ರಿಷಬ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ಹಾಗೂ ಹೊಂಬಾಳೆ ಫಿಲಂಸ್ ನಿರ್ಮಿಸಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದು, ಭಾರತದಾದ್ಯಂತ ತನ್ನ ಅಬ್ಬರವನ್ನು ಮುಂದುವರೆಸಿದೆ. ಬರೀ ಕರ್ನಾಟಕದಲ್ಲಿಯೇ ₹೨೫೦ ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ, ಈ ಚಿತ್ರವು ಇತಿಹಾಸ ಸೃಷ್ಟಿಸಿದ್ದು, ೨೦೨೫ರ ಅತಿ ದೊಡ್ಡ ಯಶಸ್ಸು ಕಂಡ ಚಲನಚಿತ್ರವಾಗಿ ಹೊರಹೊಮ್ಮಿದೆ. ಕನ್ನಡ ಚಿತ್ರರಂಗಕ್ಕೊಂದು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
ಕರ್ನಾಟಕದ ಹೆಮ್ಮೆಯ ಹಬ್ಬವಾದ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ, ಹೊಂಬಾಳೆ ಫಿಲಂಸ್ ಒಂದು ವಿಶೇಷ ಕೊಡುಗೆಯನ್ನು ಘೋಷಿಸಿದೆ.
ನಾಳೆಯಿಂದಲೇ (ಅಂದರೆ ಅಕ್ಟೋಬರ್ ೩೧ ರಿಂದ), ಕಾಂತಾರ ಚಾಪ್ಟರ್ 1 ಸಿನಿಮಾದ ಟಿಕೆಟ್ ದರಗಳು ಈ ಕೆಳಗಿನಂತಿವೆ.
* ಸಿಂಗಲ್ ಸ್ಕ್ರೀನ್‌ಗಳಲ್ಲಿ (ಏಕಪರದೆ): ಕೇವಲ ₹99/-
* ಮಲ್ಟಿಪ್ಲೆಕ್ಸ್‌ಗಳಲ್ಲಿ: ₹150/-
ಅಕ್ಟೋಬರ್ 2, 2025 ರಂದು ಬಿಡುಗಡೆಯಾದ ಈ ಸಿನಿಮಾ, ತನ್ನ ಮಣ್ಣಿನ ಕಥೆ, ಅದ್ಭುತ ದೃಶ್ಯ ವೈಭವ ಹಾಗೂ ಶಕ್ತಿಯುತ ಅಭಿನಯದಿಂದ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಈ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ, ಕರ್ನಾಟಕದ ಅಭಿಮಾನಿಗಳು ಕಡಿಮೆ ಬೆಲೆಯಲ್ಲಿ, ನಮ್ಮ ನಾಡಿನ ಕಲೆ-ಸಂಸ್ಕೃತಿಯ ಹೆಮ್ಮೆಯ ಪ್ರತೀಕವಾದ ‘ಕಾಂತಾರ’ದ ಲೋಕವನ್ನು ಮತ್ತೊಮ್ಮೆ ಸವಿಯಬಹುದು!





