ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.
ಕನ್ನಡ ಚಿತ್ರರಂಗದಲ್ಲಿ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿ, ತನ್ನದೇ ಶೈಲಿಯಿಂದ ಪ್ರೇಕ್ಷಕರ ಮನಗೆದ್ದ ನವರಸ ನಾಯಕ ಜಗ್ಗೇಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಟ್ರೋಲ್‌ಗಳಿಗೆ ತಮ್ಮದೇ ಖಡಕ್ ಸ್ಟೈಲ್‌ನಲ್ಲಿ ಉತ್ತರ ನೀಡಿದ ಜಗ್ಗಣ್ಣ, ದೊಡ್ಮನೆಯನ್ನ ನೆನೆದಿದ್ದಾರೆ. ಜಗ್ಗೇಶ್ ಮಾತಿನ ಏಟು ಇದೀಗ ಸಿನಿ ವಲಯದಲ್ಲೂ, ಅಭಿಮಾನಿಗಳಲ್ಲೂ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಸ್ಯಾಂಡಲ್‌ವುಡ್‌ನಲ್ಲಿ ಒಮ್ಮೆ ಗಾಳಿ ಬಿರುಗಾಳಿಯಾಗಿ ಬೀಸಿದ ಘಟನೆ… ಒಬ್ಬ ನಟನ ಕರಿಯರ್‌ನ್ನೇ ಕದಡುವಷ್ಟು ಚರ್ಚೆ ಹುಟ್ಟಿಸಿದ ತೀರ್ಮಾನ… ಆದರೆ ಆ ಕ್ಷಣದಲ್ಲಿ ಇಂಡಸ್ಟ್ರಿಯ ಮಹಾನ್ ವ್ಯಕ್ತಿತ್ವವೊಂದು ನಿಂತಿತ್ತು ಗಟ್ಟಿಯಾಗಿ ಯಾರು ಆ ನಟ? ಏನದು ವಿವಾದ? ಮತ್ತು ಯಾರ ಮಾತು ಆ ದಿನ ಗೇಮ್ ಚೇಂಜರ್ ಆಯಿತು? ಹಳೆಯ ಪುಟಗಳು ಮತ್ತೆ ನೆನೆಡಿದ್ದಾರೆ ನವರಸ ನಾಯಕ ಜಗ್ಗೇಶ್.
ಜಗ್ಗೇಶ್ ಬ್ಯಾನ್ ವಿವಾದ ಮತ್ತೆ ಸದ್ದು, ಅಣ್ಣಾವ್ರು ಗೇಮ್ ಚೇಂಜರ್
Gen z ಕಿಡ್ಸ್ ಗೆ ಜಗ್ಗೇಶ್ ಕಿವಿಮಾತು ಏನು..?
ನವರಸ ನಾಯಕ ಜಗ್ಗೇಶ್ ಏರಿಳಿತಗಳನ್ನೇ ಎತ್ತರಕ್ಕೆ ತಂದು ನಿಲ್ಲಿಸಿದ ಕಲಾವಿದ. ಒಂದು ಕಾಲದಲ್ಲಿ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಆಗ್ರಹ ಕೇಳಿಬಂದಾಗ, ಪರಿಸ್ಥಿತಿ ಗಂಭೀರವಾಗಿತ್ತು. ಆದರೆ ಅಂದೇ ಬೆಂಬಲವಾಗಿ ನಿಂತವರು ಡಾ. ರಾಜ್‌ಕುಮಾರ್ ಹಾಗೂ ನಟಿ ಜಯಮಾಲಾ. ಜಗ್ಗೇಶ್‌ನ ಬ್ಯಾನ್ ಮಾಡೋದಾದ್ರೆ ಮೊದಲು ನನ್ನನ್ನ ಮಾಡಿ ಎಂಬ ಅಣ್ಣಾವ್ರ ಮಾತು ಆ ದಿನದ ವಾತಾವರಣವೇ ಬದಲಿಸಿತಂತೆ.
ಇದೀಗ ಆ ಹಳೆಯ ನೆನಪನ್ನು ಜಗ್ಗೇಶ್ ಮತ್ತೆ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಮೆಂಟ್ ಮಾಡುವವರಿಗೆ ಖಡಕ್ ಉತ್ತರ ನೀಡಿದ ಅವರು, ತಮ್ಮ ಬದುಕಿನ ಹೋರಾಟದ ಹಾದಿಯನ್ನೂ ನೆನಪಿಸಿದ್ದಾರೆ. 63 ವರ್ಷ ಹಿಂದೆ ಹುಟ್ಟಿದ್ದೀನಿ ಅಂದ್ರೆ ನಿಮ್ಮ ವಯಸ್ಸಿನವನೆಂದು ಅಂದುಕೊಳ್ಳಬೇಡಿ ಎಂದು ಯುವ ಪೀಳಿಗೆಗೆ ಚಾಟಿ ಬೀಸಿದ್ದಾರೆ. ಹಳ್ಳಿ ಹುಡುಗನಿಂದ ನವರಸ ನಾಯಕನಾದ ಕಥೆ ಕೇಳಿ ತಿಳಿಯಿರಿ ಎಂದು ಸವಾಲು ಹಾಕಿದ್ದಾರೆ.
‘ರಣರಂಗ’ ನೆನಪು, ಸ್ನೇಹದ ಸಾಕ್ಷಿ ಶಿವಣ್ಣ ಎಂದರೆ ಜಗಣ್ಣ
ವಿವಾದದಿಂದ ವಿಜಯದವರೆಗೆ ಜಗ್ಗೇಶ್ ಪಯಣ
ಜಗ್ಗೇಶ್ ವಿಚಾರವಂತರು ಏನೇ ಹೇಳಿದ್ರು ಅಲ್ಲೊಂದು ಅರ್ಥ ಇರುತ್ತೆ. ಇತ್ತೀಚೆಗೆ ಲಹರಿ ವೇಲು ಪುತ್ರನ ಮದುವೆಯಲ್ಲಿ ವಿಡಿಯೋ ವೊಂದು ವೈರಲ್ ಆಯಿತು. ಶಿವರಾಜ್‌ಕುಮಾರ್ ಬಂದಾಗ ಊಟ ಬಿಟ್ಟು ಎದ್ದರು ಎಂಬ ಫೋಟೋ ಸುತ್ತಾಡುತ್ತಿದ್ದಂತೆ, ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ. ನಾನು ಊಟ ಮುಗಿಸಿ ಕೈ ತೊಳೆದು ಗೌರವದಿಂದ ಎದ್ದೆ. ಅಣ್ಣನಂತೆ ಕಾಣುವ ಶಿವಣ್ಣಗೆ ಗೌರವ ಕೊಟ್ಟೆ ಎಂದಿದ್ದಾರೆ. ‘ರಣರಂಗ’ ಚಿತ್ರದ ಸಂದರ್ಭ ನೆನೆದು, ಕಷ್ಟಕಾಲದಲ್ಲಿ ಅವಕಾಶ ನೀಡಿದ ಸ್ನೇಹವನ್ನು ಮರೆಯಲಾರೆ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.
ಹಿರಿಯರಿಗೆ ಗೌರವ, ಸ್ನೇಹಕ್ಕೆ ಮೌಲ್ಯ, ಮತ್ತು ನಕಾರಾತ್ಮಕತೆಯಿಂದ ದೂರವಿರುವ ಬದುಕು ಇದೇ ಜಗ್ಗೇಶ್ ಸಂದೇಶ. ಅಶ್ಲೀಲ ಕಮೆಂಟ್ ಮಾಡುವವರಿಗೆ ಕಿವಿಮಾತು ಹೇಳುತ್ತಾ, ಯುವಕರಿಗೆ ಸಕಾರಾತ್ಮಕ ಜೀವನದ ಪಾಠ ನೀಡಿದ್ದಾರೆ. ಏರಿಳಿತಗಳ ನಡುವೆಯೂ ಅಣ್ಣಾವ್ರ ಆಶೀರ್ವಾದ, ಸ್ನೇಹಿತರ ಬೆಂಬಲ, ಅಭಿಮಾನಿಗಳ ಪ್ರೀತಿ-ಇವೆಲ್ಲ ಸೇರಿ ಜಗ್ಗೇಶ್ ಎನ್ನುವ ವ್ಯಕ್ತಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.
