ಸಿನಿಮಾಗೆ ಹೀರೋಯಿಸಂಗಿಂತ ಕಂಟೆಂಟ್ ತುಂಬಾ ಇಂಪಾರ್ಟೆಂಟ್. ಸದ್ಯ ಕಂಟೆಂಟ್ ಈಸ್ ದಿ ಕಿಂಗ್ ಅನ್ನೋದು ಓಪನ್ ಸೀಕ್ರೆಟ್. ಇತ್ತೀಚೆಗೆ ಸಿಂಗಲ್ ಟೀಸರ್‌ನಿಂದ ಅಂಥದ್ದೊಂದು ಭರವಸೆ ಮೂಡಿಸಿದ್ದ ಕರಿಕಾಡ ಚಿತ್ರತಂಡ, ಇದೀಗ ಕಲರ್‌ಫುಲ್ ಐಟಂ ಸಾಂಗ್‌ನಿಂದ ಹಲ್‌ಚಲ್ ಎಬ್ಬಿಸಿದೆ. ಬಿಗ್‌ಬಾಸ್ ಚೆಲುವೆಯೊಬ್ಬರು ಇದಕ್ಕೆ ಸೊಂಟ ಬಳುಕಿಸಿದ್ದು, ಅದ್ಯಾರು ಅನ್ನೋದ್ರ ಝಲಕ್ ಇಲ್ಲಿದೆ.
ಟೀಸರ್‌ನಿಂದ ಸ್ಯಾಂಡಲ್‌ವುಡ್ ಅಂಗಳದಲ್ಲಿ ಗೆಲ್ಲೋ ಸೂಚನೆ ನೀಡಿರೋ ಹೊಸ ಸಿನಿಮೋತ್ಸಾಹಿ ತಂಡ ಕರಿಕಾಡ. ಕಾಂತಾರ ಸಿನಿಮಾದ ರೀತಿ ಪ್ರಕೃತಿಯ ನಡುವೆ ನಡೆಯೋ ಈ ಸಿನಿಮಾದಲ್ಲಿ ದೊಡ್ಡದೊಂದು ಸಂಘರ್ಷ ಎದ್ದು ಕಾಣ್ತಿದೆ. ಹೊಸಬರಾದ್ರೂ ನುರಿತ ಕಲಾವಿದರ ರೀತಿ ನಟಿಸಿದ್ದಾರೆ. ಅಷ್ಟೇ ಅಲ್ಲ, ದಟ್ಟ ಕಾಡಲ್ಲಿ ದೃಶ್ಯಗಳನ್ನ ಕಟ್ಟಿರೋ ಪರಿ ಮೆಚ್ಚುವಂತಿದೆ. ಕಾಂತಾರದ ಕಾಡುಬೆಟ್ಟು ಶಿವ ಕಾಡು ಹಂದಿಗಳನ್ನ ಭೇಟೆ ಆಡುವಂತಿರೋ ಈ ಚಿತ್ರದ ಎಳೆ, ನೋಡುಗರ ಕ್ಯೂರಿಯಾಸಿಟಿ ಹೆಚ್ಚಿಸಿದೆ.
ಕರಿಕಾಡ ಟೀಸರ್ ಸೂಪರ್ ಹಿಟ್.. ಐಟಂ ಸಾಂಗ್ ಔಟ್
ಕೃತಿವರ್ಮಾ ಸಖತ್ ಸ್ಟೆಪ್.. ಬಿಗ್‌ಬಾಸ್ ಬ್ಯೂಟಿ ರತುನಿ..!
ಕಾಡ ನಟರಾಜ್ ಲೀಡ್ ರೋಲ್‌ನಲ್ಲಿ ನಟಿಸಿರೋ ಈ ಸಿನಿಮಾಗೆ ಕೆ ವೆಂಕಟೇಶ್ ನಿರ್ದೇಶನವಿದೆ. ನಿರೀಕ್ಷಾ ಶೆಟ್ಟಿ ನಾಯಕನಟಿಯಾಗಿ ಬಣ್ಣ ಹಚ್ಚಿದ್ದು, ನುರಿತ ಕಲಾವಿದೆ ದಂಡು ಈ ಚಿತ್ರಕ್ಕಿದೆ. ಯಶ್ ಶೆಟ್ಟಿ, ಬಲರಾಜ್ವಾಡಿ, ಜಿಜಿ, ದಿವಂಗತ ನಟ ರಾಕೇಶ್ ಪೂಜಾರಿ, ವಿಜಯ್ ಚೆಂಡೂರು, ಕರಿಸುಬ್ಬು.. ಹೀಗೆ ಸಾಲು ಸಾಲು ಕಲಾವಿದರು ಸಾಥ್ ನೀಡಿದ್ದಾರೆ. ಅಂದಹಾಗೆ ಚಿತ್ರದ ಮೇಕಿಂಗ್ ಎಲ್ಲರೂ ಮಾತನಾಡುವಂತಿದೆ. ರಾಮ್ ಚರಣ್ ತೇಜಾ-ಸುಕುಮಾರ್ ಕಾಂಬೋನ ರಂಗಸ್ಥಳಂ ಚಿತ್ರದ ರೀತಿ ಕೆಲ ಶಾಟ್ಸ್ ಹುಬ್ಬೇರಿಸಲಿವೆ.
