ಸೋರಬ್ ಬೇಡಿ ಜೊತೆ ಡೇಟಿಂಗ್ ವದಂತಿಗೆ ಮಲೈಕಾ ಅರೋರಾ ಸ್ಪಷ್ಟನೆ; ಹೇಳಿದ್ದೇನು ಗೊತ್ತಾ?

Untitled design 2026 03 26T222034.165

ಮುಂಬೈ: ಬಾಲಿವುಡ್‌ನ ಸ್ಟೈಲಿಶ್ ನಟಿ ಮಲೈಕಾ ಅರೋರಾ ಅವರು ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಸೋರಬ್ ಬೇಡಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ವದಂತಿಗಳು ತಮಗೆ ಕಿರಿಕಿರಿ ಎನಿಸುತ್ತವೆ, ಆದರೂ ಇವುಗಳನ್ನು ಕೇವಲ ಒಂದು ಜೋಕ್ ಎಂದು ಪರಿಗಣಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಸೋರಬ್ ಬೇಡಿ ಜೊತೆಗಿನ ವದಂತಿಗೆ ಕ್ಲಾರಿಟಿ:

ಮಲೈಕಾ ಅರೋರಾ ಮತ್ತು ಸೋರಬ್ ಬೇಡಿ ಅವರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಈಗಾಗಲೇ ಸೋರಬ್ ಬೇಡಿ ಅವರು ‘ನಾವು ಜಸ್ಟ್ ಫ್ರೆಂಡ್ಸ್’ ಎಂದು ಸ್ಪಷ್ಟನೆ ನೀಡಿದ್ದರು. ಈಗ ಮಲೈಕಾ ಅವರು ಕೂಡ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಈಗ ಇವೆಲ್ಲವೂ ಕಿರಿಕಿರಿ ಎನಿಸುತ್ತದೆ. ನಾನು ಇವುಗಳನ್ನು ಕೇವಲ ಒಂದು ಜೋಕ್ ಎಂದು ಪರಿಗಣಿಸುತ್ತೇನೆ’ ಎಂದು ತಿಳಿಸಿದ್ದಾರೆ. ಸಿನಿಮಾ ರಂಗದಲ್ಲಿ ಯಾರ ಜೊತೆ ಕಂಡರೂ ಲಿಂಕ್-ಅಪ್ ವದಂತಿಗಳು ಹರಡುವುದು ಸಾಮಾನ್ಯ ಎಂದು ಅವರು ಹೇಳಿದ್ದಾರೆ.

ಅರ್ಹಾನ್ ಜೊತೆ ತಮಾಷೆ

ಈ ವದಂತಿಗಳನ್ನು ನೋಡಿ ಮಲೈಕಾ ಮತ್ತು ಅವರ ಪುತ್ರ ಅರ್ಹಾನ್ ಖಾನ್ ಇಬ್ಬರೂ ಒಟ್ಟಾಗಿ ನಗುತ್ತಾರಂತೆ. ‘ಅರ್ಹಾನ್ ಮತ್ತು ನಾನು ಇಂತಹ ವಿಷಯಗಳ ಬಗ್ಗೆ ಸಾಕಷ್ಟು ತಮಾಷೆ ಮಾಡುತ್ತೇವೆ’ ಎಂದು ಮಲೈಕಾ ಅರೋರಾ ಅವರು ಹೇಳಿದ್ದಾರೆ. ತಾಯಿ-ಮಗನ ನಡುವಿನ ಈ ಬಾಂಧವ್ಯವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಸಿಂಗಲ್ ಮದರ್ ಆಗಿ ಅನುಭವ:

ಒಬ್ಬ ಸಿಂಗಲ್ ಮದರ್ ಆಗಿ ಹೊಸ ಸಂಗಾತಿಯನ್ನು ಹುಡುಕುವುದು ಕಷ್ಟವೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಲೈಕಾ, ತಮ್ಮ ಜೀವನದ ಬಗ್ಗೆ ಆಸಕ್ತಿದಾಯಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

‘ಯಾರೋ ಒಬ್ಬ ಪುರುಷ ನನ್ನ ಜೀವನಕ್ಕೆ ಬಂದು ನನ್ನ ಅಸ್ತಿತ್ವವನ್ನು ಸಾಬೀತುಪಡಿಸುವ ಅಗತ್ಯವಿಲ್ಲ. ಮೊದಲು ನಾನು ಒಬ್ಬ ವ್ಯಕ್ತಿಯಾಗಿ ನನ್ನನ್ನು ನಾನು ಕಂಡುಕೊಳ್ಳಬೇಕು. ನನ್ನ ಎಲ್ಲಾ ಸಂಬಂಧಗಳು ನನ್ನದೇ ಆದ ರೀತಿಯಲ್ಲಿ ಇರಬೇಕು’ ಎಂದು ಅವರು ತಿಳಿಸಿದ್ದಾರೆ. 

ವೈಯಕ್ತಿಕ ಜೀವನದ ಹಿನ್ನೆಲೆ

ಮಲೈಕಾ ಅರೋರಾ ಅವರು ಅರ್ಬಾಜ್ ಖಾನ್ ಅವರೊಂದಿಗೆ 19 ವರ್ಷಗಳ ವೈವಾಹಿಕ ಜೀವನದ ನಂತರ 2017ರಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ ನಟ ಅರ್ಜುನ್ ಕಪೂರ್ ಜೊತೆ 6 ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ಆದರೆ 2024ರಲ್ಲಿ ಇವರಿಬ್ಬರೂ ಬೇರ್ಪಟ್ಟಿದ್ದಾರೆ ಎಂಬುದು ಖಚಿತವಾಯಿತು.  ಮಲೈಕಾ ಸಿಂಗಲ್ ಆಗಿದ್ದು, ಅವರು ಯಾರ ಜೊತೆ ಕಾಣಿಸಿಕೊಂಡರೂ ಸುದ್ದಿಯಾಗುತ್ತದೆ.

ಫಿಟ್ನೆಸ್ ಐಕಾನ್ ಮಲೈಕಾ:

52 ವರ್ಷ ವಯಸ್ಸಿನ ಮಲೈಕಾ ಅರೋರಾ ಅವರು ತಮ್ಮ ಫಿಟ್ನೆಸ್ ಮತ್ತು ಯೌವನದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರಿಗೆ ಇಷ್ಟು ವಯಸ್ಸು ಆಗಿದೆ ಎಂದು ಯಾರೂ ಕೂಡ ಹೇಳಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವರು ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಹಾಗಾಗಿ ಅವರಿಗೆ ಚಿತ್ರರಂಗದಲ್ಲಿ ಈಗಲೂ ಒಳ್ಳೆಯ ಬೇಡಿಕೆ ಇದೆ. ಅನೇಕ ಬ್ರ್ಯಾಂಡ್‌ಗಳಿಗೆ ಅವರು ಪ್ರಚಾರ ರಾಯಭಾರಿಯಾಗಿದ್ದಾರೆ.

Exit mobile version