ಕ್ರಿಸ್‌ಮಸ್‌ಗೆ ಡೇಟ್‌ನ ಮಾರ್ಕ್ ಮಾಡಿ ಇಟ್ಕೊಳಿ ಎಂದಿದ್ದ ಬಾದ್‌ಷಾ ಕಿಚ್ಚ ಸುದೀಪ್ ಮಾರ್ಕ್ ಸಿನಿಮಾ ಇದೇ ಡಿಸೆಂಬರ್ 25ಕ್ಕೆ ತೆರೆಗೆ ಬರ್ತಿದೆ. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ಕೆಲ ಕಿಡಿಗೇಡಿಗಳು ಮಾರ್ಕ್ ರಿಲೀಸ್ ಪೋಸ್ಟ್‌ಪೋನ್ ಅನ್ನೋ ಫೇಕ್ ಪೋಸ್ಟ್‌ಗಳನ್ನ ಹರಡುತ್ತಿದ್ದಾರೆ. ಈ ಕುರಿತ ಅಸಲಿ ಪಿಚ್ಚರ್ ಇಲ್ಲಿದೆ. ಒಮ್ಮೆ ನೋಡಿ.
ದಾದಾ ಯಾರ್ ಗೊತ್ತಾ ಸಾಂಗ್ ಹಾಗೂ ಮಾರ್ಕ್ ಇಂಟ್ರೋ ಟೀಸರ್‌ನಿಂದ ಈ ಬಾರಿ ಕೂಡ ಬಾಕ್ಸ್ ಆಫೀಸ್‌ಗೆ ಸುನಾಮಿ, ಸುಂಟರಗಾಳಿ ಬರೋ ಮುನ್ಸೂಚನೆ ನೀಡಿದ್ದಾರೆ ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್. ಯೆಸ್.. ಮ್ಯಾಕ್ಸ್ ಕಾಂಬೋ ಮತ್ತೊಮ್ಮೆ ರಿಪೀಟ್ ಆಗ್ತಿರೋದು ಗೊತ್ತೇಯಿದೆ. ತಮಿಳಿನ ಪ್ರತಿಭಾವಂತ ಡೈರೆಕ್ಟರ್ ವಿಜಯ್ ಕಾರ್ತಿಕೇಯ ಒನ್ಸ್ ಅಗೈನ್ ನಮ್ಮ ಕಿಚ್ಚ ಸುದೀಪ್‌ಗೆ ಆ್ಯಕ್ಷನ್ ಕಟ್ ಹೇಳಿದ್ದು, ರೀಸೆಂಟ್ ಆಗಿ ಮಾರ್ಕ್ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿ, ಕುಂಬಳಕಾಯಿ ಒಡೆದಿತ್ತು ಟೀಂ.
ಮಾರ್ಕ್ ಪೋಸ್ಟ್‌ಪೋನ್ ಇಲ್ಲ.. ಫೇಕ್ ಪೋಸ್ಟ್‌ಗಳೇ ಎಲ್ಲಾ
ಸುದೀಪ್ ವಿರುದ್ಧ ಕಿಡಿಗೇಡಿಗಳಿಂದ ನಕಲಿ ಪೋಸ್ಟ್ ಅಪ್ಲೋಡ್
ಮ್ಯಾಕ್ಸ್ ನೋಡಿ ಓ ಮೈ ಗಾಡ್ ಅಂತ ಬಾಯ್ಮೇಲೆ ಬೆರಳಿಟ್ಟುಕೊಂಡಿದ್ದ ಚಿತ್ರಪ್ರೇಮಿಗಳಿಗೆ ಅದ್ರ ಎರಡರಷ್ಟು ಥ್ರಿಲ್, ಎಕ್ಸೈಟ್‌ಮೆಂಟ್ ಕೊಡೋಕೆ ಮಾರ್ಕ್ ಆಗಿ ಮತ್ತೊಮ್ಮೆ ಖಾಕಿ ಖದರ್‌ಲಿ ಬರ್ತಿದ್ದಾರೆ ಕಿಚ್ಚ. ಗ್ಯಾಂಗ್‌ಸ್ಟರ್‌ಗಳ ಪಾಲಿಗೆ ಸಿಂಹಸ್ವಪ್ನವಾಗುವ ಸುದೀಪ್, ಡಿಫರೆಂಟ್ ಹೇರ್ ಸ್ಟೈಲ್ ಹಾಗೂ ಸ್ವ್ಯಾಗ್‌ನಿಂದ ಬಿಗ್‌ಸ್ಕ್ರೀನ್‌ಗೆ ಎಂಟ್ರಿ ಕೊಡಲಿದ್ದಾರೆ.
