ಐಪಿಎಲ್ ಹಾಗೂ ಬೈ ಎಲೆಕ್ಷನ್ ಅಬ್ಬರದ ನಡುವೆಯೂ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳು ರಿಲೀಸ್ ಆಗ್ತಿರೋದು ಅಚ್ಚರಿ. ಯೆಸ್.. ಕಂಟೆಂಟ್ ಹಾಗೂ ಮೇಕಿಂಗ್‌ನ ನಂಬಿರೋ ಚಿತ್ರತಂಡ, ಅದಕ್ಕಿಂತ ಜಾಸ್ತಿ ಕನ್ನಡದ ಕಲಾಪ್ರೇಮಿಗಳನ್ನ ನಂಬಿಕೊಂಡು ಬರ್ತಿದ್ದಾರೆ. ಸದ್ಯ ಪೀಟರ್ ಸಿನಿಮಾ ಪ್ರೀ ರಿಲೀಸ್ ಇವೆಂಟ್‌ನಿಂದ ರಂಗೇರಿದ್ದು ಹೇಗೆ..? ಏನು ಆ ಟೀಂನ ಧೈರ್ಯ ಅಂತೀರಾ..? ಈ ಸ್ಟೋರಿ ನೋಡಿ.
- ಸಿನಿಮೋತ್ಸಾಹಿ ಟೀಂ ಪೀಟರ್‌ಗೆ KVN ಪ್ರೊಡಕ್ಷನ್ಸ್ ಸಾಥ್
- ದೂರದರ್ಶನ ಡೈರೆಕ್ಟರ್‌ನ ಹೊಸ ಪ್ರಯತ್ನ ಈ ಪೀಟರ್..!!
ಪೀಟರ್… ಸ್ಯಾಂಪಲ್ಸ್‌ನಿಂದ ಭರವಸೆ ಮೂಡಿಸಿದ್ದ ಈ ಸಿನಿಮಾ, ಇತ್ತೀಚೆಗೆ ಆಡಿಯೋ ಲಾಂಚ್ ಜೊತೆ ಪ್ರೀ ರಿಲೀಸ್ ಇವೆಂಟ್‌ನ ನಡೆಸಿತು. ಪ್ರತಿ ಕಂಟೆಂಟ್ ನಲ್ಲಿಯೂ ನಾವು ಹೊಸತನ ಕೊಟ್ಟಿದ್ದೇವೆ. ನೋಡುಗರು ಥಿಯೇಟರ್‌ನಲ್ಲಿ ಕೂತು ಮಡಿಕೇರಿಯ ಭಾಗಮಂಡಲದಲ್ಲಿ ನಡೆಯೋ ರೋಚಕ ಕಥೆಯನ್ನು ಅನುಭವಿಸಲೇಬೇಕು. ಅದಕ್ಕೆ ತಕ್ಕಂತೆ ಕಥೆ ಹೆಣೆದಿದ್ದು, ಶಬ್ಧ ವಿನ್ಯಾಸ, ಪರಿಸರ.. ಇದೆಲ್ಲದರಿಂದ ಪ್ರೇಕ್ಷಕರಿಗೆ ಹೊಸತೊಂದು ಅನುಭವ ಗ್ಯಾರಂಟಿ.
ಮ್ಯೂಸಿಕ್ ಅಂತಾ ಬಂದಾಗ ನಾಲ್ಕು ಜಾನರ್ ನಲ್ಲಿ ಮ್ಯೂಸಿಕ್ ಮಾಡಿದ್ದೇವೆ. ಪೀಟರ್ ಸಿನಿಮಾದ ಪ್ರತಿ ಕಂಟೆಂಟ್, ಹಾಡು, ಟೀಸರ್ ಎಲ್ಲವೂ ಕೂಡ ಆಡಿಯನ್ಸ್ ಗೆ ಹತ್ತಿರವಾಗಲು ಇದೇ ಕಾರಣ. ನಾವು ಭಿನ್ನವಾಗಿ ಕಂಟೆಂಟ್ ಪ್ರೆಸೆಂಟ್ ಮಾಡ್ತಾ ಬಂದಿದ್ದೇವೆ. ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಹೈದ್ರಾಬಾದ್ ನಲ್ಲಿಯೂ ಚಿತ್ರದ ಪ್ರಚಾರ ಕೆಲಸ ನಡೆಯುತ್ತಿದೆ. ಇದೇ ಏಪ್ರಿಲ್ 10ಕ್ಕೆ ರಾಜ್ಯಾದ್ಯಂತ ರಿಲೀಸ್ ಆದ್ರೆ, ಇನ್ನೂ ಎರಡು ವಾರದ ಬಳಿಕ ಹೊರ ರಾಜ್ಯಗಳಲ್ಲಿ ಬಿಡುಗಡೆ ಮಾಡಲಿದೆ ಟೀಂ.
