ಒಂದು ಕಡೆ 30 ವರ್ಷದ ಸ್ಟಾರ್‌ಡಮ್ ಮತ್ತೊಂದು ಕಡೆ ಮೂರು ತಿಂಗಳ ರಿಯಾಲಿಟಿ ಹೈಪ್. ಡಿಜಿಟಲ್ ಮೀಟರ್ ಮೇಲೆ ಮಿನುಗ್ತಿರೋ ಸಂಖ್ಯೆಗಳು ಈಗ ಫ್ಯಾನ್ಸ್ ಮಧ್ಯೆ ಫೈರ್ ಡಿಬೇಟ್‌ಗೆ ಕಾರಣವಾಗಿವೆ. ಸೂಪರ್ ಸ್ಟಾರ್ ಪವರ್‌ಗೂ, ಬಿಗ್ ಬಾಸ್ ಕ್ರೇಜ್‌ಗೂ ಹೋಲಿಕೆ ಶುರುವಾದ್ಮೇಲೆ ಕಮೆಂಟ್ ಸೆಕ್ಷನ್ ಕಾವೇರಿದೆ. ಡಿಜಿಟಲ್ ಸ್ಟಾರ್ ಆಗೋದು ಮುಖ್ಯವಾ? ಇತಿಹಾಸದಲ್ಲಿ ಹೆಸರು ಕೆತ್ತಿಸೋದು ಮಹತ್ವವಾ..? ಕಿಚ್ಚ vs ಗಿಲ್ಲಿ ಇನ್ಸ್ಟಾಗ್ರಾಮ್ ಫಾಲೋವರ್ಸ್ ಕಾಂಟ್ರೋ ಎಕ್ಸ್‌ಕ್ಲೂಸಿವ್ ಇಲ್ಲಿದೆ.
ಕನ್ನಡ ಚಿತ್ರರಂಗದಲ್ಲಿ ಈಗ ಫಾಲೋವರ್ಸ್ ಚರ್ಚೆ ಜೋರಾಗಿದೆ. ಸೂಪರ್ ಸ್ಟಾರ್‌ಗಳ ದಶಕಗಳ ಪಯಣಕ್ಕೂ, ರಿಯಾಲಿಟಿ ಶೋ ಸ್ಟಾರ್‌ಗಳ ತಾಜಾ ಕ್ರೇಜ್‌ಗೂ ಹೋಲಿಕೆ ಮಾಡಲಾಗುತ್ತಿದೆ. ಒಂದು ಕಡೆ ವರ್ಷಗಳ ಪರಿಶ್ರಮ, ಹಿಟ್ ಸಿನಿಮಾಗಳು, ಅಭಿಮಾನಿಗಳ ವಿಶ್ವಾಸದಿಂದ ಕಟ್ಟಿದ ಅಜರಾಮರ ಹೆಸರು. ಮತ್ತೊಂದು ಕಡೆ ಮೂರು ತಿಂಗಳ ರಿಯಾಲಿಟಿ ವೇದಿಕೆಯಲ್ಲಿ ತೋರಿಸಿದ ಆಟ, ಅಟ್ಟಹಾಸ ಮತ್ತು ಜನಮನ ಗೆದ್ದ ಆತ್ಮವಿಶ್ವಾಸ. ಇದೇ ಈಗ ಫ್ಯಾನ್ಸ್ ಮಧ್ಯೆ ಫೈರ್ ಡಿಬೇಟ್ ಆಗ್ತಿದೆ.
3 ದಶಕಗಳ ಗರ್ಜನೆ v/s 3 ತಿಂಗಳ ರಿಯಾಲಿಟಿ ಹೈಪ್
ಕಿಚ್ಚನ 30 ವರ್ಷಗಳ ಪರಿಶ್ರಮಕ್ಕೆ ಡಿಜಿಟಲ್ ಹೋಲಿಕೆ..?
ಬಿಗ್ ಬಾಸ್ ಕನ್ನಡ 12ರಲ್ಲಿ ಗೆಲುವು ಸಾಧಿಸಿದ ಬಳಿಕ ಗಿಲ್ಲಿ ನಟನಿಗೆ ಎಲ್ಲಿಲ್ಲದ ಜನಪ್ರಿಯತೆ ಸಿಕ್ಕಿದೆ. ಬಿಬಿಕೆ ಮನೆ ಒಳಗೆ ಇದ್ದಾಗಲೇ ಅವರ ಹೆಸರು ಟ್ರೆಂಡ್ ಆಗುತ್ತಿತ್ತು. ಮನೆ ಹೊರಗೆ ಬಂದ್ಮೇಲೆ ಗಿಲ್ಲಿ ಕ್ರೇಜ್ ಪೀಕ್‌ಗೆ ತಲುಪಿದೆ. ಎಲ್ಲಿ ಹೋದರೂ ಜನರ ಮುತ್ತಿಗೆ ಸೆಲ್ಫಿಗಾಗಿ ಸಾಲು ಭದ್ರತೆ ಕಂಟ್ರೋಲ್ ಮಾಡೋದು ದೊಡ್ಡ ಸವಾಲಾಗಿದೆ. ಒಂದು ರಿಯಾಲಿಟಿ ಶೋ ವೇದಿಕೆಯಿಂದಲೇ ಹೊಸ ತಲೆಮಾರಿಗೆ ಹೀರೋ ಆಗಿ ಹೊರಹೊಮ್ಮಿದ ಈ ಪಯಣ ನಿಜಕ್ಕೂ ರಾಕೆಟ್ ವೇಗದದ್ದು.
