ಕಾಂತಾರ ಚಿತ್ರ ಥಿಯೇಟರ್ ಜೊತೆ ಓಟಿಟಿಗೂ ಬಂದಾಯ್ತು. ಸ್ಲ್ಯಾನಿಶ್‌ಗೂ ಡಬ್ ಆಗಿ ರಿಲೀಸ್ ಆಗ್ತಿದೆ. ರಾಜ್ಯೋತ್ಸವ ವಿಶೇಷ ಟಿಕೆಟ್ ದರ 99, 150ರೂಗೆ ಇಳಿಸಿದೆ ಹೊಂಬಾಳೆ. ಆದ್ರೆ ರಿಷಬ್ ಶೆಟ್ಟಿ ಮಾತ್ರ ಸದ್ಯದಲ್ಲೇ ಯಾರ ಕೈಗೂ ಸಿಗದೆ ಸ್ವಲ್ಪ ದಿನ ಗಾಯಬ್ ಆಗ್ತಿದ್ದಾರೆ. ಇಷ್ಟಕ್ಕೂ ಡಿವೈನ್ ಸ್ಟಾರ್ ಎಲ್ಲಿ ಹೋಗ್ತಿದ್ದಾರೆ..? ಏನು ಮಾಡ್ತಿದ್ದಾರೆ ಅಂತೀರಾ..? ಈ ಎಕ್ಸ್‌ಕ್ಲೂಸಿವ್ ಸ್ಟೋರಿ ಒಮ್ಮೆ ನೋಡಿ.
ಕಾಂತಾರ ಚಾಪ್ಟರ್-1.. ವರ್ಲ್ಡ್ ಬಾಕ್ಸ್ ಆಫೀಸ್‌ನಲ್ಲಿ 850ಕ್ಕೂ ಅಧಿಕ ಕೋಟಿ ರೂಪಾಯಿ ಗಳಿಸೋ ಮೂಲಕ ಕೆಜಿಎಫ್ ಚಾಪ್ಟರ್-2 ಬಳಿಕ ಅತಿಹೆಚ್ಚು ಗಳಿಸಿದ ಕನ್ನಡದ ಸಿನಿಮಾ ಅಂತ ಎರಡನೇ ಸ್ಥಾನ ಅಲಂಕರಿಸಿದೆ. ಹೊಂಬಾಳೆ ಫಿಲಂಸ್ ನೀಡ್ತಿರೋ ಕಂಟೆಂಟ್ ಬೇಸ್ಡ್ ಸಿನಿಮಾಗಳಿಗೆ ಪ್ರೇಕ್ಷಕರು ಕೂಡ ಫಿದಾ ಆಗ್ತಿದ್ದಾರೆ. ವಿಶ್ಯುವಲ್ ಟ್ರೀಟ್ ಜೊತೆ ಮೈಂಡ್ ಬ್ಲೋಯಿಂಗ್ ಮೇಕಿಂಗ್‌ನಿಂದ ಗಟ್ಟಿತನಕ್ಕೆ, ಅದ್ಭುತಗಳಿಗೆ ಸಾಕ್ಷಿ ಆಗ್ತಿದೆ ಹೊಂಬಾಳೆ ಫಿಲಂಸ್. ಅದ್ರಲ್ಲೂ ರಿಷಬ್ ಶೆಟ್ಟಿಯ ಎಫರ್ಟ್‌ನ ಇಡೀ ದುನಿಯಾ ಕೊಂಡಾಡ್ತಿದೆ.
ಗಾಯಬ್ ಆಗ್ತಾರೆ ರಿಷಬ್.. ಎಲ್ಲಿ ಹೋಗ್ತಾರೆ ಗೊತ್ತಾ..?!
ದೈಹಿಕವಾಗಿ & ಮಾನಸಿಕವಾಗಿ ಘಾಸಿಗೊಂಡಿರೋ ಶೆಟ್ರು
ಕಾಂತಾರ ತೆರೆಕಂಡ ಒಂದೇ ತಿಂಗಳಲ್ಲಿ ಸಿನಿಮಾ ಇನ್ನೂ ಥಿಯೇಟರ್‌ನಲ್ಲಿ ಇರುವಂತೆ ಸಿನಿಮಾ ಓಟಿಟಿಗೆ ಬಂದಾಗಿದೆ. ಕನ್ನಡ ರಾಜ್ಯೋತ್ಸವ ವಿಶೇಷ ಇಂದಿನಿಂದ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ಕೂಡ ಇಳಿಕೆಯಾಗಿದೆ. 99 ರೂ ಹಾಗೂ 150 ರೂ ಅಂತ ಖುದ್ದು ಹೊಂಬಾಳೆ ಫಿಲಂಸ್ ಅಫಿಶಿಯಲಿ ಅನೌನ್ಸ್ ಮಾಡಿದೆ. ಅಲ್ಲದೆ, ಸ್ಪ್ಯಾನಿಶ್ ಭಾಷೆಗೂ ಡಬ್ ಆಗಿರೋ ಕಾಂತಾರ-1 ಸದ್ಯದಲ್ಲೇ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಅಲ್ಲಿನ ಮೂಲ ನಿವಾಸಿಗಳಿಗೆ ನಮ್ಮ ಮಣ್ಣಿನ ಸೊಗಡಿನ ಕಥೆ ಉಣಬಡಿಸೋ ಧಾವಂತದಲ್ಲಿದೆ.
