ಹೈದರಾಬಾದ್: ಹೈದರಾಬಾದ್‌ನ ಎಲ್‌ಬಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ತೆಲುಗು ಚಿತ್ರ ‘ದೆ ಕಾಲ್ ಹಿಮ್ ಒಜಿ’ಯ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ರೋಮಾಂಚಕ ಘಟನೆ ನಡೆದಿದೆ. ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯೂ ಆಗಿರುವ ಖ್ಯಾತ ತೆಲುಗು ನಟ ಪವನ್ ಕಲ್ಯಾಣ್ ಅವರು ವೇದಿಕೆಯ ಮೇಲೆ ಖಡ್ಗ ಬೀಸಿದಾಗ ಅದು ಅವರ ಬಾಡಿಗಾರ್ಡ್‌ಗೆ ಸ್ವಲ್ಪದರಲ್ಲೇ ತಾಗುವ ಸನ್ನಿವೇಶ ನಡೆಯಿತು. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಅವರು ತಮ್ಮ ಮುಂಬರುವ ಚಿತ್ರ ‘ದೆ ಕಾಲ್ ಹಿಮ್ ಒಜಿ’ಯ ಓಜಸ್ ಗಂಭೀರ ಪಾತ್ರದ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಖಡ್ಗವನ್ನು ಹಿಡಿದು ವೇದಿಕೆಯ ಮೇಲೆ ಆಕರ್ಷಕವಾಗಿ ಝುಲಾಯಿಸಿದಾಗ, ಅದು ಅವರ ಪಕ್ಕದಲ್ಲಿದ್ದ ಬಾಡಿಗಾರ್ಡ್‌ಗೆ ತಾಗುವಂತಿತ್ತು. ಆದರೆ, ಬಾಡಿಗಾರ್ಡಗೆ (ಅಂಗರಕ್ಷಕ) ಯಾವುದೇ ಅನಾಹುತ ಸಂಭವಿಸಲಿಲ್ಲ. ಈ ಘಟನೆಯನ್ನು ಗಮನಿಸಿದ ಮತ್ತೊಬ್ಬ ಬಾಡಿಗಾರ್ಡ್ (ಅಂಗರಕ್ಷಕ) ತಕ್ಷಣ ಎಚ್ಚರಿಕೆ ನೀಡಿದರು. ಈ ರೋಮಾಂಚಕ ಕ್ಷಣಗಳು ಕ್ಯಾಮರಾದಲ್ಲಿ ಸೆರೆಯಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
‘They Call Him OG’ event was a disaster 🥹 delayed 3 hrs despite rain warnings, no proper trailer & total negligence. If not for Pawan Kalyan stepping in, it would’ve been a complete washout.
That sword 🗡️ just a mm away! 😳
Thank god! 🙏🏻
pic.twitter.com/jRo5ftYq2T— KARTHIK DP (@dp_karthik) September 21, 2025
ಪವನ್ ಕಲ್ಯಾಣ್ ಅವರ ಈ ಸಾಹಸಕ್ಕೆ ಅಭಿಮಾನಿಗಳಿಂದ ಭಾರೀ ಚಪ್ಪಾಳೆಯ ಸುರಿಮಳೆಯೇ ಸಿಕ್ಕಿತ್ತು. ಭಾರೀ ಮಳೆಯ ನಡುವೆಯೂ ಸಾವಿರಾರು ಜನರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಚಿತ್ರದ ಟೀಸರ್ ಮತ್ತು ಪವನ್ ಕಲ್ಯಾಣ್‌ರ ಆಕರ್ಷಕ ಪಾತ್ರವು ಈಗಾಗಲೇ ಚಿತ್ರರಸಿಕರಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿದೆ.
ಪವನ್ ಕಲ್ಯಾಣ್ ರಾಜಕೀಯದಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಜನಸೇನಾ ಪಕ್ಷದ ಸಂಸ್ಥಾಪಕರಾಗಿರುವ ಅವರು, ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರರಂಗ ಮತ್ತು ರಾಜಕಾರಣ ಎರಡರಲ್ಲಿಯೂ ತಮ್ಮದೇ ಆದ ವಿಶಿಷ್ಟ ಗುರುತನ್ನು ಸೃಷ್ಟಿಸಿದ್ದಾರೆ.