ಬಣ್ಣದಲೋಕಕ್ಕೆ ಒಮ್ಮೆ ಬಂದರೆ ಅದರಿಂದ ಹೊರಬರವುದು ಅಷ್ಟು ಸುಲಭವಾಗಿರುವುದಿಲ್ಲ. ಕೆಲವರು ನಟನೆಯಿಂದ ದೂರ ಉಳಿದರೂ, ಇದೇ ಕ್ಷೇತ್ರದಲ್ಲಿ ಏನಾದರೂ ಒಂದು ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಆ ಸಾಲಿಗೆ ನಟಿ ಮೈತ್ರಿಯಾಗೌಡ ಸೇರಿಕೊಳ್ಳುತ್ತಾರೆ. ’ಮೌರ್ಯ’ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ತಂಗಿಯಾಗಿ ಅಭಿನಯಿಸಿದ, ನಂತರ 8 ಸಿನಿಮಾಗಳಿಗೆ ನಾಯಕಿಯಾಗಿ ನಟಿಸಿದ್ದರು. ಕಾರಣಾಂತರದಿಂದ ಅಭಿನಯಕ್ಕೆ ಬ್ರೇಕ್ ನೀಡಿ ಸಾಮಾಜಿಕ ಸೇವೆ ಕಡೆ ಗಮನ ಹರಿಸಿದ್ದರು.
ಈಗ ’ಮೈತ್ರಿಯಾ ಗ್ಲೋಬಲ್ ಟ್ರಸ್ಟ್’ ಮೂಲಕ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದರ ಮೊದಲ ಹಂತವಾಗಿ ನಟ ಅನಿರುದ್ದ್, ಹಿರಿಯ ನಿರ್ಮಾಪಕ ಉದಯ್‌ಮೆಹ್ತಾ, ವಿಧಾನ ಪರಿಷತ್ ಸದಸ್ಯ ಶರವಣ ಟ್ರಸ್ಟ್ ಉದ್ಗಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೈತ್ರಿಯಾಗೌಡ, ಇಂದು ನನ್ನ ಹುಟ್ಟುಹಬ್ಬದ ಸಲುವಾಗಿ ಸಂಸ್ಥೆ ಶುರು ಮಾಡಿದ್ದೇನೆ. ಚಿಕ್ಕವಳಿದ್ದಾಗ ಮುಂದೆ ಏನಾಗುತ್ತಿಯಾ ಅಂತ ಯಾರಾದರೂ ಕೇಳಿದರೆ, ನಾನು ನಟಿಯಾಗಬೇಕು, ಸಮಾಜಸೇವೆ ಮಾಡಬೇಕೆಂದು ಹೇಳುತ್ತಿದ್ದೆ. ನಾಯಕಿಯಾದ ಸಮಯದಲ್ಲಿ ಅನಿರುದ್ದ್ ಮಾಡುತ್ತಿದ್ದ ಸೇವೆಗಳು, ಉದಯ್‌ಮೆಹ್ತಾ ಕಾರ್ಯವೈಖರಿ. ಇವರಿಬ್ಬರ ಪ್ರೇರಣೆಯಿಂದ ಟ್ರಸ್ಟ್ ಶುರು ಮಾಡಿದ್ದೇನೆ. ಇದರ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗುವುದು. ಜತೆಗೆ ಅನಾಥಶ್ರಮ, ಗೋಶಾಲೆ, ವೃದ್ದಾಶ್ರಮ, ಬೀದಿ ನಾಯಿಗಳ ರಕ್ಷಣೆ, ಫ್ಯಾಶನ್ ಷೋ ಇನ್ನಿತರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈಗಾಗಲೇ ಎರಡು ಕಥೆಗಳನ್ನು ಕೇಳಿದ್ದೇನೆ. ಹೊಸ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನು ತಿಳಿಸುತ್ತೇನೆಂದು ಮೈತ್ರಿಯಾಗೌಡ ಹೇಳಿದರು. ಸುಂದರ ಸಮಯದಲ್ಲಿ ಕಲಾವಿದರುಗಳಾದ ಯಶಸ್‌ಸೂರ್ಯ, ರವಿಚೇತನ್, ಕಿರುತೆರೆ ಕಲಾವಿದರುಗಳು ಹಾಜರಿದ್ದರು.
