ಕಾಂತಾರದ ಕಾವು ದಿನದಿಂದ ದಿನಕ್ಕೆ ಜೋರಾಗ್ತಿದೆ.. ಸಾಮಾನ್ಯವಾಗಿ ಎಂಥದ್ದೇ ಸಿನಿಮಾ ಆದ್ರೂ ಒಂದು ವಾರ ಅಥ್ವಾ ಹತ್ತು ದಿನ ಅಷ್ಟೇ. ಆದ್ರೀಗ ಕಾಂತಾರ ಯಶಸ್ವಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಅದೂ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಇಷ್ಟಕ್ಕೂ ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಇನ್ನೂ ಸಿನಿಮಾ ನೋಡಿಲ್ಲ ಅನ್ನೋ ಟಾಕ್ ಸೋಶಿಯಲ್ ಮೀಡಿಯಾದಲ್ಲಿ ಜೋರಿದೆ. ಆ ಬಗ್ಗೆ ಪ್ರಗತಿ ರಿಷಬ್ ಶೆಟ್ಟಿ ಏನ್ ಹೇಳ್ತಾರೆ ಈ ಸ್ತೋರಿ ನೋಡಿ.
ಈ ವರ್ಷ ಅತಿಹೆಚ್ಚು ಗಳಿಸಿದ ವಿಕ್ಕಿ ಕೌಶಲ್-ರಶ್ಮಿಕಾ ಮಂದಣ್ಣ ಜೋಡಿಯ ಛಾವಾ ಸಿನಿಮಾದ 808 ಕೋಟಿ ಕಲೆಕ್ಷನ್ ದಾಖಲೆಯನ್ನ ಕೂಡ ಸರಿಗಟ್ಟಿದೆ ಕಾಂತಾರ. ಆ ಮೂಲಕ ನಂಬರ್ ಸ್ಥಾನದಲ್ಲಿ ಎಲ್ಲರ ಹುಬ್ಬೇರಿಸಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಹಾಗೋ ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ಸೃಷ್ಠಿಸಿದೆ. ಈ ಸಿನಿಮಾನ ಮೆಚ್ಚದವರೇ ಇಲ್ಲ ಅನ್ನುವಂತೆ ದಿನದಿಂದ ದಿನಕ್ಕೆ ಸದ್ದು ಮಾಡುತ್ತಲೇ ಇದೆ.
ರಕ್ಷಿತ್, ರಾಜ್ ಶೆಟ್ಟಿ ಕಾಂತಾರ ನೋಡಿಲ್ಲವೇಕೆ..? ಪ್ರಗತಿ ಟಾಕ್
ಜಿಂಕೆಯಂತೆ ಜಿಗಿದು ಬಂದು ರಿಷಬ್‌ನ ಅಪ್ಪಿ, ಬೆನ್ತಟ್ಟಿದ್ದ ರಕ್ಷಿತ್
ಅಂದಹಾಗೆ ಕಾಂತಾರ ಚಾಪ್ಟರ್-1ಗೂ ಮುನ್ನ ರಕ್ಷಿತ್-ರಿಷಬ್ ಹಾಗೂ ರಾಜ್ ಬಿ ಶೆಟ್ಟಿ ತ್ರಿಬಲ್ ಆರ್ ನಂತೆ ಒಡಹುಟ್ಟಿದ ಸಹೋದರರಂತೆ ಇದ್ದರು. ಆದ್ರೀಗ ಒಬ್ಬರನ್ನ ಕಂಡ್ರೆ ಒಬ್ಬರಿಗೆ ಆಗಲ್ಲ. ಅವರುಗಳ ಸ್ನೇಹ-ಬಾಂಧವ್ಯದಲ್ಲಿ ಬಿರುಕು ಮೂಡಿದೆ. ಪರಸ್ಪರ ವೈಮನಸ್ಸುಗಳು ಶುರುವಾಗಿವೆ ಅನ್ನೋ ಮಾತುಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಹರಿದಾಡ್ತಿವೆ. ಆದ್ರೆ ನಿಜಕ್ಕೂ ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಕಾಂತಾರ ನೋಡಿದ್ರಾ..? ಈ ಬಗ್ಗೆ ಪ್ರಗತಿ ರಿಷಬ್ ಶೆಟ್ಟಿ ಏನ್ ಹೇಳಿದ್ದಾರೆ ನೋಡಿ.
