• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, October 17, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಪಿನಾಕ” ಚಿತ್ರಕ್ಕೆ ಚಿತ್ರೀಕರಣ

ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣದ "ಪಿನಾಕ" ಚಿತ್ರಕ್ಕೆ ಧನಂಜಯ್ ನಿರ್ದೇಶನ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
June 8, 2025 - 9:56 pm
in ಸಿನಿಮಾ
0 0
0
Untitled design 2025 06 08t215623.731

ಪೀಪಲ್ ಮೀಡಿಯಾ ಫ್ಯಾಕ್ಟರಿ ಲಾಂಛನದಲ್ಲಿ ವಿಶ್ವಪ್ರಸಾದ್ ಅವರು ಅದ್ದೂರಿಯಾಗಿ ನಿರ್ಮಿಸುತ್ತಿರುವ, ನೃತ್ಯ ನಿರ್ದೇಶಕ ಧನಂಜಯ್ ಚೊಚ್ಚಲ ನಿರ್ದೇಶನದ ಹಾಗೂ ಗೋಲ್ಟನ್ ಸ್ಟಾರ್ ಗಣೇಶ್‍ ಅಭಿನಯದ ‘ಪಿನಾಕ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನೆಲಮಂಗಲ ಬಳಿ ಚಿತ್ರಕ್ಕಾಗಿ ಆರು ಎಕರೆ ಪ್ರದೇಶದಲ್ಲಿ ದೊಡ್ಡ ಸೆಟ್‍ ಹಾಕಲಾಗಿದೆ. ಸೆಟ್‍ ಎಂದರೆ ಅದು 500 ವರ್ಷಗಳ ಹಿಂದಿನ ದೇವಗಿರಿ ಎಂಬ ಸಾಮ್ರಾಜ್ಯದ ಸೆಟ್‍. ಒಂದು ನಗರವನ್ನೇ ನಿರ್ಮಿಸಲಾಗಿದ್ದು, ಮಧ್ಯದಲ್ಲೊಂದು ಅರ್ಧನಾರೀಶ್ವರನ ಪ್ರತಿಮೆ ನಿಲ್ಲಿಸಲಾಗಿದೆ.

ಇಲ್ಲಿ ಕಳೆದ 32 ದಿನಗಳಿಂದ ಚಿತ್ರೀಕರಣ ನಡೆಯುತ್ತಿದ್ದು, ಇನ್ನೂ 15 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆಯಂತೆ. ಈ ಸೆಟ್ ಚಿತ್ರದಲ್ಲಿ ಮಹತ್ವದ ಪಾತ್ರ ವಹಿಸುವುದರಿಂದ, ಚಿತ್ರತಂಡ ಈ ಸೆಟ್‍ ಹೇಗಿದೆ ಎಂದು ಗೌಪ್ಯವಾಗಿಟ್ಟಿದೆ. ಚಿತ್ರಂಡದವರು ಮತ್ತು ಚಿತ್ರಕ್ಕೆ ಸಂಬಂಧಪಟ್ಟವರನ್ನು ಹೊರತುಪಡಿಸಿದರೆ, ಇಲ್ಲಿ ಹೊರಗಿನವರಿಗೆ ಸುಲಭವಾಗಿ ಪ್ರವೇಶವಿಲ್ಲ. ಮಾಧ್ಯಮದವರಿಗೆ ಇಡೀ ನಗರವನ್ನು ಪರಿಚಯ ಮಾಡಿಕೊಟ್ಟ ನಂತರ ನಿರ್ದೇಶಕ ಧನಂಜಯ್‍ ಚಿತ್ರತಂಡದವರ ಜೊತೆಗೆ ಮಾತಿಗೆ ಕುಳಿತರು.

RelatedPosts

ಸಂಗೀತ ನಿರ್ದೇಶಕ ರಘು ದೀಕ್ಷಿತ್ ಎರಡನೇ ಮದುವೆ..!ಹುಡುಗಿ ಇವರೇ ನೋಡಿ..!!

