ಸಿನಿಮಾ ಹಾಗೂ ರಾಜಕಾರಣ ಎರಡೂ ಕ್ಷೇತ್ರಗಳಲ್ಲಿ ಸೂಪರ್ ಹೀರೋ ಆಗಿ ಮಿಂಚ್ತಿರೋ ಗೇಮ್ ಚೇಂಜರ್ ಪವನ್ ಕಲ್ಯಾಣ್ ವಿರುದ್ಧ ನಾಲ್ಕು ಮಂದಿ ಪಿತೂರಿ ನಡೆಸ್ತಿದ್ದಾರಂತೆ. ಅವ್ರಲ್ಲಿ ಅಲ್ಲು ಅರವಿಂದ್ ಕೂಡ ಒಬ್ಬರು ಎನ್ನಲಾಗಿದ್ದು, ನಾನವನಲ್ಲ ನಾನವನಲ್ಲ ಅಂತಿದ್ದಾರೆ ಪುಷ್ಪರಾಜ್ ತಂದೆ ಅಲ್ಲು.
ಪವನ್ ಕಲ್ಯಾಣ್ ಅಕ್ಷರಶಃ ಪವರ್ ಸ್ಟಾರ್. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಯಾಕಂದ್ರೆ ಸಿನಿಮಾ ಹಾಗೂ ಪಾಲಿಟಿಕ್ಸ್ ಎರಡೂ ಕ್ಷೇತ್ರಗಳಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದ್ದಾರೆ ಆಂಧ್ರ ಡಿಸಿಎಂ ಪವನ್. ಇದೀಗ ರಾಜಕಾರಣದ ಜೊತೆ ಜೊತೆಗೆ ಕಮಿಟ್ ಆಗಿರೋ ಸಿನಿಮಾಗಳನ್ನ ಕೂಡ ಮುಗಿಸಿಕೊಡ್ತಿರೋ ಗೇಮ್ ಚೇಂಜರ್, ತೆಲುಗು ಚಿತ್ರರಂಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಂಧ್ರದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಗ್ತಿದೆ. ಇಲ್ಲಿಯವರೆಗೂ ಚಿತ್ರರಂಗದ ಯಾವುದೇ ಸ್ಟಾರ್ ಆಗಲಿ ಸಿಎಂ ಚಂದ್ರಬಾಬು ನಾಯ್ಡು ಅಥ್ವಾ ಡಿಸಿಎಂ ಪವನ್ ಕಲ್ಯಾಣ್‌ರನ್ನ ಭೇಟಿ ಆಗಿಲ್ಲ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರೋ ಪವನ್, ನೇರವಾಗಿಯೇ ತೆಲುಗು ಚಿತ್ರರಂಗದ ಮೇಲೆ ಹರಿಹಾಯ್ದಿದ್ದಾರೆ. ಇದೇನಾ ನೀವು ಕೊಡೋ ರಿಟರ್ನ್ ಗಿಫ್ಟ್ ಅಂತ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಇನ್ಮೇಲೆ ಸರ್ಕಾರದ ಜೊತೆ ವೈಯಕ್ತಿಕ ಭೇಟಿಗಳು ಇರುವುದಿಲ್ಲ. ಸಂಘ ಸಂಸ್ಥೆಗಳ ಮೂಲಕವೇ ಬನ್ನಿ ಅಂತ ಜಾಡಿಸಿದ್ದಾರೆ.
ಇನ್ನು ಚಿತ್ರರಂಗದ ಸಮಸ್ಯೆಗಳ ಇತ್ಯರ್ಥಕ್ಕಾಗಿ ನಿರ್ಮಾಪಕರು ಹಾಗೂ ವಿತರಕರು ಫಿಲ್ಮ್ ಚೇಂಬರ್‌ನಲ್ಲಿ ಸಭೆ ಸೇರಿ ಮಹತ್ವದ ಚರ್ಚೆ ನಡೆಸಿದ್ದು, ಅಲ್ಲಿ ಥಿಯೇಟರ್‌ಗಳನ್ನ ಮುಚ್ಚಬೇಕು ಅನ್ನೋ ಅಲೆ ಎದ್ದಿದೆ. ಪವನ್ ಕಲ್ಯಾಣ್ ಸಿನಿಮಾಗಳಾದ ಹರಿಹರ ವೀರಮಲ್ಲು ಹಾಗೂ OG ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗ್ತಿದ್ದು, ಥಿಯೇಟರ್ ಕ್ಲೋಸ್ ಆದ್ರೆ ಅವುಗಳಿಗೆ ಸಮಸ್ಯೆ ಆಗಲಿದೆ ಅನ್ನೋದು ಓಪನ್ ಸೀಕ್ರೆಟ್.
