ಝೈದ್ ಖಾನ್ ಕಲ್ಟ್‌ಗೆ ಸಿಎಂ ಸಿದ್ದರಾಮಯ್ಯ ಬೆಂಬಲ ಸಿಕ್ಕಿದೆ. ಯೂತ್‌ಫುಲ್ ಸಿನಿಮಾ ನೋಡಿರೋ ಸಿಎಂ, ಹುಡುಗರಿಗೆ ಲವ್ ಟಿಪ್ಸ್ ನೀಡಿದ್ದಾರೆ. ಅಷ್ಟೇ ಅಲ್ಲ, ಇದು ಫ್ಯಾಮಿಲಿ ಕೂತು ನೋಡುವ ಸಿನಿಮಾ. ಅದ್ಯಾಕೆ ಸೆನ್ಸಾರ್ ಬೋರ್ಡ್ ಎ ಸರ್ಟಿಫಿಕೇಟ್ ಕೊಟ್ಟಿದೆ ಗೊತ್ತಿಲ್ಲ ಎಂದಿದ್ದಾರೆ. ಹಾಗಾದ್ರೆ ಸಿದ್ದು ಕಂಡಂತೆ ಕಲ್ಟ್ ಹೇಗಿದೆ..? ಮೊದಲ ವಾರದ ಕಲೆಕ್ಷನ್ ಎಷ್ಟು ಕೋಟಿ ಅನ್ನೋದ್ರ ರಿಪೋರ್ಟ್ ನಿಮ್ಮ ಮುಂದೆ.
ಜಮೀರ್ ಖಾನ್ ಮಗ ಝೈದ್ ಖಾನ್ ಸದ್ಯ ಕನ್ನಡಿಗರ ಮನೆ ಮಗನಾಗಿ ಬದಲಾಗಿದ್ದಾರೆ. ಅದಕ್ಕೆ ಕಾರಣ ಕಲ್ಟ್ ಮೂವಿ. ರಿಲೀಸ್‌ಗೂ ಮೊದಲೇ ರಾಜ್ಯದ ಮೂಲೆ ಮೂಲೆಗೆ ಭೇಟಿ ನೀಡಿ, ಭರ್ಜರಿ ಪ್ರಮೋಷನ್ಸ್ ಮಾಡಿದ್ರು. ಸಾಮಾನ್ಯವಾಗಿ ಜಿಲ್ಲಾ ಕೇಂದ್ರಗಳಿಗೆ ಸಿನಿಮಾ ಸ್ಟಾರ್‌ಗಳು ಹೋಗೋದು ವಾಡಿಕೆ. ಆದ್ರೆ ತಾಲ್ಲೂಕು ಸೆಂಟರ್‌ಗಳಿಗೂ ವಿಸಿಟ್ ಮಾಡಿ, ಜನರ ಜೊತೆ ಬೆರೆಯುವ ಕಾರ್ಯ ಮಾಡಿದ್ರು. ಅದ್ರ ಪ್ರತಿಫಲ ಮೊದಲ ವಾರದಲ್ಲೇ ಕಲ್ಟ್ ಬರೋಬ್ಬರಿ 5 ಕೋಟಿ 3 ಲಕ್ಷ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.

ಹುಡುಗ್ರಿಗೆ CM ಲವ್ ಟಿಪ್ಸ್..ಸಿದ್ದರಾಮಯ್ಯ ಕಂಡಂತೆ ಕಲ್ಟ್
ಲವ್‌ನಲ್ಲಿ ಸಿಲುಕಿಕೊಳ್ಳಬಾರ್ದು..ಹುಡ್ಗಿ ಮೋಸ ಮಾಡ್ತಾಳೆ..!

ಒಬ್ಬ ಉದಯೋನ್ಮುಖ ನಟನ ಸಿನಿಮಾ ಹೀಗೆ ಫಸ್ಟ್ ವೀಕ್‌ನಲ್ಲೇ ಬರೋಬ್ಬರಿ 5 ಕೋಟಿ ಗಳಿಸಿರೋದು ಸಾಮಾನ್ಯದ ಮಾತಲ್ಲ. ಯಶಸ್ವಿ ಎರಡನೇ ವಾರಕ್ಕೆ ಕಾಲಿಟ್ಟಿರೋ ಕಲ್ಟ್ ಸಿನಿಮಾಗೆ ಇದೀಗ ಸಿಎಂ ಸಿದ್ದರಾಮಯ್ಯನವರ ಬೆಂಬಲ ಕೂಡ ಸಿಕ್ಕಿದೆ. ಆಪ್ತ ಜಮೀರ್ ಜೊತೆ ಝೈದ್ ಕಲ್ಟ್ ಸಿನಿಮಾನ ಒರಾಯನ್ ಮಾಲ್‌ನಲ್ಲಿ ಕಣ್ತುಂಬಿಕೊಂಡ ಸಿಎಂ ಸಿದ್ದು, ಸಿಕ್ಕಾಪಟ್ಟೆ ಪ್ರಶಂಸಿಸಿದ್ದಾರೆ.

