದಾಗ್ಬೇಕು ಅನ್ನೋ ಬಯಕೆ ಈಡೇರಲೇ ಇಲ್ಲ. ಇಂದಿಗೂ ಇಬ್ಬರೂ ಸಹ ಬ್ಯಾಚಲರ್‌ಗಳಾಗಿಯೇ ಉಳಿದುಬಿಟ್ಟಿದ್ದಾರೆ. ಸತಿ-ಪತಿ ಅಂತೂ ಆಗಲಿಲ್ಲ. ಅಟ್ಲೀಸ್ಟ್ ಸಿನಿಮಾ ಆದ್ರೂ ಒಟ್ಟಿಗೆ ಮಾಡಬಹುದಲ್ವಾ ಅಂತೆಲ್ಲಾ ನೆಟ್ಟಿಗರು ಕೇಳಿದ್ರು. ಅದಕ್ಕೀಗ ಸಮಯ ಸನಿಹವಾಗ್ತಿದೆ. ಒಂದೊಳ್ಳೆ ಸ್ಕ್ರಿಪ್ಟ್‌ಗಾಗಿ ಕಾಯ್ತಿದ್ದ ಈ ಜೋಡಿ, ಐದನೇ ಬಾರಿ ಮೋಡಿ ಮಾಡುವ ಲಕ್ಷಣ ತೋರಿದೆ.
ಮೂಲಗಳ ಪ್ರಕಾರ ಬಾಹುಬಲಿ-2 ಬಳಿಕ ಇವರಿಬ್ಬರ ನಡುವೆ ಒಂದು ದೊಡ್ಡ ಗ್ಯಾಪ್ ಆಗಿತ್ತು. ಆದ್ರೀಗ ಮತ್ತೆ ಆನ್‌ಸ್ಕ್ರೀನ್‌ನಲ್ಲಿ ಒಂದಾಗೋ ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ. ಪ್ರಭಾಸ್ ಹಾಗೂ ಅನುಷ್ಕಾರನ್ನ ಒಟ್ಟುಗೂಡಿಸಿ ಸಿನಿಮಾ ಮಾಡೋಕೆ ಮುಂದಾಗಿರೋದು ಒನ್ಸ್ ಅಗೈನ್ ಅದೇ ಬಾಹುಬಲಿ ಚಿತ್ರದ ನಿರ್ಮಾಪಕರು. ಹೌದು.. ಬಿಗ್ ಬಜೆಟ್‌ನ ಹೈ ವೋಲ್ಟೇಜ್ ಆ್ಯಕ್ಷನ್ ವೆಂಚರ್ ಇದಾಗಲಿದ್ದು, ಸದ್ಯದಲ್ಲೇ ಈ ಕುರಿತ ಅಧಿಕೃತ ಮಾಹಿತಿ ಹೊರಬರಲಿದೆಯಂತೆ.
ಸದ್ಯ ಅನುಷ್ಕಾ ಘಾಟಿ ಅನ್ನೋ ಮಹಿಳಾ ಪ್ರಧಾನ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಪ್ರಭಾಸ್ ಕೂಡ ಸಾಲು ಸಾಲು ಪ್ಯಾನ್ ಇಂಡಿಯಾ ಚಿತ್ರಗಳ ಬಾದ್‌ಷಾ ಆಗಿ ಮಿಂಚುತ್ತಿದ್ದಾರೆ. ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡಬೇಕು ಅಂತ ಸಾಕಷ್ಟು ಮಂದಿ ಎದುರು ನೋಡ್ತಿದ್ರು. ಅದೀಗ ಸಾಕಾರಗೊಳ್ತಿದೆ. ಹಾಗಾದ್ರೆ ಡೈರೆಕ್ಟರ್ ಯಾರು..? ಅದು ಹೊಸ ಮೂವಿನಾ ಅಥ್ವಾ ಸಲಾರ್ ಸೀಕ್ವೆಲ್ ಆಗುತ್ತಾ..? ಈಗಾಗ್ಲೇ ಕಮಿಟ್ ಆಗಿರೋ ಪ್ರಭಾಸ್ ಸಿನಿಮಾ ಅನ್ನೋದ್ರ ಬಗ್ಗೆ ಕ್ಲ್ಯಾರಿಟಿ ಸಿಗಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್