ಬೆಂಗಳೂರು: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಮಡೆನೂರು ಮನುಗೆ ಗಂಭೀರವಾದ ಅತ್ಯಾಚಾರ ಆರೋಪದಿಂದ ಮುಕ್ತಿ ಸಿಕ್ಕಿದೆ. ಅವರ ವಿರುದ್ಧ ದೂರು ದಾಖಲಿಸಿದ್ದ ಸಂತ್ರಸ್ತೆ ತಾನು ದಾಖಲಿಸಿದ್ದ ಕೇಸನ್ನು ಹಿಂಪಡೆದಿದ್ದಾರೆ. ಸಂತ್ರಸ್ತೆಯೊಂದಿಗೆ ಕಾಂಪ್ರಮೈಸ್ ಆಗಿ ಈ ಕೇಸ್‌ನ್ನು ಹಿಂಪಡೆದಿದ್ದಾರೆ ಎಂದು ತಿಳಿದುಬಂದಿದೆ.
2022ರ ನವೆಂಬರ್‌ನಿಂದ 2025ರ ಮೇ ತಿಂಗಳವರೆಗೆ ಮಡೆನೂರು ಮನು ತನ್ನ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದರು. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ, ಮನು ತನ್ನನ್ನು ಮದುವೆಯಾಗುವ ಭರವಸೆ ನೀಡಿ ಮೋಸ ಮಾಡಿದ್ದಾನೆ. ಜೊತೆಗೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಸಂತ್ರಸ್ತೆ ಉಲ್ಲೇಖಿಸಿದ್ದರು.
ಪ್ರಕರಣ ದಾಖಲಾದ ನಂತರ, ಮಡೆನೂರು ಮನು ತಲೆಮರೆಸಿಕೊಂಡಿದ್ದ. ಆದರೆ, ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸಿ ಅವನನ್ನು ಬಂಧಿಸಿದ್ದರು. ಬಂಧನದ ನಂತರ, ಮನು ಜೈಲು ಸೇರಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆದರೆ, ಈಗ ಸಂತ್ರಸ್ತೆ ಕೇಸನ್ನು ಹಿಂಪಡೆದಿದ್ದಾರೆ.