ತೇಜಸ್ವಿಯ ‘ಜುಗಾರಿ ಕ್ರಾಸ್’ಗೆ ಜೀವ ತುಂಬಲು ಮುಂದಾದ ರಾಜ್ ಬಿ. ಶೆಟ್ಟಿ..!

ಮತ್ತೊಂದು ಹಿಟ್‌‌‌ಗೆ KGF ಕ್ವೀನ್ ರೆಡಿ.. ಸಿದ್ದು ಜೊತೆ ಶ್ರೀನಿಧಿ..!

ನಿವೇದಿತಾ ನಿವೇದನೆ.. 2ನೇ ಮದ್ವೆ ಬಗ್ಗೆ ಮೌನ ಮುರಿದ ಹಾಟಿ..!!

ADVERTISEMENT
ADVERTISEMENT

‘ಮಳೆ, ಬಿಸಿಲು, ಗಾಳಿಯ ನಡುವೆ ಕಳೆದ ಒಂದು ತಿಂಗಳಿನಿಂದ ಚಿತ್ರೀಕರಣ ಮಾಡುತ್ತಿದ್ದೇವೆ. ಅದಕ್ಕೂ ಮುನ್ನ ಎರಡು ತಿಂಗಳ ಕಾಲ ಸೆಟ್‍ ನಿರ್ಮಾಣದ ಕೆಲಸ ನಡೆದಿದೆ. ಸಂತೋಷ್‍ ಪಾಂಚಲ ಮತ್ತು ತಂಡದವರು ಈ ಸೆಟ್‍ ನಿರ್ಮಿಸಿದ್ದಾರೆ. ಯುದ್ಧ ನಡೆದ ನಂತರದ ದೃಶ್ಯಗಳನ್ನು ಇಂದು ಚಿತ್ರೀಕರಣ ಮಾಡಿದ್ದೇವೆ. ಕಳೆದ ಒಂದು ತಿಂಗಳಿನಿಂದ ಪ್ರತಿ ದಿನ 800 ಜನ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಚಿತ್ರೀಕರಣ ಮಾಡಿ, ಹೈದರಾಬಾದ್‍ಗೆ ಫುಟೇಜ್‍ ಕಳಿಸುತ್ತಿದ್ದೇವೆ. ಅಲ್ಲಿ ಗ್ರಾಫಿಕ್ಸ್ ಕೆಲಸ ಸತತವಾಗಿ ನಡೆಯುತ್ತಿದೆ’ ಎಂದು ಮಾಹಿತಿ ಕೊಟ್ಟರು.

‘ಪಿನಾಕ’ ಎಂದರೆ ಒಬ್ಬ ರಕ್ಷಕ ಎನ್ನುವ ಅವರು, ‘ಇದೊಂದು ಕಾವಲುಗಾರ ಪರಂಪರೆಯ ಕುರಿತಾದ ಚಿತ್ರ. ಮುಂದಿನ ವರ್ಷ ಈ ಚಿತ್ರವನ್ನು ತೆರೆಗೆ ಬರಲಿದೆ. ಇದು ಒತ್ತಡದಲ್ಲಿ ಮಾಡುವ ಕೆಲಸವಲ್ಲ. ಒಂದೊಂದು ಸಣ್ಣ ದೃಶ್ಯಕ್ಕೂ ಸಾಕಷ್ಟು ಸಮಯವಾಗುತ್ತಿದೆ. ಗಣೇಶ್‍ ಜೊತೆಗೆ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಅವರ ಜೊತೆಗೊಂದು ಒಳ್ಳೆಯ ಸಂಬಂಧ ಇದೆ. ಅವರೊಂದಿಗೆ ಕೆಲಸ ಮಾಡುವುದು ಖುಷಿಯ ವಿಚಾರ. ಈ ಚಿತ್ರಕ್ಕೆ ಅವರ ಸಹಕಾರ ದೊಡ್ಡದು. ಇನ್ನು ನಿರ್ಮಾಪಕರು ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿದ್ದಾರೆ, ಇದು ನನ್ನೊಬ್ಬನ ಚಿತ್ರವಲ್ಲ. ಇದೊಂದು ತಂಡದ ಚಿತ್ರ’ ಎಂದರು ನಿರ್ದೇಶಕ ಧನಂಜಯ್.

