ಅಪ್ಪು ಅಚ್ಚುಮೆಚ್ಚಿನ ಅಕಿರ ಅನೀಶ್ ಮತ್ತೊಮ್ಮೆ ಡೈರೆಕ್ಷನ್‌ಗೆ ಕೈ ಹಾಕಿದ್ದಾರೆ. ಕನ್ನಡದ ಜೊತೆ ಪಕ್ಕದ ಟಾಲಿವುಡ್‌ನಲ್ಲೂ ಹೀರೋ ಆಗಿ ಲಾಂಚ್ ಆಗ್ತಿರೋ ಅನೀಶ್, ಜನ್ ಝೀ ಹುಡುಗರ ಓವರ್ ಟಾರ್ಚರ್ ಹಾಗೂ ಪ್ರೆಶರ್‌ಗಳ ಕುರಿತ ಕಥಾನಕ ಇದಾಗಿದೆ. ಯೂತ್‌ಗೆ ಕನೆಕ್ಟ್ ಅಗೋ ಕಂಟೆಂಟ್ ಇರೋ ಲವ್ ಓಟಿಪಿಯ ಮತ್ತೆರಡು ಸಾಂಗ್ಸ್ ರಿವೀಲ್ ಆಗಿವೆ.
- ಜನ್ ಝೀ ಹುಡ್ಗರ ಓವರ್ ಟಾರ್ಚರ್ ಪ್ರೆಶರ್ ಗೊತ್ತಾ..?
- ಯೂತ್‌ಫುಲ್ ಕಂಟೆಂಟ್ ಜೊತೆ ಅನೀಶ್ ಈಸ್ ಬ್ಯಾಕ್
- ಡ್ಯಾನ್ಸಿಂಗ್ ನಂಬರ್ ಜೊತೆ ಪ್ಯಾಥೋ ಸಾಂಗ್ ಬಿಡುಗಡೆ
- ಫಿಲ್ಮ್ ರಿಪೋರ್ಟರ್ಸ್ ಜೊತೆ ಟೀಂ ಲವ್ OTP ಕ್ರಿಕೆಟ್..!
ಕನ್ನಡ ಚಿತ್ರರಂಗದ ಭರವಸೆಯ ಹಾಗು ಪ್ರತಿಭಾನ್ವಿತ ನಾಯಕ ಕಮ್ ನಿರ್ದೇಶಕ ಅನೀಶ್ ತೇಜೇಶ್ವರ್ ನಟಿಸಿ ನಿರ್ದೇಶಿಸುತ್ತಿರುವ ʻಲವ್ ಒಟಿಪಿʼ ಚಿತ್ರ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡಿ ಸುದ್ದಿ ಆಗ್ತಿದೆ. ಈ ಹಿಂದೆ ಅನೀಶ್ ಅಭಿನಯಿಸಿದ್ದ ಆರಾಮ್ ಅರವಿಂದ ಸ್ವಾಮಿ ಉತ್ತಮ ಪ್ರತಿಕ್ರಿಯೆ ಪಡೆದು ಪ್ರೇಕ್ಷಕರ ಮನ ಗೆದಿತ್ತು.. ಯಶಸ್ಸಿನ ಬೆನ್ನು ಹತ್ತಿರೋ ಅನೀಶ್ ಗೆ ಲವ್ OTP ಸಕ್ಸಸ್ ಅನಿವಾರ್ಯತೆ ಇದೆ. ಇತೀಚೆಗಷ್ಟೇ ಲವ್ otp ಚಿತ್ರದ ಟ್ರೈಲರ್.. ಎರಡು ಹಾಡುಗಳು ಬಿಡುಗಡೆ ಆಗಿದ್ದು ಪ್ರೀತಿ, ಪ್ರೇಮ, ಹೊಡೆದಾಟ, ಬಡಿದಾಟ, ಕ್ರಿಕೆಟ್, ಸ್ನೇಹ, ಅಪ್ಪ-ಮಗನ ಗಲಾಟೆ, ಕೌಟಂಬಿಕ ಕಥನ, ಪೊಲೀಸ್ ಠಾಣೆ ಸೇರಿದಂತೆ ಕಮರ್ಷಿಯಲ್ ಚಿತ್ರಕ್ಕಿರಬೇಕಾದ ಎಲ್ಲಾ ಅಂಶಗಳು ಚಿತ್ರದಲ್ಲಿದೆ ಅನ್ನೋದನ್ನ ಅನೀಶ್ ಪ್ರೋವ್ ಮಾಡಿದ್ದಾರೆ.
ಸದ್ಯ ಬಿಡುಗಡೆ ಆಗಿರುವ ಪ್ಯಾತೋ ಸಾಂಗ್ ನಾನೇ ಬೇಡವಾ ಪ್ರೀತಿ ಬೇಡವಾ ಸಾಹಿತ್ಯದ ಈ ಹಾಡನ್ನು ಶ್ರೀಲಕ್ಷ್ಮಿ ಬೆಳಮನ್ನು ಹಾಡಿದ್ದು ಆನಂದ್ ರಾಜವಿಕ್ರಮ್ ಮ್ಯೂಸಿಕ್ ಕೊಟ್ಟಿದ್ದಾರೆ.. ಇನ್ನು ನಾಗಾರ್ಜುನ ಶರ್ಮ ಸಾಹಿತ್ಯವಂತು ಕಮಾಲ್ ಮಾಡಿದೆ. ಈ ಹಾಡು ಕನ್ನಡ, ತೆಲುಗು ಹಾಗು ತಮಿಳಿನಲ್ಲಿ ಬಿಡುಗಡೆ ಆಗಿ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಬ್ರೇಕ್ ಅಪ್ ಆದೋರಿಗೆ.. ಲವ್ ನಲ್ಲಿ ಸೋಲು ಕಂಡವರಿಗೆ ಈ ಹಾಡು ಕಿಕ್ ಕೊಡ್ತಿದೆ.