ಎಲ್ಲಾ ಓಕೆ ಗಿಲ್ಲಿ ಫಾಲೋವರ್ಸ್ ನ ಕಿಚ್ಚನ ಫಾಲೋವರ್ಸ್ ಸಂಖ್ಯೆಗೆ ಯಾಕೆ ಹೋಲಿಕೆ ಎನ್ನುವ ಪ್ರಶ್ನೆ ಎದಿದ್ದೆ. ಯುಎಸ್, KFI ಬ್ರ್ಯಾಂಡ್ ಕಿಚ್ಚ ಸುದೀಪ್ ಇದೆ ಬಿಗ್ ಬಾಸ್ ಶೋ ನ ಸತತವಾಗಿ 12ಸೀಸನ್ ನಿರೂಪಕರಾಗಿ ನಡೆಸಿಕೊಟ್ಟವರು. ಸೋಶಿಯಲ್ ಮೀಡಿಯಾ ಹುಟ್ಟೇ ಇರದ ಕಾಲದಲ್ಲಿ ಇಂಡಸ್ಟ್ರಿಗೆ ಕಾಲಿಟ್ಟವರು. 30 ವರ್ಷಗಳ ಕಾಲ ಹಿಟ್ ಮೇಲೆ ಹಿಟ್ ಕೊಟ್ಟು, ಅಭಿಮಾನಿಗಳ ವಿಶ್ವಾಸವನ್ನು ಗಟ್ಟಿಗೊಳಿಸಿದವರು. ಇಂದಿಗೂ ಸೂಪರ್ ಹಿಟ್ ಸಿನಿಮಾಗಳನ್ನು ಕೊಡ್ತಿರುವ ಅಭಿನಯ ಚಕ್ರವರ್ತಿ. ಇನ್‌ಸ್ಟಾದಲ್ಲಿ 2.9 ಮಿಲಿಯನ್ ಫಾಲೋವರ್ಸ್ ಇದ್ದರೂ, ಅವರ ಸ್ಟಾರ್‌ಡಮ್ ಸಂಖ್ಯೆಗಳಿಂದ ಅಳೆಯೋದು ಸರಿನಾ ಎನ್ನುವ ಪ್ರಶ್ನೆ ಫ್ಯಾನ್ಸ್ ನಡುವೆ ಎದ್ದು ಬಂದಿದೆ. ಟ್ರೆಂಡ್ ಆಗೋದು ಸುಲಭ. ಲೆಜೆಂಡ್ ಆಗೋದು ಕಷ್ಟ ಅನ್ನೋ ಮಾತು ಈಗ ಕಮೆಂಟ್ ಸೆಕ್ಷನ್‌ನಲ್ಲಿ ಜ್ವಾಲೆಯಂತೆ ಹರಡುತ್ತಿದೆ.
ಬಿಗ್ ಬಾಸ್ ಬೂಮ್ ನಂತ್ರ ಗಿಲ್ಲಿ ಕ್ರೇಜ್ ಪೀಕ್..!
2 ಲಕ್ಷದಿಂದ 2 ಮಿಲಿಯನ್ ಫಾಲೋವರ್ಸ್..ಬಿಗ್ ಮ್ಯಾಜಿಕ್
ಬಿಗ್ ಬಾಸ್ ಕನ್ನಡ 12 ವಿನ್ನರ್ ಗಿಲ್ಲಿ ಮನೆ ಒಳಗೆ ಕಾಲಿಟ್ಟ ದಿನದಿಂದಲೇ ಗೇಮ್ ಚೇಂಜ್ ಎಂಬ ಪಟ್ಟ ಗಿಟ್ಟಿಸಿಕೊಂಡವರು. ಮೊದಲಿಗೆ ಇನ್ಸ್ಟಾಗ್ರಾಮ್ ನಲ್ಲಿ ಕೇವಲ 2 ಲಕ್ಷ ಫಾಲೋವರ್ಸ್ ಇದ್ದ ಗಿಲ್ಲಿ, ಒಳ್ಳೆಯ ಕಂಟೆಂಟ್ ಹಾಕಿದ್ರೂ ಲೆಕ್ಕ ಜಾಸ್ತಿ ಆಗ್ತಿರಲಿಲ್ಲ. ಒಂದು ಮಿಲಿಯನ್ ಆದ್ರೆ ಸಾಕು ಅಂತ ಆಸೆಪಟ್ಟಿದ್ದವರು ಮನೆ ಒಳಗೆ ಆಟ ಶುರು ಮಾಡಿದ್ಮೇಲೆ literally ರಾಕೆಟ್ ಸ್ಪೀಡ್ ನಂತೆ ಫಾಲೋವರ್ಸ್ ಸಂಖ್ಯೆ ಏರಿಕೆ ಆಯ್ತು. ಈಗ ಗಿಲ್ಲಿಗೆ ಇರುವ 2 ಮಿಲಿಯನ್ ಫಾಲೋವರ್ಸ್ ಹಾಗೆ ಕಿಚ್ಚನನ್ನು ಫಾಲೋ ಮಾಡ್ತಿರುವ 2.9 ಫಾಲೋವರ್ಸ್ ಗೂ ಕಂಪರಿಷನ್ ಶುರುವಾಗಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
