ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಜೊತೆ ಜನ ನಾಯಗನ್ ಸಿನಿಮಾ ಅನೌನ್ಸ್ ಆಗ್ತಿದ್ದಂತೆ ಕನ್ನಡದ ಬಿಗ್ಗೆಸ್ಟ್ ಪ್ರೊಡಕ್ಷನ್ ಹೌಸ್ ಕೆವಿಎನ್ ಸಂಸ್ಥೆ ಮೇಲೆ IT ರೇಡ್ ಆಯ್ತು. ಸಾಮಾನ್ಯವಾಗಿ ಐಟಿ ಕಣ್ಣಿಗೆ ಬೀಳುವ ನಿರ್ಮಾಪಕರುಗಳು ಸೈಲೆಂಟ್ ಆಗಿಬಿಡ್ತಾರೆ. ಆದ್ರೆ ಇಲ್ಲಿ ಆಗ್ತಿರೋದೇ ಬೇರೆ. ಒಂದಲ್ಲ ಎರಡಲ್ಲ ಐದು ಭಾಷೆಗಳಲ್ಲಿ ಏಳು ಪ್ಯಾನ್ ಇಂಡಿಯಾ ಚಿತ್ರಗಳು ತಯಾರಾಗ್ತಿವೆ.
ಯಶ್, ಧ್ರುವ, ವಿಜಯ್, ಚಿರು, ಅಕ್ಷಯ್ ಜೊತೆ ಸಿನಿಮಾ..!
ಕೆವಿಎನ್ ಪ್ರೊಡಕ್ಷನ್ಸ್ ಇಡೀ ಭಾರತೀಯ ಚಿತ್ರರಂಗವೇ ಕನ್ನಡದ ಈ ನಿರ್ಮಾಣ ಸಂಸ್ಥೆಯತ್ತ ತಿರುಗಿ ನೋಡ್ತಿದೆ. ಅದಕ್ಕೆ ಕಾರಣ ಆ ಸಂಸ್ಥೆಯಿಂದ ಅನೌನ್ಸ್ ಆಗಿರೋ ಸಿನಿಮಾಗಳು. ಹೌದು.. ಇದ್ರಿಂದ ಒಂದಲ್ಲ ಎರಡಲ್ಲ ಬರೋಬ್ಬರಿ ಏಳು ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ಗಳು ನಡೆಯುತ್ತಿವೆ. ಅದೂ ಕನ್ನಡದ ಜೊತೆ ಐದು ಪ್ರಮುಖ ಇಂಡಿಯನ್ ಲಾಂಗ್ವೇಜಸ್‌ನಲ್ಲಿ ಅನ್ನೋದು ಇಂಟರೆಸ್ಟಿಂಗ್.
ಇಂಡಿಯನ್ ಪ್ರಿಸ್ಟೀಜ್ ಕಂಪೆನಿಯ ಸಿಇಓ ಆಗಿದ್ದಂತಹ ಕೆ ವೆಂಕಟ್ ನಾರಾಯಣ್, ಮೊದಲಿಗೆ ಸಖತ್ ಹಾಗೂ ಬೈಟು ಲವ್ ಸಿನಿಮಾಗಳಿಂದ ಚಿತ್ರರಂಗದ ಆಳ, ಅಗಲ ಅರಿತರು. ನಂತ್ರ ಡಿಸ್ಟ್ರಿಬ್ಯೂಷನ್ ಕೂಡ ಶುರು ಮಾಡಿ, ಪರಭಾಷಾ ಸೂಪರ್ ಸ್ಟಾರ್‌ಗಳ ಸಾಲು ಸಾಲು ಸಿನಿಮಾಗಳನ್ನ ಕರ್ನಾಟಕದಲ್ಲಿ ವಿತರಿಸೋ ಮೂಲಕ ಅವರುಗಳ ವಿಶ್ವಾಸ ಗಳಿಸಿದರು. ಈಗ ಸುಮಾರು ಏಳೆಂಟು ಬಿಗ್ ಬಜೆಟ್ ಚಿತ್ರಗಳನ್ನ ಇವರು ನಿರ್ಮಾಣ ಮಾಡ್ತಿದ್ದು, ಎಲ್ಲಕ್ಕೂ ಸಾವಿರಾರು ಕೋಟಿ ಹಣ ಹೂಡಿಕೆ ಮಾಡಿರೋದು ಎಲ್ಲರ ಹುಬ್ಬೇರಿಸುವಂತ ವಿಷಯವಾಗಿದೆ.