ಇನ್ನು ಈ ಹಿಂದೆ ರಿಲೀಸ್ ಆಗಿದ್ದ ಯೋ ಯೋ ಸಾಂಗ್ ಗೆ ಸಕತ್ ಸ್ಟೆಪ್ಸ್ ಹಾಕಿ ರೀಲ್ಸ್ ಪ್ರಿಯರು ಇನ್ಸ್ಟಾಗ್ರಾಮ್ ನಲ್ಲಿ ಎಂಜಾಯ್ ಮಾಡಿದ್ರು.
ಅಂದಹಾಗೆ ಒಟಿಪಿ ಅಂದರೆ ಓವರ್ ಟಾರ್ಚರ್ ಪ್ರೆಷರ್ ಎನ್ನುವ ಅಡಿಬರಹವಿದೆ. ಈಗಿನ Gen Z ಪಿರಿಯಡ್ ನವರ ಲವ್ life ಹೇಗಿರುತ್ತೆ..? ಇದರಿಂದ ಏನೆಲ್ಲ ಸಮಸ್ಯೆ ಎದುರಿಸುತ್ತಾರೆ..?ಎಂಬುದರ ಒನ್ ಲೈನ್ ಸ್ಟೋರಿ ಈ ಲವ್ OTP ಸಿನಿಮಾ. ಹಲವು ಧಾರಾವಾಹಿಯಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದ ಪ್ರತಿಭಾನ್ವಿತ ನಟಿ ಪ್ರಮೋದಿನಿ ಈ ಚಿತ್ರದ ಮೂಲಕ ಕನ್ನಡದ ಪೇಕ್ಷಕರ ಮುಂದೆ ಮತ್ತೊಮ್ಮೆ ಬರುತ್ತಿದ್ದಾರೆ. ಜೊತೆಗೆ ಜಾನ್ವಿ ಕೂಡ ಅನೀಶ್ ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಇಂಟೆರೆಸ್ಟಿಂಗ್ ಅಂದ್ರೆ ಚಿತ್ರದಲ್ಲಿ ಅನೀಶ್ ಗೆ ತಂದೆಯಾಗಿ ತೆಲುಗು ನಟ ರಾಜೀವ್ ಕನಕಲ ಅಭಿನಯಿಸಿದ್ದಾರೆ. ಟಾಲಿವುಡ್ ನಲ್ಲಿ ನಟ.. ನಿರ್ದೇಶಕ.. ನಿರ್ಮಾಪಕರಾಗಿ ಹೆಸರು ಗಳಿಸಿರುವ ರಾಜೀವ್ ಕನ್ನಡಲ್ಲೇ ಪಾದಾರ್ಪಣೆ ಮಾಡಿದ್ದು ಕುತೂಹಲ ಮೂಡಿಸಿದೆ. ಅಂದಹಾಗೆ ಈಗಾಗಲೇ ಚಿತ್ರದ ಪ್ರಚಾರ ಕಾರ್ಯ ಶುರುವಾಗಿದ್ದು ಇತೀಚೆಗಷ್ಟೇ ಸಿನಿಮಾ ಪತ್ರಕರ್ತರ ಜೊತೆ ಲವ್ OTP ಚಿತ್ರತಂಡ ಕ್ರಿಕೆಟ್ ಆಡುವ ಮೂಲಕ ಹೊಸದಾಗಿ ಪ್ರಚಾರಕ್ಕೆ ಕಿಕ್ ಸ್ಟಾರ್ ಕೊಟ್ಟಿದ್ರು.
ಪುಷ್ಪ ಮುನಿರೆಡ್ಡಿ ಅರ್ಪಿಸಿ ಭಾವಪ್ರೀತ ಪ್ರೊಡಕ್ಷನ್ ಸಂಸ್ಥೆಯಡಿ ವಿಜಯ್ ರೆಡ್ಡಿ ಬಂಡವಾಳ ಹೂಡಿದ್ದಾರೆ. ಇನ್ನುಳಿದಂತೆ ರವಿ ಭಟ್, ಪ್ರಮೋದಿನಿ, ತುಳಸಿ, ಚೇತನ್, ಸ್ವರೂಪಿಣಿ ಮುಂತಾದವರು ತಾರಾಗಣದಲಿದ್ದಾರೆ. ನವೆಂಬರ್ 14ರಂದು ಕನ್ನಡ.. ತೆಲುಗು.. ತಮಿಳಿನಲ್ಲಿ ಲವ್ otp ಗ್ರಾಂಡ್ ಓಪನಿಂಗ್ ಪಡೆಯೋಕೆ ಸಿದ್ಧತೆ ನಡೆಸಿದೆ. ಲಾಸ್ಟ್ ಬಟ್ ನಾಟ್ ಲೀಸ್ಟ್ Gen z ಲವರ್ಸ್ ಈ ಸಿನಿಮಾ ನೋಡ್ಲೇಬೇಕು.
ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