ಇನ್ನು ಈ ಎಲ್ಲಾ ಬೆಳವಣಿಗೆಗಳ ಹಿಂದೆ ನಾಲ್ಕು ಮಂದಿ ಬೇಕು ಅಂತಲೇ ಪವನ್ ಕಲ್ಯಾಣ್ ವಿರುದ್ಧ ಪಿತೂರಿ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಆ ನಾಲ್ವರಲ್ಲಿ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಕೂಡ ಇದಾರೆ ಅನ್ನೋದು ಗಲ್ಲಿ ಗಲ್ಲಿಗಳಲ್ಲಿ ಹರಿದಾಡ್ತಿರೋದು ಸುದ್ದಿಯಾಗಿದೆ. ಆದ್ರೀಗ ಪವನ್ ಬೆನ್ನಲ್ಲೇ ಅಲ್ಲು ಅರವಿಂದ್ ಸುದ್ದಿಗೋಷ್ಠಿ ನಡೆಸಿ, ನಾನವನಲ್ಲ ನಾನವನಲ್ಲ. ನನಗೂ ಅವರಿಗೂ ಸಂಬಂಧವಿಲ್ಲ. ಆ ನಾಲ್ವರಲ್ಲಿ ನಾನಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆ ಪವನ್ ಕಲ್ಯಾಣ್ ಎಲೆಕ್ಷನ್ ಕ್ಯಾಂಪೇನ್ ಸಮಯದಲ್ಲಿ ಪವನ್ ವಿರುದ್ಧದ ಕ್ಯಾಂಡಿಡೇಟ್ ಪರ ಮತಯಾಚಿಸಿ, ಪ್ರತ್ಯಕ್ಷವಾಗಿಯೇ ತಾನು ಪವನ್ ವಿರುದ್ಧ ಅನ್ನೋದ್ರ ಹಿಂಟ್ ನೀಡಿದ್ರು ಅಲ್ಲು ಅರ್ಜುನ್. ಆದಾಗ್ಯೂ ಕೂಡ ಪುಷ್ಪ-2 ರಿಲೀಸ್ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಖುದ್ದು ಪವನ್ ಕಲ್ಯಾಣ್ ಕುಟುಂಬಸ್ಥ ಅನ್ನೋದಲ್ಲದೆ ಜವಾಬ್ದಾರಿಯುತ ರಾಜಕಾರಣಿ ಹಾಗು ನಟನಾಗಿ ಕೂಡ ಅಲ್ಲು ಅರ್ಜುನ್ ಪರ ನಿಂತಿದ್ರು. ಅದೆಲ್ಲವನ್ನ ಮರೆತು ಇದೀಗ ಚಿರು ಕುಟುಂಬದಲ್ಲಿ ಬಿರುಕು ತರ್ತಿದೆ ಅಲ್ಲು ಕುಟುಂಬ.
ಹೈದ್ರಾಬಾದ್‌ನ AAA ಮಲ್ಟಿಪ್ಲೆಕ್ಸ್ ಪಾಲನ್ನು ಹೊರತುಪಡಿಸಿ, ಆಂಧ್ರ ಅಥ್ವಾ ತೆಲಂಗಾಣದಲ್ಲಿ ನನಗೆ ಯಾವುದೇ ಥಿಯೇಟರ್ಸ್ ಇಲ್ಲ. ಆಂಧ್ರದಲ್ಲಿ 15 ಥಿಯೇಟರ್‌ಗಳನ್ನ ಲೀಸ್‌ಗೆ ಪಡೆದಿದ್ದು, ಭವಿಷ್ಯದಲ್ಲಿ ಅವುಗಳನ್ನ ನವೀಕರಿಸುವ ಯಾವುದೇ ಪ್ಲಾನ್ ಇಲ್ಲ ಎಂತಲೂ ಸ್ಪಷ್ಟಪಡಿಸಿರೋ ಅಲ್ಲು ಅರವಿಂದ್, ಥಿಯೇಟರ್‌ಗಳನ್ನ ಮುಚ್ಚುವುದು ತಪ್ಪು ಅಂತ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಹೀಗೆಯೇ ಮುಂದುವರೆದಲ್ಲಿ, ಮುಂದೊಂದು ದಿನ ನಂದಮೂರಿ ಕುಟುಂಬದ ರೀತಿ ಚಿರು ಫ್ಯಾಮಿಲಿ ಕೂಡ ಇಬ್ಬಾಗ ಆಗೋದ್ರಲ್ಲಿ ಡೌಟೇ ಇಲ್ಲ.