ಗ್ಲೋಬಲ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಹಾಗೂ ನ್ಯಾಷನಲ್ ಸ್ಟಾರ್ ಧನುಷ್ ನಡುವೆ ರಿಯಲ್ ಮುರುಗನ್ ಯಾರು ಅನ್ನೋ ಫೈಟ್ ಶುರುವಾಗಿದೆ. ಅದಕ್ಕೆ ಕಾರಣ ಆಗಿರೋದು ಅವ್ರ ಅಪ್‌ಕಮಿಂಗ್ ನ್ಯೂ ಪ್ರಾಜೆಕ್ಟ್ಸ್. ಯೆಸ್.. ಎರಡೂ ಚಿತ್ರಗಳ ಫಸ್ಟ್‌ಲುಕ್ಸ್ ಬಯಲಾಗಿದ್ದು, ಸೌತ್ ಸಿನಿದುನಿಯಾದಲ್ಲೇ ಈ ಡಿವೈನ್ ಟೈಟಲ್‌ಗೆ ಕಿತ್ತಾಟ ನಡೀತಿರೋದು ಅಚ್ಚರಿ.
- NTR ವರ್ಸಸ್ ಧನುಷ್.. ಯಾರು ರಿಯಲ್ ‘ಮುರುಗನ್’?
- ತಾರಕ್- ತ್ರಿವಿಕ್ರಮ್ ಕಂಬ್ಯಾಕ್.. ನಾರ್ತ್ ಬಾರ್ನ್ ವಿವಾದ..!
- ವೆಟ್ರಿ ಮಾರನ್ ಜೊತೆ ನಟ ಧನುಷ್ ‘ತಮಿಳ್ ಮುರುಗನ್’
- ಯಾರ ಪಾಲಾಗುತ್ತೆ ಟೈಟಲ್.. ಎಲ್ಲೆಡೆ ಟಾಕ್ ಆಫ್ ದಿ ಟೌನ್
ಅರವಿಂದ ಸಮೇತ ವೀರ ರಾಘವ ರೆಡ್ಡಿ ಸಿನಿಮಾ ಬಳಿಕ ಮಾಟಲ ಮಾಂತ್ರಿಕ ತ್ರಿವಿಕ್ರಮ್ ಶ್ರೀನಿವಾಸ್ ಒನ್ಸ್ ಅಗೈನ್ ಜೂನಿಯರ್ ಎನ್‌ಟಿಆರ್ ಜೊತೆ ಸಿನಿಮಾ ಮಾಡ್ತಿದ್ದಾರೆ. ಬರೋಬ್ಬರಿ 8 ವರ್ಷಗಳ ನಂತ್ರ ಒಂದಾಗ್ತಿರೋ ಈ ಜೋಡಿ, ಡಿವೈನ್ ಸಿನಿಮಾ ಮಾಡೋಕೆ ಮುಂದಾಗಿದೆ. ಅದ್ರ ಫಸ್ಟ್‌ಲುಕ್ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಆದ್ರೆ ಟೈಟಲ್ ಮಾತ್ರ ಸಸ್ಪೆನ್ಸ್ ಆಗಿದ್ದು, ಮುರುಗನ್ ಆಯುಧ ಹಾಗೂ ಬಾರ್ನ್ ಇನ್ ನಾರ್ತ್ ಅಂತಿರೋ ಚಿತ್ರತಂಡದ ನಡೆ ನೋಡಿದ್ರೆ ಇದು ಪಕ್ಕಾ ಲಾರ್ಡ್ ಮುರುಗನ್ ಚಿತ್ರ ಎನ್ನಲಾಗ್ತಿದೆ.
ಮುರುಗನ್ ಸೌತ್ ದೇವರು. ಅವರು ಹೇಗೆ ನಾರ್ತ್‌ನಲ್ಲಿ ಹುಟ್ಟುತ್ತಾರೆ ಅನ್ನೋ ವಿವಾದ, ಚರ್ಚೆಗಳು ಈಗಾಗ್ಲೇ ಭುಗಿಲೆದ್ದಿದ್ದು, ಅದ್ರ ಬೆನ್ನಲ್ಲೇ ತಮಿಳ್ ಮುರುಗನ್ ಟೈಟಲ್‌ನಲ್ಲೊಂದು ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿದೆ. ಇಂಟರೆಸ್ಟಿಂಗ್ ಅಂದ್ರೆ ಕಾಲಿವುಡ್‌ನ ಸೆನ್ಸೇಷನಲ್ ಡೈರೆಕ್ಟರ್ ವೆಟ್ರಿ ಮಾರನ್ ನಿರ್ದೇಶನದ ಈ ಚಿತ್ರದಲ್ಲಿ ಧನುಷ್ ಟೈಟಲ್ ರೋಲ್‌ನಲ್ಲಿ ಕಾಣಸಿಗಲಿದ್ದಾರೆ. ಅದಕ್ಕಾಗಿ ಸಿಕ್ಸ್‌ಪ್ಯಾಕ್ ಮಾಡಿಕೊಂಡು, ದೇಹವನ್ನ ಬಹಳ ಕಟ್ಟುಮಸ್ತಾಗಿ ಇಟ್ಕೊಂಡಿರೋ ಧನುಷ್, ಇಲ್ಲಿ ಪ್ರೊಟೆಕ್ಟರ್, ಕಿಂಗ್ ಅವತಾರದಲ್ಲಿ ಆನೆ ಏರಿ ಯುದ್ಧಭೂಮಿಯಲ್ಲಿ ಬರೋ ಚಕ್ರವರ್ತಿಯಂತೆ ಕಂಡಿದ್ದಾರೆ.
ಒಟ್ಟಾರೆ ಇಬ್ಬರೂ ಅದ್ಭುತ ಕಲಾವಿದರೇ.. ಇಬ್ಬರೂ ಸಹ ಮುರುಗನ್ ಕುರಿತ ಸಿನಿಮಾನೇ ಮಾಡ್ತಿದ್ದಾರೆ. ಆದ್ರೆ ಸೌತ್ ಇಂಡಿಯನ್ ಸ್ಟಾರ್‌ಗಳೇ ಆಗಿರೋ ಇವರುಗಳು ಒಂದೇ ಟೈಟಲ್‌ನಲ್ಲಿ ಸಿನಿಮಾ ಮಾಡ್ತಿರೋದು ಟಾಕ್ ಆಫ್ ದಿ ಟೌನ್ ಆಗಿದೆ. ಹಾಗಾಗಿ ಪರಸ್ಪರ ಮಾತುಕತೆ ಮೂಲಕ ಈ ಸಮಸ್ಯೆ ಎರಡೂ ತಂಡಗಳು ಬಗೆಹರಿಸಿಕೊಂಡು ಸಿನಿಮಾಗಳನ್ನ ಮಾಡುತ್ತವಾ ಅಥ್ವಾ ಬೇರೆ ಏನೆಲ್ಲಾ ವಿವಾದಗಳಿಗೆ ಇದು ದಾರಿ ಮಾಡಿಕೊಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಒಟ್ಟಾರೆ ಎರಡೂ ತಂಡಗಳ ಹೀರೋ-ಡೈರೆಕ್ಟರ್ ಕಾಂಬೋ ಬ್ಲಾಕ್‌ಬಸ್ಟರ್ ಹಿಟ್ ಕಾಂಬಿನೇಷನ್ ಆಗಿದ್ದು, ಚಿತ್ರಪ್ರೇಮಿಗಳಲ್ಲಿ ಅತೀವ ಕ್ಯೂರಿಯಾಸಿಟಿ ಹುಟ್ಟಿಹಾಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