ನಿರ್ಮಾಣದ ಮೇಲ್ವಿಚಾರಣೆ ಹೊತ್ತಿರುವ ವಿಜಯಾ ಮಾತನಾಡಿ, ‘ಗಣೇಶ್‍ ಜೊತೆಗೆ ಚಿತ್ರ ಮಾಡಬೇಕು ಎಂಬುದು ನನ್ನ ಸಹೋದರನ (ವಿಶ್ವಪ್ರಸಾದ್‍) ಆಸೆಯಾಗಿತ್ತು. ಅವರ ಜೊತೆಗೆ ಚಿತ್ರ ಮಾಡಬೇಕು ಎಂದು ನಿರ್ಧಾರವಾದಾಗ, ಕಥೆ ಸಹ ಇರಲಿಲ್ಲ. ಗಣೇಶ್‍ ಅವರಿಗೆ ಎಂಥಾ ಚಿತ್ರ ಮಾಡಬೇಕು ಎಂದು ಯೋಚಿಸಿ, ಒಂದು ವಿಭಿನ್ನ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.ತಮ್ಮ ನಿರ್ಮಾಣ ಸಂಸ್ಥೆಯು ಫ್ಯಾಕ್ಟರಿ ಮಾದರಿಯಲ್ಲಿ ಕೆಲಸ ಮಾಡುತ್ತಿದೆ ಎನ್ನುವ ಅವರು, ‘ಕಳೆದ ಏಳು ವರ್ಷಗಳಲ್ಲಿ ನಮ್ಮ ಸಂಸ್ಥೆಯಿಂದ 50 ಚಿತ್ರಗಳು ತಯಾರಾಗಿವೆ. ಈ ಪೈಕಿ 43 ಬಿಡುಗಡೆಯಾದರೆ, ಏಳು ಚಿತ್ರಗಳು ಬಿಡುಗಡೆ ಆಗುವುದಕ್ಕೆ ತಯಾರಿ ನಡೆಸಿವೆ. 20 ಚಿತ್ರಗಳು ಬೇರೆಬೇರೆ ಹಂತಗಳಲ್ಲಿದೆ.

ಈ ಚಿತ್ರದಲ್ಲಿನ ರಾಜಗುರುವಿನ ಪಾತ್ರಕ್ಕೆ ಶ್ರೀನಿವಾಸಮೂರ್ತಿ ಅವರೇ ಬೇಕು ಎಂದು ಗಣೇಶ್‍ ಪಟ್ಟುಹಿಡಿದರಂತೆ. ಈ ಕುರಿತು ಮಾತನಾಡಿದ ಹಿರಿಯ ನಟ ಶ್ರೀನಿವಾಸಮೂರ್ತಿ ಅವರು, ‘’ಕೃಷ್ಣಂ ಪ್ರಣಯ ಸಖಿ’ ಚಿತ್ರದ ನಂತರ ಗಣೇಶ್‍ ಜೊತೆಗೆ ಬಾಂಧವ್ಯ ಗಟ್ಟಿಯಾಗಿದೆ. ಈ ಚಿತ್ರವನ್ನು ನೀವೇ ಮಾಡಬೇಕು ಎಂದು ಅವರು ಹೇಳಿದರು.ಈ ಚಿತ್ರವು ಬೇರೆಯದೇ ಲೆವೆಲ್‍ನಲ್ಲಿದೆ’ ಎಂದರು.

