ಭಾರತೀಯ ಚಿತ್ರರಂಗದಲ್ಲಿ ಕಾಂತಾರ ಚಾಪ್ಟರ್ 1 ಮತ್ತೊಂದು ಅದ್ಭುತ ದಾಖಲೆಯನ್ನು ಸೃಷ್ಟಿಸಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಚಿನ್ನದ ಬೆಳೆಯನ್ನು ತೆಗೆಯುತ್ತಿದೆ. ಬರೋಬ್ಬರಿ 50 ಲಕ್ಷ ಆನ್‌ಲೈನ್ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿರುವುದು ಈ ಚಿತ್ರದ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಬುಕ್ ಮೈ ಶೋ ಪ್ಲಾಟ್‌ಫಾರ್ಮ್‌ನಲ್ಲಿ ಬುಕಿಂಗ್ ಆದ ಟಿಕೆಟ್‌ಗಳ ಸಂಖ್ಯೆ 50 ಲಕ್ಷಕ್ಕೂ ಅಧಿಕವಾಗಿದ್ದು, ಐದು ದಿನಗಳಲ್ಲಿ ಈ ಮೈಲುಗಲ್ಲನ್ನು ತಲುಪಿದೆ. ಅಕ್ಟೋಬರ್ 1ರಿಂದ 5ರವರೆಗೆ ಇಂಡಿಯಾದಲ್ಲಿ ಬುಕ್ ಆದ ಟಿಕೆಟ್‌ಗಳ ಸಂಖ್ಯೆ ಈ ಮಟ್ಟಕ್ಕೆ ಏರಿದೆ. ಹೊಂಬಾಳೆ ಫಿಲಂಸ್ ಸೋಶಿಯಲ್ ಮೀಡಿಯಾದಲ್ಲಿ ಇದನ್ನು ಅಧಿಕೃತವಾಗಿ ಘೋಷಿಸಿದೆ.
ಕಾಂತಾರ ಚಾಪ್ಟರ್ 1 ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿದೆ. ರಿಷಬ್ ಶೆಟ್ಟಿಯ ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿಬಂದಿರುವ ಈ ಚಿತ್ರ, ಕನ್ನಡ ಸಿನಿಮಾ ಇತಿಹಾಸದಲ್ಲಿ ಮಹತ್ವದ ಸಾಧನೆಯನ್ನು ಮಾಡಿದೆ. ಮೊದಲ ದಿನದಲ್ಲೇ ಬುಕ್ ಮೈ ಶೋನಲ್ಲಿ 12.80 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದು, ಈ ವರ್ಷದಲ್ಲಿ ತೆರೆಕಂಡ ಯಾವುದೇ ಸಿನಿಮಾಗಿಂತ ಹೆಚ್ಚು ಟಿಕೆಟ್ ಸೇಲ್ ಆದ ಚಿತ್ರವಾಗಿ ಹೊರಹೊಮ್ಮಿದೆ. ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದು, ವೀಕ್ ಡೇಸ್‌ಗಳಲ್ಲಿಯೂ ಟಿಕೆಟ್ ಸಿಗದೆ ಪ್ರೇಕ್ಷಕರು ಪರದಾಡುವಂತಾಗಿದೆ.