• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, September 29, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ನಿಮಗೊಂದು ಸಿಹಿ ಸುದ್ದಿ’ ಚಿತ್ರದ ಟ್ರೇಲರ್ ಬಿಡುಗಡೆ: ಯುವಕನೊಬ್ಬ ಗರ್ಭಧರಿಸಿ‌ ಅಚ್ಚರಿ ಹುಟ್ಟಿಸುವ ಕಥೆ!

'ನಿಮಗೊಂದು ಸಿಹಿ ಸುದ್ದಿ' ಚಿತ್ರದ ಟ್ರೇಲರ್ ಬಿಡುಗಡೆ!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 15, 2025 - 8:17 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Nimagondu sihi suddi movie

ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಿಭಿನ್ನ ಪ್ರಯತ್ನ ಮತ್ತು ಪ್ರಯೋಗಗಳಾಗುತ್ತಿವೆ. ಅಂಥ ಚಿತ್ರಗಳ ಸಾಲಿಗೆ ಇದೀಗ ‘ನಿಮಗೊಂದು ಸಿಹಿ ಸುದ್ದಿ’ ಸಹ ಸೇರ್ಪಡೆಯಾಗುತ್ತಿದೆ. ಮಹಾಶಿವರಾತ್ರಿಯ ಪ್ರಯುಕ್ತ ಫೆಬ್ರವರಿ 28ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದ ಟ್ರೇಲರ್‍, ಗುರುವಾರ ಸಂಜೆ ಬಿಡುಗಡೆ MMB Legacyಯಲ್ಲಿ ಬಿಡುಗಡೆಯಾಗಿದೆ.

RelatedPosts

ದರ್ಶನ್ ಮತ್ತು ವಿಜಯಲಕ್ಷ್ಮೀ ನಡುವಿನ ಜಗಳಕ್ಕೆ ಆ ನಟಿ ಕಾರಣ..!-ಓಂ ಪ್ರಕಾಶ್ ರಾವ್

ಕಾಂತಾರ-1: ಪ್ರೀಮಿಯರ್ ಶೋಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಚೀಫ್ ಗೆಸ್ಟ್..!

ʼಸಾಲುಗಳ ನಡುವೆʼ: ಅನಿರುದ್ಧ ಅವರ ಚೊಚ್ಚಲ ಪುಸ್ತಕ ಬಿಡುಗಡೆ

‘ದಿಲ್ಮಾರ್’ಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್..ಮೊದಲ ಹಾಡು ಅನಾವರಣ

ADVERTISEMENT
ADVERTISEMENT

ಯುವಕನೊಬ್ಬ ಗರ್ಭಧರಿಸಿ‌ ಅಚ್ಚರಿ ಹುಟ್ಟಿಸುವ ವಿಷಯದ ಸುತ್ತ ಸಾಗುವ ಕಥೆ ಈ ಚಿತ್ರದಲ್ಲಿದ್ದು ನಾಯಕ ಕಂ ನಿರ್ದೇಶಕ ರಘು ಭಟ್‍ ಅವರಿಗೆ ಚಿತ್ರತಂಡದವರೆಲ್ಲಾ ಸೀಮಂತಶಾಸ್ತ್ರ ಮಾಡುವ ಮೂಲಕ ಟ್ರೇಲರ್‍ ಬಿಡುಗಡೆ ಮಾಡಲಾಯ್ತು. ರಘು ಭಟ್‍ ಅವರನ್ನು ವೇದಿಕೆಗೆ ಸಂಭ್ರಮದಿಂದ ಬರಮಾಡಿಕೊಂಡು, ಆ ನಂತರ ಅವರಿಗೆ ಸೀಮಂತ್ರ ಶಾಸ್ತ್ರ ಮಾಡಲಾಯಿತು. ನಂತರ ಚಿತ್ರತಂಡದವರೆಲ್ಲಾ ಸೇರಿ ಟ್ರೇಲರ್‍ ಬಿಡುಗಡೆ ಮಾಡಿದರು. ಈ ಟ್ರೇಲರ್‍ ಇದೀಗ ಯೂಟ್ಯೂಬ್‍ನ ಎ2 ಮ್ಯೂಸಿಕ್‍ ಚಾನಲ್‍ನಲ್ಲಿ ಲಭ್ಯವಿದೆ.