ಅಂದಹಾಗೆ ಕೇವಲ ಐದು ತಿಂಗಳಲ್ಲಿ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಕ್ ತೆರೆಗೆ ಬರ್ತಿರೋದು ನಿಜಕ್ಕೂ ವ್ಹಾವ್ ಫ್ಯಾಕ್ಟರ್. ಕಿಚ್ಚನ ಹಾರ್ಡ್ ವರ್ಕ್, ಡೆಡಿಕೇಷನ್ ಹಾಗೂ ಡಿಟರ್ಮಿನೇಷನ್‌ನಿಂದ ಇಂತಹ ಬಿಗ್ ಸ್ಕೇಲ್ ಸಿನಿಮಾವೊಂದು ಅಂದುಕೊಂಡ ಡೇಟ್‌ಗೆ ಪ್ರೇಕ್ಷಕರನ್ನ ರಂಜಿಸೋಕೆ ಬರ್ತಿರೋದು ಗ್ರೇಟ್. ನಿರ್ಮಾಣ ಸಂಸ್ಥೆಗಳಾದ ಸತ್ಯಜ್ಯೋತಿ ಫಿಲಂಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರೋ ಈ ಸಿನಿಮಾ, ಇದೇ ಡಿಸೆಂಬರ್ 25ಕ್ಕೆ ಕ್ರಿಸ್‌ಮಸ್‌ಗೆ ಡೇಟ್ ಮಾರ್ಕ್ ಮಾಡ್ಕೊಳಿ ಬರ್ತಿದ್ದೀವಿ ಎಂದಿತ್ತು.
ರಿಲೀಸ್‌ನಲ್ಲಿಲ್ಲ ವ್ಯತ್ಯಯ.. ಡಿ-25ಕ್ಕೆ ಮಾರ್ಕ್ ಮಾಡಿ ಡೇಟ್
ಈ ಬಾರಿ ಕಿಚ್ಚ ಬೆಂಕಿ ಚೆಂಡು ಗುರು.. ‘ವಿಜಯ’ ಕಟ್ಟಿಟ್ಟ ಬುತ್ತಿ..!
ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ಸುದೀಪ್‌ರ ಈ ಮಾರ್ಕ್ ಸಿನಿಮಾ ಪೋಸ್ಟ್‌ಪೋನ್ ಅನ್ನೋ ಪೋಸ್ಟ್‌ಗಳು ಹರಿದಾಡ್ತಿವೆ. ಆದ್ರೆ ಈ ನ್ಯೂಸ್ ಸತ್ಯಕ್ಕೆ ದೂರವಾದದ್ದು. ಕೆಲ ಕಿಡಿಗೇಡಿಗಳು ಬೇಕು ಅಂತಲೇ ಫೇಕ್ ಪೋಸ್ಟ್‌ಗಳನ್ನ ಹರಡುತ್ತಿದ್ದಾರೆ. ಸುದೀಪ್ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ಇಷ್ಟು ದಿನ ಯಾರೆಲ್ಲಾ ಫೇಕ್ ಪೋಸ್ಟ್‌ಗಳನ್ನ ಹಾಕ್ತಿದ್ರೋ, ಅವ್ರೇ ಮಾರ್ಕ್ ರಿಲೀಸ್ ಮುಂದೂಡಿಕೆ ವಿಚಾರ ಸುಳ್ಳು ಸುದ್ದಿ ಹಬ್ಬಿಸಿ, ಅಪಪ್ರಚಾರ ಮಾಡ್ತಿದ್ದಾರೆ. ಈ ಬಗ್ಗೆ ಕಿಚ್ಚನ ಫ್ಯಾನ್ಸ್ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ವರ್ಷಾಂತ್ಯಕ್ಕೆ, ಡಿಸೆಂಬರ್ 25ರಂದು ಹಂಡ್ರೆಡ್ ಪರ್ಸೆಂಟ್ ಮಾರ್ಕ್ ಬೆಳ್ಳಿತೆರೆ ಬೆಳಗಲಿದೆ.





