ಕಾಂತಾರ.. ಕನ್ನಡದ ಕಳಸ.. ಕನ್ನಡ ಸಂಸ್ಕೃತಿಯ ಕಿರೀಟ.. ನಮ್ಮ ಮಣ್ಣಿನ ಆಚರಣೆ, ಸಂಪ್ರದಾಯ, ನಂಬಿಕೆಗಳನ್ನ ಜಗತ್ತಿಗೆ ಪರಿಚಯಿಸಿದ ಸಿನಿಮಾ. ಸದ್ಯ ಶೂಟಿಂಗ್ ಕಂಪ್ಲೀಟ್ ಮಾಡಿರೋ ಡಿವೈನ್ ಸ್ಟಾರ್ ಈ ಮೂರು ವರ್ಷದ ಜರ್ನಿ ಹೇಗಿತ್ತು ಅನ್ನೋದರ ವೀಡಿಯೋ ಹಂಚಿಕೊಂಡಿದ್ದಾರೆ. ಇದರ ರಿಪೋರ್ಟ್ ಇಲ್ಲಿದೆ.
- ವಿಘ್ನಗಳ ನಡುವೆ ಕಾಂತಾರ-1 ಪ್ರೀಕ್ವೆಲ್ ಶೂಟಿಂಗ್ ಕಂಪ್ಲೀಟ್
- ಶೆಟ್ಟರ ಪರಿಶ್ರಮ ತೆರೆಯ ಮೇಲೆ ಅರಳುವ ಸಮಯ..!
- 3 ವರ್ಷದ ಸಿನಿ ಪಯಣದ ಒಂದು ಝಲಕ್
- 250 ದಿನಗಳ ಶೂಟಿಂಗ್ ಮುಗಿಸಿದ ರಿಷಬ್ ಶೆಟ್ಟಿ
- ಜೈ ಕಾಂತಾರ ಸಿಗಲಿ ವಿಶ್ವ ಜನರ ಬೆಂಬಲ..!
3 ವರ್ಷದ ಶೆಟ್ಟರ ಶ್ರಮ ಪರಿಶ್ರಮ ತೆರೆಯ ಮೇಲೆ ಅರಳುವ ಸಮಯ ಕೂಡಿ ಬಂದಿದೆ. ದಸರಾಗೆ ಕಾಂತಾರದ ತೇರು ಪ್ರಪಂಚದಾದ್ಯಂತ ದೃಶ್ಯವೈಭವದ ದರ್ಶನ ನೀಡಲಿದೆ. ಅದಕ್ಕೂ ಮುನ್ನ ಕಾಂತಾರ ಪ್ರೀಕ್ವೆಲ್ ಗಾಗಿ ಇಡೀ ತಂಡ ಏನೆಲ್ಲಾ ಕಷ್ಟಪಟ್ಟಿದೆ ಅನ್ನೋದರ ಝಲಕ್ ಕಣ್ಮುಂದೆ ಕಾಣ್ತಿದೆ. ನಮ್ಮ ತನವನ್ನ ವಿಶ್ವಕ್ಕೆ ಪಸರಿಸಿದ ಸಿನಿಮಾ ಕಾಂತಾರ. ಆಸ್ಕರ್ ನತ್ತಲೂ ಗುರಿ ಇಟ್ಟು ಸ್ಯಾಂಡಲ್ ವುಡ್ ಗೆ ಗ್ಲೋಬಲ್ ಲೆವೆಲ್ ನಲ್ಲಿ ಮನ್ನಣೆ ಗಳಿಸಿಕೊಳ್ಳಲು ಹೆಜ್ಜೆ ಇಟ್ಟ ಸಿನಿಮಾ.
ಇದೀಗ ಇದೇ ಸಿನಿಮಾದ ಪ್ರೀಕ್ವೆಲ್.. ಕನ್ನಡ ಚಿತ್ರರಂಗದ ಗತ್ತು ತಾಕತ್ತು ಏನು ಅನ್ನೋದನ್ನ ಸಿನಿಮಾ ವರ್ಲ್ಡ್ ಗೆ ಹೇಳಲು ಹೊರಟಿದೆ. ಹೌದು, ಕಾಂತಾರ1 ರ ಮುಖಾಂತರ ಜಗತ್ತೇ ಕನ್ನಡದತ್ತ ತಿರುಗಿ ನೋಡುವಂತಹ ಸಿನಿಮಾವನ್ನ ಕೊಡಲೇಬೇಕು ಅಂತ ಹಠಕ್ಕೆ ಬಿದ್ದು, ಅದನ್ನ ಗಟ್ಟಿಯಾಗಿ ಸಾಧಿಸಲು.. ಏನೆಲ್ಲಾ ಅಡೆ ತಡೆ ಬಂದ್ರೂ ಕುಗ್ಗದೆ ಜಗ್ಗದೆ ನಿಂತಿದ್ದು ರಿಷಭ್ ಶೆಟ್ಟಿ.. ಅದರ ಫಲವೇ ಇದೀಗ ಕಾಂತಾರ1 ಶೂಟಿಂಗ್ ಕಂಪ್ಲೀಟ್ ಆಗಿದೆ.. ಇನ್ನೆರಡು ತಿಂಗಳಲ್ಲಿ ತೆರೆಯ ಮೇಲೆ ಅರಳಲು ಸಜ್ಜಾಗಿದೆ.. ಸದ್ಯ ಇಡೀ ತಂಡದ ಶ್ರಮ ಪರಿಶ್ರಮ ಎಂತದ್ದು ಎಂಬುದನ್ನ ತೋರಿಸೋ ವೀಡಿಯೋ ರಿಲೀಸ್ ಆಗಿದೆ.