ಬರುವಾಗಲೇ ಏನಾದರೂ ವಿಭಿನ್ನವಾಗಿ ಮಾಡಬೇಕು ಎಂಬ ತೀರ್ಮಾನದೊಂದಿಗೆ ನಿರ್ಮಾಪಕರು ಬಂದರು ಎಂದ ನಾಯಕ ಗಣೇಶ್, ‘ಈ ತರಹದ ಪಾತ್ರವನ್ನು ನನ್ನಿಂದ ಮಾಡಿಸಬಹುದು ಎಂದು ಮಾಡಿಸುತ್ತಿದ್ದಾರೆ. ಪ್ರತಿ ದೃಶ್ಯದಲ್ಲೂ ನಿರ್ಮಾಪಕರು ತೊಡಗಿಸಿಕೊಂಡಿದ್ದಾರೆ. ಚಿತ್ರೀಕರಣ ಪ್ರಾರಂಭವಾಗಿ ಎರಡು ದಿನಗಳಲ್ಲೇ ನಿರ್ಮಾಪಕಿ ವಿಜಯಮ್ಮ ಕಿರುಚಾಡುತ್ತಿದ್ದರು. ಏನು ಎಂದು ಕೇಳಿದಾಗ, ಬರೀ 600 ಜ್ಯೂನಿಯರ್ ಕಲಾವಿದರು ಮಾತ್ರ ಬಂದಿದ್ದಾರೆ, 800 ಜನ ಬರಬೇಕಿತ್ತು ಎಂದರು.

ಕಡಿಮೆಯಾದರೆ ಹಣ ಉಳಿಯುತ್ತದೆ ಎಂದು ಖುಷಿಪಡಬೇಕು. ಆದರೆ, ಅವರು ಹಾಗಲ್ಲ. ಈ ಸೆಟ್‍ ಈ ಮಟ್ಟಕ್ಕೆ ಬರಬೇಕೆಂದರೆ ಅವರು ಮತ್ತು ನಿರ್ದೇಶಕ ಧನಂಜಯ್‍ ಕಾರಣ. ನಾಲ್ಕೈದು ತಿಂಗಳು ನಿಂತು ಸೆಟ್‍ ಹಾಕಿಸಿದ್ದಾರೆ. ಧನು ಮೊದಲ ಚಿತ್ರದಲ್ಲೇ ಇಂಥದ್ದೊಂದು ದೊಡ್ಡ ಪ್ರಯತ್ನ ಮಾಡುತ್ತಿದ್ದಾರೆ. ಅವರು ಹೇಗೆ ಮಾಡಬಹುದು ಎಂಬ ಪ್ರಶ್ನೆ ನನಗೂ ಇತ್ತು. ಆದರೆ, ಇಲ್ಲಿ ನೂರಕ್ಕೆ ನೂರು ತೆಗೆದಿದ್ದಾನೆ. ಪ್ರತಿ ದಿನ ಸೆಟ್‍ನಲ್ಲಿ ನಾಲ್ಕು ಕ್ಯಾಮೆರಾಳಿವೆ. 32 ದಿನಗಳಲ್ಲಿ 64 ದಿನಗಳ ಕೆಲಸವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅವರು, ‘ಬಹಳ ಖುಷಿಕೊಟ್ಟ ಪಾತ್ರವಿದು. ನನಗೆ ಖುಷಿಕೊಟ್ಟರೆ ಪ್ರೇಕ್ಷಕರಿಗೂ ಖುಷಿಯಾಗುತ್ತದೆ ಎಂದು ನಂಬಿದವನು ನಾನು. ಇದು ಬೇರೆ ತರಹದ ಸಿನಿಮಾ. ನನ್ನ ಚಿತ್ರಜೀವನದಲ್ಲಿ ವಿಭಿನ್ನವಾದ ಸಿನಿಮಾ ಎಂದು ಹೇಳಿದರು. ಅದನ್ನು ನಿಜವಾಗಿಸಲು ಸಂಪೂರ್ಣವಾಗಿ ಪ್ರಯತ್ನ ಮಾಡುತ್ತೇನೆ’. ಇನ್ನೂ, ನನ್ನ ಕನ್ನಡದ ಸಂಭಾಷಣೆ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ವಿಶೇಷವಾಗಿ “ಭೋಜರಾಜ”ರಿಂದ ನನ್ನ ಕನ್ನಡದ ಮಾತಿಗೆ ಮೆಚ್ಚುಗೆ ದೊರಕಿದ್ದು ಖುಷಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ನಟ ಹೊನ್ನವಳ್ಳಿ ಕೃಷ್ಣ, ರವೀಂದ್ರನಾಥ್‍, ಛಾಯಾಗ್ರಾಹಕ ಕರಮ್‍ ಚಾವ್ಲಾ ಮುಂತಾದವರು ಹಾಜರಿದ್ದರು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 10 16t234532.073

ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ರಿಷಬ್‌ ಶೆಟ್ಟಿ

by ಯಶಸ್ವಿನಿ ಎಂ
October 16, 2025 - 11:46 pm
0

Untitled design 2025 10 16t233525.627

ಕೃಷಿ ಹೊಂಡದಲ್ಲಿ ಬಿದ್ದು ಮೂವರು ಮಕ್ಕಳು ದುರ್ಮರಣ

by ಯಶಸ್ವಿನಿ ಎಂ
October 16, 2025 - 11:37 pm
0

Untitled design 2025 10 16t232313.148

ದೀಪಾವಳಿ ಗಿಫ್ಟ್‌: ಬೆಂಗಳೂರು-ಹುಬ್ಬಳ್ಳಿಗೆ ಹೊಸ ಸೂಪರ್ ಫಾಸ್ಟ್ ರೈಲು ಸೇವೆ

by ಯಶಸ್ವಿನಿ ಎಂ
October 16, 2025 - 11:27 pm
0

Untitled design 2025 10 16t231330.147

ಬಿಗ್ ಬಾಸ್ 12: ಮಧ್ಯರಾತ್ರಿ ಎಲಿಮಿನೇಷನ್‌, ಸತೀಶ್ ಕಡಬಂಗೆ ಗೇಟ್ ಪಾಸ್..!

by ಯಶಸ್ವಿನಿ ಎಂ
October 16, 2025 - 11:14 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 16t223621.178
    ಸಂಗೀತ ನಿರ್ದೇಶಕ ರಘು ದೀಕ್ಷಿತ್ ಎರಡನೇ ಮದುವೆ..!ಹುಡುಗಿ ಇವರೇ ನೋಡಿ..!!
    October 16, 2025 | 0
  • Untitled design 2025 10 16t214931.883
    ತೇಜಸ್ವಿಯ ‘ಜುಗಾರಿ ಕ್ರಾಸ್’ಗೆ ಜೀವ ತುಂಬಲು ಮುಂದಾದ ರಾಜ್ ಬಿ. ಶೆಟ್ಟಿ..!
    October 16, 2025 | 0
  • Untitled design 2025 10 16t200002.900
    ಮತ್ತೊಂದು ಹಿಟ್‌‌‌ಗೆ KGF ಕ್ವೀನ್ ರೆಡಿ.. ಸಿದ್ದು ಜೊತೆ ಶ್ರೀನಿಧಿ..!
    October 16, 2025 | 0
  • Untitled design 2025 10 16t192909.744
    ನಿವೇದಿತಾ ನಿವೇದನೆ.. 2ನೇ ಮದ್ವೆ ಬಗ್ಗೆ ಮೌನ ಮುರಿದ ಹಾಟಿ..!!
    October 16, 2025 | 0
  • Untitled design 2025 10 16t162201.401
    ನೆಲಮಂಗಲದಲ್ಲಿ ಅದ್ದೂರಿ ‘ಬೀಟ್ ಪೊಲೀಸ್’ ಚಿತ್ರದ ಮುಹೂರ್ತ..!
    October 16, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version