ಕಾಂತಾರ-1 ಸಿನಿಮಾ ಒಂದೇ ಚಿತ್ರವಾಗಿರಬಹುದು. ಆದ್ರೆ ನಾಲ್ಕೈದು ಸಿನಿಮಾಗಳಷ್ಟು ಎಫರ್ಟ್ ಇದೊಂದಕ್ಕೇ ಹಾಕಿದ್ದಾರೆ ರಿಷಬ್. ಹೌದು.. ಅದಕ್ಕಾಗಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಿಕ್ಕಾಪಟ್ಟೆ ದಣಿದಿದ್ದಾರೆ ಕೂಡ. ಕ್ಲೈಮ್ಯಾಕ್ಸ್ ಮಾಡುವಾಗ ಕಾಲಲ್ಲಿ ಬೊಬ್ಬೆ ಬಂದರೂ ಸಹ ಯಾವುದನ್ನೂ ಲೆಕ್ಕಿಸದೆ, ಸಾವಿರಾರು ಮಂದಿ ಜೂನಿಯರ್ ಆರ್ಟಿಸ್ಟ್‌ಗಳು, ನೂರಾರು ಮಂದಿ ಕಲಾವಿದರು ಹಾಗೂ ತಂತ್ರಜ್ಞರನ್ನ ಕಟ್ಟಿಕೊಂಡು ಇಂಥದ್ದೊಂದು ದೃಶ್ಯ ಚಿತ್ತಾರ ಮೂಡಿಸಿದ್ರು. ಆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಾಗಿದೆ. ಇದಕ್ಕಿಂತ ಹೆಚ್ಚೇನೂ ನಿರೀಕ್ಷೆ ಮಾಡೋಕೆ ಸಾಧ್ಯ ಅಲ್ಲವೇ..?
ಒಂದು ತಿಂಗಳ ಟ್ರೀಟ್ಮೆಂಟ್.. ನೋ ಫೋನ್.. ನೋ ಕಾಲ್ಸ್
ಟ್ರೀಟ್ಮೆಂಟ್ ಮುಗಿಸಿ ರೆಡಿ ಆದ ನಂತ್ರ ಹನುಮಾನ್‌ಗೆ ಜೈ..!
ಆದ್ರೀಗ ರಿಷಬ್ ತಮ್ಮ ಮುಂದಿನ ಸಿನಿಮಾ ಕೂಡ ಅನೌನ್ಸ್ ಮಾಡಿದ್ದಾರೆ. ತೆಲುಗಿನ ಪ್ರಶಾಂತ್ ವರ್ಮಾ ಜೊತೆ ಜೈ ಹನುಮಾನ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಅದು ಶುರುವಾಗೋಕೂ ಮುನ್ನ ಅವ್ರು ದಣಿವಾರಿಸಿಕೊಳ್ಳಬೇಕಿದೆ. ಹೌದು.. ಕಾಂತಾರಕ್ಕಾಗಿ ತನು, ಮನವನ್ನು ಅರ್ಪಿಸಿ, ಹಗಲಿರುಳು ಬೆವರಿನ ಜೊತೆ ರಕ್ತ ಕೂಡ ಸುರಿಸಿರೋ ರಿಷಬ್, ಮೆಂಟಲಿ ಹಾಗೂ ಫಿಸಿಕಲಿ ಸದೃಢರಾಗಬೇಕಿದೆ. ಅದೇ ಕಾರಣದಿಂದ ಆಯುರ್ವೇದಿಕ್ ಟ್ರೀಟ್ಮೆಂಟ್‌ಗೆ ತೆರಳಲು ಸಜ್ಜಾಗಿದ್ದಾರೆ. ಒಂದು ತಿಂಗಳ ಕಾಲ ಯಾರ ಕೈಗೂ ಸಿಗಲ್ಲ. ಫೋನ್, ಮೆಸೇಜ್ ಎಲ್ಲದರಿಂದ ದೂರ ದೂರ ಎನ್ನಲಾಗ್ತಿದೆ.
ಹೌದು.. ಡಿವೈನ್ ಸ್ಟಾರ್‌ಗೆ ಆ ದೇವರ ಅನುಗ್ರಹ ಇತ್ತು. ಅದೇ ಕಾರಣದಿಂದ ಅವ್ರ ಕಾಂತಾರ-1 ಸಂಕಲ್ಪ ನಿಜಕ್ಕೂ ನಿರೀಕ್ಷೆಗೂ ಮೀರಿ ಸಾಫ್ಯಲ್ಯಗೊಂಡಿದೆ. ಇದೀಗ ಜಿಂದಾಲ್ ಅಥ್ವಾ ಧರ್ಮಸ್ಥಳದಲ್ಲಿ ಒಂದು ತಿಂಗಳ ಕಾಲ ಕಂಪ್ಲೀಟ್ ರಿಫ್ರೆಶ್ ಆಗುವ ಯೋಜನೆಯಲ್ಲಿದ್ದಾರೆ ರಿಷಬ್. ಅದಕ್ಕಾಗಿ ಎಲ್ಲಾ ಕೆಲಸ ಕಾರ್ಯಗಳನ್ನ ಮುಗಿಸಿಕೊಂಡಿದ್ದು, ಮುಂದಿನ ಚಿತ್ರಕ್ಕೆ ದೇಹವನ್ನು ಒಗ್ಗಿಸಿಕೊಳ್ಳುವ ಮೊದಲು ಕಾಂತಾರ ಶೂಟಿಂಗ್ ವೇಳೆ ಆಗಿರೋ ಗಾಯಗಳು ಮಾಸಬೇಕಿದೆ. ಆ ಒತ್ತಡಗಳಿಂದ ಅಕ್ಷರಶಃ ಹೊರಬೇಕಿದೆ. ಸೋ ಸದ್ಯದಲ್ಲೇ ಗಾಯಬ್ ಆಗಲಿದ್ದಾರೆ ಡಿವೈನ್ ಸ್ಟಾರ್.
 
			
 
					




 
                             
                             
                             
                            