ಟೀಸರ್, ಹಾಡುಗಳ ಮೂಲಕ ಗಮನ ಸೆಳೆದಿರುವ “ಗುರುತ್ವಾಕರ್ಷಣೆ” ಚಿತ್ರ ಸದ್ಯದಲ್ಲೇ ತೆರೆಗೆ
ಮದರ್ ಪ್ರಾಮೀಸ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ಮಹೇಂದರ್ ಸಿ ಗುಂಡೇಗಾಲ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣವನ್ನೂ ಮಾಡಿರುವ ಚಿತ್ರ “ಗುರುತ್ವಾಕರ್ಷಣೆ”. ಇದಕ್ಕೆ ಸಹ ನಿರ್ಮಾಪಕರಾಗಿ ದಿಲೀಪ್ ಸಿದ್ದಪ್ಪಾಜಿ ಕೊಳ್ಳೇಗಾಲ ಸಾಥ್ ನೀಡಿದ್ದಾರೆ. ಈವರೆಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಮಹೇಂದರ್ ಸಿ ಗುಂಡೇಗಾಲ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.
“ಗುರುತ್ವಾಕರ್ಷಣೆ” ಶೀರ್ಷಿಕೆ ಕೇಳಿದ ತಕ್ಷಣ ಎಲ್ಲರಿಗೂ ವೈಜ್ಞಾನಿಕ ಚಿತ್ರ ಅನಿಸುವುದು ಸಹಜ. ಆದರೆ ಇದು ವೈಜ್ಞಾನಿಕ ಚಿತ್ರವಲ್ಲ.”ಗುರುತ್ವಾಕರ್ಷಣೆ”ಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಏನಾಗುತ್ತದೆ? ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಇದು ಕೊಳ್ಳೇಗಾಲ ಮತ್ತು ಚಾಮರಾಜನಗರದಲ್ಲಿ ನಡೆಯುವ ಕಥೆ. ಚಿತ್ರೀಕರಣ ಸಹ ಅಲ್ಲೇ ಆಗಿದೆ. ಈಗಾಗಲೇ ನೀತು ನಿನಾದ್ ಸಂಗೀತ ನೀಡಿರುವ ಎರಡು ಹಾಡುಗಳು ಹಾಗೂ ಟೀಸರ್ A2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದ್ದು, ಮೆಚ್ಚುಗೆಯ ಜೊತೆಗೆ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆ ಸಹ ಆಗುತ್ತಿದೆ.
ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ಕೂಡ ನಡೆಯುತ್ತಿದೆ. ನನ್ನ ತಾಯಿಗೆ ನಾನು ನಿರ್ದೇಶಕನಾಗಬೇಕೆಂಬ ಆಸೆ. ಅವರು ಕಣ್ಣು ಮುಚ್ಚುವ ಮೊದಲು ಹೇಳಿದ ಮಾತು ಹೀಡೇರಿಸಲು.ಅವರ ಆಸೆ- ಆಶಯದಂತೆ ಸತತ ಒಂದುವರೆ ವರ್ಷ ಹಗಲಿನಲ್ಲಿ ಕೆಲಸ ಮಾಡಿ ರಾತ್ರಿ ಈ ಚಿತ್ರದ ಕಥೆ ಸಿದ್ದ ಮಾಡಿಕೊಳ್ಳುತ್ತಿದ್ದೆ. ಕೊಳ್ಳೇಗಾಲ ಮತ್ತು ಮೈಸೂರಿನ ಪ್ರತಿಭೆಗಳನ್ನು ಒಗ್ಗೂಡಿಸಿಕೊಂಡು ಮಾಡಿರುವ ಸಿನಿಮಾ ಇದು ಎನ್ನುತ್ತಾರೆ ನಿರ್ದೇಶಕ ಮಹೇಂದರ್ ಸಿ ಗುಂಡೇಗಾಲ.
ಜಯಂತ್ ದೊರೆ ಈ ಚಿತ್ರದ ನಾಯಕನಾಗಿದ್ದು, ಸುಕೃತಿ ನಾಯಕಿಯಾಗಿ ನಟಿಸಿದ್ದಾರೆ. ಪ್ರಭಾಕರ್, ದಿವ್ಯ ಕುಮಾರ್ ಸತ್ತೇಗಾಲ, ಮಂಡ್ಯ ಸಿದ್ದು, ವಿಜಯ್ ಕಿರಣ್, ಮಾಸ್ಟರ್ ಶೌರ್ಯ ಮತ್ತು ಡಾ.ಭಾನುಪ್ರಕಾಶ್ ಎ ಎಸ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಪವಿತ್ರನ್ – ವಿಘ್ನೇಶ್ ವಿಕ್ಕಿ ಛಾಯಾಗ್ರಹಣ ಹಾಗೂ ರಕ್ಷಿತ್ ರಾಜ್ ಸಂಕಲನ ” ಗುರುತ್ವಾಕರ್ಷಣೆ ” ಚಿತ್ರಕ್ಕಿದೆ.
