ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ಬರೀ ನಟಿಯಷ್ಟೇ ಅಲ್ಲ. ಡೈರೆಕ್ಟರ್ ಕೂಡ ಹೌದು. ಇಷ್ಟು ದಿನ ಎಲ್ಲಿ ಹೋದ್ರು..? ಏನ್ ಮಾಡ್ತಿದ್ರು ಅಂತ ಪ್ರಶ್ನೆ ಮಾಡ್ತಿದ್ದವರಿಗೆ ತನ್ನಲ್ಲಿರೋ ಟ್ಯಾಲೆಂಟ್ ಎಂಥದ್ದು ಅಂತ ತೋರಿಸಿದ್ದಾರೆ ಕನ್ನಡತಿ. ಇಷ್ಟಕ್ಕೂ ಡೈರೆಕ್ಟರ್ ಮೈಕ್ ಹಿಡಿದು ಆ್ಯಕ್ಷನ್ ಕಟ್ ಹೇಳಿದ್ದು ಯಾರಿಗೆ..? ಯಾವಾಗ..? ಯಾವ ಸಿನಿಮಾ ಅಂತೀರಾ..? ಈ ಬ್ಯೂಟಿಫುಲ್ ಸ್ಟೋರಿ ನೋಡ್ಕೊಂಡ್ ಬನ್ನಿ.
- ಡೈರೆಕ್ಟರ್ ಆದ KGF ಕ್ವೀನ್.. ನ್ಯಾಚುರಲ್ ಸ್ಟಾರ್ಗೆ ಆ್ಯಕ್ಷನ್ ಕಟ್
- ಮೂರು ವರ್ಷ ನಾಪತ್ತೆ.. ‘ಹಿಟ್-3’ಯಲ್ಲಿ ನಟನೆ & ನಿರ್ದೇಶನ
- ನಾನಿ ಸ್ಟೇಷನ್ ಮುಂದಿನ ದೃಶ್ಯಕ್ಕೆ ಕನ್ನಡತಿ ಶ್ರೀನಿಧಿ ಶೆಟ್ಟಿ ಡೈರೆಕ್ಟರ್
- ಕೆಜಿಎಫ್ ಬಳಿಕ ಶ್ರೀನಿಧಿ ಶೆಟ್ಟಿ ಬಾಳಲ್ಲಿ ಹೊಸ ಮನ್ವಂತರ ಶುರು !
ನಾಯಕನಟಿಯಾಗಿ ಬೆಳ್ಳಿ ಪರದೆ ಮೇಲೆ ಮಿಂಚಬೇಕು ಅಂದ್ರೆ ಅಂದ ಇರಬೇಕು. ಅದರೊಟ್ಟಿಗೆ ಅದೃಷ್ಠ ಕೂಡ ಇರಲೇಬೇಕು. ಅಂದ-ಅದೃಷ್ಠ ಎರಡರಿಂದ ಕೆಜಿಎಫ್ ಅಂತಹ ಐತಿಹಾಸಿಕ ಸಿನಿಮಾದಲ್ಲಿ ಅವಕಾಶ ಪಡೆದ ಕನ್ನಡತಿ ಶ್ರೀನಿಧಿ ಶೆಟ್ಟಿ, ಸಿಕ್ಕ ಚಾನ್ಸ್ನ ಬೊಂಬಾಟ್ ಆಗಿಯೇ ಬಳಸಿಕೊಂಡರು. ಎರಡು ಫ್ರಾಂಚೈಸ್ ಸಿನಿಮಾಗಳಿಂದ ಕೆಜಿಎಫ್ ನೂರಾರು ಕೋಟಿ ಗಳಿಸಿತು.
ಶ್ರೀನಿಧಿಗೆ ಪ್ಯಾನ್ ಇಂಡಿಯಾ ಸ್ಟಾರ್ಡಮ್ ಕೂಡ ಸಿಕ್ಕಿತು. ದುರಂತ ಅಂದ್ರೆ ಅದಾದ ಬಳಿಕ ಆಕೆ ಮೂರು ವರ್ಷ ಅವಕಾಶಗಳಿಲ್ಲದೆ ಮನೆಯಲ್ಲಿ ಕೈಕಟ್ಟಿ ಕೂತಿದ್ರು. ವಿಕ್ರಮ್ ಜೊತೆ ಕೋಬ್ರಾ ಸಿನಿಮಾದಲ್ಲಿ ನಟಿಸಿದ್ದರಾದ್ರೂ, ಅದು ಕೂಡ ಕೆಜಿಎಫ್ ಸಮಯದಲ್ಲೇ ಚಿತ್ರಿತವಾಗಿತ್ತು. ಆದ್ರೀಗ ಮೂರು ವರ್ಷಗಳ ನಂತ್ರ ಹಿಟ್-3 ಚಿತ್ರದಿಂದ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ ಶ್ರೀನಿಧಿ ಶೆಟ್ಟಿ.