ಟ್ರೇಲರ್‍ ಬಿಡುಗಡೆ ಮಾಡಿ ಮಾತನಾಡಿದ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿ ನಾಯಕನಾಗಿ ನಟಿಸಿರುವ ರಘು ಭಟ್‍, ‘ಇದಕ್ಕೂ ಮೊದಲು ಪುರುಷರು ಗರ್ಭ ಧರಿಸಿದ ಚಿತ್ರವೊಂದು ಹಲವು ವರ್ಷಗಳ ಹಿಂದೆ ಹಾಲಿವುಡ್‍ನಲ್ಲಿ ಬಂದಿತ್ತು. ಕೇರಳದಲ್ಲಿ ಇಂಥದ್ದೊಂದು ಪ್ರಯತ್ನ ಆಗಿದ್ದು, ಅಲ್ಲೊಂದು ಕಥೆ ಇದೆ. ಆದರೆ, ನಮ್ಮ ಕಥೆ ಇದ್ಯಾವುದಕ್ಕೂ ಸಂಬಂಧವಿಲ್ಲ. ಇದೊಂದು ವಿಭಿನ್ನ ಪ್ರಯತ್ನ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಪರಿಕಲ್ಪನೆಯನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ಚಿತ್ರದ ಬಗ್ಗೆ ಸ್ವಲ್ಪ ಬಿಟ್ಟುಕೊಟ್ಟರೂ, ಸ್ವಾರಸ್ಯವಿರುವುದಿಲ್ಲ. ಚಿತ್ರಮಂದಿರದ್ಲೇ ನೋಡಿದರೆ ಚೆನ್ನಾಗಿರುತ್ತದೆ’ ಎಂದರು.

ಈ ಚಿತ್ರವನ್ನು ಎಲ್ಲ ಮಹಿಳೆಯರಿಗೆ ಅರ್ಪಿಸುವುದಾಗಿ ಹೇಳುವ ರಘು ಭಟ್‍, ‘ಈ ಚಿತ್ರದ ಕಥೆ ಬರೆಯುವುದಕ್ಕೆ ನಮ್ಮ ತಾಯಿ ಸ್ಫೂರ್ತಿ. ನಿನ್ನನ್ನು ಒಂಬತ್ತು ತಿಂಗಳು ಹೆತ್ತು-ಹೊತ್ತಿದ್ದಕ್ಕೆ ಈ ರೀತಿ ಮಾಡಿದ ಎಂಬ ಮಾತು ಸಹಜವಾಗಿ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಒಂದು ಮಾತು ಕೇಳಿಬರುತ್ತದೆ. ನಾನು ಒಮ್ಮೆ ಇಂಥದ್ದೊಂದು ಮಾತು ಕೇಳಬೇಕಾಯಿತು. ಒಬ್ಬ ತಾಯಿ ಇಷ್ಟೊಂದು ನೋವು ಅನಭವಿಸಬೇಕಾದರೆ, ಯಾಕೆ ಈ ವಿಷಯನ್ನು ಇಟ್ಟುಕೊಂಡು ಚಿತ್ರ ಮಾಡಬಾರದು ಎಂಬ ಯೋಚನೆ ಹೊಳೆದು, ಈ ಕಥೆ ಬರೆದೆ. ಇದನ್ನು ಎಲ್ಲಾ ತಾಯಂದಿರು, ಅಕ್ಕಂದಿರಿಗೆ ಅರ್ಪಿಸುತ್ತಿದ್ದೇವೆ. ಅವರಲ್ಲಿದೆ ನಾವಿಲ್ಲ’ ಎಂದರು.

ಈ ತರಹದ ಹೊಸ ಪ್ರಯತ್ನಗಳಿಗೆ ಪ್ರೇಕ್ಷಕರಿಂದ ಖಂಡಿತಾ ಮೆಚ್ಚುಗೆ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸುವ ರಘು ಭಟ್‍, ‘ಹೊಸ ತರಹದ ಪ್ರಯೋಗಗಳನ್ನು ಪ್ರೇಕ್ಷಕರು ಬೆಂಬಲಿಸುತ್ತಾರೆ ಎಂಬ ನಂಬಿಕೆಯಿಂದ ಸಿನಿಮಾ ಮಾಡಿರುತ್ತೇವೆ. ಪ್ರೇಕ್ಷಕರು ಬುದ್ಧಿವಂತರು. ಅವರು ಇಂತಹ ಪ್ರಯೋಗಗಳನ್ನು ಗುರುತಿಸುವುದಷ್ಟೇ ಅಲ್ಲ, ಬೆಂಬಲಿಸುತ್ತಾ ಬಂದಿದ್ದಾರೆ. ಚಿತ್ರ ಚೆನ್ನಾಗಿ ಬಂದಿದೆ. ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಯು/ಎ’ ಪ್ರಮಾಣ ಪತ್ರ ನೋಡಿದ್ದಾರೆ. ಜನ ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದರು.

