ಕೆಜಿಎಫ್ ಕಿಂಗ್ ರಾಕಿಭಾಯ್ ಯಶ್ ತಾಯಿ ಪುಷ್ಪ ಕೂಡ ಈಗ ಪ್ರೊಡ್ಯೂಸರ್. ತಮ್ಮ ಚೊಚ್ಚಲ ನಿರ್ಮಾಣದ ಕೊತ್ತಲವಾಡಿ ಸಿನಿಮಾದ ಟ್ರೈಲರ್ ಲಾಂಚ್ ಮಾಡಿದ್ದಾರೆ. ಅಬ್ಬಬ್ಬಾ.. ಸಿಕ್ಕಾಪಟ್ಟೆ ಮಾಸ್ ಆಗಿರೋ ಪೃಥ್ವಿ ಅಂಬರ್-ಕಾವ್ಯ ಶೈವಾ ಜೋಡಿಯ ಕೊತ್ತಲವಾಡಿ, ಮರಳು ದಂಧೆ, ಲೋಕಲ್ ವ್ಯವಸ್ಥೆ ಹಾಗೂ ಪೊಲೀಸ್ ವ್ಯವಸ್ಥೆಯಿಂದ ಕೊತ ಕೊತ ಅಂತಿದೆ.
- ಮರಳು ದಂಧೆ & ವ್ಯವಸ್ಥೆ.. ‘ಕೊತ್ತಲವಾಡಿ’ ಕೊತ ಕೊತ
- ಪೃಥ್ವಿ ಅಂಬರ್ ಜೊತೆ ಕಾವ್ಯ, ಗೋಪಾಲಕೃಷ್ಣ, ರಾಜೇಶ್
- ಅಂದು ಯಶ್ ಕಿರಾತಕ.. ಇಂದು ಪುಷ್ಪ ಕೊತ್ತಲವಾಡಿ
- ನಿರ್ಮಾಣಕ್ಕೆ ಯಶ್ ಸ್ಫೂರ್ತಿ.. ಚಿತ್ರದಲ್ಲಿ ಯಶ್ ಏಕೆ..?
ಇದು ಲೇಟೆಸ್ಟ್ ಆಗಿ ರಿಲೀಸ್ ಆಗಿರೋ ಕೊತ್ತಲವಾಡಿ ಚಿತ್ರದ ಟ್ರೈಲರ್ ಝಲಕ್. ಟೀಸರ್ ಹಾಗೂ ಸಾಂಗ್ಸ್‌ನಿಂದ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದ ಕೊತ್ತಲವಾಡಿ, ಟ್ರೈಲರ್‌ನಿಂದ ಸಖತ್ ಪ್ರಾಮಿಸಿಂಗ್ ಸಿನಿಮಾ ಅನಿಸಿಕೊಂಡಿದೆ. ಹೌದು.. ಶ್ರೀರಾಜ್ ನಿರ್ದೇಶನದ ಈ ಸಿನಿಮಾಗೆ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಬಂಡವಾಳ ಹೂಡುವ ಮೂಲಕ ನಿರ್ಮಾಪಕಿ ಆಗಿ ಬಡ್ತಿ ಪಡೆಯುತ್ತಿದ್ದಾರೆ.
ಪೃಥ್ವಿ ಅಂಬರ್ ಹಾಗೂ ಕಾವ್ಯ ಶೈವಾ ಜೋಡಿಯಾಗಿ ನಟಿಸಿರೋ ಈ ಸಿನಿಮಾ ಕಂಪ್ಲೀಟ್ ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ತಯಾರಾಗಿದೆ. ರಾಜೇಶ್ ನಟರಂಗ ಹಾಗೂ ಅವಿನಾಶ್ ಪೊಲೀಸ್ ಕಾಪ್‌ಗಳಾಗಿ ಕಾಣಸಿಗಲಿದ್ದು, ಪೃಥ್ವಿ ಬಳಿಕ ಗೋಪಾಲಕೃಷ್ಣ ದೇಶಪಾಂಡೆ ಈ ಚಿತ್ರದ ಸೆಕೆಂಡ್ ಹೀರೋ ಅನಿಸಿಕೊಂಡಿದ್ದಾರೆ. ಹಳ್ಳಿಯೊಂದರಲ್ಲಿ ನಡೆಯೋ ಮರಳು ದಂಧೆ, ಆ ಊರಿನ ದೊಡ್ಡ ಮನುಷ್ಯ, ಲೋಕಲ್ ಪಾಲಿಟಿಕ್ಸ್, ಪೊಲೀಸ್ ವ್ಯವಸ್ಥೆ ಹೀಗೆ ಸಣ್ಣದೊಂದು ಎಳೆಯನ್ನ ಇಟ್ಕೊಂಡು ಈ ಚಿತ್ರವನ್ನು ಹೆಣೆಯಲಾಗಿದೆ.