ಟಿಪಿಕಲ್ ಮಲೆನಾಡು ಭಾಗದ ಸಿನಿಮಾ ಇದಾಗಿದ್ದು, ಭಿನ್ನ ಅಲೆಯ ಸಿನಿಮಾಗಳಿಗೆ ಇತ್ತೀಚಿನ ದಿನಗಳು ಸಾಕ್ಷಿ ಆಗ್ತಿದ್ದು, ಅಂತಹ ಸಾಲಿಗೆ ಕರಿಕಾಡ ಸೇರಿಕೊಳ್ಳಲಿದೆ. ಟೀಸರ್‌ನಿಂದ ಧೂಳೆಬ್ಬಿಸಿದ್ದ ಈ ಸಿನಿಮಾ, ಇದೀಗ ಐಟಂ ಸಾಂಗ್‌ನಿಂದ ರಂಗೇರಿದೆ. ಇತ್ತೀಚೆಗೆ ಮಾಲ್ ಆಫ್ ಏಷ್ಯಾದಲ್ಲಿ ಕರಿಕಾಡ ಐಟಂ ಸಾಂಗ್‌ನ ಬಿಡುಗಡೆ ಮಾಡಲಾಯ್ತು. ಜನ ಕಿಕ್ಕಿರಿದು ಸೇರಿದ್ದಲ್ಲದೆ, ಸಿನಿಮೋತ್ಸಾಹಿ ತಂಡದ ಜೋಶ್ ಹೆಚ್ಚಿಸಿದರು. ಅಂದಹಾಗೆ ಕಾಡ ನಟರಾಜ್ ಜೊತೆ ಸೊಂಟ ಬಳುಕಿಸಿರೋದು ಹಿಂದಿ ಬಿಗ್‌ಬಾಸ್ ಚೆಲುವೆ ಅನ್ನೋದು ಹೈಲೈಟ್.
ಮಾಲ್‌ನಲ್ಲಿ ಸಾಂಗ್ ಲಾಂಚ್..ಕಿಕ್ಕಿರಿದು ಬಂದ ಜನಸಾಗರ
ರಂಗಸ್ಥಳಂ, ಕಾಂತಾರ ಶೈಲಿ ಮೇಕಿಂಗ್..ಕರಿಕಾಡ ರಾಕಿಂಗ್
ಯಶ್ ಶೆಟ್ಟಿ, ವಿಜಯ್ ಮಾತನಾಡಿ, ಕರಿಕಾಡ ಹಬ್ಬ ನಡೀತಿದೆ. ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದೆ ನಿಮ್ಮೆಲ್ಲರ ಆಶೀರ್ವಾದ ಇರಬೇಕು ಅಂದ್ರು. ತುಂಬಾ ಇಷ್ಟಪಟ್ಟು ಕಷ್ಟಪಟ್ಟು ಮಾಡಿರೋದು. ದೊಡ್ಡ ಕನಸು ಇಟ್ಕೊಂಡಿದ್ದೀವಿ ಎಂದ್ರು.
ಗಾಯಕ, ಕಂಪೋಸರ್ ಅತಿಷಯ್ ಜೈನ್ ಮಾತಾನಾಡಿ ಒಳ್ಳೆ ರೆಸ್ಪಾನ್ಸ್ ಬಂದಿದೆ. ಹಬ್ಬದ ವಾತಾವರಣ ನಿರ್ಮಾಣವಾಗಿದೆ. ನಿಮ್ಮ ಸಪೋರ್ಟ್ ನಮ್ಮ ಟೀಂ ಮೇಲೆ ಇರಬೇಕು ಎಂದು ಸಂತಸ ವ್ಯಕ್ತಪಡಿಸಿದ್ರು.. ಮುಖ್ಯ ಭೂಮಿಕೆಯಲ್ಲಿ ನಟಿಸಿರೋ ಕಾಡ ನಟರಾಜ್, ನಿರೀಕ್ಷಾ ಶೆಟ್ಟಿ ಕಬ್ಬಿನ ಜಲ್ಲೇ ಇಷ್ಟ ಆಯ್ತು, ಹಾರ್ಡ್ ವರ್ಕ್ ಇತ್ತು, ಎಲ್ಲವೂ ಸಸ್ಪೆನ್ಸ್ ಆಗೇ ಇರುತ್ತೆ. ಆಡಿಯನ್ಸ್ ಎಂಜಾಯ್ ಮಾಡಬೇಕು. ಸಾಂಗ್ ಟೈಟಲ್ ಟೀಸರ್ ನೋಡಿ ಏನೂ ನಿರೀಕ್ಷೆ ಮಾಡೋಕಾಗಲ್ಲ. ಬೇರೇನೋ ಇದೆ ನೋಡಿ ಅಂದ್ರು.
ರಿದ್ಧಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್‌ನಲ್ಲಿ ಕಾಡ ನಟರಾಜ್ ಅವರ ಪತ್ನಿ ದೀಪ್ತಿ ದಾಮೋದರ್ ನಿರ್ಮಾಣ ಮಾಡಿದ್ದಾರೆ. ಪತಿಯ ಕನಸನ್ನ ಈ ಸಿನಿಮಾ ಮೂಲಕ ಈಡೇರಿಸಿದ್ದಾರೆ ಪತ್ನಿ. ಇನ್ನು ಇವರ ಕನಸಿಗೆ ಸ್ನೇಹಿತ ರವಿಕುಮಾರ್ ಎಸ್.ಆರ್ ಸಹ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಕಾಡ ನಟರಾಜ ಅವರೇ ಸಿನಿಮಾಗೆ ಕಥೆ ಬರೆದಿದ್ದಾರೆ. ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಾಗಿರಿ ಕಂಪೋಸ್ ಮಾಡಿದ್ದು, ಜೀವನ್ ಗೌಡ ಕ್ಯಾಮೆರಾ ವರ್ಕ್, ದೀಪಕ್ ಸಿ.ಎಸ್ ಸಂಕಲನವಿದೆ.