ಯೆಸ್.. ಇತ್ತೀಚೆಗೆ ತೆರೆಕಂಡ ನ್ಯಾಚುರಲ್ ಸ್ಟಾರ್ ನಾನಿ ಮೂವಿಯಲ್ಲಿ ನಾನಿಗೆ ಜೋಡಿಯಾಗಿ ನಮ್ಮ ಕರಾವಳಿ ಕುವರಿ ಶ್ರೀನಿಧಿ ಮಿಂಚಿದ್ದರು. ಶೈಲೇಶ್ ಕೋಲನು ನಿರ್ದೇಶನದ ಹಿಟ್ ಫ್ರಾಂಚೈಸ್ನ ಮೂರನೇ ಸಿನಿಮಾ ಹಿಟ್-3ಗೆ ಆ್ಯಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾಗೆ ಥಿಯೇಟರ್ ಜೊತೆ ಓಟಿಟಿಯಲ್ಲೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 120ಕ್ಕೂ ಅಧಿಕ ಕೋಟಿ ಪೈಸಾ ವಸೂಲ್ ಮೂಲಕ ಹಿಟ್ ಸೀರೀಸ್ನಲ್ಲಿ ಹೊಸ ದಾಖಲೆ ಬರೆದಿದೆ.
ಇಲ್ಲಿಯವರೆಗೂ ಈ ಚಿತ್ರವನ್ನು ಶೈಲೇಶ್ ಒಬ್ಬರೇ ಡೈರೆಕ್ಟ್ ಮಾಡಿದ್ರು ಅಂದುಕೊಂಡಿದ್ದ ಪ್ರೇಕ್ಷಕರಿಗೆ ಹಾಗೂ ಚಿತ್ರರಂಗಕ್ಕೆ ಶ್ರೀನಿಧಿ ಶೆಟ್ಟಿ ವಿಡಿಯೋ ಮೂಲಕ ಶಾಕ್ ನೀಡಿದ್ದಾರೆ. ಹಿಟ್-3ಗೆ ಶೈಲೇಶ್ ಜೊತೆ ತಾವು ಕೂಡ ಆ್ಯಕ್ಷನ್ ಕಟ್ ಹೇಳಿದ್ದಾರೆ ಕನ್ನಡತಿ. ಹೌದು.. ಸಿನಿಮಾದಲ್ಲಿ ಲೀಡ್ನಲ್ಲಿ ನಾನಿ ಗರ್ಲ್ ಫ್ರೆಂಡ್ ಹಾಗೂ ಪೊಲೀಸ್ ಕಾಪ್ ಆಗಿ ಎರಡೆರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದ ಶ್ರೀನಿಧಿ, ನಟನೆ ಜೊತೆಗೆ ಡೈರೆಕ್ಷನ್ನಲ್ಲೂ ಭೇಷ್ ಅನಿಸಿಕೊಂಡಿದ್ದಾರೆ.
ಸ್ಟೇಷನ್ ಮುಂದೆ ನಾನಿ ಫೋನ್ನಲ್ಲಿ ಅವ್ರ ತಂದೆ ಜೊತೆ ಮಾತನಾಡೋ ಸೀಕ್ವೆನ್ಸ್ನ ಶ್ರೀನಿಧಿ ನಿರ್ದೇಶನ ಮಾಡಿದ್ದಾರೆ. ಅದ್ರ ವಿಡಿಯೋ ಇದೀಗ ಸಖತ್ ವೈರಲ್ ಆಗ್ತಿದೆ.
ಅಂದಹಾಗೆ ನಾನಿಯ ಹಿಟ್-3 ಸಿನಿಮಾ ಸಕ್ಸಸ್ ಬೆನ್ನಲ್ಲೇ ಒಂದಲ್ಲ ಎರಡೆರಡು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ ಕೆಜಿಎಫ್ ಕ್ವೀನ್ ಶ್ರೀನಿಧಿ. ಸಿದ್ದು ಜೊನ್ನಲಗಡ್ಡ ಜೊತೆ ತೆಲುಸು ಕದಾ ಹಾಗೂ ಕಿಚ್ಚ ಸುದೀಪ್ರ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಆ ಪೈಕಿ ತೆಲುಗು ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದೆ.