ಈ ವಾರ ರಿಲೀಸ್ ಆಗಿರೋ ಮಾರುತ ಸಿನಿಮಾ, ಮೊದಲ ದಿನವೇ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಹೌದು.. ಕಲಾಸಾಮ್ರಾಟ್ ಎಸ್ ನಾರಾಯಣ್ ನಿರ್ದೇಶನದ ಈ ಸಿನಿಮಾ ಸಮಾಜಕ್ಕೆ ಸ್ಟ್ರಾಂಗ್ ಮೆಸೇಜ್ ಕೊಡ್ತಿದ್ದು, ಚಿತ್ರಮಂದಿರದಲ್ಲಿ ಅದ್ಭುತ ಪ್ರತಿಕ್ರಿಯೆ ಪಡೆಯುತ್ತಿದೆ. ಮಾರುತ ಸಿನಿಮಾ ಮೆಚ್ಚಿದ ಪ್ರೇಕ್ಷಕಪ್ರಭುಗಳು ಏನು ಹೇಳಿದ್ರು ಈ ಕುರಿತ ಒಂದು ಇಂಟರೆಸ್ಟಿಂಗ್ ರಿಪೋರ್ಟ್ ಇಲ್ಲಿದೆ ನೋಡಿ.
ಕಲಾಸಾಮ್ರಾಟ್ ಎಸ್ ನಾರಾಯಣ್ ಸಿನಿಮಾಗಳಲ್ಲಿ ಮನರಂಜನೆ ಜೊತೆ ಸಮಾಜಕ್ಕೆ ಸಂದೇಶ ನೀಡುವ, ನೋಡುಗರ ಮನೋವಿಕಾಸಕ್ಕೆ ಪೂರಕವಾದ ಅಂಶಗಳು ಇದ್ದೇ ಇರುತ್ತೆ. 50ಕ್ಕೂ ಅಧಿಕ ಚಿತ್ರಗಳನ್ನ ನಿರ್ದೇಶಿಸಿರೋ ಅವರು, ಇದೀಗ ಮಾರುತ ಅನ್ನೋ ಮತ್ತೊಂದು ಸಮಾಜಮುಖಿ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಚಿತ್ರದ ಲೀಡ್ ನಲ್ಲಿದ್ದು, ಅವರಿಗೆ ದುನಿಯಾ ವಿಜಯ್ ಕೂಡ ಸಾಥ್ ನೀಡಿರೋದು ಇಂಟರೆಸ್ಟಿಂಗ್.

ದುನಿಯಾ ವಿಜಯ್-ಶ್ರೇಯಸ್ ಕಾಂಬೋ ಕಮಾಲ್..!
ಹೆಣ್ಣುಮಕ್ಕಳಿಗೆ ಎಚ್ಚರಿಕೆಯ ಗಂಟೆ.. ಮಾರುತ ಸಂದೇಶ
ಒಂದೇ ತಿಂಗಳಲ್ಲಿ ಬರೋಬ್ಬರಿ 63 ಹೆಣ್ಣು ಮಕ್ಕಳು ಮಿಸ್ಸಿಂಗ್ ಆಗಿರೋ ಅಂತಹ ಇನ್ಸಿಡೆಂಟ್ ಮೇಲೆ ಈ ಸಿನಿಮಾ ತಯಾರಾಗಿದ್ದು, ಇಲ್ಲಿ ಪೊಲೀಸ್ ಇಲಾಖೆ, ಹೆಣ್ಣು ಹೆತ್ತವರ ನೋವು, ಮಹಿಳಾ ಆಯೋಗ, ಹೆಣ್ಣು ಮಕ್ಕಳ ಕಿಡ್ನ್ಯಾಪ್ ಮಾಡೋ ಜಾಲ ಹೀಗೆ ಸಾಕಷ್ಟು ಅಂಶಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಶ್ರೇಯಸ್ ಮಂಜುಗೆ ಸ್ಯಾಂಡಲ್ ವುಡ್ ನ ಏಂಜಲ್ ಬೃಂದಾ ಆಚಾರ್ಯ ಜೋಡಿಯಾಗಿ ನಟಿಸಿದ್ದು, ನಿಶ್ವಿಕಾ ನಾಯ್ಡು, ಕ್ರೇಜಿಸ್ಟಾರ್ ರವಿಚಂದ್ರನ್, ತಾರಾ ಸೇರಿದಂತೆ ಬಹುದೊಡ್ಡ ತಾರಾಗಣವಿದೆ. ಕೆ ಮಂಜು ಹಾಗೂ ರಮೇಶ್ ಯಾದವ್ ಜಂಟಿಯಾಗಿ ನಿರ್ಮಿಸಿರೋ ಈ ಮಾರುತ ಸಿನಿಮಾ, ಇಂದಿನಿಂದ ರಾಜ್ಯದ್ಯಂತ ಬಿಡುಗಡೆಗೊಂಡಿದೆ.

ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿದ ಶ್ರೇಯಸ್, ಬೃಂದಾ
ಮನರಂಜನೆ ಜೊತೆ ಮನೋವಿಕಾಸ.. ‘ಮಾರುತ’ ಮಸ್ತ್..!
ನಗರದ ಅನುಪಮ ಚಿತ್ರಮಂದಿರದಲ್ಲಿ ಮಾರುತ ಸಿನಿಮಾಗೆ ಗ್ರಾಂಡ್ ಓಪನಿಂಗ್ ಸಿಕ್ಕಿದ್ದು ನಟ ಶ್ರೇಯಸ್ ಮಂಜು ಹಾಗು ನಟಿ ಬೃಂದಾ ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿ ಸಂಭ್ರಮಿಸಿದ್ದಾರೆ. ಹಾಗೆ ಮಾರುತ ಸಿನಿಮಾ ನೋಡಿದ ಪ್ರೇಕ್ಷಕರು ಏನು ಹೇಳಿದ್ದಾರೆ ನೀವೇ ನೋಡಿ.
ಮಾರುತ ಸಿನಿಮಾ ಬಿಡುಗಡೆಗೂ ಮುನ್ನ ಪೊಲೀಸ್ ಇಲಾಖೆ ಹಾಗೂ ಮಹಿಳಾ ಆಯೋಗಕ್ಕೆ ಚಿತ್ರತಂಡ ಸ್ಪೆಷಲ್ ಶೋಗಳನ್ನ ಆಯೋಜಿಸಿತ್ತು. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಜೊತೆ ಎಸ್ ನಾರಾಯಣ್ ದಂಪತಿ ಹಾಗೂ ಕೆ ಮಂಜು ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಹಿರಿಯರು, ಕಿರಿಯರು ಎಂಬ ಭೇದಭಾವವಿಲ್ಲದೆ ಎಲ್ಲಾ ವಯಸ್ಸಿನವರು ಅವಶ್ಯವಾಗಿ ನೋಡುವ ಸಿನಿಮಾ. ಅದರಲ್ಲೂ ಹೆಣ್ಣುಮಕ್ಕಳಿಗೆ ಎಚ್ಚರಿಕೆಯ ಗಂಟೆ. ಈಗಿನ ಯುವಪೀಳಿಗೆ ಈ ಚಿತ್ರ ನೋಡಿ ತಿಳಿದುಕೊಳ್ಳುವುದು ಬಹಳಷ್ಟಿದೆ. ರಾಜ್ಯಾದ್ಯಂತ ಮಾರುತ ಸಿನಿಮಾ 300 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಗೆ ಅಪ್ಪಳಿಸಿದ್ದು, ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ.
ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





