ಟೀಸರ್ ಹಾಗೂ ಸಾಂಗ್ಸ್‌ನಿಂದ ಚಿತ್ರಪ್ರೇಮಿಗಳ ನಾಡಿಮಿಡಿತ ಹೆಚ್ಚಿಸಿದ್ದ ಕರಿಕಾಡ ಸಿನಿಮಾದ ಟ್ರೈಲರ್ ಮತ್ತಷ್ಟು ಇಂಟೆನ್ಸ್ ಆಗಿದೆ. ಹೆಣ್ಣು ಹಾಗೂ ಮಣ್ಣಿಗಾಗಿ ನಡೆಯೋ ಯುದ್ಧದಲ್ಲಿ ಗುಂಡು-ಗುಂಡಿಗೆಯ ಕಾಳಗ ಸಹ ಜೋರಿದೆ. ದಟ್ಟವಾದ ಕಾಡಲ್ಲಿ ಯಾರು ಏತಕ್ಕಾಗಿ ಹೋರಾಡ್ತಾರೆ..? ಆ ಹೋರಾಟ ಹೇಗಿದೆ ಅನ್ನೋದ್ರ ಝಲಕ್ ಇಲ್ಲಿದೆ ನೋಡಿ.
ಸ್ಯಾಂಡಲ್‌ವುಡ್ ಅಂಗಳದಲ್ಲಿ ಹೊಸ ಪ್ರಯೋಗಗಳಿಗೆ ಫಿಲ್ಮ್ ಮೇಕರ್‌ಗಳು ತೆರೆದುಕೊಳ್ತಿದ್ದಾರೆ. ಇಂತಹ ಸುವರ್ಣ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಯುವ ಸಿನಿಮೋತ್ಸಾಹಿ ಪಡೆಯೊಂದು ಕರಿಕಾಡ ಅನ್ನೋ ಸಿನಿಮಾ ಮಾಡಿ, ತೆರೆಗೆ ತರ್ತಿದೆ. ಟೀಸರ್ ಹಾಗೂ ಸಾಂಗ್ಸ್ ಇಂಪ್ರೆಸ್ಸೀವ್ ಆಗಿದ್ದವು. ಇದೀಗ ಟ್ರೈಲರ್ ಅದನ್ನ ಮೀರಿಸೋ ರೇಂಜ್‌ಗಿದೆ. ಎಲ್ಲಿಯೂ ಇದೊಂದು ಹೊಸಬರ ಪ್ರಯತ್ನ ಅನಿಸಲ್ಲ. ಬದಲಿಗೆ ಭಿನ್ನ ಅಲೆಯ ಪ್ರಯೋಗವಾಗಿ ಕಾಣ್ತಿದೆ.
ಹೊಸ ಪ್ರತಿಭೆಗಳ ಸಿನಿಮೋತ್ಸಾಹದ ಕೈಗನ್ನಡಿ ಈ ಕರಿಕಾಡ
ಟೀಸರ್, ಸಾಂಗ್ಸ್ ಹಿಟ್.. ಟ್ರೈಲರ್ ಸಖತ್ ಇಂಪ್ರೆಸ್ಸೀವ್
ರಿದ್ದಿ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿ ಕಾಡ ನಟರಾಜ್ ಕಥೆ ಬರೆದು, ನಿರ್ಮಾಣ ಕೂಡ ಮಾಡಿರುವ ಚಿತ್ರ ಈ ‘ಕರಿಕಾಡ’. ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರೆವೇರಿತು. ತನ್ನ ಕಂಟೆಂಟ್, ಮೇಕಿಂಗ್ ಮೂಲಕವೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರಕ್ಕೆ ಕೆ. ವೆಂಕಟೇಶ್ ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.
ಪ್ರಪಂಚದಲ್ಲಿ ಯುದ್ಧ ಅಂತ ಶುರು ಆಗೋದು ಒಂದು ಹೆಣ್ಣಿಗೆ.. ಇನ್ನೊಂದು ಮಣ್ಣಿಗೆ.. ಎಂಬ ಡೈಲಾಗ್ ಸೇರಿದಂತೆ ಹಲವು ವಿಶೇಷತೆಗಳು ಈ ಟ್ರೈಲರ್‌ನಲ್ಲಿವೆ. ವೇದಿಕೆಯಲ್ಲಿ ಮಾತನಾಡಿದ ನಾಯಕ ಕಾಡ ನಟರಾಜ್, ‘ ನಾನು ಮತ್ತು ನಿರ್ದೇಶಕ ಕೆ. ವೆಂಕಟೇಶ್ ಸೇರಿ ಈ ಸಿನಿಮಾ ಜರ್ನಿ ಶುರು ಮಾಡಿದೆವು. ಚಿತ್ರದ 7 ಹಾಡುಗಳೂ ಅದ್ಭುತವಾಗಿವೆ. ಆ ಪೈಕಿ ರತುನಿ ಸಾಂಗ್ ಬಿಟ್ಟು ಆರು ಹಾಡನ್ನೂ ನಿರ್ದೇಶಕರೇ ಬರೆದಿದ್ದಾರೆ. ಬ್ಯಾಗ್ರೌಂಡ್ ಸ್ಕೋರ್ ಚಿತ್ರಕ್ಕೆ ಶಕ್ತಿ ತುಂಬಿದೆ. ನಮ್ಮ ಚಿತ್ರ ಪ್ರೇಕ್ಷಕರನ್ನು ರಂಜಿಸಿ ಅಳಿಸುತ್ತದೆ ಎಂಬ ವಿಶ್ವಾಸವಿದೆ. ಐದು ಭಾಷೆಯಲ್ಲಿ ಚಿತ್ರ ತಯಾರಾಗಿದ್ದು, ಕನ್ನಡ, ತಮಿಳು, ಮಲಯಾಳಂ ರೆಡಿ ಇದೆ. ತೆಲುಗು ಮತ್ತು ಹಿಂದಿ ಬಾಷೆಯ ಚಿತ್ರ ಸೆನ್ಸಾರ್ ಆಗಬೇಕಿದ್ದು ವಾರದ ನಂತರ ರಿಲೀಸ್ ಮಾಡುತ್ತೇವೆ. ಕರ್ನಾಟಕದಲ್ಲಿ 100 ಥಿಯೇಟರ್ ಕನ್ಫರ್ಮ್ ಆಗಿವೆ ಎಂದರು.
100ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಕರಿಕಾಡ ತೆರೆಗೆ ಸಜ್ಜು
ಹೆಣ್ಣು-ಮಣ್ಣಿಗಾಗಿ ಯುದ್ಧ.. ಗುಂಡು-ಗುಂಡಿಗೆಯ ಕಾಳಗ
ಚಿತ್ರದ ನಿರ್ಮಾಪಕಿ ದೀಪ್ತಿ ದಾಮೋದರ ಮಾತನಾಡಿ ಚಿತ್ರದ ಪ್ರೊಡ್ಯೂಸರ್ ನಾನೇ ಆದರೂ ಇನ್ನೂ ಸಿನಿಮಾ ನೋಡಿಲ್ಲ. ನಿಮ್ಮ ಜೊತೆ ಚಿತ್ರ ನೋಡಲು ಕಾಯುತ್ತಿದ್ದೇನೆ ಎಂದರು. ನಿರ್ದೇಶಕ ಕೆ ವೆಂಕಟೇಶ್ ಮಾತನಾಡಿ, ಈ ಸಿನಿಮಾ ಹಬ್ಬದೂಟದ ತರ. ಈಗಾಗಲೇ ಸೆನ್ಸಾರ್ ಆಗಿದ್ದು ಯು/ಎ ಪತ್ರ ಸಿಕ್ಕಿದೆ. ಸಿನಿಮಾ ಮೇಲೆ ನಮಗೆ ಪೂರ್ತಿ ನಂಬಿಕೆ ಇದೆ ಎಂದರು.
ನಾಯಕಿ ನಿರೀಕ್ಷಾ ಶೆಟ್ಟಿ ಮಾತನಾಡಿ ನಾನಿಲ್ಲಿ ತಂಗಾಳಿ ಆಗಿ ಬರ್ತೀನಾ, ಬಿರುಗಾಳಿ ಆಗಿರುತ್ತೇನಾ ಅನ್ನೋದನ್ನ ನೀವು ಚಿತ್ರದಲ್ಲೇ ನೋಡಿ. ಹಳ್ಳಿ ಹುಡುಗಿಯ ಪಾತ್ರ ಮಾಡೋದು ಚಾಲೆಂಜ್ ಆಗಿತ್ತು. ಹಳ್ಳಿ ಸೊಗಡಿಗೆ ಹೊಂದಿಕೊಳ್ಳಲು ಕಷ್ಟ ಆಯ್ತು ಎಂದರು.
ಚಿತ್ರಕ್ಕೆ ಶಶಾಂಕ್ ಶೇಷಗಿರಿ ಹಾಗೂ ಅತಿಶಯ್ ಜೈನ್ ಅವರ ಸಂಗೀತವಿದೆ. ವೇದಿಕೆಯಲ್ಲಿ ಸಂಗೀತ ನಿರ್ದೇಶಕರು ಸೇರಿದಂತೆ ನಟರಾದ ಯಶ್ ಶೆಟ್ಟಿ, ವಿಜಯ್ ಚಂಡೂರ್, ಬೇಬಿ ರಿದ್ಧಿ, ರಶ್ಮಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಚಿತ್ರದಲ್ಲಿ ನಾಯಕ ಯಾವುದಕ್ಕೆ ಯುದ್ಧ ಮಾಡುತ್ತಾನೆ ಅನ್ನೋದನ್ನ ನೀವು ಥಿಯೇಟರ್‌ನಲ್ಲೇ ನೋಡಿ ಉತ್ತರ ಕಂಡುಕೊಳ್ಳಬೇಕಿದೆ. ಅಂದಹಾಗೆ ಸಿನಿಮಾ ಇದೇ ಫೆಬ್ರವರಿ 6ಕ್ಕೆ ನಿಮ್ಮ ಹತ್ತಿರದ ಥಿಯೇಟರ್‌ಗೆ ಎಂಟ್ರಿ ಕೊಡ್ತಿದೆ. ಮಿಸ್ ಮಾಸ್ಕೋಬೇಡಿ.