‘ನಿಮಗೊಂದು ಸಿಹಿ ಸುದ್ದಿ’ ಚಿತ್ರವನನು ಅವ್ಯಕ್ತ ಸಿನಿಮಾಸ್ ಸಂಸ್ಥೆಯಡಿ ಹರೀಶ್ ಎನ್. ಗೌಡ ನಿರ್ಮಾಣ ಮಾಡಿದ್ದಾರೆ. ಚಿತ್ರದ ಕುರಿತು ಮಾತನಾಡುವ ಅವರು, ‘ರಘು ಭಟ್‍ ಅವರು ನನ್ನ ಜಿಮ್‍ ಟ್ರೇನರ್. ಒಮ್ಮೆ ವರ್ಕೌಟ್ ಮಾಡುವಾಗ, ಅವರು ಈ ಕಥೆ ಹೇಳಿದರು. ಈ ತರಹದ ಪ್ರಯೋಗಗಳಿಗೆ ಬೆಂಬಲ ಸಿಗುತ್ತದಾ ಎಂಬ ಭಯ ಇತ್ತು. ಮನೆಯವರು ಸಹ ಬೇಡ ಎಂದರು. ಮತ್ತೆ ಎರಡ್ಮೂರು ಬಾರಿ ಕಥೆ ಕೇಳಿ, ಇಂಥದ್ದೊಂದು ಸವಾಲು ಸ್ವೀಕರಿಸುಲು ಮುಂದಾದೆ. ಚಿತ್ರ ಬಹಳ ಚೆನ್ನಾಗಿ ಬಂದಿದೆ. ಪ್ರೇಕ್ಷಕರಿಗೆ ಎಲ್ಲೂ ಮೋಸವಾಗುವುದಿಲ್ಲ, ನಗಿಸುವುದರ ಜೊತೆಗೆ ಸಾಕಷ್ಟು ಥ್ರಿಲ್ಲಿಂಗ್‍ ಅಂಶಗಳಿವೆ’ ಎಂದರು.

‘ನಿಮಗೊಂದು ಸಿಹಿ ಸುದ್ದಿ’ ಚಿತ್ರದಲ್ಲಿ ರಘು ಜೊತೆಗೆ ಕಾವ್ಯ ಶೆಟ್ಟಿ, ಹರಿಣಿ ಶ್ರೀಕಾಂತ್, ಪದ್ಮಿನಿ ನರಸಿಂಹನ್, ಸುಜಯ್ ಶಾಸ್ತ್ರಿ, ಶಿಲ್ಪಾ ಶೈಲೇಶ್, ಪ್ರಜ್ವಲ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಆನಂದ್ ಸುಂದರೇಶ್‍ ಛಾಯಾಗ್ರಹಣ, ಅಶ್ವಿನ್‍ ಹೇಮಂತ್‍ ಸಂಗೀತವಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 5 8 350x250 3

ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಜನ್ಮ ಸಂಖ್ಯೆಗೆ ಅನುಗುಣವಾಗಿ ಇಂದಿನ ಭವಿಷ್ಯ ತಿಳಿಯಿರಿ

by ಶಾಲಿನಿ ಕೆ. ಡಿ
September 29, 2025 - 7:59 am
0

Untitled design 2025 09 29t073102.681

ಆಟದಲ್ಲೂ ‘ಆಪರೇಷನ್ ಸಿಂದೂರ್’: ಏಷ್ಯಾಕಪ್ ಗೆದ್ದ ಭಾರತ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ

by ಶಾಲಿನಿ ಕೆ. ಡಿ
September 29, 2025 - 7:43 am
0

Untitled design 2025 09 29t070746.108

ನಿದ್ದೆಯಲ್ಲಿ ನಡೆಯುವ ಅಭ್ಯಾಸ ಇದೆಯೇ? ಈ ಸಮಸ್ಯೆಗೆ ಇಲ್ಲಿದೆ ಪರಿಹಾರ

by ಶಾಲಿನಿ ಕೆ. ಡಿ
September 29, 2025 - 7:21 am
0

Rashi bavishya

ರಾಶಿಭವಿಷ್ಯ: ಸೋಮವಾರ ಯಾವ ರಾಶಿಗೆ ಅದೃಷ್ಟ?

by ಶಾಲಿನಿ ಕೆ. ಡಿ
September 29, 2025 - 6:57 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 09 28t231756.332
    ದರ್ಶನ್ ಮತ್ತು ವಿಜಯಲಕ್ಷ್ಮೀ ನಡುವಿನ ಜಗಳಕ್ಕೆ ಆ ನಟಿ ಕಾರಣ..!-ಓಂ ಪ್ರಕಾಶ್ ರಾವ್
    September 28, 2025 | 0
  • Untitled design (99)
    ಕಾಂತಾರ-1: ಪ್ರೀಮಿಯರ್ ಶೋಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಚೀಫ್ ಗೆಸ್ಟ್..!
    September 28, 2025 | 0
  • Untitled design (98)
    ʼಸಾಲುಗಳ ನಡುವೆʼ: ಅನಿರುದ್ಧ ಅವರ ಚೊಚ್ಚಲ ಪುಸ್ತಕ ಬಿಡುಗಡೆ
    September 28, 2025 | 0
  • Untitled design 2025 09 28t143732.394
    ‘ದಿಲ್ಮಾರ್’ಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್..ಮೊದಲ ಹಾಡು ಅನಾವರಣ
    September 28, 2025 | 0
  • Untitled design 2025 09 28t135246.460
    ಬಿಗ್​ಬಾಸ್​ ಮನೆಗೆ ಹೋಗೋರು ಯಾರು? 19 ಜನ ಸ್ಪರ್ಧಿಗಳು ಯಾರು ಗೊತ್ತಾ? ಇಲ್ಲಿದೆ ನೋಡಿ ಪೂರ್ಣ ಪಟ್ಟಿ
    September 28, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version