ಬಾದ್‌ಷಾ ಕಿಚ್ಚ ಸುದೀಪ್ ಆಲ್ ಇಂಡಿಯಾ ಕಟೌಟ್ ಹೌದು. ಅಟ್ ದಿ ಸೇಮ್ ಟೈಂ ಆ್ಯಂಗ್ರಿ ಯಂಗ್‌ಮ್ಯಾನ್ ಕೂಡ ಹೌದು. ಅದಕ್ಕೆ ಕ್ರಿಕೆಟ್ ಗ್ರೌಂಡ್‌ನಲ್ಲಿ ಇತ್ತೀಚೆಗೆ ಫೈಯರ್ ಆಗಿರೋದೇ ಪ್ರತ್ಯಕ್ಷ ಸಾಕ್ಷಿ. ಅದೆಲ್ಲಾ ಗೇಮ್ ಸ್ಪಿರಿಟ್ ಹೌದು. ಆದ್ರೆ ಕನ್ನಡಿಗರನ್ನ ಅವಮಾನಿಸಿದ್ದ ತಮಿಳರ ನಾಡಲ್ಲೇ ಮ್ಯಾಚ್ ಗೆದ್ದು ಕನ್ನಡದ ಬಾವುಟ ಹಾರಿಸಿರೋ ಕಿಚ್ಚನ ಕನ್ನಡಾಭಿಮಾನ ಎಂಥದ್ದು ಅಂತ ನೀವೇ ನೋಡಿ.
ಒಂದ್ಕಡೆ ಮಾರ್ಕ್ ರಿಲೀಸ್. ಮತ್ತೊಂದ್ಕಡೆ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ. ಇವೆರಡರ ಜೊತೆ ಜೊತೆಗೆ ಸಿಸಿಎಲ್ ಪ್ರಾಕ್ಟೀಸ್. ಹೀಗೆ ಎಲ್ಲವನ್ನೂ ನಿಭಾಯಿಸಿದ ಬಾದ್‌ಷಾ ಕಿಚ್ಚ ಸುದೀಪ್, ಇದೀಗ ಸಿಸಿಎಲ್ ಸೀಸನ್-12ರಲ್ಲಿ ಒಂದು ಮ್ಯಾಚ್ ಕೂಡ ಸೋಲದೆ, ಬ್ಯಾಕ್ ಟು ಬ್ಯಾಕ್ ವಿಕ್ಟರಿಗಳಿಂದ ಸೆಮಿ ಫೈನಲ್ಸ್ ತಲುಪಿದ್ದಾರೆ. ಸಿನಿ ತಾರೆಯರ ಜೋಶ್, ಮೈದಾನದ ಫೈಟ್, ಅಭಿಮಾನಿಗಳ ಕೂಗು, ಈ ಕ್ರಿಕೆಟ್ ಹಬ್ಬಕ್ಕೆ ಹೃದಯವೇ ಕಿಚ್ಚ ಸುದೀಪ್.

ಕರ್ನಾಟಕ ಬುಲ್ಡೋಜರ್ಸ್ ತಂಡದ ಕ್ಯಾಪ್ಟನ್ ಆಗಿ ಕೇವಲ ನಟರಾಗಿ ಮಾತ್ರವಲ್ಲ ಸ್ಪೋಟಿವ್ ಕ್ರಿಕೆಟರ್ ಆಗಿ ಮೈದಾನಕ್ಕಿಳಿಯುವ ಲೀಡರ್ ಸುದೀಪ್. ಶೂಟಿಂಗ್ ಸೆಟ್‌ನಲ್ಲಿ ಎಷ್ಟು ಪರ್ಫೆಕ್ಷನ್ ಇದೆಯೋ ಮೈದಾನದಲ್ಲೂ ಅಷ್ಟೇ ಪ್ಯಾಷನ್‌ನಿಂದ ಕ್ರಿಕೆಟ್ ಆಡ್ತಾರೆ. ಸಿಸಿಎಲ್ ಆರಂಭದಿಂದಲೇ ಸುದೀಪ್ ತಂಡವನ್ನು ಮುನ್ನಡೆಸುತ್ತಾ ಬಂದಿದ್ದಾರೆ. ನಮ್ಮ ನೆಲ, ಜಲ, ಭಾಷೆಯ ವಿಷಯಕ್ಕೆ ಬಂದ್ರೆ ಕಿಚ್ಚ ಸೈಲೆಂಟ್ ಇರೋದಿಲ್ಲ ಅನ್ನೋದು ಗೊತ್ತೇ ಇದೆ.

