ಅಸುರನ್ ಸಿನಿಮಾದಲ್ಲಿ ಧನುಷ್ ಮಾಡಿದಂತಹ ಅಭಿನಯ ಹಾಗೂ ಆ ಒಂದು ದೃಶ್ಯ ಲ್ಯಾಂಡ್‌ಲಾರ್ಡ್ ಸಿನಿಮಾದಲ್ಲಿ ದುನಿಯಾ ವಿಜಯ್ ಅವರನ್ನ ನೆನಪಿಸ್ತಿದೆ. ಕ್ರಾಂತಿಯ ಕಿಡಿ ಹೊತ್ತಿಸಿರೋ ಲ್ಯಾಂಡ್‌ಲಾರ್ಡ್‌ನಲ್ಲಿ ಹುಬ್ಬೇರಿಸೋ, ಅದೆಷ್ಟೋ ಮಂದಿ ಶಾಕ್ ಆಗುವ ದೃಶ್ಯವಿದೆ. ಅದನ್ನ ಎಕ್ಸ್‌ಕ್ಲೂಸಿವ್ ಆಗಿ ತೋರಿಸುವುದರ ಜೊತೆಗೆ ಅದ್ರ ಹಿನ್ನೆಲೆ ಮುನ್ನೆಲೆ ಕೂಡ ಹೇಳ್ತೀವಿ.
ದುನಿಯಾ ವಿಜಯ್..ರಚಿತಾ ರಾಮ್..ರಾಜ್ ಬಿ ಶೆಟ್ಟಿ..ರಿತನ್ಯಾ ಅಭಿನಯಿಸಿರುವ ಲ್ಯಾಂಡ್ ಲಾರ್ಡ್ ಸಿನಿಮಾ ಬಿಡುಗಡೆ ಆಗಿ ಅಬ್ಬರಿಸುತ್ತಿದೆ. ಲ್ಯಾಂಡ್ ಲಾರ್ಡ್ ಅಂದರೆ ಬರೀ ಒಬ್ಬ ಜಮೀನುದಾರನ ಕಥೆ ಅಂತ ಭಾವಿಸಿದ್ದೀರಾ? ಇಲ್ಲ. ಅಸುರನ್‌ನಲ್ಲಿ ಧನುಷ್ ನಿಶ್ಶಬ್ದ ಕ್ರಾಂತಿ ಮಾಡಿದ್ರೆ ಇಲ್ಲಿ ದುನಿಯಾ ವಿಜಯ್ ಸಿಡಿಲಿನಂತೆ ಸಿಡಿಯುತ್ತಾರೆ. ಚಪ್ಪಲಿ ಹಾರ ಹಾಕಿಕೊಂಡು ನಿಂತಿರುವ ಆ ಒಂದು ದೃಶ್ಯ ಅದು ಅವಮಾನವಲ್ಲ, ಅದು ಪ್ರತಿಭಟನೆಯ ಘೋಷಣೆ. ಒಬ್ಬ ಮಾನವನ ಗೌರವವನ್ನು ತುಳಿಯುವ ವ್ಯವಸ್ಥೆಗೆ ಕೊಟ್ಟ ಪ್ರತ್ಯುತ್ತರ ಅದು. ಆ ಸನ್ನಿವೇಶ ನೋಡಿದವರು ಥಿಯೇಟರ್‌ನಲ್ಲೇ ನಿಶ್ಚಲರಾಗ್ತಾರೆ. ಕೆಲವರಿಗೆ ಕಣ್ಣೀರು, ಕೆಲವರಿಗೆ ರೋಮಾಂಚನ.

ಅಂದು ಧನುಷ್..ಇಂದು ವಿಜಯ್..ಅದೇ ಕ್ರಾಂತಿ ಹಾದಿ
ಚಪ್ಪಲಿ ಹಾರ ಹಾಕಿಕೊಂಡು ನಿಂತ ದುನಿಯಾ ವಿಜಯ್..!!
ಈ ಚಿತ್ರದಲ್ಲಿ ವಿಜಯ್ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡ ರೀತಿಯೇ ಬೇರೆ ಲೆವೆಲ್. ಕೊರಳಿಗೆ ಚಪ್ಪಲಿ ಹಾಕಿಕೊಂಡು ನಿಂತ ಆ ಕ್ಷಣ ಅದು ಕೇವಲ ಪಾತ್ರದ ಬೇಸರವಲ್ಲ, ಅದು ಶತಮಾನಗಳ ದೌರ್ಜನ್ಯಗಳ ಭಾರ. “ನನ್ನನ್ನು ತುಳಿಯೋದ್ರಲ್ಲಿ ನೀವು ದೊಡ್ಡವರು ಆಗ್ತೀರಾ?” ಅನ್ನೋ ಮೌನ ಪ್ರಶ್ನೆ ಆ ಕಣ್ಣಲ್ಲಿ ಕಾಣಿಸುತ್ತದೆ. ಡೈಲಾಗ್‌ಗಿಂತ ಮುಖಭಾವನೇ ಹೆಚ್ಚು ಮಾತಾಡುತ್ತದೆ. ಇದೇ ಕಾರಣಕ್ಕೆ ಲ್ಯಾಂಡ್ ಲಾರ್ಡ್ ಒಂದು ಸಿನೆಮಾ ಆಗದೆ ಜನರ ಸೆಂಟಿಮೆಂಟ್ ಗೆ ಹೊಡೆದಿದೆ.

ಕ್ರಾಂತಿಯ ಕಿಡಿ ಹೊತ್ತಿಸಿದ ಈ ಚಿತ್ರದಲ್ಲಿ ಪ್ರತೀ ಫ್ರೇಮ್‌ಗೆ ಬೆಂಕಿ ಇದೆ. ಬಡವನ ಬದುಕು, ಜಮೀನಿನ ರಾಜಕೀಯ, ಮಾನವೀಯ ಅವಮಾನ ಎಲ್ಲವೂ ರಾ ಅಂಡ್ ರಿಯಲ್. ನಿರ್ದೇಶಕ ಜಡೇಶ್ ಹಂಪಿ ಯಾವುದೇ ಶುಗರ್ ಕೋಟ್ ಇಲ್ಲದೇ ಕಠಿಣ ಸತ್ಯ ತೋರಿಸಿದ್ದಾರೆ. ಕೆಲ ದೃಶ್ಯಗಳು ನಿಮ್ಮನ್ನು ಅಸಹನೀಯವಾಗಿ ಕಾಡುತ್ತವೆ ಆದರೆ ಅದೇ ಚಿತ್ರಕ್ಕೆ ಶಕ್ತಿ. ಶೋಷಿತನ ನೋವು ನಿಮ್ಮ ಹೃದಯಕ್ಕೆ ನೇರವಾಗಿ ತಲುಪುತ್ತದೆ.

ಲ್ಯಾಂಡ್‌ಲಾರ್ಡ್ ಬರೀ ಸಿನಿಮಾ ಅಲ್ಲ..ಸಂವಿಧಾನದ ಕಿಡಿ
ಇಂದಿಗೂ ಶೋಷಣೆಗೆ ಒಳಗಾಗ್ತಿರೋರ ಕೈಗನ್ನಡಿ ಈ ಚಿತ್ರ..!
ತಮಿಳು ಸಿನಿಮಾ ಅಸುರನ್‌ನಲ್ಲಿ ಧನುಷ್ ಕಾಲಿಗೆ ಬೀಳುವ ದೃಶ್ಯ ಹೇಗೆ ದೇಶವನ್ನೇ ಕದಲಿಸಿತ್ತೋ..ಇಲ್ಲಿ ಚಪ್ಪಲಿ ಹಾರ ದೃಶ್ಯವೂ ಅಷ್ಟೇ ವೈರಲ್ ಆಗುವ ಪವರ್ ಹೊಂದಿದೆ. ಅದ್ರಲ್ಲೂ ಮಾಸ್ತಿ ಡೈಲಾಗ್ಸ್ ಕೇಳುಗರಿಗೆ ಪವರ್ ಪಂಚ್ ಕೆಪಿಡ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಚರ್ಚೆ ಜೋರಾಗಿದೆ. ಇದು ಸಿನಿಮಾ ಅಲ್ವೇ, ನಮ್ಮ ಸಮಾಜದ ಕನ್ನಡಿ ಅಂತ ನೆಟಿಜನ್ಸ್ ಕಾಮೆಂಟ್ ಮಾಡ್ತಿದ್ದಾರೆ. ಪ್ರತೀ ಸನ್ನಿವೇಶಕ್ಕೂ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಸಿಡಿಲು ಹೊಡೆಯುವಂತೆ ತಟ್ಟುತ್ತದೆ ಅದ್ರಲ್ಲೂ ಥಿಯೇಟರ್ ಅನುಭವವೇ ಬೇರೆ.

ಒಟ್ಟಿನಲ್ಲಿ ಲ್ಯಾಂಡ್ ಲಾರ್ಡ್ ಬರೀ ಎಂಟರ್ಟೈನ್‌ಮೆಂಟ್ ಪ್ಯಾಕೇಜ್ ಅಲ್ಲ ಇದು ಸಂವಿಧಾನದ ಕಿಡಿ, ಇದು ಶೋಷಣೆಯ ವಿರುದ್ಧದ ಘೋಷಣೆ. ದುನಿಯಾ ವಿಜಯ್ ಮತ್ತೊಮ್ಮೆ ತಮ್ಮ ಮಾಸ್ ಇಮೇಜ್ ಮೀರಿ ಪರಫಾರ್ಮರ್ ಆಗಿ ಹೊರಹೊಮ್ಮಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