ಲಿವಿಂಗ್ ಲೆಜೆಂಡ್ ಶಿವಣ್ಣ ಜೊತೆಗೂ ನ್ಯೂ ವೆಂಚರ್ ಸ್ಟಾರ್ಟ್
ರಾಕಿಂಗ್ ಸ್ಟಾರ್ ಯಶ್‌ರ ಟಾಕ್ಸಿಕ್ ಹಾಗೂ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾಗಳು ಇದೇ ಕೆವಿಎನ್ ಬ್ಯಾನರ್‌ನಡಿ ತಯಾರಾಗ್ತಿವೆ. ಅದು ಗೊತ್ತಿರೋ ವಿಷಯವೇ. ಆದ್ರೀಗ ಕನ್ನಡದ ಲಿವಿಂಗ್ ಲೆಜೆಂಡ್ ಶಿವರಾಜ್‌ಕುಮಾರ್ ಜೊತೆ ಮತ್ತೊಂದು ನ್ಯೂ ಪ್ರಾಜೆಕ್ಟ್ ಸರಳವಾಗಿ ಮುಹೂರ್ತ ಕಂಡಿದೆ. ಪವನ್ ಒಡೆಯರ್ ಕೂಡ ಇದಕ್ಕೆ ಕೈ ಜೋಡಿಸಿದ್ದು, ಮಹಾಲಕ್ಷ್ಮೀ ಲೇಔಟ್‌ನಲ್ಲಿರೋ ಪಂಚಮುಖಿ ಗಣಪತಿ ಆಲಯದಲ್ಲಿ ಸಿನಿಮಾಗೆ ಚಾಲನೆ ನೀಡಲಾಗಿದೆ.
ಇವಲ್ಲದೆ, ದಳಪತಿ ವಿಜಯ್ ಜೊತೆಗಿನ ಜನ ನಾಯಗನ್, ಮಲಯಾಳಂನಲ್ಲಿ ಸೆಟ್ಟೇರಿರೋ ಮಂಜುಮ್ಮೆಲ್ ಬಾಯ್ಸ್ ನಿರ್ದೇಶಕರ ಜೊತೆಗಿನ ಬಾಲನ್, ಮೆಗಾಸ್ಟಾರ್ ಚಿರಂಜೀವಿ ಜೊತೆಗಿನ ಮೆಗಾ 158, ಬಾಲಿವುಡ್‌ನಲ್ಲಿ ಸೆಟ್ಟೇರಿರುವ ಅಕ್ಷಯ್ ಕುಮಾರ್- ಸೈಫ್ ಅಲಿ ಖಾನ್ ಅಭಿನಯದ ಹೈವಾನ್ ಹೀಗೆ ಸಾಲು ಸಾಲು ಪ್ರಾಜೆಕ್ಟ್‌ಗಳಿವೆ. ಇನ್ನು ಕಾರ್ತಿಯ ಕೈದಿ-2 ನಿರ್ಮಾಣಕ್ಕೂ ಕೆವಿಎನ್ ಸಂಸ್ಥೆಯೇ ಹಣ ಹೂಡಿಕೆ ಮಾಡಲಿದೆ ಎನ್ನಲಾಗ್ತಿದೆ.
ಜನನಾಯಗನ್ ಸಿನಿಮಾ ಅನೌನ್ಸ್ ಆಗ್ತಿದ್ದಂತೆ ಈ ಕೆವಿಎನ್ ಸಂಸ್ಥೆ ಮೇಲೆ ಐಟಿ ರೇಡ್ ನಡೆಯಿತು. ಸಾಮಾನ್ಯವಾಗಿ ಐಟಿ ಆಫೀಸರ್ಸ್ ಕಣ್ಣಿಗೆ ಬೀಳುವ ಬ್ಯುಸಿನೆಸ್‌ಮ್ಯಾನ್‌ಗಳು ಸೈಲೆಂಟ್ ಆಗಿಬಿಡ್ತಾರೆ. ಆದ್ರೆ ಕೆ ವೆಂಕಟ್ ನಾರಾಯಣ್ ಮಾತ್ರ ಅದಕ್ಕೆ ತದ್ವಿರುದ್ಧ. ಐಟಿ ರೇಡ್ ಬಳಿಕವೇ ಸಾಲು ಸಾಲು ಚಿತ್ರಗಳು ಅನೌನ್ಸ್ ಆಗಿವೆ. ಈ ಎಲ್ಲಾ ಬೆಳವಣಿಗೆಗಳಿಂದ, ಇವರು ದುಡ್ಡನ್ನು ಎಲ್ಲಿಂದ ತಂದು ಸುರಿಯುತ್ತಿದ್ದಾರೆ ಗುರು ಅಂತ ಜನ ಹುಬ್ಬೇರಿಸಿ ಮಾತನಾಡಿಕೊಳ್ಳುವಂತಾಗಿದೆ. ಜನರಷ್ಟೇ ಅಲ್ಲ, ನಿರ್ಮಾಣ ಸಂಸ್ಥೆಗಳು ಕೂಡ ನಿಟ್ಟುಸಿರು ಬಿಡ್ತಿವೆ.