ಲೇಡಿ ಸೂಪರ್ ಸ್ಟಾರ್ ರಚ್ಚು ದುಬಾರಿ ಕಾರ್ ನೋಡಿದ್ದೀರಾ?

3ಕೋಟಿ ಬೆಲೆ ಡಿಫೆಂಡರ್‌‌ನಲ್ಲಿ ಶಿವಣ್ಣ-ಗೀತಕ್ಕ ಜಾಲಿ ರೈಡ್..!

Untitled design 2026 03 26T185110.627

ಸ್ಯಾಂಡಲ್‌ವುಡ್‌ನ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಇತ್ತೀಚೆಗೆ ದುಬಾರಿ ಡಿಫೆಂಡರ್ ಕಾರ್‌ವೊಂದನ್ನ ಖರೀದಿಸಿದ್ದಾರೆ. ಅದ್ರ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಅಷ್ಟೇ ಅಲ್ಲ, ಆ ನ್ಯೂ ಕಾರ್‌‌ನಲ್ಲಿ ಯಾರ ಜೊತೆ ರೈಡ್ ಹೋಗಿದ್ದಾರೆ ಅನ್ನೋದು ಕೂಡ ತೋರಿಸ್ತೀವಿ. ಇದರ ಜೊತೆ ಜೊತೆಗೆ ಲೇಟೆಸ್ಟ್ ಸ್ಯಾಂಡಲ್‌ವುಡ್ ಅಪ್ಡೇಟ್ಸ್ ಇಲ್ಲಿದೆ.

ರಚಿತಾ ರಾಮ್.. ಡಿಂಪಲ್ ಕ್ವೀನ್ ಲೇಡಿ ಸೂಪರ್ ಸ್ಟಾರ್ ಆದ ಬಳಿಕ ದುಬಾರಿ ಕಾರ್‌ವೊಂದನ್ನ ಖರೀದಿಸಿದ್ದಾರೆ. ಸುಮಾರು 3 ಕೋಟಿಗೂ ಅಧಿಕ ಬೆಲೆಯ ಡಿಫೆಂಡರ್ ಕಾರ್ ಇದಾಗಿದ್ದು, ಡಿಕೆಡಿ ಸೆಟ್‌‌ನಲ್ಲಿ ಹಿರಿಯ ನಟ ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌‌ಕುಮಾರ್ ದಂಪತಿ ಜೊತೆ ರೌಂಡ್ಸ್ ಹಾಕಿದ್ದಾರೆ ರಚ್ಚು. ಸ್ವತಃ ಶಿವಣ್ಣನೇ ಕಾರ್ ಓಡಿಸಿ, ತುಂಬಾ ಚೆನ್ನಾಗಿದೆ ಅಂತ ರಚಿತಾಗೆ ಕಂಗ್ರಾಜುಲೇಷನ್ಸ್ ಹೇಳಿದ್ದಾರೆ.

ಅಂದಹಾಗೆ ರಚಿತಾ ರಾಮ್ ಸದ್ಯ ಸಿನಿಮಾವೊಂದರ ಅಭಿನಯಕ್ಕಾಗಿ ಬರೋಬ್ಬರಿ ಒಂದು ಕೋಟಿ ರೂಪಾಯಿ ರೆಮ್ಯುನರೇಷನ್ ಪಡೆಯುತ್ತಾರಂತೆ. ಹೀಗಿರುವಾಗ ಅವ್ರ ಬಳಿ ಸಾಕಷ್ಟು ಕಾರ್‌‌‌ಗಳು ಇರೋದ್ರಲ್ಲಿ ಡೌಟೇ ಇಲ್ಲ. ಈ ಹಿಂದೆ ದುಬಾರಿ ಬೆಂಝ್ ಕಾರ್ ಬಳಸುತ್ತಿದ್ದ ಬುಲ್ ಬುಲ್ ಬೆಡಗಿ, ಇದೀಗ ಡಿಫೆಂಡರ್ ಖರೀದಿಸಿ ಎಲ್ಲರ ಹುಬ್ಬೇರಿಸಿದ್ದಾರೆ.

 

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version