ಫ್ಯಾಮಿಲಿ ಸಿನಿಮಾ ಇದು.. A ಸರ್ಟಿಫಿಕೇಟ್ ಏಕೆ ಕೊಟ್ರು..?!
ರಚ್ಚು-ಝೈದ್ ಸೂಪರ್.. ಒಂದೇ ವಾರಕ್ಕೆ 5 ಕೋಟಿ ಕಮಾಲ್
ರಾಜಕೀಯ ಜಂಜಾಟಗಳ ನಡುವೆ ಕೇಂದ್ರ ಬಜೆಟ್‌ಗೂ ಮುನ್ನ ಕಲ್ಟ್ ಸಿನಿಮಾ ನೋಡಿ ರಿಲ್ಯಾಕ್ಸ್ ಆದ ಸಿಎಂ ಸಿದ್ದರಾಮಯ್ಯ, ನಟ ಝೈದ್ ಹಾಗೂ ರಚಿತಾ ರಾಮ್ ನಟನೆಯನ್ನ ಕೊಂಡಾಡಿದ್ದಾರೆ. ಇದು ಪಕ್ಕಾ ಫ್ಯಾಮಿಲಿ ಸಿನಿಮಾ. ಅದ್ಯಾಕೆ ಇದಕ್ಕೆ ಎ ಸರ್ಟಿಫಿಕೇಟ್ ನೀಡಿದ್ರೋ ಗೊತ್ತಿಲ್ಲ ಎಂದಿದ್ದಾರೆ ಸಿಎಂ.
ಇದೊಂದು ಹೊಸ ಮಾದರಿಯ ಸಿನಿಮಾ ಎಂದ ಸಿಎಂ ಸಿದ್ದು, ಲವ್‌ನಲ್ಲಿ ಸಿಲುಕಿಕೊಳ್ಳಬಾರದು. ಪ್ರೀತಿಸೋ ಹುಡುಗಿ ಶೋಕಿಗೋಸ್ಕರ ಹುಡುಗನಿಗೆ ಮೋಸ ಮಾಡ್ತಾಳೆ ಅಂತ ಪ್ರೀತ್ಸೋ ಗಂಡು ಹೃದಯಗಳಿಗೆ ಲವ್ ಟಿಪ್ಸ್ ಕೂಡ ನೀಡಿರೋದು ಅಚ್ಚರಿ.

ವಕೀಲ ವೃತ್ತಿ ಮಾಡ್ತಿದ್ದಾಗಿನ ದಿನಗಳನ್ನ ನೆನೆದ ಸಿದ್ದರಾಮಯ್ಯನವರು. ಆಗೆಲ್ಲಾ ಸಿನಿಮಾಗಳನ್ನ ನೋಡ್ತಿದ್ದೆ ಆದ್ರೀಗ ಸಮಯ ಇಲ್ಲ ಅನ್ನೋದನ್ನ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಅದಕ್ಕೆ ಝೈದ್ ಖಾನ್, ನಿರ್ದೇಶಕ ಅನಿಲ್ ಕುಮಾರ್ ಹಾಗೂ ಸಚಿವ ಜಮೀರ್ ಕೂಡ ಧನ್ಯವಾದ ತಿಳಿಸಿದ್ದಾರೆ.

ಒಟ್ಟಾರೆ ಕಲ್ಟ್ ಸಿನಿಮಾ ಯೂತ್ ಸೆಂಟ್ರಿಕ್ ಚಿತ್ರವಾದ್ರೂ ತಂದೆ-ಮಗನ ಬಾಂಧವ್ಯ ಕೂಡ ಅದ್ಭುತ ಎನ್ನುವಂತೆ ತೋರಿಸಿದೆ. ಇಲ್ಲಿ ಪ್ರೀತಿ, ಪ್ರೇಮ, ಪ್ರಣಯದ ಜೊತೆ ಅದ್ರಿಂದ ಆಗುವ ಪ್ರಳಯಗಳ ಬಗ್ಗೆ ಕಟ್ಟಿಕೊಡಲಾಗಿದೆ. ಝೈದ್ ಖಾನ್ ಜೊತೆ ರಚಿತಾ ರಾಮ್ ಹಾಗೂ ಮಲೈಕಾ ವಸುಪಾಲ್ ಇಬ್ಬರೂ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳುವ ರೇಂಜ್‌ಗೆ ಪರ್ಫಾಮ್ ಮಾಡಿದ್ದಾರೆ. ರಾಜ್ಯದ ಸಿಎಂ ಅವರೇ ಈ ಚಿತ್ರ ನೋಡಿ ಭೇಷ್ ಅಂತ ಬೆನ್ನು ತಟ್ಟಿರೋದು ಚಿತ್ರತಂಡದ ಉತ್ಸಾಹವನ್ನ ಮತ್ತಷ್ಟು ಇಮ್ಮಡಿಗೊಳಿಸಿದೆ.





