ಕಿಚ್ಚ ಸುದೀಪ್ ಮತ್ತೊಮ್ಮೆ ಬಾಕ್ಸ್ ಆಫೀಸ್ ಬಾದ್‌ಷಾ ಆಗಿ ರಾರಾಜಿಸ್ತಿದ್ದಾರೆ. ಎರಡೇ ವಾರದಲ್ಲಿ 50 ಕೋಟಿ ಗಡಿ ದಾಟಿರೋ ಮಾರ್ಕ್, ರಿಮಾರ್ಕಬಲ್ ಬ್ಲಾಕ್‌ಬಸ್ಟರ್ ಆಗಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ಆರಡಿ ಕಟೌಟ್ ಕಿಚ್ಚನ ಫ್ಯಾನ್ಸ್ ದಿಲ್‌ಖುಷ್ ಆಗುವ ರೆಕಾರ್ಡ್ ಬ್ರೇಕಿಂಗ್ ಖಬರ್ ಇಲ್ಲಿದೆ.
ಬಾಸ್‌ಗಳ ಬಾಸ್ ಬಿಗ್‌ಬಾಸ್. ಯೆಸ್.. ಬಿಗ್‌ಬಾಸ್ ಈ ಬಾರಿಯ ಸೀಸನ್ ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಈ ವಾರಾಂತ್ಯಕ್ಕೆ ವಿನ್ನರ್ ಯಾರು..? ರನ್ನರ್ ಅಪ್ ಯಾರು..? ಸೆಕೆಂಡ್ ರನ್ನರ್ ಅಪ್ ಯಾರು ಅನ್ನೋದಕ್ಕೆ ಆನ್ಸರ್ ಸಿಗಲಿದೆ. ಸದ್ಯ ಅದರ ಹೀಟ್ ನಡುವೆ ಮಾರ್ಕ್ ಸಿನಿಮಾದ ಸಕ್ಸಸ್ ಕೂಡ ಕಿಚ್ಚ ಸುದೀಪ್ ಫ್ಯಾನ್ಸ್ ಸಂಭ್ರಮವನ್ನು ಮುಗಿಲು ಮುಟ್ಟಿಸಿದೆ.
2 ವಾರಕ್ಕೆ ಮಾರ್ಕ್ 51 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್
65ಕ್ಕೂ ಅಧಿಕ ಸ್ಕ್ರೀನ್ಸ್.. 3ನೇ ವಾರ ಮಾರ್ಕ್ ಹೌಸ್‌ಫುಲ್
ಡಿಸೆಂಬರ್ 25ರಂದು ತೆರೆಕಂಡ ಮಾರ್ಕ್ ಸಿನಿಮಾ ಯಶಸ್ವಿ ಮೂರನೇ ವಾರಕ್ಕೆ ಕಾಲಿಟ್ಟಿದೆ. 65ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣ್ತಿರೋ ಈ ಸಿನಿಮಾ ಎರಡೇ ವಾರದಲ್ಲಿ 50 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಇದಲ್ಲವೇ ಆಲ್ ಇಂಡಿಯಾ ಕಟೌಟ್ ಕಿಚ್ಚನ ಗತ್ತು..? ಅಂದಹಾಗೆ ಸುದೀಪ್ ನಟನಾ ಗಮ್ಮತ್ತು ಪರಭಾಷಿಗರಿಗೂ ಗೊತ್ತು. ಅದೇ ಕಾರಣದಿಂದ ಅವ್ರ ಮೇಲೆ ಇನ್ವೆಸ್ಟ್ ಮಾಡೋಕೆ ಹೊರ ರಾಜ್ಯದ ನಿರ್ಮಾಪಕರುಗಳು ಕ್ಯೂ ನಿಂತಿದ್ದಾರೆ.
ಮ್ಯಾಕ್ಸ್-ಮಾರ್ಕ್.. ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ಸ್..!
ನಮ್ಮ ಕಿಚ್ಚನ ನಟನಾ ಗತ್ತು.. ಪರಭಾಷಿಗರಿಗೆ ಚೆನ್ನಾಗಿ ಗೊತ್ತು
ಕಳೆದ ವರ್ಷ ಮ್ಯಾಕ್ಸ್ ಚಿತ್ರದಿಂದ ಗಲ್ಲಾ ಪೆಟ್ಟಿಗೆಯಲ್ಲಿ ಅಬ್ಬರಿಸಿ, ಆರ್ಭಟಿಸಿದ್ದ ಕಿಚ್ಚ ಈ ಬಾರಿ ಮಾರ್ಕ್ ಚಿತ್ರದಿಂದ ಮಗದೊಮ್ಮೆ ತಾನು ಬಾಕ್ಸ್ ಆಫೀಸ್ ಬಾದ್‌ಷಾ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. 25ನೇ ದಿನಕ್ಕೆ ಡಿಬಾಸ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾ 50 ಕೋಟಿ ಗಳಿಸಿದ್ರೆ, ಜಸ್ಟ್ ಎರಡೇ ವಾರಕ್ಕೆ 51 ಕೋಟಿ 30 ಲಕ್ಷ ಕಲೆಕ್ಷನ್ ಮಾಡೋ ಮೂಲಕ ಚಿತ್ರಪ್ರೇಮಿಗಳಿಗೆ ಮಸ್ತ್ ಮನರಂಜನೆ ನೀಡ್ತಿದೆ ಸುದೀಪ್ ಮಾರ್ಕ್.
ಬಿಲ್ಲ ರಂಗ ಬಾಷ ಸಿನಿಮಾದ ಶೂಟಿಂಗ್ ಈಗಾಗ್ಲೇ ಶುರುವಾಗಿದ್ದು, ಇದೀಗ ಅದಕ್ಕೂ ಮುನ್ನ ರಾಮ್ಕಾಮ್ ಸಿನಿಮಾವೊಂದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಕಿಚ್ಚ. ಹೌದು.. ಪುಷ್ಪ ಡೈರೆಕ್ಟರ್ ಸುಕುಮಾರ್ ಗರಡಿಯಲ್ಲಿ ಪಳಗಿರೋ ಅವ್ರ ಶಿಷ್ಯ ನಿರ್ದೇಶನದ ಕಾಮಿಡಿ ಕಮ್ ರೊಮ್ಯಾಂಟಿಕ್ ಎಂಟರ್‌ಟೈನರ್ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ ಸುದೀಪ್. ಬಹಳ ದಿನಗಳ ನಂತ್ರ ಕಿಚ್ಚ ಅಂಥದ್ದೊಂದು ಸ್ಕ್ರಿಪ್ಟ್‌ಗೆ ಓಕೆ ಅಂದಿದ್ದು, ನಿರೀಕ್ಷೆ ದೊಡ್ಡ ಮಟ್ಟಕ್ಕಿದೆ.