ಇತ್ತೀಚೆಗೆ ಗ್ಯಾರಂಟಿ ನ್ಯೂಸ್ ಸಂದರ್ಶನದಲ್ಲಿ ರಿಷಬ್ ಶೆಟ್ಟಿ ಪತ್ನಿ ಕಮ್ ಕಾಂತಾರ ಕಾಸ್ಟ್ಯೂಮ್ ಡಿಸೈನರ್ ಆಗಿರೋ ಪ್ರಗತಿ ರಿಷಬ್ ಶೆಟ್ಟಿ ಈ ಅಂತೆ ಕಂತೆಗಳ ಬಗ್ಗೆ ಮಾತನಾಡಿದ್ದಾರೆ. ಈ ಹಿಂದಿನ ಕಾಂತಾರ ಸಿನಿಮಾದ ಪ್ರೀಮಿಯರ್‌ನಲ್ಲಿ ಜಿಂಕೆಯಂತೆ ಜಿಗಿದು ಬಂದು ರಿಷಬ್‌ನ ತಬ್ಬಿ, ಸೂಪರ್ ಮಗ. ಒಳ್ಳೆಯ ಸಿನಿಮಾ ಮಾಡಿದ್ದೀಯ. ಗೆದ್ದೆ ನೀನು. ಭೇಷ್ ಅಂತ ರಿಷಬ್‌ಗೆ ಬೆನ್ನು ತಟ್ಟಿದ್ದ ರಕ್ಷಿತ್ ಈ ಬಾರಿ ಇನ್ನೂ ಸಿನಿಮಾ ನೋಡಿಲ್ಲ. ಸಿಂಗಲ್ ಪೋಸ್ಟ್ ಕೂಡ ಹಾಕಿಲ್ಲ. ಅದಕ್ಕೆ ಅಮೆರಿಕಾದಲ್ಲಿರೋ ತಮ್ಮ ಚಿಂಟು ಅಣ್ಣ ರಕ್ಷಿತ್ ಬಗ್ಗೆ ಪ್ರಗತಿ ಹೇಳಿದ್ದು ಹೀಗೆ.
ಅಮೆರಿಕಾದಲ್ಲಿ ಬೀಡು ಬಿಟ್ಟಿದ್ದಾರಂತೆ ಪ್ರಗತಿ ಅವ್ರ ಚಿಂಟು ಅಣ್ಣ
ಸು ಫ್ರಮ್ ಸೋ ನೋಡಿದ ರಿಷಬ್ ದಂಪತಿ.. ಹೇಳಿದ್ದೇನು..?!
ಇನ್ನು ಕಾಂತಾರ ಚಿತ್ರದ ಪಂಜುರ್ಲಿ ಸೀನ್‌ಗಳನ್ನ ಚಿತ್ರಿಸಿಕೊಟ್ಟಿದ್ದ ರಾಜ್ ಬಿ ಶೆಟ್ಟಿಯ ಸು ಫ್ರಮ್ ಸೋ ಚಿತ್ರವನ್ನು ರಿಷಬ್ ದಂಪತಿ ನೋಡಿದ್ದಾರೆ. ಆದ್ರೆ ರಾಜ್ ಶೆಟ್ಟಿ ಮಾತ್ರ ಕಾಂತಾರ-1 ನೋಡಿಲ್ಲ. ನೋಡಿದಂತೆ ಒಂದು ಪೋಸ್ಟ್ ಕೂಡ ಮಾಡಿಲ್ಲ. ಈ ಬಗ್ಗೆಯೂ ಪ್ರಗತಿ ಶೆಟ್ಟಿ ತಮ್ಮ ನೆಚ್ಚಿನ ರಾಜಣ್ಣನ ಬಗ್ಗೆ ಮಾತನಾಡಿದ್ದಾರೆ.
ಒಟ್ಟಾರೆ.. ಪ್ರಗತಿ ಅವ್ರ ಮಾತುಗಳನ್ನ ಗಮನಿಸಿದ್ರೆ ರಕ್ಷಿತ್-ರಾಜ್-ರಿಷಬ್ ನಡುವೆ ಅಂಥದ್ದೇನೂ ಆಗಿಲ್ಲ. ಎಲ್ಲರೂ ಅವರವರ ಕೆಲಸ ಕಾರ್ಯಗಳಲ್ಲಿ ಬ್ಯುಸಿ ಆಗಿದ್ದಾರಷ್ಟೇ. ಆದ್ರೆ ಸಮಾಜ ಮಾತ್ರ ಹತ್ತು ಹಲವು ಗಾಸಿಪ್‌ಗಳನ್ನ ಮಾಡ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ಪೋಸ್ಟ್‌ಗಳು ಹಾಕಲಾಗ್ತಿದೆ. ಅವರುಗಳ ನಡುವೆ ಪರಸ್ಪರ ಪ್ರೀತಿ, ಗೌರವ ಹಾಗೂ ಅಭಿಮಾನ ಹಾಗೆಯೇ ಉಳಿದುಕೊಂಡಿದೆ. ಆರೋಗ್ಯಕರ ಸ್ಪರ್ಧೆ ನಿಜಕ್ಕೂ ಒಳ್ಳೆಯದು. ಅದು ಎಲ್ಲರಲ್ಲೂ ಇದ್ರೆ ಮತ್ತಷ್ಟು ಸದಭಿರುಚಿಯ ಚಿತ್ರಗಳು ಹೊರಬರೋಕೆ ಸಾಧ್ಯ.