ಪ್ರಜ್ವಲ್ ರೇವಣ್ಣ ಕೇಸ್‌ನಂತಿರೋ ಫ್ಲರ್ಟ್ ಚಿತ್ರದ ಕಥೆ ಇದೀಗ ಹಾಡಿನಿಂದ ಮತ್ತೊಂದು ವಿವಾದಕ್ಕೆ ಕಾರಣವಾಗ್ತಿದೆ. ಯೆಸ್.. ನ್ಯಾಷನಲ್ ಕ್ರಶ್ ರಶ್ಮಿಕಾಗೆ ಟಾಂಗ್ ಕೊಡೋ ರೀತಿಯ ಲಿರಿಕ್ಸ್‌ನಿಂದ ಎಲ್ಲರ ಹುಬ್ಬೇರಿಸಿದೆ. ಕನ್ನಡದವರೇ ಕನ್ನಡಿಗರನ್ನ ಹೀಗೆ ಕೇವಲವಾಗಿ ನೋಡುವುದರ ಬಗ್ಗೆ ಹೊಸ ಅಲೆ ಎದ್ದಿದೆ. ಇಷ್ಟಕ್ಕೂ ಅದೃಷ್ಠ ದೇವತೆ ರಶ್ಮಿಕಾ ಬಗ್ಗೆ ಅಂಥದ್ದೇನಿದೆ ಸಾಂಗ್‌ನಲ್ಲಿ ಅಂತೀರಾ..? ನೀವೇ ನೋಡಿ.
ಬಿಗ್‌ಬಾಸ್ ಚಂದನ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿರೋ ಫ್ಲರ್ಟ್ ಸಿನಿಮಾ ಒಂದಲ್ಲಾ ಒಂದು ಕಾರಣಕ್ಕೆ ಸದ್ದು ಮಾಡ್ತಾನೇ ಇದೆ. ಅದಕ್ಕೆ ಕಾರಣ ಚಿತ್ರದ ಕಂಟೆಂಟ್, ಮೇಕಿಂಗ್ ಹಾಗೂ ಪಾತ್ರಗಳು. ಟ್ರೈಲರ್ ನೋಡಿದ್ರೆ ಪ್ರಜ್ವಲ್ ರೇವಣ್ಣ ಕಾಮಕಾಂಡದ ಕೇಸ್‌ನಂತಿತ್ತು. ತಿಳಿ ಹಾಸ್ಯದ ಮೂಲಕ ಕೋರ್ಟ್ ಡ್ರಾಮಾನ ಪ್ರಸ್ತುತಪಡಿಸೋ ಕಾರ್ಯ ಮಾಡಿದಂತಿದೆ.
ಚಂದನ್ ಫ್ಲರ್ಟ್ ಚಿತ್ರದ ಸಾಂಗ್‌ನಲ್ಲಿ ರಶ್ಮಿಕಾಗೆ ಟಾಂಗ್
ದಿ ಗರ್ಲ್ ಫ್ರೆಂಡ್ ಚಿತ್ರದಲ್ಲಿ ರಕ್ಷಿತ್‌ಗೆ ಕ್ರಶ್ಮಿಕಾ ಟಾಂಟ್..?!
