ಪ್ರೇಕ್ಷಕರ ಮನಸ್ಸು ಗೆಲ್ಲುವುದರಲ್ಲಿ ಸೋತ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಟನೆಯ ಉಸ್ತಾದ್ ಭಗತ್ ಸಿಂಗ್ ಸಿನಿಮಾ, ರಿಲೀಸ್ ಆದ 30 ದಿನ ಕಳೆಯೋದರೊಳಗೆ ಓಟಿಟಿಗೆ ಲಗ್ಗೆ ಇಡ್ತಿದೆ. ಯೆಸ್.. ಉಸ್ತಾದ್ ಓಟಿಟಿ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
- ಏಪ್ರಿಲ್ 16ಕ್ಕೆ ಪವನ್ ಕಲ್ಯಾಣ್ ಉಸ್ತಾದ್ ಓಟಿಟಿಗೆ ಲಗ್ಗೆ
- 80 ಕೋಟಿ ಲಾಸ್.. 8 ತಿಂಗಳಲ್ಲಿ 3 ಸಿನಿಮಾ ಬಿಡುಗಡೆ..!
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರದ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗ್ತಿದ್ದಂತೆ ಆ ಡೇಟ್‌ಗೆ ಥಿಯೇಟರ್‌ಗೆ ಎಂಟ್ರಿ ಕೊಟ್ಟಿತ್ತು ತೆಲುಗಿನ ಉಸ್ತಾದ್ ಭಗತ್ ಸಿಂಗ್. ಆಂಧ್ರ ಡಿಸಿಎಂ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಉಸ್ತಾದ್, ಅದ್ಯಾಕೋ ಪ್ರೇಕ್ಷಕರಿಗೆ ರುಚಿಸಲೇ ಇಲ್ಲ. 150 ಕೋಟಿ ಬಜೆಟ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಸಕ್ಸಸ್ ಕಾಣಲಿಲ್ಲ.
ನಿರ್ಮಾಪಕರಿಗೆ ಬರೀಬ್ಬರಿ 80 ಕೋಟಿ ಲಾಸ್ ಆಗಿದ್ದು, ಇದೀಗ ತೆರೆಕಂಡ 30 ದಿನಗಳೊಳಗೇ ಓಟಿಟಿಗೆ ಲಗ್ಗೆ ಇಡ್ತಿದೆ ಉಸ್ತಾದ್. ಹೌದು.. ಇದೇ ಏಪ್ರಿಲ್ 16ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದ್ದು, ಕನ್ನಡಕ್ಕೂ ಡಬ್ ಆಗಿ ಬರ್ತಿರೋದು ಇಂಟರೆಸ್ಟಿಂಗ್. ಥಿಯೇಟರ್‌ನಲ್ಲಿ ಕ್ಲಿಕ್ ಆಗದ ಈ ಚಿತ್ರ ಓಟಿಟಿಯಲ್ಲಿ ಒಳ್ಳೆಯ ಓಪನಿಂಗ್ ಪಡೆಯುತ್ತಾ ಅನ್ನೋದನ್ನ ನಿರೀಕ್ಷಿಸಬೇಕಿದೆ.
ಖಾಕಿ ಖದರ್ ತೋರಿದ್ದ ಪವನ್ ಕಲ್ಯಾಣ್, ಗಬ್ಬರ್ ಸಿಂಗ್ ರೀತಿ ಅಬ್ಬರಿಸೋ ಧಾವಂತದಲ್ಲಿದ್ರು. ನಮ್ಮ ಕ್ಯೂಟ್ ಕ್ವೀನ್ ಶ್ರೀಲೀಲಾ ಈ ಚಿತ್ರದಲ್ಲಿ ಪವನ್‌ಗೆ ನಾಯಕಿಯಾಗಿ ಬಣ್ಣ ಹಚ್ಚಿದ್ರು. ಅಂದಹಾಗೆ ಪವನ್ ಡಿಸಿಎಂ ಆದ ಬಳಿಕ 8 ತಿಂಗಳಲ್ಲಿ ಮೂರು ಸಿನಿಮಾ ತೆರೆಕಂಡಿದ್ದು, ಆ ಪೈಕಿ ಹರಿ ಹರ ವೀರ ಮಲ್ಲು ಹಾಗೂ ಉಸ್ತಾದ್ ಫ್ಲಾಪ್ ಆದ್ರೆ ಓಜಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