ಪೀಟರ್ ನನ್ನ ಎರಡನೇ ಸಿನಿಮಾ. ಎಮೋಷನಲ್ ಜರ್ನಿ ಜೊತೆಗೆ ಒಳ್ಳೆಯ ಕಲಾವಿದರು ಹಾಗೂ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಚೆನ್ನಾಗಿತ್ತು. ಸುಕೇಶ್ ಶೆಟ್ಟಿ ಅವರು ಮುಂದೆ ಕನ್ನಡ ಚಿತ್ರರಂಗದ ಮೋಸ್ಟ್ ವಾಂಟೆಂಡ್ ಡೈರೆಕ್ಟರ್ ಆಗುತ್ತಾರೆ. ಮೂರು ವರ್ಷ ಈ ಚಿತ್ರಕ್ಕಾಗಿ ಕೆಲಸ ಮಾಡಿ ಅಚ್ಚುಕಟ್ಟಾಗಿ ಔಟ್ ಫುಟ್ ತಂದಿದ್ದಾರೆ. ರವಿ ಹಾಗೂ ರಾಕೇಶ್ ಇಬ್ಬರು ಫ್ಯಾಷನೇಟೆಡ್ ಪ್ರೊಡ್ಯೂಸರ್‌ಗಳು. ಪೀಟರ್ ರಾಕ್ಷಸನೂ ಹೌದು, ರಕ್ಷಕನೂ ಹೌದು. ಅವನ ಜೀವನದಲ್ಲಿ ಚೆಂಡೆ ತುಂಬಾ ಮುಖ್ಯವಾಗಿರುತ್ತದೆ. ಅದರ ರಕ್ಷಣೆಗೆ ಹೇಗೆ ಮುಂದಾಗ್ತಾನೆ. ಹಾಗೂ ಅವನ ವೈಯಕ್ತಿಕ ಜೀವನದ ರಕ್ಷಣೆಗೆ ರಾಕ್ಷಸ ಆಗ್ತಾನೆ ಅಂದ್ರು ನಾಯಕನಟ ರಾಜೇಶ್ ಧ್ರುವ.
ಹೀರೋ ರಾಜೇಶ್ ಧ್ರುವಾಗೆ ನಾಯಕಿಯಾಗಿ ಜಾನ್ವಿ ನಟಿಸಿದ್ದಾರೆ. ಇನ್ನುಳಿದಂತೆ ರವೀಕ್ಷಾ ಶೆಟ್ಟಿ , ರಘು ಪಾಂಡೇಶ್ವರ್ , ಪ್ರತಿಮಾ ನಾಯಕ್, ರಾಮನಾಡಗೌಡ, ವರುಣ್ ಪಟೇಲ್ , ಭರತ್, ದೀನಾ, ರಾಧಾಕೃಷ್ಣ ಕುಂಬ್ಳೆ, ರಕ್ಷಿತ್ ದೊಡ್ಡೇರಾ ತಾರಾಗಣದಲ್ಲಿದ್ದಾರೆ. ಈ ಹಿಂದೆ ದೂರದರ್ಶನ ಸಿನಿಮಾ ನಿರ್ದೇಶಿಸಿದ್ದ ಸುಕೇಶ್ ಶೆಟ್ಟಿ, ಪೀಟರ್ ಚಿತ್ರದ ಡೈರೆಕ್ಟರ್. ಚೊಚ್ಚಲ ಸಿನಿಮಾದಲ್ಲೇ ಪ್ರಶಂಸೆ ಗಳಿಸಿದ್ದ ಸುಕೇಶ್, ಈ ಸಲ ಮತ್ತೊಂದು ಮಣ್ಣಿನ ಸೊಗಡಿನ ಕಥೆಯನ್ನ ಎಳೆಯನ್ನಾಗಿಸಿಕೊಂಡು, ಕೌತುಕತೆ ತುಂಬಿದ ರೋಚಕ ಸಸ್ಪೆನ್ಸ್ ಇರೋ ಪ್ರೇಮಕಥೆಯನ್ನ ಪ್ರಸ್ತುತ ಪಡಿಸುವ ಪ್ರಯತ್ನ ಮಾಡಿದಂತಿದೆ.
ಕರ್ನಾಟಕ ಕೇರಳ ಗಡಿ ಭಾಗದಲ್ಲಿ ನಡೆಯೋ ಈ ಕಥೆಯನ್ನ ಗುರುಪ್ರಸಾದ್ ನಾರ್ನಾಡ್ ಛಾಯಾಗ್ರಹಣದಲ್ಲಿ ಸೆರೆಹಿಡಿಯಲಾಗಿದ್ದು, ನವೀನ್ ಶೆಟ್ಟಿ ಸಂಕಲ ಮಾಡಿದ್ದಾರೆ. ಪೀಟರ್ ತಾಂತ್ರಿಕವಾಗಿ ತುಂಬಾ ಸತ್ವಯುತ ಪ್ರಯತ್ನ. ಈ ಸಿನಿಮಾವನ್ನ ಬಹುತೇಕ ಉದ್ಯಮದ ಯುವ ತಂತ್ರಜ್ಞರೇ ಕೂಡಿ ಮಾಡಿರೋದು ವಿಶೇಷ.