ಕಿಚ್ಚ ಸುದೀಪ್ ಈ ಹಿಂದೆ ಫ್ರೆಂಡ್‌ಶಿಪ್ ಆ್ಯಂಥೆಮ್ ಹಾಡೊಂದನ್ನ ಹಾಡುವುದರ ಮೂಲಕ ಜೀವ ಜೀವ ಅಂತ ಎಲ್ಲರ ಮನಸೂರೆಗೊಂಡಿದ್ರು. ಇದೀಗ ಫ್ಲರ್ಟ್ ಚಿತ್ರದ ಪಕ್ಕಾ ಪಾರ್ಟಿ ಸಾಂಗ್‌ವೊಂದು ಬಿಡುಗಡೆ ಆಗಿದೆ. ಮೈಸೂರು ಮಾಲ್ ಗೀತೆ ಇದಾಗಿದ್ದು, ಔಟ್ ಅಂಡ್ ಔಟ್ ಡ್ಯಾನ್ಸಿಂಗ್ ನಂಬರ್ ಆಗಿದೆ. ಟ್ರಾಫಿಕ್ ಪೊಲೀಸ್ ಹಾಗೂ ತುಂಡ್ ಹೈಕ್ಳ ನಡುವಿನ ಸಂಭಾಷಣೆಯೊಂದಿಗೆ ಶುರುವಾಗೋ ಹಾಡಿನಲ್ಲಿ ಚಂದನ್-ಗಿರಿ ಜೋಡಿ ಜೊತೆ ಶ್ರೀನಗರ ಕಿಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ ಈ ಮೈಸೂರು ಮಾಲ್ ಗೀತೆಯ ಸಾಹಿತ್ಯದಲ್ಲಿ ನಟಿ ರಶ್ಮಿಕಾ ಮಂದಣ್ಣಗೆ ಟಾಂಗ್ ಕೊಡೋ ಅಂತಹ ಪದಗಳ ಬಳಕೆ ಆಗಿದೆ. ಕಿರಿಕ್ ಪಾರ್ಟಿ ಚಿತ್ರದ ರಶ್ಮಿಕಾ ಲುಕ್ ಹೋಲುವ ಗೆಟಪ್‌ನಲ್ಲಿ ಯುವತಿಯೊಬ್ಬರಿಗೆ ಇವಳೇನು ಹೊಸ ಕರ್ನಾಟಕ ಕ್ರಶ್.. ಕೈ ಕೊಡುವಳು ಬಿಡೋ ಶಿಷ್ಯ ಅನ್ನೋ ಸಾಲುಗಳಿವೆ. ಅಷ್ಟೇ ಅಲ್ಲ, ಏನು ಕಿರಿಕ್ಕಾ ಅನ್ನೋ ಆ ಯುವತಿಯ ಮಾತಿಗೆ ನೋ ನೋ ಪಾರ್ಟಿ ಅನ್ನುವ ನಾಯಕನಟ ಪದಪುಂಜಗಳು ರಶ್ಮಿಕಾ ಫ್ಯಾನ್ಸ್‌ನ ಕೆರಳುವಂತೆ ಮಾಡಿವೆ.
ಹೊಸ ಕರ್ನಾಟಕ ಕ್ರಶ್.. ಕೈ ಕೊಡುವಳು ಬಿಡೋ ಶಿಷ್ಯ ಲೈನ್
ಏನು ಕಿರಿಕ್ಕಾ..? ನೋ ನೋ ನೋ.. ಜಸ್ಟ್ ಫ್ಲರ್ಟ್ ಪಾರ್ಟಿ..!
ಅಂದಹಾಗೆ ದಿ ಗರ್ಲ್‌ಫ್ರೆಂಡ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ ಒನ್ಸ್ ಅಗೈನ್ ರಶ್ಮಿಕಾ ಟ್ರೆಂಡಿಂಗ್‌ನಲ್ಲಿದ್ದಾರೆ. ಅಂದ್ರೆ ಎಂಗೇಜ್ಮೆಂಟ್ ಮುರಿದುಕೊಂಡ ರಕ್ಷಿತ್ ಶೆಟ್ಟಿಗೆ ಟಾಂಟ್ ಕೊಡಲು ರಶ್ಮಿಕಾ ಉದ್ದೇಶಪೂರ್ವಕವಾಗಿ ಕೆಲ ಸೀನ್‌ಗಳನ್ನ ಮಾಡಿದ್ದಾರೆ ಎನ್ನಲಾಗ್ತಿದೆ. ಹಾಗಾಗಿ ಕರ್ನಾಟಕ ಕ್ರಶ್ ಸದ್ಯ ನ್ಯಾಷನಲ್ ಕ್ರಶ್ ಆಗಿದ್ದಾರೆ. ಆದ್ರೆ ಪರಭಾಷೆಗಳಲ್ಲಿ ನಮ್ಮ ಕನ್ನಡದ ಕೀರ್ತಿ ಪತಾಕೆ ಹಾರಿಸುತ್ತಿರೋ ರಶ್ಮಿಕಾಗೆ ನಮ್ಮ ಕನ್ನಡಿಗರೇ ಕಾಲೆಳೆದರೆ ಹೇಗೆ ಅಲ್ಲವೇ..?