ನನ್ನದೊಂದು ಕನಸು.. ನಮ್ಮ ಮಣ್ಣಿನ ಕಥೆಯನ್ನ ಇಡೀ ಪ್ರಪಂಚಕ್ಕೆ ಹೇಳಬೇಕು.. ನಮ್ಮ ಊರು ನಮ್ಮ ಜನ, ನಮ್ಮ ನಂಬಿಕೆಗಳು.. ನಾನು ಈ ಕನಸನ್ನ ಬೆನ್ನತ್ತಲು ಶುರು ಮಾಡಿದಾಗ ಸಾವಿರಾರು ಜನರು ನನ್ನ ಬೆಂಬಲಕ್ಕೆ ನಿಂತರು.. ಅಂತಲೇ ವೀಡಿಯೋ ಶುರುವಾಗುತ್ತೆ.. ವೀಡಿಯೋ ನೋಡುದ್ರೆ ಮೈ ಜುಮ್ ಅನ್ನುತ್ತೆ.. ಅಬ್ಬಾ ಇದು ಕನ್ನಡದ ಸಿನಿಮಾನಾ ಅಂತ ಅಚ್ಚರಿ ಹುಟ್ಟಿಸುತ್ತೆ.
ಕಾಂತಾರ ಪ್ರೀಕ್ವೆಲ್ ಶುರುವಾಗಿ 3 ವರ್ಷಗಳಾಯ್ತು. ರಿಷಭ್ ಏನ್ಮಾಡ್ತಿದ್ದಾರೆ ಎಂಬುದಕ್ಕೆ ಈ ವೀಡಿಯೋ ಉತ್ತರ ಕೊಡುತ್ತೆ. ಮೂರು ವರ್ಷಗಳ ಕಾಲ ರಿಷಬ್ ಹಾಗೂ ತಂಡ ಕಾಂತಾರ: ಚಾಪ್ಟರ್ 1 ಕೆಲಸದಲ್ಲಿ ತೊಡಗಿಕೊಂಡಿತ್ತು. ಅಷ್ಟೇ ಅಲ್ಲ, 250 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಸಾವಿರಾರು ಸಿಬ್ಬಂದಿ ಹಗಲಿರುಳು ದುಡಿದಿದ್ದಾರೆ. ಮೇಕಿಂಗ್ ವಿಡಿಯೋ ಮೂಲಕ ಚಿತ್ರ ಹೇಗಿರಲಿದೆ ಎಂಬುದರ ಝಲಕ್ ಸಿಕ್ಕಿದ್ದು ಫ್ಯಾನ್ಸ್ ಖುಷಿಪಟ್ಟಿದ್ದಾರೆ
ಎಲ್ಲವೂ ರಿಯಾಲಿಟಿಗೆ ಹತ್ತಿರವಾಗಿರಬೇಕು.. ಅನ್ನೋ ಕಲ್ಪನೆಯಲ್ಲಿಯೇ ಸೆಟ್ ಗಳನ್ನ ಹಾಕಲಾಗಿದೆ. ಅದಕ್ಕಾಗಿ ಸಾವಿರಾರು ಕಾರ್ಮಿಕರು ಹಗಲಿರುಳು ದುಡಿದಿದ್ದಾರೆ.ಇನ್ನು ಇಡೀ ಸಿನಿಮಾದಲ್ಲಿ ಸಾವಿರಾರು ಜೂನಿಯರ್ ಕಲಾವಿದರನ್ನ ಬಳಸಿಕೊಳ್ಳಲಾಗಿದೆ. ಅಷ್ಟೂ ಜನ ಒಂದೇ ಫ್ರೇಮ್ ನಲ್ಲಿ ತರೋದು ಸುಲಭದ ಮಾತಲ್ಲ.. ಇನ್ನು ಈ ಜರ್ನಿಯಲ್ಲಿ ಒಂದಷ್ಟು ವಿಘ್ನಗಳು ಎದುರಾದ್ವು.. ಆದ್ರೂ ಸಹ ಕಾಂತಾರ ಶೆಟ್ಟರಿಗೆ ದೈವಬಲ ಸಾಕಷ್ಟಿದೆ.. ಎಲ್ಲವೂ ದೈವಬಲದಿಂದಲೇ ಕೂಡಿಬಂದಿರೋದು ಅಂತ ರಿಷಭ್ ಅವರೇ ಹೇಳಿಕೊಂಡಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್