CCL-12 ಸೆಮಿಫೈನಲ್ಸ್‌ಗೆ ಕರ್ನಾಟಕ ಬುಲ್ಡೋಜರ್ಸ್ ಟೀಂ
ತಮಿಳರ ನೆಲದಲ್ಲಿ ಕನ್ನಡ ಭಾವುಟ..ಕಿಚ್ಚ ಸ್ಟ್ರಾಂಗ್ ಮೆಸೇಜ್

ಈಗ ಮಾತುಗಳಲ್ಲಿ ಅಲ್ಲ ಆ್ಯಕ್ಷನ್ ಮೂಲಕ ರಿಯಾಕ್ಷನ್ ಕೊಟ್ಟಿದ್ದಾರೆ. ಸಿಸಿಎಲ್-12ನ ಘಟನೆಯೊಂದು ರಾಜ್ಯಾದ್ಯಂತ ಚರ್ಚೆ ಆಗ್ತಿದೆ. ಕೆಲವೇ ವಾರಗಳ ಹಿಂದೆ ತಮಿಳುನಾಡಿನ ಈರೋಡ್ ಬಳಿ ತಮಿಳಿಗರು ನಮ್ಮ ಕನ್ನಡ ಬಾವುಟ ತೆಗೆಸಿದ ಆರೋಪ ಕೇಳಿಬಂದಿತ್ತು. ಶಬರಿಮಲೆ ಮಾರ್ಗದಲ್ಲಿ ಕರ್ನಾಟಕದ ಭಕ್ತರಿಗೆ ತೊಂದರೆ, ವಾಹನಗಳ ಮೇಲಿದ್ದ ಭಾವುಟ ತೆರವುಗೊಳಿಸಿದ್ದು ಕನ್ನಡಿಗರ ಮನದಲ್ಲಿ ನೋವು ಮೂಡಿಸಿತ್ತು. ಇದೀಗ ಅದೇ ತಮಿಳರ ನಾಡು ಕೊಯಂಬತ್ತೂರಿನಲ್ಲಿ ಮ್ಯಾಚ್ ಗೆದ್ದು, ರಾಜಾರೋಷವಾಗಿ ನಮ್ಮ ಕನ್ನಡದ ಬಾವುಟ ಹಾರಿಸಿದ್ದಾರೆ ಕಿಚ್ಚ. ಬೋಜ್ಪುರಿ ಟೀಂ ಮೇಲೆ ಗೆದ್ದು, ಬಾವುಟ ಎತ್ತಿ ಹಿಡಿದು, ಸ್ಟೇಡಿಯಂ ತುಂಬಾ ಓಡಾಡಿದ್ದಾರೆ.

ಈರೋಡ್ ವಿವಾದ ಬಳಿಕ ಕೊಯಂಬತ್ತೂರಲ್ಲಿ ಕನ್ನಡಿಗರು
ಗೇಮ್ ಸ್ಪಿರಿಟ್.. ಫೈಯರ್ ಆನ್ ಫೀಲ್ಡ್..ಬೈಗುಳ ಯಾರಿಗೆ ?
ಇದರೊಟ್ಟಿಗೆ ಗೇಮ್ ಅಂದಾಗ ಅಲ್ಲಿ ಕೋಪ, ಬೈಗುಳ ಸರ್ವೇ ಸಾಮಾನ್ಯ. ಕಿಚ್ಚ ಬೌಲರ್‌ಗೆ ಮಾತನಾಡಿರೋ ಕೆಟ್ಟ ಪದವಿರೋ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗ್ತಿದೆ. ಆ ಬೈಗುಳ ನಿಜಕ್ಕೂ ಯಾರಿಗೆ..? ಗೆಲುವಿನ ಒತ್ತಡ, ಕ್ಯಾಪ್ಟನ್‌ನ ಟೆನ್ಷನ್ ಅಥವಾ ಆಟದ ಹೀಟ್ ಆಫ್ ದ ಮೊಮೆಂಟ್..? ಅವೆಲ್ಲಕ್ಕೂ ಸಿಸಿಎಲ್ ಪ್ಲೇಯರ್ ಚಂದನ್ ಗ್ಯಾರಂಟಿ ನ್ಯೂಸ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಒಂದೆಡೆ ಕನ್ನಡದ ಗೌರವಕ್ಕೆ ಕಿಚ್ಚನ ಸ್ಟ್ಯಾಂಡ್. ಮತ್ತೊಂದೆಡೆ ಟೀಂ ಗೆಲುವಿಗೆ ಕಿಚ್ಚನ ಪ್ಯಾಷನ್. ಒಟ್ಟಾರೆ ಕ್ಯಾಪ್ಟನ್ ಕಿಚ್ಚನ ಲೀಡರ್‌ಶಿಪ್, ತಂಡದ ಒಗ್ಗಟ್ಟು, ಅಭಿಮಾನಿಗಳ ಸಪೋರ್ಟ್ ಈ ಮೂರೂ ಮಂತ್ರಗಳು ಕರ್ನಾಟಕ ಬುಲ್ಡೋಜರ್ಸ್ ತಂಡ ಸೆಮಿಫೈನಲ್ ತಲುಪಿದೆ. ಅದ್ರಲ್ಲೂ ರಾಜೀವ್ ಬಾರಿಸಿದ ಸೆಂಚುರಿ, ಪ್ರದೀಪ್-ಕೃಷ್ಣ ಹಾಫ್ ಸೆಂಚುರಿ, ಕಿಚ್ಚನ ಸಿಕ್ಸರ್‌ಗಳು ಮ್ಯಾಚ್ ವಿನ್ನಿಂಗ್ ಮೊಮೆಂಟ್ಸ್‌ಗೆ ಸಾಕ್ಷಿ ಆದವು.
ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