ಮೇಕಿಂಗ್ ನೆಕ್ಸ್ಟ್ ಲೆವೆಲ್‌ಗಿದ್ದು, ಪೃಥ್ವಿ ಅಂಬರ್ ಸಿಕ್ಕಾಪಟ್ಟೆ ಮಾಸ್ ಲುಕ್‌ನಲ್ಲಿ ಕಮಾಲ್ ಮಾಡ್ತಿದ್ದಾರೆ. ಇಲ್ಲಿ ಬದುಕಿಗಾಗಿ ಹೊಡೆದಾಟ, ಬಡಿದಾಟಗಳ ಜೊತೆ ನವಿರಾದ ಪ್ರೇಮಕಥೆ ಹಾಗೂ ಸಿಕ್ಕಾಪಟ್ಟೆ ಫ್ಯಾಮಿಲಿ ಎಮೋಷನ್ಸ್ ಅಡಗಿದೆ. ಸಿನಿಮಾ ಇದೇ ಆಗಸ್ಟ್ 1ಕ್ಕೆ ತೆರೆಗೆ ಬರ್ತಿದ್ದು, ಟೀಂ ಸಖತ್ ಕಾನ್ಫಿಡೆನ್ಸ್‌ನಿಂದ ಗೆಲ್ಲೋ ನಿರೀಕ್ಷೆಯಲ್ಲಿದೆ.
ಇನ್ನು ಎಲ್ಲಾ ಓಕೆ ಚಿತ್ರದಲ್ಲಿ ಯಶ್ ಯಾಕೆ ಅಂದಿದ್ದಕ್ಕೆ ಖಡಕ್ ಉತ್ತರ ಕೊಟ್ಟ ಪ್ರೊಡ್ಯೂಸರ್ ಪುಷ್ಪ, ನಾಯಕನಟಿ ಯಶ್ ಫ್ಯಾನ್. ಹಾಗಾಗಿ ಯಶ್ ಚಿತ್ರವನ್ನು ಚಿತ್ರದಲ್ಲಿ ಬಳಸಿದ್ವಿ ಎಂದಿದ್ದಾರೆ. ಅಲ್ಲದೆ, ಯಶ್‌ಗೆ ಹೇಳದೆ ಏನೂ ಇಲ್ಲ, ಎಲ್ಲವೂ ಯಶ್‌ಗೆ ಹೇಳಿಯೇ ಮಾಡಿರೋದಾಗಿ ಉಲ್ಟಾ ಹೊಡೆದ ಪುಷ್ಪಮ್ಮ, ನನಗೆ ಫಿಲ್ಮ್ ಪ್ರೊಡ್ಯೂಸ್ ಮಾಡೋಕೆ ನನ್ನ ಮಗನೇ ಇನ್ಸ್‌ಪಿರೇಷನ್ ಎಂದರು. ಮನೆಯಲ್ಲಿರೋ ಯಶ್ ಬಾಸ್ ಬಗ್ಗೆ ಪುಷ್ಪಮ್ಮ ಆಡಿದ ಮಾತುಗಳನ್ನ ನೀವೊಮ್ಮೆ ಕೇಳಿ.
ಪುಷ್ಪ ಅವರ ಮಾತುಗಳು ಹೇಗೆ ವೈರಲ್ ಆಗ್ತಿದೆಯೋ, ಈ ಕೊತ್ತಲವಾಡಿ ಕಂಟೆಂಟ್ ಕೂಡ ಇಂಪ್ರೆಸ್ಸೀವ್ ಆಗಿದ್ದು, ಸಿನಿಮಾ ನೋಡುವ ಕಾತುರತೆ ಹೆಚ್ಚಿಸಿದೆ. ಸೋ.. ಆಗಸ್ಟ್ 1ಕ್ಕೆ ಚಿತ್ರಮಂದಿರದಲ್ಲಿ ಮಿಸ್ ಮಾಡ್ಕೋಬೇಡಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್